IPL 2022: ಆರ್​ಸಿಬಿ ನಂತರ ಕನ್ನಡಿಗರ ಸಪೋರ್ಟ್ ಯಾವ ತಂಡಕ್ಕೆ ಗೊತ್ತಾ..?

Published : Apr 09, 2022, 02:27 PM IST
IPL 2022: ಆರ್​ಸಿಬಿ ನಂತರ ಕನ್ನಡಿಗರ ಸಪೋರ್ಟ್ ಯಾವ ತಂಡಕ್ಕೆ ಗೊತ್ತಾ..?

ಸಾರಾಂಶ

* ಭರ್ಜರಿಯಾಗಿ ಸಾಗುತ್ತಿದೆ 15ನೇ ಆವೃತ್ತಿಯ ಐಪಿಎಲ್‌ * ಆರ್‌ಸಿಬಿ ತಂಡವನ್ನು ಬೆಂಬಲಿಸುತ್ತಲೇ ಬಂದಿದ್ದಾರೆ ಕನ್ನಡಿಗರು * ಆರ್‌ಸಿಬಿ ಬಳಿಕ ಕನ್ನಡಿಗರ ಸಪೋರ್ಟ್‌ ಯಾವ ತಂಡಕ್ಕೆ ಗೊತ್ತಾ..?

ಬೆಂಗಳೂರು(ಏ.09): ಐಪಿಎಲ್​. ಇದು ಫ್ರಾಂಚೈಸಿ ಲೀಗ್​. ಯಾವುದೇ ರಾಜ್ಯ ತಂಡ ಇಲ್ಲಿ ಪ್ರತಿನಿಧಿಸಲ್ಲ. ರಾಜ್ಯದ ಒಂದು ನಗರದ ತಂಡವೊಂದು ಈ ಫ್ರಾಂಚೈಸಿ ಲೀಗ್​​ನಲ್ಲಿ ಭಾಗವಹಿಸುತ್ತೆ. ಆಟಗಾರರು ಅಷ್ಟೆ. ಯಾರು ಎಲ್ಲಿ ಬೇಕಾದರೂ ಆಡಬಹುದು. ಹಾಗಾಗಿ ಇಲ್ಲಿ ಒಂದು ರಾಜ್ಯದ ಕ್ರಿಕೆಟ್ ಫ್ಯಾನ್ಸ್ ಒಂದೇ ತಂಡವನ್ನ ಸಪೋರ್ಟ್​ ಮಾಡಲ್ಲ. ತಮಗೆ ಇಷ್ಟವಾದ ಟೀಮ್​​ಗೆ ಸಪೋರ್ಟ್​ ಮಾಡ್ತಾರೆ. ಆದರೆ ಹೆಚ್ಚಿನ ಮಂದಿ ತಮ್ಮ ರಾಜ್ಯದ ತಂಡವನ್ನ ಬೆಂಬಲಿಸುತ್ತಾರೆ.

ರಾಯಲ್ ಚಾಲೆಂಜರ್ಸ್ ಬೆಂಗಳೂರು(Royal Challengers Bangalore). ಇದು ಬೆಂಗಳೂರು ಟೀಮ್ ಆದ್ರೂ ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಸಂಪೂರ್ಣ ಸಪೋರ್ಟ್​ ಆರ್​ಸಿಬಿಗೆ ಇರಲ್ಲ. ಅರ್ಧ ಮಂದಿ ಆರ್​ಸಿಬಿಗೆ ಜೈ ಅಂದ್ರೆ ಉಳಿದ ಅರ್ಧ ಮಂದಿ ಉಳಿದ 9 ತಂಡಗಳಿಗೆ ಜೈ ಅಂತಾರೆ. ಎಂಎಸ್ ಧೋನಿ ಇರೋ ಕಾರಣಕ್ಕೆ ಅದೆಷ್ಟೋ ಮಂದಿ ಸಿಎಸ್​ಕೆಗೆ ಸಪೋರ್ಟ್​ ಮಾಡ್ತಾರೆ. ಸಚಿನ್ ತೆಂಡುಲ್ಕರ್ ಮೆಂಟರ್ ಆಗಿದ್ದಾರೆ ಅನ್ನೋ ಒಂದೇ ಒಂದು ಕಾರಣಕ್ಕೆ ಅವರ ಡೈ ಹಾರ್ಡ್​ ಫ್ಯಾನ್ಸ್ ಎಲ್ಲ ಮುಂಬೈ ಇಂಡಿಯನ್ಸ್ ಹಿಂದೆ ಬಿದ್ದಿದ್ದಾರೆ. ಹೀಗಾಗಿ ಒಂದೊಂದು ಕಾರಣಕ್ಕೆ ಒಂದೊಂದು ತಂಡಕ್ಕೆ ಸಪೋರ್ಟ್​ ಮಾಡ್ತಾರೆ.

