IPL 2022: ಕಾಮೆಂಟ್ರಿ ಬಿಟ್ಟು ಮುಂಬೈ ತಂಡಕ್ಕೆ ಧವಳ್‌ ಕುಲ್ಕರ್ಣಿ?

Published : Apr 21, 2022, 01:33 PM IST
IPL 2022: ಕಾಮೆಂಟ್ರಿ ಬಿಟ್ಟು ಮುಂಬೈ ತಂಡಕ್ಕೆ ಧವಳ್‌ ಕುಲ್ಕರ್ಣಿ?

ಸಾರಾಂಶ

* ಮುಂಬೈ ಇಂಡಿಯನ್ಸ್‌ ತಂಡ ಕೂಡಿಕೊಳ್ಳಲಿದ್ದಾರೆ ಧವಳ್‌ ಕುಲ್ಕರ್ಣಿ? * ಧವಳ್‌ ಕುಲ್ಕರ್ಣಿ ಅವರನ್ನು ತಂಡಕ್ಕೆ ಸೇರಿಸಿಕೊಳ್ಳಲು ರೋಹಿತ್ ಶರ್ಮಾ ಆಸಕ್ತಿ * ಸತತ ಸೋಲುಗಳಿಂದ ಕಂಗೆಟ್ಟು ಹೋಗಿರುವ ಮುಂಬೈ ಇಂಡಿಯನ್ಸ್‌

ಮುಂಬೈ(ಏ.21): ಐಪಿಎಲ್‌ (IPL 2022) ಮೆಗಾ ಹರಾಜಿನಲ್ಲಿ ಬಿಕರಿಯಾಗದೆ, ಸದ್ಯ ಕಾಮೆಂಟ್ರಿ ಮಾಡುತ್ತಿರುವ ವೇಗಿ ಧವಳ್‌ ಕುಲ್ಕರ್ಣಿ (Dhawal Kulkarni) ಅವರು ಶೀಘ್ರದಲ್ಲೇ ಮುಂಬೈ ಇಂಡಿಯನ್ಸ್‌ (Mumbai Indians) ತಂಡ ಸೇರಲಿದ್ದಾರೆ ಎಂದು ಹೇಳಲಾಗುತ್ತಿದೆ. ಅವರನ್ನು ತಂಡಕ್ಕೆ ಕರೆತರಲು ನಾಯಕ ರೋಹಿತ್‌ ಶರ್ಮಾ (Rohit Sharma) ಆಸಕ್ತಿ ಹೊಂದಿದ್ದು, ಈ ತಿಂಗಳ ಕೊನೆ ವೇಳೆಗೆ ಧವಳ್‌ ತಂಡ ಕೂಡಿಕೊಳ್ಳುವ ಸಾಧ್ಯತೆ ಇದೆ. 

ಈ ಮೊದಲು ಮುಂಬೈ ಇಂಡಿಯನ್ಸ್, ರಾಜಸ್ಥಾನ ರಾಯಲ್ಸ್‌ (Rajasthan Royals), ಗುಜರಾತ್‌ ಲಯನ್ಸ್‌ ಪರ ಒಟ್ಟು 92 ಐಪಿಎಲ್ ಪಂದ್ಯಗಳನ್ನಾಡಿರುವ ಕುಲ್ಕರ್ಣಿ 86 ವಿಕೆಟ್‌ ಕಬಳಿಸಿದ್ದಾರೆ. ಕಳೆದ ಬಾರಿ ಮುಂಬೈ ಇಂಡಿಯನ್ಸ್‌ ತಂಡವನ್ನು ಪ್ರತಿನಿಧಿಸಿದ್ದರು. ಆದರೆ ಕುಲ್ಕರ್ಣಿ ಅವರು, 2022ರ ಹರಾಜಿನಲ್ಲಿ ಬಿಕರಿಯಾಗದೆ ಉಳಿದಿದ್ದರು. ಬಳಿಕ ಸ್ಟಾರ್‌ ಸ್ಪೋರ್ಟ್ಸ್‌ನ ಹಿಂದಿ ಕಾಮೆಂಟ್ರಿ ವಿಭಾಗ ಸೇರಿದ್ದರು.

ಚೊಚ್ಚಲ ಗೆಲುವಿಗಾಗಿ ಹಾತೊರೆಯುತ್ತಿದೆ ಮುಂಬೈ ಇಂಡಿಯನ್ಸ್‌: 5 ಬಾರಿಯ ಐಪಿಎಲ್ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌ ತಂಡವು 15ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಸತತ 6 ಸೋಲು ಕಾಣುವ ಮೂಲಕ ಕಂಗಾಲಾಗಿದೆ. ಯಾವುದೇ ತಂಡ ಇದುವರೆಗೆ ಐಪಿಎಲ್‌ ಆವೃತ್ತಿಯೊಂದರಲ್ಲಿ ಮೊದಲ 7 ಪಂದ್ಯಗಳಲ್ಲಿ ಸೋತ ಇತಿಹಾಸವಿಲ್ಲ. ಈ ಮೊದಲು ಡೆಲ್ಲಿ(2013), ಆರ್‌ಸಿಬಿ(2019) ತಂಡಗಳು ಮೊದಲ 6 ಪಂದ್ಯಗಳಲ್ಲಿ ಸೋತಿದ್ದವು. ಇಂದು ನಡೆಯುವ ಪಂದ್ಯದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ವಿರುದ್ದ ಮುಗ್ಗರಿಸಿದರೆ, ಮುಂಬೈ ಇಂಡಿಯನ್ಸ್‌ ತಂಡವು ಮೊದಲ 7 ಪಂದ್ಯಗಳನ್ನು ಸೋತ ಮೊದಲ ತಂಡ ಎನ್ನುವ ಕುಖ್ಯಾತಿಗೆ ಪಾತ್ರವಾಗಿದೆ.

