
ಮುಂಬೈ(ಮೇ.15): ಹೇ, ವಿರಾಟ್ ಕೊಹ್ಲಿ (Virat Kohli) ನಿಜಕ್ಕೂ ನಿನ್ನನ್ನು ಇಂತಹ ಸಂಕಷ್ಟದಲ್ಲಿ ನೋಡಲಾಗ್ತಿಲ್ಲ. ನೀನೆಂದು ಎದುರಾಳಿಗೆ ತಲೆಬಾಗಿದವನಲ್ಲ. ನಿನ್ನದೇನಿದ್ರೂ ತಲೆಎತ್ತಿ, ಎದುರಾಳಿ ಸೊಲ್ಲೆತ್ತದಂತೆ ಮಾಡಿದ ಶೂರ ನೀ. ಶರವೇಗದಲ್ಲಿ 70 ಶತಕ ಸಿಡಿಸಿ, ಸಚಿನ್ ತೆಂಡುಲ್ಕರ್ (Sachin Tendulkar) ರನ್ ದಾಖಲೆಯನ್ನ ಅಳಿಸಿ 2ನೇ ಕ್ರಿಕೆಟ್ ದೇವರಾಗಲು ಹೊರಟ ದಿ ಗ್ರೇಟ್ ಲೆಜೆಂಡರಿ ನೀನು. ನೀನೆಂದು ಸೆಂಚುರಿ ದಾಹಕ್ಕಾಗಿ ದಣಿದವನಲ್ಲ ಅಥವಾ ರನ್ ಗಳಿಕೆಗಾಗಿ ಎಂದೂ ಸುಸ್ತಾದವನಲ್ಲ. ನೀನೆನಿದ್ರೂ ಆಧುನಿಕ ಕ್ರಿಕೆಟ್ನ ಶುದ್ಧ ಛಲಗಾರ. ಬದ್ಧತೆಗೆ ನೀನೆ ಸರಿಸಾಟಿ. ಇಂತಹ ಕಿಂಗ್ ಕೊಹ್ಲಿಗೆ ಈಗೇನಾಯ್ತು ? ನಿನ್ನ ಹತಾಶೆ, ಸತತ ವೈಫಲ್ಯವನ್ನ ಈ ಎರಡೂ ಕಣ್ಣುಗಳಿಂದ ನಿಜಕ್ಕೂ ನೋಡಲಾಗ್ತಿಲ್ಲ.
ಪ್ರಸಕ್ತ ಐಪಿಎಲ್ನಲ್ಲಿ ನಿನ್ನ ಹಳೇ ಖದರ್ ಮರೆಯಾಗಿದೆ. ನೀನೇನಾ ಆ ಕಿಂಗ್ ಕೊಹ್ಲಿ ಅನ್ನೋ ಪ್ರಶ್ನೆ ಮೂಡಿಸಿಬಿಟ್ಟಿರುವೆ. 19ರ ಎವರೇಜ್ನಲ್ಲಿ ಬರೀ 233 ರನ್. ಅದ್ರಲ್ಲಿ 3 ಬಾರಿ ಡಕೌಟ್. ನಿಜಕ್ಕೂ ಹೃದಯ ಛಿದ್ರಗೊಳಿಸಿದೆ. ಅದ್ರಲ್ಲೂ ನೀನು ಸುಲಭವಾಗಿ ವಿಕೆಟ್ ಒಪ್ಪಿಸಿ, ತಲೆತಗ್ಗಿಸುತ್ತಾ ಪೆವಿಲಿಯನ್ ಕಡೆ ಸಾಗುವೆ ನೋಡು ಆ ಪ್ರಸ್ಟ್ರೇಶನ್ ನೋಡಲಾಗ್ತಿಲ್ಲ. ಆಕಾಶದತ್ತ ಮುಖ ಮಾಡಿ ಏನನ್ನೋ ಮಾತನಾಡುವೆ. ಆ ನಿರಾಸೆಯ ಭಾವ ನಿನ್ನನ್ನ ಆವರಿಸಿದೆ. ಎಲ್ಲವನ್ನ ಕಳೆದುಕೊಂಡೆ ಬಿಟ್ಟೆ ಅನ್ನೋ ನಿನ್ನೊಳಗಿನ ಹತಾಶತನ ಬರೀ ನಿನ್ನಷ್ಟೇ ಅಲ್ಲ, ನಿನ್ನನ್ನ ಪ್ರೀತಿಸುವ ಇಡೀ ಕ್ರಿಕೆಟ್ ಜಗತ್ತನ್ನ ಮರುಗುಂತೆ ಮಾಡಿದೆ.