ಲಖನೌ ಹಿಂದೆ ಕನ್ನಡಿಗರು ಬಿದ್ದಿರೋದ್ಯಾಕೆ..?:

ಹೌದು, ಕರ್ನಾಟಕ ಕ್ರಿಕೆಟ್ ಫ್ಯಾನ್ಸ್​ಗಳಲ್ಲಿ ಕೆಲವರು ಆರ್​​ಸಿಬಿಗಿಂತ ಲಖನೌ ಸೂಪರ್ ಜೈಂಟ್ಸ್​ಗೆ (Lucknow Supergiants) ಸಪೋರ್ಟ್​ ಮಾಡ್ತಿದ್ದಾರೆ. ಅಯ್ಯೋ, ಕನ್ನಡಿಗ ಕೆಎಲ್ ರಾಹುಲ್ (KL Rahul) ಕ್ಯಾಪ್ಟನ್ ಆಗಿದ್ದಾರೆ. ಟೀಮ್​ನಲ್ಲಿ ರಾಹುಲ್ ಸೇರಿದಂತೆ ಮೂವರು ಕನ್ನಡಿಗರಿದ್ದಾರೆ. ಹಾಗಾಗಿ ಲಖನೌಗೆ ಕನ್ನಡಿಗರ ಸಪೋರ್ಟ್​ ಮಾಡ್ತಾರೆ ಅಂತ ನೀವು ಅಂದುಕೊಳ್ಳಬಹುದು. ನೋ ಚಾನ್ಸ್. ಹಾಗಾದರೆ ಪಂಜಾಬ್ ಕಿಂಗ್ಸ್ ಕೋಚ್ ಅನಿಲ್ ಕುಂಬ್ಳೆ ಮತ್ತು ಕ್ಯಾಪ್ಟನ್ ಮಯಾಂಕ್ ಅಗರ್ವಾಲ್ (Mayank Agarwal) ಕನ್ನಡಿಗರೇ. ಆ ತಂಡಕ್ಕೆ ಯಾಕೆ ಸಪೋರ್ಟ್​ ಮಾಡಲ್ಲ. ರಾಜಸ್ಥಾನ ರಾಯಲ್ಸ್ (Rajasthan Royals) ಟೀಮ್​ನಲ್ಲಿ ನಾಲ್ವರು ಕನ್ನಡಿಗರಿದ್ದಾರೆ. ಆದ್ರೂ ರಾಯಲ್ಸ್​​ಗೆ ಕನ್ನಡಿಗರ ಬೆಂಬಲವಿಲ್ಲ. ಲಖನೌಗೆ ಏನು ಅಂತಾ ಸ್ಪೆಷಾಲಿಟಿ.

IPL 2022: ಮುಂಬೈಯನ್ನು ಮುಳುಗಿಸುತ್ತಾ ಆರ್‌ಸಿಬಿ..?

ಲಖನೌ ಚಾಂಪಿಯನ್ ಆದ್ರೆ ರಾಹುಲ್ ಭವಿಷ್ಯದ ಟೀಂ ಇಂಡಿಯಾ ನಾಯಕ:

ಭಾರತ ಮೂರು ಮಾದರಿ ತಂಡಕ್ಕೆ ಉಪನಾಯಕನಾಗಿರುವ ರಾಹುಲ್, ರೋಹಿತ್​ ಶರ್ಮಾ (Rohit Sharma) ನಂತರ ಟೀಂ ಇಂಡಿಯಾ (Team India) ನಾಯಕನಾಗೋ ಕನಸು ಕಾಣ್ತಿದ್ದಾರೆ. ಈ ಕನಸು ನನಸಾಗಬೇಕಾದರೆ ಈ IPLನಲ್ಲಿ ನಾಯಕನಾಗಿ ರಾಹುಲ್ ಸಕ್ಸಸ್ ಆಗಬೇಕು. ಈ ಸಲ ಲಖನೌ  ಟೀಮ್​​​​ಗೆ IPL ಟ್ರೋಫಿ ಗೆಲ್ಲಿಸಿಕೊಟ್ಟರೆ ಆಗ ರಾಹುಲ್ ನಾಯಕತ್ವದ ಅಗ್ನಿ ಪರೀಕ್ಷೆಯಲ್ಲಿ ಪಾಸಾಗಲಿದ್ದಾರೆ. ಆಗ ರಾಹುಲ್​​​ ಟೀಂ ಇಂಡಿಯಾ ನಾಯಕನಾಗಲಿದ್ದಾರೆ.

