
ಮುಂಬೈ(ಏ.06): ಐಪಿಎಲ್ ಬರೀ ಮನರಂಜನೆಯ ಕೂಟವಲ್ಲ. ಇಲ್ಲಿ ಬರೀ ಹಣದ ಹೊಳೆ ಹರಿಯಲ್ಲ. ಸಂಬಂಧಗಳು ಚಿಗುರುತ್ತೆ. ದೇಶಿ-ವಿದೇಶಿ ಪ್ಲೇಯರ್ಸ್ ನಡುವಿನ ಒಡನಾಟ ಗಟ್ಟಿಗೊಳ್ಳುತ್ತೆ. ಕ್ರೀಡೆಗೆ ಆ ಶಕ್ತಿ ಇದೆ. ಇಂತಹ ಸ್ನೇಹ ಸಂಬಂಧಕ್ಕೆ, ಭಾವನಾತ್ಮಕ ಬೆಸುಗೆಗೆ ಯುಜವೇಂದ್ರ ಚಹಲ್ಗಿಂತ ಉತ್ತಮ ಉದಾಹರಣೆ ಬೇಕಿಲ್ಲ. ನಿಮಗೆಲ್ಲರಿಗೂ ಗೊತ್ತಿದೆ. ಇಂದು ಯುಜುವೇಂದ್ರ ಚಹಲ್ (Yuzvendra Chahal) ಅನ್ನೋ ಮಿಸ್ಟ್ರಿ ಸ್ಪಿನ್ನರ್ ಅಪಾರ ನೇಮ್ ಆ್ಯಂಡ್ ಫೇಮ್ ಗಳಿಸಿದ್ದಾರಂದ್ರೆ ಅದಕ್ಕೆ ಕಾರಣ ಆರ್‌ಸಿಬಿ.
ಯುಜುವೇಂದ್ರ ಚಹಲ್ ಪಾಲಿಗೆ ಆರ್‌ಸಿಬಿ (RCB) ಅನ್ನೋದು ಬರೀ ಒಂದು ಫ್ರಾಂಚೈಸಿ ಮಾತ್ರವಲ್ಲ, ಅದೊಂದು ಅಟ್ಯಾಚ್ಮೆಂಟ್. ಅದೊಂದು ಸ್ಪೆಷಲ್ ಲವ್. ಅದು ಮಧುರ ನೆನಪುಗಳ ಬುತ್ತಿ. ಹೀಗೆ ಸದಾ ರೆಡ್ ಆರ್ಮಿ ಸ್ಮರಿಸೋ ಸ್ಟಾರ್ ಸ್ಪಿನ್ನರ್ ಚಹಲ್ ಮಂಗಳವಾರ ಮಾತ್ರ ಆರ್ಸಿಬಿಗೆ ಐಯಮ್ ಸಾರಿ ಅಂದುಬಿಟ್ರು. ಯಾಕಂದ್ರೆ ಚಹಲ್ ಹಾಗೂ ಆರ್‌ಸಿಬಿ ನಡುವಿನ ಆ ಸ್ನೇಹ ನಿನ್ನೆಗೆ ಕೊನೆಗೊಂಡಿತ್ತು.
RCB ಜತೆಗಿನ 8 ವರ್ಷದ ಸಂಬಂಧಕ್ಕೆ ಚಹಲ್ ಗುಡ್ಬೈ:
ಆರ್‌ಸಿಬಿ ಹಾಗೂ ರಾಜಸ್ಥಾನ ರಾಯಲ್ಸ್ (Rajasthan Royals) ನಡುವಿನ ಪಂದ್ಯ ವಿಶೇಷ ಕ್ಷಣಕ್ಕೆ ಸಾಕ್ಷಿಯಾಯ್ತು. ಅದೇನಂದ್ರೆ ಆರ್ಸಿಬಿಯನ್ನೇ ಉಸಿರಾಗಿಸಿಕೊಂಡಿದ್ದ ಚಹಲ್ ನಿನ್ನೆ ಅದೇ ತಂಡದ ವಿರುದ್ಧ ಕಣಕ್ಕಿಳಿದ್ರು. ಬರೋಬ್ಬರಿ 8 ವರ್ಷಗಳ ಬಳಿಕ ರೆಡ್ ಆರ್ಮಿ ಬದಲು ಪಿಂಕ್ ಜೆರ್ಸಿ ತೊಟ್ಟು ರಾಜಸ್ಥಾನ ರಾಯಲ್ಸ್ ಪರ ಕಣ ಆಡಿದ್ರು.
IPL 2022: RCB ಕಾಲೆಳೆಯಲು ಹೋಗಿ ತಾನೇ ಟ್ರೋಲ್ ಆದ ರಾಜಸ್ಥಾನ ರಾಯಲ್ಸ್..!
