* 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೊದಲ ಪಂದ್ಯದಲ್ಲೂ ಶೂನ್ಯ ಸುತ್ತಿದ ನಿಕೋಲಸ್ ಪೂರನ್
* ಕೊನೆಯ ಏಳು ಇನ್ನಿಂಗ್ಸ್ನಲ್ಲಿ 5 ಬಾರಿ ಡಕೌಟ್
* ಜೆರ್ಸಿ ಬದಲಾದರೂ ನಿಕೋಲಸ್ ಪೂರನ್ ಬ್ಯಾಟಿಂಗ್ ಸ್ಟೈಲ್ ಬದಲಾಗಿಲ್ಲ
ಮುಂಬೈ(ಮಾ.31): ನಿಕೋಲಸ್ ಪೂರನ್(Nicholas Pooran) ದೊಡ್ಡ ಹೊಡೆತಗಳಿಗೆ ಹೆಸರುವಾಸಿ. ಅದ್ರಲ್ಲೂ ಟಿ20ಗೆ ಹೇಳಿ ಮಾಡಿಸಿದ ಆಟಗಾರ. ಇದೇ ಕಾರಣಕ್ಕಾಗಿ ಕೆರಿಬಿಯನ್ ಆಟಗಾರಿಗೆ ಐಪಿಎಲ್ನಲ್ಲಿ ಬಾಗಿಲು ತೆರೆಯಿತು. 2019ರಲ್ಲಿ ಲೆಫ್ಟಿ ದಾಂಡಿಗ ಪಂಜಾಬ್ ಕಿಂಗ್ಸ್ (Punjab Kings) ಸೇರಿಕೊಂಡ್ರು. ಮೂರು ವರ್ಷ ಪಂಜಾಬ್ ತಂಡದಲ್ಲಿದ್ದ ಬಿಗ್ ಹಿಟ್ಟರ್ ಅಬ್ಬರಕ್ಕಿಂತ ಪ್ಲಾಫ್ ಶೋನಿಂದಲೇ ಹೆಚ್ಚು ಸುದ್ದಿಯಾದ್ರು.
ಸೊನ್ನೆ ಸುತ್ತೋದ್ರಲ್ಲಿ ದಾಖಲೆ ಬರೆದ ಬಿಗ್ ಹಿಟ್ಟರ್:
ಪಂಜಾಬ್ಗೆ ಬೇಡವಾದ ಆಟಗಾರರನ್ನ ಹೈದ್ರಾಬಾದ್ ಭರವಸೆಯಿಟ್ಟು ಆಕ್ಷನ್ನಲ್ಲಿ ತೆಕ್ಕೆಗೆ ಹಾಕಿಕೊಳ್ತು. ಅದು ಸಣ್ಣ ಮೊತ್ತಕ್ಕಲ್ಲ. ಬರೋಬ್ಬರಿ 10.75 ಕೋಟಿಗೆ. ಇದು ಪೂರನ್ ಪಡೆದ ಅತ್ಯಧಿಕ ಸಂಭಾವನೆ ಕೂಡ. ಹೀಗೆ ಕೋಟಿ ಕೋಟಿ ಬಾಚಿದ ಪೂರನ್ ಅದಕ್ಕೆ ತಕ್ಕಂತೆ ಪೈಸಾ ವಸೂಲಿ ಪರ್ಫಾಮೆನ್ಸ್ ನೀಡಬೇಕಲ್ವಾ..? ಅದನ್ನ ಮಾಡ್ತಿಲ್ಲ. 10.75 ಕೋಟಿ ಒಡೆಯ ಸೊನ್ನೆ ಶೂರ ಅಂತ ಕರೆಸಿಕೊಳ್ತಿದ್ದಾರೆ. ಹೌದು, ಪೂರನ್ಗೆ ಬಿಗ್ಹಿಟ್ಮ್ಯಾನ್ ಅಂತ ಕರೆಯೋ ಬದಲು ಡಕೌಟ್ಮ್ಯಾನ್ ಅಂತ ಕರೆಯೋದು ಸೂಕ್ತ. ಯಾಕಂದ್ರೆ ಅವರ ಆಟ ಅಷ್ಟೊಂದು ಕೆಟ್ಟದಾಗಿದೆ. ಬಿಗ್ ಇನ್ನಿಂಗ್ಸ್ನಿಂದ ಸುದ್ದಿಯಾಗಬೇಕಿದ್ದವ ಬ್ಯಾಕ್ ಟು ಸೊನ್ನೆ ಸುತ್ತಿ ಪೆವಿಲಿಯನ್ ಸೇರ್ತಿದ್ದಾರೆ.
ಕಳೆದ 7 ಇನ್ನಿಂಗ್ಸ್ನಲ್ಲಿ 5 ಬಾರಿ ಡಕೌಟ್:
ರಾಜಸ್ಥಾನ ರಾಯಲ್ಸ್ (Rajasthan Royals) ವಿರುದ್ಧ ಪಂದ್ಯದಲ್ಲಿ ಹೈದರಾಬಾದ್ ಹೀನಾಯ ಸೋಲುಂಡಿದೆ. ಬ್ಯಾಟಿಂಗ್ ವೈಫಲ್ಯವೇ ಪರಾಭವಕ್ಕೆ ಕಾರಣ. ತಂಡದ ನಂಬಿಗಸ್ಥ ಅನ್ನಿಸಿಕೊಂಡಿದ್ದ ಪೂರನ್ ಆರ್ಭಟಿಸಿ ಪಂದ್ಯ ಗೆಲ್ಲಿಸ್ತಾರೆ ಎಂದು ಎಲ್ಲರೂ ನಿರೀಕ್ಷಿಸಿದ್ರು. ಆದ್ರೆ 9 ಎಸೆತ ಎದುರಿಸಿದ ಪೂರನ್ ಟ್ರೆಂಟ್ ಬೌಲ್ಟ್ ಬೌಲಿಂಗ್ನಲ್ಲಿ ಡಕೌಟಾಗಿ ಹೊರನಡೆದ್ರು. ಇವರನ್ನ ನಂಬಿದ್ದ ಫ್ರಾಂಚೈಸಿ ತಲೆ ಮೇಲೆ ಕೈ ಹೊತ್ತು ಕೂತಿತು.
