IPL 2022: ಮುಂಬೈ ಇಂಡಿಯನ್ಸ್‌ಗಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ಚಾಲೆಂಜ್

Published : Mar 27, 2022, 08:21 AM IST
IPL 2022: ಮುಂಬೈ ಇಂಡಿಯನ್ಸ್‌ಗಿಂದು ಬಲಿಷ್ಠ ಡೆಲ್ಲಿ ಕ್ಯಾಪಿಟಲ್ಸ್‌ ಚಾಲೆಂಜ್

ಸಾರಾಂಶ

* ಸೂಪರ್ ಸಂಡೇಯ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್-ಮುಂಬೈ ಇಂಡಿಯನ್ಸ್‌ ಮುಖಾಮುಖಿ * ಶುಭಾರಂಭ ಮಾಡುವ ನಿರೀಕ್ಷೆಯಲ್ಲಿವೆ ಉಭಯ ತಂಡಗಳು * ರೋಹಿತ್ ನಾಯಕತ್ವಕ್ಕೆ ಸವಾಲೊಡ್ಡಲು ರಿಷಭ್ ಪಂತ್ ರೆಡಿ

ಮುಂಬೈ(ಮಾ.27): ದಾಖಲೆಯ 5 ಬಾರಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ (Mumbai Indians) 15ನೇ ಆವೃತ್ತಿಯ ಐಪಿಎಲ್‌ನಲ್ಲಿ (IPL 2022) ಶುಭಾರಂಭದ ನಿರೀಕ್ಷೆಯಲ್ಲಿದ್ದು, ಭಾನುವಾರ ಮೊದಲ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ವಿರುದ್ಧ ಸೆಣಸಾಡಲಿದೆ. ಟೀಂ ಇಂಡಿಯಾದ (Team India) ಎಲ್ಲಾ ಮಾದರಿಯ ನಾಯಕತ್ವ ವಹಿಸಿಕೊಂಡಿರುವ ರೋಹಿತ್‌ ಶರ್ಮಾಗೆ (Rohit Sharma) ಭವಿಷ್ಯದ ನಾಯಕ ಎಂದೇ ಕರೆಸಿಕೊಳ್ಳುವ ರಿಷಬ್‌ ಪಂತ್‌ (Rishabh Pant) ಸವಾಲು ಎದುರಾಗಲಿದೆ. 

ಮುಂಬೈ ಇಂಡಿಯನ್ಸ್‌ ಪರ ಇಶಾನ್‌ ಕಿಶನ್‌ (Ishan Kishan) ಜೊತೆ ಇನ್ನಿಂಗ್ಸ್‌ ಆರಂಭಿಸುವುದಾಗಿ ಹೇಳಿರುವ ರೋಹಿತ್‌ಗೆ 3ನೇ ಕ್ರಮಾಂಕದಲ್ಲಿ ಸೂರ್ಯಕುಮಾರ್‌ ಯಾದವ್‌ ಅನುಪಸ್ಥಿತಿ ಕಾಡಲಿದ್ದು, ಫ್ಯಾಬಿಯನ್‌ ಆ್ಯಲೆನ್‌ ತಂಡಕ್ಕೆ ಆಯ್ಕೆಯಾಗುವ ನಿರೀಕ್ಷೆಯಲ್ಲಿದ್ದಾರೆ. ಸ್ಫೋಟಕ ಆಟದ ಮೂಲಕ ಭರವಸೆ ಮೂಡಿಸಿರುವ ದಕ್ಷಿಣ ಆಫ್ರಿಕಾ ಯುವ ಬ್ಯಾಟರ್‌, ‘ಬೇಬಿ ಡಿ ವಿಲಿಯ​ರ್ಸ್‌’ ಖ್ಯಾತಿಯ ಡೆವಾಲ್ಡ್‌ ಬ್ರೆವಿಸ್‌ಗೆ ತಂಡದಲ್ಲಿ ಸ್ಥಾನ ಸಿಗಬಹುದು. ಅನುಭವಿ ಆಟಗಾರ ಕೀರನ್‌ ಪೊಲ್ಲಾರ್ಡ್‌ ಜೊತೆ ಸಿಂಗಾಪೂರದ ಟಿಮ್‌ ಡೇವಿಡ್‌ ಆಲ್ರೌಂಡರ್‌ ಹೊಣೆ ನಿಭಾಯಿಸಬೇಕಿದೆ. ತಂಡದ ಬೌಲಿಂಗ್‌ ವಿಭಾಗ ಜಸ್‌ಪ್ರೀತ್‌ ಬುಮ್ರಾ ಅವರನ್ನೇ ಹೆಚ್ಚಾಗಿ ಅವಲಂಬಿಸಿದ್ದು, ಟೈಮಲ್‌ ಮಿಲ್ಸ್‌ ಹಾಗೂ ಜಯದೇವ್‌ ಉನದ್ಕತ್‌ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಆದರೆ ತಂಡಕ್ಕೆ ಅನುಭವಿ ಸ್ಪಿನ್ನರ್‌ ಕೊರತೆ ಎದುರಾಗಲಿದ್ದು, ಮುರುಗನ್‌ ಅಶ್ವಿನ್‌ ಅಥವಾ ಮಯಾಂಕ್‌ ಮಾರ್ಕಂಡೆ ಆಯ್ಕೆಯಾಗುವ ಸಾಧ್ಯತೆ ಇದೆ.