ಬಿಗ್ ಫೇಲಿವರ್ ಕೊಹ್ಲಿಗೆ ಪಂಜಾಬ್ ಸಾಂತ್ವನ:
15ನೇ ಐಪಿಎಲ್ನಲ್ಲಿ ತೀರ ಕಳಪೆ ಆಟವಾಡ್ತಿರೋ ಕೊಹ್ಲಿಗೆ ಪಂಜಾಬ್ ಕಿಂಗ್ಸ್ (Punjab Kings) ತಂಡ ಸಾಂತ್ವನದ ಮಾತುಗಳನ್ನ ಹೇಳಿದೆ. ವಿರಾಟ್ ಕೊಹ್ಲಿ, ನಾವು ಸಹ ಅದನ್ನು ಅನುಭವಿಸಿದ್ದೇವೆ. ಅದೃಷ್ಟವು ಶೀಘ್ರದಲ್ಲೇ ನಿಮ್ಮ ಕಡೆಗೆ ತಿರುಗುತ್ತದೆ ಎಂದು ಭಾವಿಸುತ್ತೇವೆ,' ಎಂದು ಪಂಜಾಬ್ ಕಿಂಗ್ಸ್ ಇನ್ಸ್ಟಾಗ್ರಾಂನಲ್ಲಿ ಹತಾಶೆಗೊಂಡ ಕೊಹ್ಲಿಯ ಚಿತ್ರದೊಂದಿಗೆ ಶೀರ್ಷಿಕೆ ಬರೆದುಕೊಂಡಿದ್ದಾರೆ. ನೋವಿನಲ್ಲಿ ಕೊಹ್ಲಿಗೆ ದೈರ್ಯ ತುಂಬೋ ಪೋಸ್ಟ್ ಮಾಡಿರೋ ಪಂಜಾಬ್ ಕಾರ್ಯಕ್ಕೆ ಪ್ರಶಂಸೆ ವ್ಯಕ್ತವಾಗ್ತಿದೆ. ಆರ್ಸಿಬಿ ಫ್ಯಾನ್ಸ್ (RCB Fans) ವಿ ಲವ್ ಯೂ ಪಂಜಾಬ್. ನೀವು ನಮ್ಮ ಹೃದಯ ಗೆದ್ದಿದ್ದೀರಿ ಎಂದಿದ್ದಾರೆ.
ಹೆಗಲ ಮೇಲೆ ಕೈ ಹಾಕಿ ಧೈರ್ಯ ತುಂಬಿದ ಡುಪ್ಲೆಸಿಸ್:
ಇನ್ನೂ ಪಂಜಾಬ್ ವಿರುದ್ಧ ಆರ್ಸಿಬಿ ಹೀನಾಯ ಸೋಲಿನ ಬಳಿಕ ಕೊಹ್ಲಿ ತೀರ ಬೇಸರಗೊಂಡಿದ್ರು. ಈ ಪಂದ್ಯದಲ್ಲಿ ಕೊಹ್ಲಿ 20 ರನ್ಗೆ ಔಟಾಗಿ ನಿರಾಸೆ ಮೂಡಿಸಿದ್ರು. ಹೀಗಾಗಿ ಪ್ರಸ್ಟ್ರೇಶನ್ಗೆ ಒಳಗಾಗಿದ್ರು. ಇದನ್ನ ಗಮನಿಸಿದ ಕ್ಯಾಪ್ಟನ್ ಡುಪ್ಲೆಸಿಸ್ ಪಂದ್ಯದ ಬಳಿಕ ಕೊಹ್ಲಿ ಹೆಗಲ ಮೇಲೈ ಕೈ ಹಾಕಿ ಧೈರ್ಯ ತುಂಬಿದ್ರು.
IPL 2022 ಇಂದಿನಿಂದ ಮುಂಬೈ-ಚೆನ್ನೈಗೆ ಆರ್ಸಿಬಿ ಫ್ಯಾನ್ಸ್ ಸಪೋರ್ಟ್..!
ಒಟ್ಟಿನಲ್ಲಿ ಸತತ ವೈಫಲ್ಯ ಕೊಹ್ಲಿಯನ್ನ ಹತಾಶೆಗೊಳಿಸಿದೆ. ಆದ್ರೆ ಯಾವ ವೈಫಲ್ಯವೂ ಕೊನೆಯಲ್ಲ. ಅದಕ್ಕೆ ಎಂಡ್ ಅನ್ನೋದು ಇದ್ದೇ ಇದೆ. 1983 ರಲ್ಲಿ ಸುನೀಲ್ ಗವಾಸ್ಕರ್ ಹಾಗೂ ಸಚಿನ್ 100ನೇ ಶತಕದ ಟೈಮ್ ಅಲ್ಲಿ ಇಂತಹ ವೈಫಲ್ಯ ಕಂಡು ಬಳಿಕ ಲಯಕ್ಕೆ ಮರಳಿದ್ರು. ಸದ್ಯ ಕೊಹ್ಲಿಯೂ ಶೀಘ್ರವೇ ಅಂಗಳದಲ್ಲಿ ಹಳೇ ಖದರ್ ತೋರಲಿ ಎಂದು ಆಶಿಸೋಣ.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.