ಸಿಎಸ್​​​​ಕೆ ನಾಯಕ ಯಾರು..ಬರೀ ಟಾಸ್​​ಗೆ ಮಾತ್ರ ಸೀಮಿತವಾದ್ರಾ ಜಡೇಜಾ?

Published : Apr 05, 2022, 07:23 PM IST
 ಸಿಎಸ್​​​​ಕೆ ನಾಯಕ ಯಾರು..ಬರೀ ಟಾಸ್​​ಗೆ ಮಾತ್ರ ಸೀಮಿತವಾದ್ರಾ ಜಡೇಜಾ?

ಸಾರಾಂಶ

ಐಪಿಎಲ್ ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್  ಸತತ ಮೂರು ಸೋಲು ಕಂಡ ಬಳಿಕ ತಂಡದ ನಾಯಕತ್ವದ ಮೇಲೆ ಪ್ರಶ್ನೆ ಮೂಡಲಾರಂಭಿಸಿದೆ. ಐಪಿಎಲ್ ಇತಿಹಾಸದಲ್ಲಿಯೇ ಚೆನ್ನೈ ಸತತ ಮೂರು ಪಂದ್ಯಗಳನ್ನು ಸೋಲು ಕಂಡ ಬಳಿಕ, ತಂಡದ ನಿಜವಾದ ಕ್ಯಾಪ್ಟನ್ ಯಾರು ಎನ್ನುವ ಅನುಮಾನಗಳು ಮೂಡಲಾರಂಭಿಸಿದೆ.  

ಮುಂಬೈ (ಏ.5) : ಬ್ಯಾಕ್ ಟು ಬ್ಯಾಕ್ ಸೋಲು ಹಾಲಿ ಚಾಂಪಿಯನ್​​ ಚೆನ್ನೈ ಸೂಪರ್ ಕಿಂಗ್ಸ್(Chennai Super Kings ) ತಂಡವನ್ನ ನಿದ್ದೆಗೆಡಿಸಿದೆ. ಫಸ್ಟ್ ಟೈಮ್​​ ಐಪಿಎಲ್​  (IPL) ಹಿಸ್ಟರಿಯಲ್ಲಿ ಮೊದಲ ಮೂರು ಪಂದ್ಯಗಳನ್ನ ಸೋತಿದೆ. ಸೋಲಿಗೆ ನಾನಾ ರೀತಿಯಲ್ಲಿ ವಿಶ್ಲೇಷಣೆ ಮಾಡಲಾಗ್ತಿದೆ. ಈ ಎಲ್ಲದರ ಮಧ್ಯೆ ಅಸಲಿಗೆ ಚೆನ್ನೈ ತಂಡದ ಕ್ಯಾಪ್ಟನ್ (Captain) ಯಾರು ಅನ್ನೋ  ಪ್ರಶ್ನೆ ಎದ್ದಿದೆ. 

ಅರೇ ಎಂಎಸ್ ಧೋನಿ (MS Dhoni) ಕ್ಯಾಪ್ಟನ್ಸಿಗೆ ಗುಡ್​ಬೈ ಹೇಳಿದ್ಮೇಲೆ ಆ ಜವಾಬ್ದಾರಿ ರವೀಂದ್ರ ಜಡೇಜಾ ( Ravindra Jadeja,) ಹೆಗಲಿಗೇರಿದೆ. ಇದು ಎಲ್ಲರಿಗೂ ಗೊತ್ತಿರೋದೆ ಅಲ್ವಾ..? ಹೌದು, ಜಡ್ಡು ಸಿಎಸ್​​ಕೆ (CSK) ಕ್ಯಾಪ್ಟನ್​​ ನಿಜ. ನಾಯಕನಾಗಿ ಮೂರು ಪಂದ್ಯಗಳನ್ನ ಮುನ್ನಡೆಸಿ ಎಡವಿದ್ದಾರೆ ಅನ್ನೋದು ಸತ್ಯ. ಆದ್ರೆ ಅಸಲಿಗೆ ಯೆಲ್ಲೊ ಆರ್ಮಿ ತಂಡದ ಕ್ಯಾಪ್ಟನ್ ಜಡ್ಡುನಾ..? ಧೋನಿನಾ..? ಡ್ವೇನ್​ ಬ್ರಾವೋನಾ..? ಅನ್ನೋ ಪ್ರಶ್ನೆ ಮುನ್ನಲೆಗೆ ಬಂದಿದೆ.