ಯಶ್ ಧುಳ್‌ಗೆ ಪಾದಾರ್ಪಣೆ ತವಕ: ಇನ್ನು, ಡೇವಿಡ್‌ ವಾರ್ನರ್‌ (David Warner) ಆರಂಭಿಕ ಕೆಲ ಪಂದ್ಯಗಳಿಗೆ ಗೈರಾಗಲಿದ್ದು, ಪೃಥ್ವಿ ಶಾ (Prithvi Shaw) ಜೊತೆ ನ್ಯೂಜಿಲೆಂಡ್‌ ಟಿಮ್‌ ಸೀಫರ್ಟ್‌ ಆರಂಭಿಕನಾಗಿ ಕಣಕ್ಕಿಳಿಯಬಹುದು. ಸ್ಫೋಟಕ ಬ್ಯಾಟರ್‌ ರೊವ್ಮನ್‌ ಪೊವೆಲ್‌ ಜೊತೆ ಸರ್ಫರಾಜ್‌ ಖಾನ್‌ ಕೂಡಾ ಅಂತಿಮ 11ರಲ್ಲಿ ಸ್ಥಾನ ಗಿಟ್ಟಿಸಲು ಎದುರು ನೋಡುತ್ತಿದ್ದು, ಅಂಡರ್‌-19 ವಿಶ್ವಕಪ್‌ ವಿಜೇತ ಭಾರತದ ನಾಯಕ ಯಶ್‌ ಧುಳ್‌ ಐಪಿಎಲ್‌ ಪಾದಾರ್ಪಣೆ ತವಕದಲ್ಲಿದ್ದಾರೆ. ಶಾರ್ದೂಲ್‌ ಠಾಕೂರ್‌(Shardul Thakur), ಅಕ್ಷರ್‌ ಪಟೇಲ್‌ (Axar Patel) ಆಲ್ರೌಂಡರ್‌ ಸ್ಥಾನ ತುಂಬಲಿದ್ದಾರೆ. ದಕ್ಷಿಣ ಆಫ್ರಿಕಾದ ಏನ್ರಿಚ್‌ ನೋಕಿಯಾ ಬೌಲಿಂಗ್‌ ಪಡೆಯನ್ನು ಮುನ್ನಡೆಸುವ ನಿರೀಕ್ಷೆ ಇದ್ದು, ವೇಗಿಗಳಾದ ಚೇತನ್‌ ಸಕಾರಿಯಾ, ಖಲೀಲ್‌ ಅಹ್ಮದ್‌ ಕೂಡಾ ಉತ್ತಮ ಬೆಂಬಲ ನೀಡಬೇಕಿದೆ.

