
ಮುಂಬೈ(ಮೇ.17): ರಾಹುಲ್ ತ್ರಿಪಾಠಿ, ಪ್ರಿಯಂ ಗರ್ಗ್ ಹಾಗೂ ನಿಕೋಲಸ್ ಪೂರನ್ ಸ್ಫೋಟಕ ಬ್ಯಾಟಿಂಗ್‌ನಿಂದ ಮುಂಬೈ ಇಂಡಿಯನ್ಸ್ ವಿರುದ್ಧ ಸನ್‌ರೈಸರ್ಸ್ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿದೆ.
ಟಾಸ್ ಸೋತು ಬ್ಯಾಟಿಂಗ್ ಇಳಿದ ಹೈದರಾಬಾದ್ ನಿರೀಕ್ಷಿತ ಆರಂಭ ಪಡೆಯಲಿಲ್ಲ. ಅಭಿಷೇಕ್ ಶರ್ಮಾ 9 ರನ್ ಸಿಡಿಸಿ ಔಟಾದರು. ಆದರೆ ಪ್ರಿಯಂ ಗರ್ಗ್ ಹಾಗೂ ರಾಹುಲ್ ತ್ರಿಪಾಠಿ ಜೊತೆಯಾಟದಿಂದ ಹೈಹರಾಬಾದ್ ಚೇತರಿಸಿಕೊಂಡಿತು. ಗರ್ಗ್ ಹಾಗೂ ತ್ರಿಪಾಠಿ ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ಪ್ರಿಯಂ ಗರ್ಗ್ 26 ಎಸೆತದಲ್ಲಿ 4 ಬೌಂಡರಿ ಹಾಗೂ 2 ಸಿಕ್ಸರ್ ಮೂಲಕ 42 ರನ್ ಸಿಡಿಸಿ ಔಟಾದರು. ಆದರೆ ರಾಹುಲ್ ತ್ರಿಪಾಠಿ ಅಬ್ಬರ ಮುಂದುವರಿಯಿತು. ನಿಕೋಲಸ್ ಪೂರನ್ ಕೂಡ ಮತ್ತಷ್ಟು ಆಕ್ರಮಣಕಾರಿ ಬ್ಯಾಟಿಂಗ್ ಪ್ರದರ್ಶಿಸಿದರು. ತ್ರಿಪಾಠಿ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು.
ನಿಕೋಲಸ್ ಪೂರನ್ 22 ಎಸೆತದಲ್ಲಿ 2 ಬೌಂಡರಿ ಹಾಗೂ 3 ಸಿಕ್ಸರ್ ನೆರವಿನಿಂದ 38 ರನ್ ಸಿಡಿಸಿ ಔಟಾದರು. ಪೂರನ್ ವಿಕೆಟ್ ಪತನದ ಬಳಿಕವೂ ತ್ರಿಪಾಠಿ ಅಬ್ಬರ ಮುಂದುವರಿಯಿತು. ತ್ರಿಪಾಠಿ 44 ಎಸೆತದಲ್ಲಿ 9 ಬೌಂಡರಿ 3 ಸಿಕ್ಸರ್ ಮೂಲಕ 76 ರನ್ ಸಿಡಿಸಿ ಔಟಾದರು. ಆ್ಯಡಿನ್ ಮಕ್ರಮ್ 2 ರನ್ ಸಿಡಿಸಿ ಔಟಾದರು.
ನಾಯಕ ಕೇನ್ ವಿಲಿಯಮ್ಸನ್ ಅಜೇಯ 8 ರನ್ ಹಾಗೂ ವಾಶಿಂಗ್ಟನ್ ಸುಂದರ್ 9 ರನ್ ಸಿಡಿಸಿದರು. ಈ ಮೂಲಕ ಹೈದರಾಬಾದ್ 6 ವಿಕೆಟ್ ನಷ್ಟಕ್ಕೆ 193 ರನ್ ಸಿಡಿಸಿತು.