ಹೆಸರಿಗಷ್ಟೇ ಜಡೇಜಾ ಚೆನ್ನೈ ಕ್ಯಾಪ್ಟನ್​​: ಸಿಎಸ್​ಕೆ ಆಡಿದ ಮೂರು​ ಪಂದ್ಯಗಳನ್ನೂ ನೋಡಿದವರಿಗೆ ಈ ಪ್ರಶ್ನೆ ಎಲ್ಲರನ್ನ ಕಾಡಿರುತ್ತೆ. ಯಾಕಂದ್ರೆ ಕ್ಯಾಪ್ಟನ್ ಆಗಿರೋ ಜಡ್ಡು ಅಂಗಳದಲ್ಲಿ ಕ್ಯಾಪ್ಟನ್ ರೀತಿಯಲ್ಲೇ ವರ್ತಿಸಲಿಲ್ಲ. ಫೀಲ್ಡಿಂಗ್ ಪ್ಲೇಸ್​​ಮೆಂಟ್​​​, ಬೌಲಿಂಗ್​ ಆಯ್ಕೆ ಹೀಗೆ ಎಲ್ಲವೂ ಮಾಜಿ ಕ್ಯಾಪ್ಟನ್ ಧೋನಿ ಅಣತಿಯಂತೆ ಸಾಗಿತ್ತು. ಧೋನಿ ತಾನು ಕ್ಯಾಪ್ಟನ್ ಅಲ್ಲ ಅನ್ನೋದು ಗೊತ್ತಿದ್ರೂ, ಅದನ್ನ ಮರೆತು ಪ್ರತಿಯೊಂದು ಡಿಶಿಷನ್​​ಗಳನ್ನ  ತೆಗೆದುಕೊಳ್ತಿದ್ದಾರೆ. 

ಇನ್ನು ಧೋನಿ ಕ್ಯಾಪ್ಟನ್ ರೀತಿಯಲ್ಲಿ ನಿರ್ಧಾರ ಕೈಗೊಳ್ತಿದ್ದಂತೆ ನೂತನ ಕ್ಯಾಪ್ಟನ್ ಜಡ್ಡು ಸೈಲೆಂಟಾದ್ರು. ಜಡೇಜಾ ನಿಲ್ಲಿಸಿದ್ದ ಫೀಲ್ಡಿಂಗ್​ ಪ್ಲೇಸ್​ಮೆಂಟ್ ಬದಲಿಸಿ, ಮಹಿ ತನಗೆ ಬೇಕಾದಂತೆ ಫೀಲ್ಡಿಂಗ್​ ನಿಲ್ಲಿಸಿದ್ರು. ಇನ್ನೊಂದೆಡೆ ಚೆನ್ನೈ ತಂಡದ ಅನುಭವಿ ಡ್ವೇನ್ ಬ್ರಾವೋ (Dwayne Bravo) ಕೂಡ  ಆಗಾಗ ಬೌಲರ್ಸ್​ ಬಳಿ ಬಂದು ಸಲಹೆ ನೀಡಿದ್ದು ಕೂಡ ಕಂಡು ಬಂತು.

ಧೋನಿ ಹಾಲಿ ಕ್ಯಾಪ್ಟನ್​​​​​​ನಂತೆ ವರ್ತಿಸ್ತಿರೋದಕ್ಕೆ ಕ್ರಿಕೆಟರ್ಸ್​ ಗರಂ:  ಇನ್ನು ಸ್ವತಂತ್ರವಾಗಿ ಜಡ್ಡುಗೆ ನಾಯಕತ್ವ ನಿಭಾಯಿಸಲು ಬಿಡದೇ, ನಿಯಂತ್ರಣ ಸಾಧಿಸ್ತಿರೋ ಧೋನಿ ನಡೆಗೆ ಬಗ್ಗೆ ಕ್ರಿಕೆಟ್​ ಎಕ್ಸ್​​​ಪರ್ಟ್ಸ್ ಸೇರಿದಂತೆ ಮಾಜಿ ಆಟಗಾರರು ಗರಂ ಆಗಿದ್ದಾರೆ. ಮಾಜಿ ಕ್ರಿಕೆಟಿಗರಾದ ಅಜಯ್ ಜಡೇಜಾ (Ajay Jadeja) ಜಡ್ಡು ಪರ ಬ್ಯಾಟ್​ ಬೀಸಿದ್ದು, ಧೋನಿ ಮೊದಲು ನಾಯಕತ್ವದಿಂದ ಹೊರಬರಬೇಕು. ನೂತನ ಕ್ಯಾಪ್ಟನ್​​ ದೂರ ಸರಿಸಿ ತಾನೇ ನಿರ್ಧಾರಗಳನ್ನ ತೆಗೆದುಕೊಳ್ಳೋದು ತಪ್ಪು ಎಂದು ಅಜಯ್ ಜಡೇಜಾ ಹೇಳಿದ್ದಾರೆ. ಸಿಎಸ್​ಕೆ ಫ್ಯಾನ್ಸ್​ ಸಹ ಧೋನಿ ವಿರುದ್ಧ ಗರಂ ಆಗಿದ್ದು, ಜಡೇಜಾಗೆ ಕ್ಯಾಪ್ಟನ್ಸಿ ಮಾಡಲು ಬಿಡಿ ಎಂದಿದ್ದಾರೆ.