IPL 2022 CSK vs KKR ಹಾಲಿ ಚಾಂಪಿಯನ್ ತಂಡಕ್ಕೆ ಮಣ್ಣುಮುಕ್ಕಿಸಿದ ಕೆಕೆಆರ್!

ಐಪಿಎಲ್ ಇತಿಹಾಸದಲ್ಲಿ ಉಭಯ ತಂಡಗಳು ಒಟ್ಟು 30 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಎರಡೂ ತಂಡಗಳು ಬಹುತೇಕ ಸಮಬಲದ ಪ್ರದರ್ಶನ ತೋರಿವೆ. 30 ಪಂದ್ಯಗಳ ಪೈಕಿ ಮುಂಬೈ ಇಂಡಿಯನ್ಸ್ ತಂಡವು 16 ಬಾರಿ ಗೆಲುವು ದಾಖಲಿಸಿದ್ದರೆ, ಡೆಲ್ಲಿ ಕ್ಯಾಪಿಟಲ್ಸ್ ತಂಡವು 14 ಬಾರಿ ಗೆಲುವಿನ ರುಚಿ ಕಂಡಿದೆ. ಎರಡೂ ತಂಡಗಳು ಸ್ಪೋಟಕ ಬ್ಯಾಟರ್‌ಗಳನ್ನು ಹೊಂದಿದ್ದು, ರನ್‌ ಮಳೆ ಹರಿಯುವ ಸಾಧ್ಯತೆಯಿದೆ

ಸಂಭವನೀಯ ಆಟಗಾರರ ಪಟ್ಟಿ

ಮುಂಬೈ ಇಂಡಿಯನ್ಸ್‌ : ರೋಹಿತ್ ಶರ್ಮಾ‌(ನಾಯಕ), ಇಶಾನ್ ಕಿಶನ್‌, ಫ್ಯಾಬಿನ್ ಆ್ಯಲೆನ್‌/ ಡೆವಾಲ್ಡ್‌ ಬ್ರೆವಿಸ್‌, ತಿಲಕ್‌ ವರ್ಮಾ, ಕೀರನ್ ಪೊಲ್ಲಾರ್ಡ್‌, ಟಿಮ್ ಡೇವಿಡ್‌, ಸಂಜಯ್‌, ಜಯದೇವ್ ಉನದ್ಕತ್‌, ಟೈಮಲ್ ಮಿಲ್ಸ್‌, ಮಯಾಂಕ್ ಮಾರ್ಕಂಡೆ, ಜಸ್ಪ್ರೀತ್‌ ಬುಮ್ರಾ.

ಡೆಲ್ಲಿ ಕ್ಯಾಪಿಟಲ್ಸ್‌ : ಪೃಥ್ವಿ ಶಾ, ಟಿಮ್ ಸೀಫರ್ಟ್‌, ಯಶ್‌ ಧುಳ್‌, ರಿಷಭ್ ಪಂತ್‌(ನಾಯಕ), ರೋಮನ್ ಪೊವೆಲ್‌, ಸರ್ಫರಾಜ್ ಖಾನ್‌, ಅಕ್ಷರ್ ಪಟೇಲ್‌, ಶಾರ್ದೂಲ್ ಠಾಕೂರ್‌, ಖಲೀಲ್ ಅಹಮ್ಮದ್‌, ಚೇತನ್ ಸಕಾರಿಯಾ‌, ಏನ್ರಿಚ್‌ ನೋಕಿಯ.

ಸ್ಥಳ: ಮುಂಬೈ, ಬ್ರಾಬೊರ್ನ್‌ ಕ್ರೀಡಾಂಗಣ
ಪಂದ್ಯ: ಮಧ್ಯಾಹ್ನ 3.30ಕ್ಕೆ, 
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!