IPL 2022: ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ರಾಜಸ್ಥಾನ ರಾಯಲ್ಸ್‌ಗೆ 5 ವಿಕೇಟ್ ಜಯ

By Suvarna NewsFirst Published May 20, 2022, 11:16 PM IST
Highlights

15ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಅಧಿಕೃತಗೊಳಿಸುವುದರ ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ರಾಜಸ್ಥಾನ ರಾಯಲ್ಸ್‌  ಸ್ಥಾನ ಗಿಟ್ಟಿಸಿಕೊಂಡಿದೆ.  

ಮುಂಬೈ (ಮೇ 20): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಯ (IPL 2022) 68ನೇ ಪಂದ್ಯದಲ್ಲಿಂದು ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ (CSK) ವಿರುದ್ದ ರಾಜಸ್ಥಾನ ರಾಯಲ್ಸ್ (RR) ಜಯ ದಾಖಲಿಸಿದೆ. ಟಾಸ್ ಗೆದ್ದ ಚೆನ್ನೈ ಸೂಪರ್ ಕಿಂಗ್ಸ್ ತಂಡದ ನಾಯಕ ಮಹೇಂದ್ರ ಸಿಂಗ್ ಧೋನಿ ಮೊದಲು ಬ್ಯಾಟಿಂಗ್ ಆಯ್ಕೆ ಮಾಡಿದ್ದರು. ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 6 ವಿಕೆಟ್‌ ಕಳೆದುಕೊಂಡು 150 ರನ್‌ ಕಲೆಹಾಕಿತ್ತು. 

ಪಂದ್ಯ ಗೆಲ್ಲಲು ರಾಜಸ್ಥಾನ್‌ ರಾಯಲ್ಸ್‌   151 ರನ್‌ಗಳ  ಗುರಿ ತಲುಪಬೇಕಿತ್ತು. ಆರಂಭದಲ್ಲಿ ವಿಕೇಟ್‌ ಕಳೆದುಕೊಂಡರೂ ಯಶಸ್ವಿ ಜೈಸ್ವಾಲ್ ಅರ್ಧಶತಕದೊಂದಿಗೆ  ರಾಜಸ್ಥಾನ್‌ ರಾಯಲ್ಸ್‌ 5 ವಿಕೆಟ್‌ ಕಳೆದುಕೊಂಡು 151ರನ್‌ ದಾಖಲಿಸುವ ಮೂಲಕ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ಧ ಜಯ ದಾಖಲಿಸಿದೆ. ಈ ಮೂಲಕ  15ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಅಧಿಕೃತಗೊಳಿಸುವುದರ ಜೊತೆಗೆ ಅಂಕಪಟ್ಟಿಯಲ್ಲಿ ಅಗ್ರ 2ರಲ್ಲಿ ರಾಜಸ್ಥಾನ ರಾಯಲ್ಸ್‌  ಸ್ಥಾನ ಗಿಟ್ಟಿಸಿಕೊಂಡಿದೆ.  

ಇದನ್ನೂ ಓದಿ: ಐಪಿಎಲ್ ಟಿ20 ಕ್ರಿಕೆಟ್‌ನಲ್ಲಿ ಹೊಸ ಮೈಲುಗಲ್ಲು ನೆಟ್ಟ ಕಿಂಗ್ ಕೊಹ್ಲಿ..!

ಈ ಬಾರಿ ಆಡಿದ 13 ಪಂದ್ಯಗಳಲ್ಲಿ 8ರಲ್ಲಿ ಗೆಲುವು ಸಾಧಿಸಿದ್ದ ಸಂಜು ಸ್ಯಾಮ್ಸನ್‌ ನಾಯಕತ್ವದ ರಾಜಸ್ಥಾನ , 16 ಅಂಕದೊಂದಿಗೆ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿತ್ತು. ಪ್ಲೇ-ಆಫ್‌ ಸ್ಥಾನ ಬಹುತೇಕ ಖಚಿತಪಡಿಸಿಕೊಂಡಿರುವ ತಂಡ ಈ ಪಂದ್ಯ ಗೆದ್ದು ಅಧಿಕೃತ ಪ್ರವೇಶ ಪಡೆದುಕೊಂಡಿದೆ. ಜೊತೆಗೆ ಲಖನೌ ಸೂಪರ್‌ ಜೈಂಟ್ಸ್‌(18 ಅಂಕ) ತಂಡವನ್ನು ಹಿಂದಿಕ್ಕಿ ಕ್ವಾಲಿಫೈರ್‌ 1ರಲ್ಲಿ ಆಡುವ ಅವಕಾಶ ಸಿಕ್ಕಿದೆ. 