IPL 2022 ರಾಜಸ್ಥಾನ ರಾಯಲ್ಸ್ ವಿರುದ್ಧ ಟಾಸ್ ಗೆದ್ದ ಆರ್‌ಸಿಬಿ, ಬೌಲಿಂಗ್ ಆಯ್ಕೆ!

ಅಜಯ್ ಜಡೇಜಾ ಹೇಳಿರೋ ಮಾತನ್ನ ಒಪ್ಪಲೇಬೇಕಿದೆ. ಧೋನಿ ಹಿಂದೆ ತಂಡದ ಕ್ಯಾಪ್ಟನ್ ಆಗಿದ್ರು ನಿಜ. ಹಾಗಂತ ಈಗಲೂ ಅದೇ ರೀತಿ ವರ್ತಿಸಿದ್ರೆ ಎಷ್ಟು ಸರಿ..? ನೂತನ ನಾಯಕನನ್ನ ಅವರಷ್ಟಕ್ಕೆ ಬಿಡಬೇಕಿದೆ. ಹೌದಪ್ಪಾ ಚೆನ್ನೈ ಪ್ಲೇಆಫ್ ಆಡ್ತಿದೆ. ನಿರ್ಣಾಯಕ ಪಂದ್ಯವೆನಿಸಿದ್ರೆ ಆಗ ಧೋನಿನೇ ಡಿಶಿಶನ್​ ತಗೊಂಡ್ರೆ ಅದಕ್ಕೊಂದು ಅರ್ಥ. ಅದನ್ನ ಬಿಟ್ಟು ಲೀಗ್ ಹಂತದ ವೇಳೆನೇ ಜಡ್ಡುರನ್ನ ಸೈಡ್​​ಲೈನ್​ ಮಾಡಿ ಧೋನಿ ನಿರ್ಧಾರ ತೆಗೆದುಕೊಳ್ಳೋದು ನಿಜಕ್ಕೂ ತಪ್ಪು. ಇನ್ನಾದ್ರು ಜಡ್ಡು ಕ್ಯಾಪ್ಟನ್ ಆಗಿ ಸಂಪೂರ್ಣ ನಿರ್ಧಾರ ಕೈಗೊಳ್ಳಲು ಬಿಡಲಿ.

IPL 2022: ರಾಯಲ್ ಚಾಲೆಂಜರ್ಸ್ ಬೆಂಗಳೂರು Vs ರಾಜಸ್ಥಾನ ರಾಯಲ್ಸ್‌ ಪಂದ್ಯ ಗೆಲ್ಲೋರು ಯಾರು..?

ಸತತ ಮೂರು ಪಂದ್ಯಗಳಲ್ಲಿ ಸೋಲು ಕಂಡಿರುವ ಚೆನ್ನೈ ಸೂಪರ್ ಕಿಂಗ್ಸ್ ತನ್ನ ನಾಲ್ಕನೇ ಪಂದ್ಯದಲ್ಲಿ ತನ್ನದೇ ಸ್ಥಿತಿಯಲ್ಲಿರುವ ಸನ್ ರೈಸರ್ಸ್ ಹೈದರಾಬಾದ್ ತಂಡವನ್ನು ಶನಿವಾರ ಎದುರಿಸಲಿದೆ. ಸನ್ ರೈಸರ್ಸ್ ಹೈದರಾಬಾದ್ ತಂಡ ಈಗಾಗಲೇ 2 ಪಂದ್ಯಗಳಲ್ಲಿ ಸೋಲು ಕಂಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

Mock Auction: 30.5 ಕೋಟಿ ರೂಪಾಯಿ ದಾಖಲೆ ಮೊತ್ತಕ್ಕೆ ಕೆಕೆಆರ್‌ಗೆ ಕ್ಯಾಮರೂನ್‌ ಗ್ರೀನ್‌!
ಐಪಿಎಲ್ ಹರಾಜು ಇತಿಹಾಸದಲ್ಲೇ ಟಾಪ್ 6 ದುಬಾರಿ ಆಟಗಾರರಿವರು!