ದ್ರಾವಿಡ್​-ಕುಂಬ್ಳೆ ಬಿಟ್ಟರೆ ಕರ್ನಾಟಕದ ಆಟಗಾರರು ನಾಯಕರಾಗಿಲ್ಲ:

ಹೌದು, ಇದೇ ರೀಸನ್​​​ಗೆ ಕನ್ನಡಿಗರು ಆರ್​​ಸಿಬಿಗಿಂತ ಲಖನೌ ಟೀಮ್​ಗೆ ಸಪೋರ್ಟ್​ ಮಾಡ್ತಿರೋದು. ಕರ್ನಾಟಕದ ರಾಹುಲ್ ದ್ರಾವಿಡ್ ಮತ್ತು ಅನಿಲ್ ಕುಂಬ್ಳೆ ಟೀಂ ಇಂಡಿಯಾ ಕಾಯಂ ನಾಯಕರಾಗಿದ್ದರು. ಜಿಆರ್ ವಿಶ್ವನಾಥ್ ಒಂದೆರಡು ಪಂದ್ಯಕ್ಕೆ ಹಂಗಾಮಿ ನಾಯಕರಾಗಿದ್ದು, ಬಿಟ್ರೆ ಮತ್ಯಾವ ಕನ್ನಡಿಗನೂ ನಾಯಕನಾಗಿಲ್ಲ. ದ್ರಾವಿಡ್​-ಕುಂಬ್ಳೆ ನಂತರ ಟೀಂ ಇಂಡಿಯಾ ಕಾಯಂ ನಾಯಕ ಆಗೋ ಅವಕಾಶ ಇರೋದು ರಾಹುಲ್​ಗೆ ಮಾತ್ರ. ರಾಹುಲ್ ಬಿಟ್ಟರೆ ಭವಿಷ್ಯದಲ್ಲಿ ಕರ್ನಾಟಕದ ಆಟಗಾರನೊಬ್ಬ ಟೀಂ ಇಂಡಿಯಾ ಕ್ಯಾಪ್ಟನ್ ಆಗ್ತಾರೋ ಇಲ್ವೋ ಗೊತ್ತಿಲ್ಲ. ಹಾಗಾಗಿ ರಾಹುಲ್ ಈ ಸಲ ಐಪಿಎಲ್ ಕಪ್ ಗೆಲ್ಲಲಿ, ಮುಂದೆ ಟೀಂ ಇಂಡಿಯಾ ನಾಯಕನಾಗಲಿ ಅಂತ ಕರ್ನಾಟಕ ಕ್ರಿಕೆಟ್ ಫ್ಯಾನ್ಸ್ ಲಖನೌ ಟೀಮ್​ಗೆ ಸಪೋರ್ಟ್​ ಮಾಡ್ತಿದ್ದಾರೆ. ಆರ್​​ಸಿಬಿಯಷ್ಟೇ ಲಕ್ನೋ ಟೀಮ್ ಅನ್ನ ಪ್ರೀತಿಸ್ತಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

IPL Mini Auction 2026: 1355 ಆಟಗಾರರಲ್ಲಿ 350 ಪ್ಲೇಯರ್ಸ್ ಶಾರ್ಟ್‌ಲಿಸ್ಟ್! ಇಲ್ಲಿದೆ ಹರಾಜಿನ ಕಂಪ್ಲೀಟ್ ಡೀಟೈಲ್ಸ್
ಸಡನ್ನಾಗಿ ಸೋಶಿಯಲ್‌ ಮೀಡಿಯಾದಲ್ಲಿ ಸನ್ನಿ ಲಿಯೋನ್‌ ಫೋಟೋ ಹಂಚಿಕೊಂಡ ಅಶ್ವಿನ್‌, ಇದಕ್ಕಿದೆ ಐಪಿಎಲ್ ಲಿಂಕ್‌!