ನೀತಿ ಸಂಹಿತೆ ಉಲ್ಲಂಘನೆ: ಕೆ.ಎಲ್‌.ರಾಹುಲ್‌ಗೆ ದಂಡ

ನವಿ ಮುಂಬೈ: ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದ ವೇಳೆ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ಲಖನೌ ಸೂಪರ್‌ ಜೈಂಟ್ಸ್‌ ನಾಯಕ ಕೆ.ಎಲ್‌.ರಾಹುಲ್‌ಗೆ ಐಪಿಎಲ್‌ ಆಡಳಿತ ಮಂಡಳಿ ಪಂದ್ಯದ ಸಂಭಾವನೆಯ ಶೇ.20ರಷ್ಟು ದಂಡ ವಿಧಿಸಿದೆ. ಸಹ ಆಟಗಾರ ಮಾರ್ಕಸ್‌ ಸ್ಟೋಯ್ನಿಸ್‌ಗೆ ನಿಯಮ ಉಲ್ಲಂಘನೆಗಾಗಿ ಛೀಮಾರಿ ಹಾಕಲಾಗಿದೆ ಎಂದು ಐಪಿಎಲ್‌ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. ಆದರೆ ದಂಡ ವಿಧಿಸಲು, ಛೀಮಾರಿ ಹಾಕಲು ಕಾರಣವನ್ನು ಬಹಿರಂಗಪಡಿಸಿಲ್ಲ. ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಎದುರು ಲಖನೌ ಸೂಪರ್‌ ಜೈಂಟ್ಸ್‌ ಎದುರು 18 ರನ್‌ಗಳ ಸೋಲು ಅನುಭವಿಸಿತ್ತು. 

ಬಾಂಗ್ಲಾ ಮಾಜಿ ಕ್ರಿಕೆಟಿಗ ಮೊಶರ್ರಫ್‌ ಹೊಸೈನ್‌ ನಿಧನ

ಢಾಕಾ: ಬಾಂಗ್ಲಾದೇಶ ಮಾಜಿ ಲೆಗ್‌ ಸ್ಪಿನ್ನರ್‌ ಮೊಶರ್ರಫ್‌ ಹೊಸೈನ್‌ ಅವರು ತಮ್ಮ 40ನೇ ವಯಸ್ಸಿನಲ್ಲಿ ಬುಧವಾರ ಇಹಲೋಹ ತ್ಯಜಿಸಿದ್ದಾರೆ. ಇದನ್ನು ಬಾಂಗ್ಲಾ ಕ್ರಿಕೆಟ್‌ ಮಂಡಳಿ(ಬಿಸಿಬಿ) ಟ್ವೀಟ್‌ ಮೂಲಕ ಖಚಿತಪಡಿಸಿದೆ. 2019ರ ಮಾರ್ಚ್‌ನಲ್ಲಿ ಮಿದುಳಿನ ಕ್ಯಾನ್ಸರ್‌ಗೆ ತುತ್ತಾಗಿದ್ದ ಅವರು, ಬಳಿಕ ಚಿಕಿತ್ಸೆ ಪಡೆದು ಗುಣಮುಖರಾಗಿದ್ದರು. ಆದರೆ 2020ರ ನವೆಂಬರ್‌ನಲ್ಲಿ ಕ್ಯಾನ್ಸರ್‌ ಕರುಳಿಗೆ ಬಾಧಿಸಿತ್ತು. 2008ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದ ಅವರು ಬಾಂಗ್ಲಾ ಪರ 5 ಏಕದಿನ ಪಂದ್ಯಗಳನ್ನಾಡಿದ್ದಾರೆ. ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ 3305 ರನ್‌ ಸಿಡಿಸಿ, 392 ವಿಕೆಟ್‌ ಪಡೆದಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

One8 ಸ್ಪೋರ್ಟ್ಸ್ ಬ್ರ್ಯಾಂಡ್ ಮಾರಾಟಕ್ಕೆ ಮುಂದಾದ ಕೊಹ್ಲಿ, 40 ಕೋಟಿ ಹೂಡಿಕೆ ಪ್ಲಾನ್
ಸ್ಮೃತಿ ಮಂಧನಾ ಮದುವೆ ಮುರಿದ ಬಳಿಕ ಟೀಮ್‌ ಇಂಡಿಯಾ ಆಟಗಾರ್ತಿಯರ ಮಹಾ ನಿರ್ಧಾರ!