ಕಳೆದ ಪಂದ್ಯದಲ್ಲಿ ಸನ್‌ರೈಸರ್ಸ್ ಹೈದರಾಬಾದ್ ಮುಗ್ಗರಿಸಿತು. ಕೆಕೆಆರ್ ವಿರುದ್ಧ 54 ರನ್ ಸೋಲು ಕಂಡಿತು. 15ನೇ ಆವೃತ್ತಿ ಐಪಿಎಲ್‌ನಲ್ಲಿ ಸತತ 5 ಸೋಲನುಭವಿಸಿದ ಮಾಜಿ ಚಾಂಪಿಯನ್ ಸನ್‌ರೈಸರ್ಸ್ ಹೈದರಾಬಾದ್ ಪ್ಲೇ-ಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಶನಿವಾರ ಕೋಲ್ಕತಾ ನೈಟ್ ರೈಡರ್ಸ್ ವಿರುದ್ಧದ ಪಂದ್ಯದಲ್ಲಿ ತಂಡ 54 ರನ್‌ಗಳಿಂದ ಪರಾಭವಗೊಂಡಿದ್ದು, ಆವೃತ್ತಿಯಲ್ಲಿ 7ನೇ ಸೋಲು ಕಂಡಿತು. ಹೈದರಾಬಾದ್‌ನ ಸೋಲಿನಿಂದ ಪ್ಲೇ-ಆಫ್ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿಗೆ ಅನುಕೂಲವಾಗಬಹುದು. ಆವೃತ್ತಿಯಲ್ಲಿ 6ನೇ ಗೆಲುವು ದಾಖಲಿಸಿದ ಕೋಲ್ಕತಾ ಪ್ಲೇ-ಆಫ್ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ತಂಡಕ್ಕಿನ್ನು 1 ಪಂದ್ಯ ಮಾತ್ರ ಬಾಕಿ ಇದ್ದು, ಆ ಪಂದ್ಯದಲ್ಲೂ ಗೆದ್ದು ಇತರೆ ತಂಡಗಳ ಫಲಿತಾಂಶಗಳು ತನ್ನ ಪರ ಬಂದರೆ ಪ್ಲೇ-ಆಫ್ ಪ್ರವೇಶಿಸಬಹುದು.
ಮೊದಲು ಬ್ಯಾಟ್ ಮಾಡಿದ ಕೋಲ್ಕತಾ 20 ಓವರಲ್ಲಿ 6 ವಿಕೆಟ್‌ಗೆ 177 ರನ್ ಕಲೆ ಹಾಕಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಹೈದರಾಬಾದ್ 20 ಓವರಲ್ಲಿ 8 ವಿಕೆಟ್‌ಗೆ 123 ರನ್‌ಗಳಿಸಿ ಸೋಲೊಪ್ಪಿಕೊಂಡಿತು.
ಪವರ್ ಪ್ಲೇನಲ್ಲಿ ನಾಯಕ ವಿಲಿಯಮ್ಸನ್(17 ಎಸೆತಗಳಲ್ಲಿ 09), ರಾಹುಲ್ ತ್ರಿಪಾಠಿ(12 ಎಸೆತಗಳಲ್ಲಿ 09) ನಿಧಾನ ಆಟ ತಂಡಕ್ಕೆ ಮುಳುವಾಯಿತು. ಅಭಿಷೇಕ್ ಶರ್ಮಾ(28 ಎಸೆತಗಳಲ್ಲಿ 43), ಏಡನ್ ಮಾರ್ಕ್ರಮ್(32) ಹೋರಾಡಿದರೂ ತಂಡವನ್ನು ಗೆಲ್ಲಿಸಲು ಆಗಲಿಲ್ಲ. ಆ್ಯಂಡ್ರೆ ರಸೆಲ್ 22 ರನ್‌ಗೆ 3 ವಿಕೆಟ್ ಪಡೆದರು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.