ಇನ್ನು ಪೂರನ್ ಐಪಿಎಲ್ನಲ್ಲಿ ಸೊನ್ನೆ ಸುತ್ತಿದ್ದು ಇದೇ ಮೊದಲೇನಲ್ಲ. ಆಡಿದ ಕೊನೆಯ ಏಳು ಇನ್ನಿಂಗ್ಸ್ನಲ್ಲಿ 5 ಬಾರಿ ಡಕೌಟಾಗಿದ್ದಾರೆ. ಅಷ್ಟೇ ಅಲ್ಲ 10 ಇನ್ನಿಂಗ್ಸ್ಗಳಿಂದ ಒಂದೂ ಅರ್ಧಶತಕ ಕೂಡ ಬಂದಿಲ್ಲ. 32 ರನ್ನೇ ಬೆಸ್ಟ್ ಸ್ಕೋರ್. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ನಿಕೋಲಸ್ ಪೂರನ್ ಕ್ರಮವಾಗಿ 0,0,9,0,19,0,32,8,2,12,3 ರನ್ ಬಾರಿಸಿದ್ದರು. ಇದೀಗ ಹೊಸ ಆವೃತ್ತಿಯನ್ನು ಶೂನ್ಯದಿಂದಲೇ ಆರಂಭಿಸಿದ್ದಾರೆ.
The IPL woes continue for Nicholas Pooran
2021: 0, 0, 9, 0, 19, 0, 32, 8, 2, 12, 3
2022: 0
🏏 Only 3 double digit scores in the last 14 innings
🦆 6 ducks in 34 IPL innings. That is 17.65%
New season , new teams , new jersey , new captain but one thing remains constant about Nicholas pooran 😂 pic.twitter.com/ixRibzgCek
— abhilash (@abhilasshhhhhh)
Nicholas Pooran's
Last 7 IPL Innings In India
0, 0, 9, 0, 19, 0, 0
😁 pic.twitter.com/FaBjA8Cwdf
ಹೊಸ ಆವೃತ್ತಿ, ಹೊಸ ತಂಡ, ಹೊಸ ಜೆರ್ಸಿ, ಹೊಸ ಕ್ಯಾಪ್ಟನ್ ಹೀಗೆ ಎಲ್ಲವೂ ಬದಲಾದರೂ, ನಿಕೋಲಸ್ ಪೂರನ್ ವಿಚಾರದಲ್ಲಿ ಮಾತ್ರ ಯಾವುದೂ ಬದಲಾಗಿಲ್ಲ ಎಂದು ನೆಟ್ಟಿಗರು ಟ್ರೋಲ್ ಮಾಡಲಾರಂಭಿಸಿದ್ದಾರೆ.
ಕಾಲ ಮಿಂಚಿಲ್ಲ. ಇನ್ನಾದ್ರು ಸಿಡಿದೇಳ್ತಾರಾ..?:
ಸದ್ಯ ಪೂರನ್ ಬ್ಯಾಡ್ ಫಾರ್ಮ್ ಸುಳಿಯಲ್ಲಿದ್ದಾರೆ ನಿಜ. ಆದ್ರೆ ಇದೇ ಕೊನೆಯಾಗಬೇಕಿಲ್ಲ. ಟೂರ್ನಿಯಲ್ಲಿ ರನ್ ಹೊಳೆ ಹರಿಸಲು ಇನ್ನು ಉತ್ತಮ ಅವಕಾಶವಿದೆ. ತಪ್ಪುಗಳನ್ನ ತಿದ್ದಿಕೊಂಡು ಕಣಕ್ಕಿಳಿದಿದ್ದೇ ಆದಲ್ಲಿ ಪೂರನ್ ಅಬ್ಬರದ ಬ್ಯಾಟಿಂಗ್ ವೈಭವ ಕಣ್ತುಂಬಿಕೊಳ್ಳಲು ಸಾಧ್ಯ. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸನ್‌ರೈಸರ್ಸ್ ಹೈದರಾಬಾದ್ (SunRisers Hyderabad) ತಂಡವು ನೀರಸ ಪ್ರದರ್ಶನ ತೋರುವ ಮೂಲಕ ಅಂಕಪಟ್ಟಿಯಲ್ಲಿ ಕೊನೆಯ ಸ್ಥಾನ ಪಡೆದಿತ್ತು. ಇನ್ನು ಈ ಬಾರಿ ಕೂಡಾ ಹೈದರಾಬಾದ್ ಪಡೆಯಲ್ಲಿ ಅತ್ಯಂತ ನಂಬಿಗಸ್ಥ ಮಧ್ಯಮ ಕ್ರಮಾಂಕದ ಬ್ಯಾಟರ್‌ಗಳಿಲ್ಲ. ಹೀಗಾಗಿ ನಿಕೋಲಸ್ ಪೂರನ್ ಫಾರ್ಮ್‌ಗೆ ಮರಳುವುದು ತಂಡದ ದೃಷ್ಟಿಯಿಂದಲೂ ಸಾಕಷ್ಟು ಮಹತ್ವದ್ದೆನಿಸಿದೆ.