ಬ್ಯಾಟಿಂಗ್ ಆಯ್ಕೆ ಮಾಡಿದ ನಂತರ, ರುತುರಾಜ್ ಗಾಯಕ್ವಾಡ್ ಅವರ ಆರಂಭಿಕ ವಿಕೆಟ್ ಹೊರತಾಗಿಯೂ ಮೊಯಿನ್ ಅಲಿ  ಸಿಎಸ್‌ಕೆಗೆ ಉತ್ತಮ ಆರಂಭವನ್ನು ನೀಡಿದರು. ಮೊಯಿನ್ ಅಲಿ ಅತ್ಯುನ್ನತ 93 ರನ್ ಗಳಿಸಿದರು.  ಕೇವಲ 19 ಎಸೆತಗಳಲ್ಲಿ ತಮ್ಮ ಅರ್ಧಶತಕವನ್ನು ಪೂರೈಸಿದರು. ಬ್ರಬೋರ್ನ್ ಸ್ಟೇಡಿಯಂನಲ್ಲಿ ನಡೆದ  ಪಂದ್ಯದಲ್ಲಿ ಓಬೆಡ್ ಮೆಕಾಯ್ (2/20) ನೇತೃತ್ವದ ಆಲ್ ರೌಂಡ್ ಬೌಲಿಂಗ್ ಪ್ರಯತ್ನವು ರಾಜಸ್ಥಾನ್ ರಾಯಲ್ಸ್ ಚೆನ್ನೈ ಸೂಪರ್ ಕಿಂಗ್ಸ್ ಅನ್ನು 6 ವಿಕೆಟ್ ನಷ್ಟಕ್ಕೆ 150 ಕ್ಕೆ ನಿರ್ಬಂಧಿಸಲು ನೆರವಾಯಿತು. 

ಆರ್ ಆರ್ ಪರ ಒಬೆದ್ ಮೆಕಾಯ್ ಮತ್ತು ಯುಜ್ವೇಂದ್ರ ಚಾಹಲ್ ತಲಾ ಎರಡು ವಿಕೆಟ್ ಪಡೆದರು. ಬ್ಯಾಟಿಂಗ್‌ನಲ್ಲೂ ಉತ್ತಮ ಪ್ರದರ್ಶನ ನೀಡುವ ಮೂಲಕ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್  ವಿರುದ್ಧ ರಾಜಸ್ಥಾನ ರಾಯಲ್ಸ್ ಜಯ ದಾಖಲಿಸಿದೆ. ಯಶಸ್ವಿ ಜೈಸ್ವಾಲ್ ‌ 44 ಎಸೆತಗಳಲ್ಲಿ 59 ಸಿಡಿಸಿ ಔಟಾದರೆ ಜೋಸ್‌ ಬಟ್ಲರ್‌ 5 ಎಸೆತಗಳಲ್ಲಿ ಕೇವಲ 2ರನ್‌ ಗಳಿಸಿ ವಿಕೇಟ್‌ ಒಪ್ಪಿಸಿದರು. ಸಂಜು ಸ್ಯಾಮಸನ್ 20 ಎಸೆತ-15 ರನ್‌,  ದೇವದತ್‌ ಪಡಿಕಲ್‌ 9 ಎಸೆತ -3 ರನ್‌ ಹಾಗೂ ಶಿಮ್ರೋನ್ ಹೆಟ್ಮೆಯರ್ 7 ಎಸೆತಗಳಲ್ಲಿ 6ರನ್‌ ಗಳಿಸಿ ವಿಕೇಟ್‌ ಒಪ್ಪಿಸಿದರು. ಕೊನೆಗೆ ರವಿಚಂದ್ರನ್‌ ಅಶ್ವೀನ್‌ (23 ಎಸೆತ 40)  ಹಾಗೂ ರಿಯಾನ್‌ ಪರಾಗ್‌ (10 ಎಸೆತ 10 ರನ್) ಜತೆಯಾಟ ರಾಜಸ್ಥಾನ್‌ ರಾಯಲ್ಸ್‌ಗೆ ಗೆಲುವಿನ ಹಾದಿ ತೋರಿಸಿತು. 

ಇದನ್ನೂ ಓದಿ: ಐಪಿಎಲ್‌ ಕಪ್​​​​​ ​​​​ಗೆದ್ದ ಬಿಗ್​​​ 3 ತಂಡಗಳು​ ಪ್ಲೇ ಆಫ್​​​ನಿಂದ ಔಟ್​​..!

click me!