ನಿಮಗೆ ಗೊತ್ತಿರ್ಲಿಲ್ಲ. ನಿನ್ನೆಯ ಪಂದ್ಯ ಬಿಟ್ಟು ಚಹಲ್ ಐಪಿಎಲ್ನಲ್ಲಿ ಒಟ್ಟು 116 ಪಂದ್ಯಗಳನ್ನಾಡಿದ್ದಾರೆ. ಆ ಪೈಕಿ 115 ಪಂದ್ಯಗಳನ್ನ ಆರ್‌ಸಿಬಿ ಪರ ಆಡಿದ್ದಾರೆ. ಒಂದು ಪಂದ್ಯದಲ್ಲಿ ಮಾತ್ರ ಮುಂಬೈ ಇಂಡಿಯನ್ಸ್ (Mumbai Indians) ಪರ ಕಾಣಿಸಿಕೊಂಡಿದ್ದಾರೆ. 2014ರಲ್ಲಿ ರೆಡ್ ಆರ್ಮಿ ಸೇರಿದ ಚಹಲ್ ಬಳಿಕ ಹಿಂತಿರುಗಿ ನೋಡಲೇ ಇಲ್ಲ. ತಂಡದ ಕಾಯಂ ಬೌಲರ್ ಆಗಿ ಗುರುತಿಸಿಕೊಂಡ್ರು. 144 ವಿಕೆಟ್ ಪಡೆದು ಲೆಕ್ಕವಿಲ್ಲದಷ್ಟು ಪಂದ್ಯಗಳನ್ನ ಗೆಲ್ಲಿಸಿಕೊಟ್ರು. ಇಲ್ಲಿ ತೋರಿದ ಅದ್ಭುತ ಪ್ರದರ್ಶನದಿಂದ ಟೀಮ್ ಇಂಡಿಯಾಗೂ (TTeam India) ಎಂಟ್ರಿ ಕೊಟ್ರು.
ಹಣಕ್ಕಾಗಿ ರಾಜಸ್ಥಾನ ಸೇರಿಲ್ಲ.. ಆರ್‌ಸಿಬಿ ಅಂದ್ರೆ ಜೀವಾಳ..:
ಇನ್ನು ರಿಸ್ಟ್ ಸ್ಪಿನ್ನರ್ ರಾಜಸ್ಥಾನ ಸೇರ್ತಿದ್ದಂತೆ ಅವರ ಮೇಲೆ ಇಂತಹದೊಂದು ಆರೋಪ ಕೇಳಿ ಬಂದಿತ್ತು. ಆದ್ರೆ ಚಹಲ್ ಇದನ್ನ ಅಲ್ಲಗಳೆದ್ರು. ನನಗೆ ಹಣ ಮುಖ್ಯ ಆಗಿರ್ಲಿಲ್ಲ. ಯಾಕಂದ್ರೆ ಆರ್‌ಸಿಬಿ ಅಭಿಮಾನಿಗಳಿಂದ ಸಾಕಷ್ಟು ಪ್ರೀತಿ, ಬೆಂಬಲ ಸಿಕ್ಕಿದೆ. ಆದ್ರೆ ಟೀಮ್ ಮ್ಯಾನೇಜ್ಮೆಂಟ್ ಆಕ್ಷನ್ನಲ್ಲಿ ಕೊಟ್ಟ ಮಾತನ್ನ ಉಳಿಸಿಕೊಳ್ಳಲಿಲ್ಲ. ಹಾಗಾಗಿ ನನ್ನನ್ನ ರಾಜಸ್ಥಾನ ಖರೀದಿಸ್ತು ಎಂದು ಇತ್ತೀಚೆಗಷ್ಟೇ ಹೇಳಿದ್ರು.
ಇನ್ನು ನಿನ್ನೆಯ ಪಂದ್ಯದಲ್ಲಿ ಆರ್ಸಿಬಿಯ 2 ವಿಕೆಟ್ ಪಡೆದ ಚಹಲ್, ವಿರಾಟ್ ಕೊಹ್ಲಿ (Virat Kohli) ಅವರನ್ನ ರನೌಟ್ ಸಹ ಮಾಡಿದ್ರು. ನಿನ್ನೆ ಆರ್ಸಿಬಿಗೆ ಶಾಕ್ ನೀಡಿದ್ದೇ ಚಹಲ್. ಆದರೂ ರಾಯಲ್ಸ್ ವಿರುದ್ಧ ಆರ್‌ಸಿಬಿ ರೋಚಕ ಜಯ ಸಾಧಿಸಿತು. ದಿನೇಶ್ ಕಾರ್ತಿಕ್ ಹಾಗೂ ಶಹಬಾಜ್ ಅಮೋಘ ಜತೆಯಾಟವಾಡುವ ಮೂಲಕ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಭರ್ಜರಿ ಗೆಲುವು ತಂದುಕೊಟ್ಟಿದ್ದಾರೆ. ಟೂರ್ನಿಯಲ್ಲಿ ರಾಜಸ್ಥಾನ ರಾಯಲ್ಸ್ ತಂಡವು ಮೊದಲ ಸೋಲಿನ ಕಹಿಯುಂಡಿದೆ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.