IPL 2022 ಲಖನೌ ವಿರುದ್ದ ಟಾಸ್ ಗೆದ್ದ ರಾಜಸ್ಥಾನ ರಾಯಲ್ಸ್, 3 ಬದಲಾವಣೆ!

By Suvarna NewsFirst Published May 15, 2022, 7:10 PM IST
Highlights
  • ಲಖನೌ ಹಾಗೂ ರಾಜಸ್ಥಾನಕ್ಕೆ ಮಹತ್ವದ ಪಂದ್ಯ
  • ಟಾಸ್ ಗೆದ್ದ ರಾಜಸ್ಥಾನ ತಂಡದಿಂದ ಬ್ಯಾಟಿಂಗ್ ಆಯ್ಕೆ
  • ರಾಜಸ್ಥಾನ ತಂಡದಲ್ಲಿ 3 ಮಹತ್ವದ ಬದಲಾವಣೆ
     

ಮುಂಬೈ(ಮೇ.15): ಲಖನೌ ಸೂಪರ್ ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ ಟಾಸ್ ಗೆದ್ದ  ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿದೆ. ರಾಜಸ್ಥಾನ ತಂಡದಲ್ಲಿ 3 ಮಹತ್ವದ ಬದಲಾವಣೆ ಮಾಡಲಾಗಿದೆ. ನೀಶಮ್, ಮೆಕ್‌ರಾಯ್ ರಸಿ ಹಾಗೂ ಸೆನ್ ತಂಡ ಸೇರಿಕೊಂಡಿದ್ದಾರೆ. ಇತ್ತ ಲಖನೌ ತಂಡದಲ್ಲಿ ಕರಣ್ ಶರ್ಮಾ ಬದಲು ರವಿ ಬಿಶ್ನೋಯ್ ತಂಡ ಸೇರಿಕೊಂಡಿದ್ದಾರೆ. 

ಅಂಕಪಟ್ಟಿಯಲ್ಲಿ ಲಖನೌ ಸೂಪರ್ ಜೈಂಟ್ಸ್ 2ನೇ ಸ್ಥಾನದಲ್ಲಿದೆ. 16 ಅಂಕ ಸಂಪಾದಿಸಿರುವ ಲಖನೌ ಇಂದಿನ ಪಂದ್ಯ ಗೆದ್ದು ಅಧಿಕೃತವಾಗಿ ಪ್ಲೇ ಆಫ್‌ಗೆ ಎಂಟ್ರಿಕೊಡುವ ವಿಶ್ವಾಸದಲ್ಲಿದೆ. 

Latest Videos

RIP Andrew Symonds:ಬಾಲಿವುಡ್‌ಗೂ ಕಾಲಿಟ್ಟಿದ್ದ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ

ಲಖನೌ ಸೂಪರ್‌ಜೈಂಟ್ಸ್‌ಗೆ ಪ್ಲೇ-ಆಫ್‌ಗೇರುವ ತವಕ
15ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ ಸ್ಥಾನ ಖಚಿತಪಡಿಸಿಕೊಳ್ಳುವ ತವಕದಲ್ಲಿರುವ ಲಖನೌ ಸೂಪರ್‌ ಜೈಂಟ್ಸ್‌, ಭಾನುವಾರ ರಾಜಸ್ಥಾನ ರಾಯಲ್ಸ್‌ ವಿರುದ್ಧ ಸೆಣಸಾಡಲಿದೆ. ರಾಜಸ್ಥಾನಕ್ಕೂ ಪ್ಲೇ-ಆಫ್‌ ದೃಷ್ಟಿಯಿಂದ ಈ ಪಂದ್ಯ ಮಹತ್ವದ್ದೆನಿಸಿದ್ದು, ಗೆಲುವಿನ ನಿರೀಕ್ಷೆಯಲ್ಲಿದೆ.

ಕೆ.ಎಲ್‌.ರಾಹುಲ್‌ ನಾಯಕತ್ವದ ಲಖನೌ ಆಡಿದ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದಿದ್ದು, ಸದ್ಯ ಅಂಕಪಟ್ಟಿಯಲ್ಲಿ 2ನೇ ಸ್ಥಾನದಲ್ಲಿದೆ. ಇನ್ನೊಂದು ಗೆಲುವು ತಂಡವನ್ನು ಪ್ಲೇ-ಆಫ್‌ಗೆ ತಲುಪಿಸುವ ಜೊತೆಗೆ ಅಂಕ ಪಟ್ಟಿಯಲ್ಲಿ ಅಗ್ರ 2ರಲ್ಲಿ ಸ್ಥಾನ ಖಚಿತವಾಗಲಿದೆ. ಕಳೆದ ಪಂದ್ಯದಲ್ಲಿ ಗುಜರಾತ್‌ ವಿರುದ್ಧ ಸೋತಿದ್ದ ತಂಡ ಗೆಲುವಿನ ಹಳಿಗೆ ಮರಳುವ ತವಕದಲ್ಲಿದೆ. ಮತ್ತೊಂದೆಡೆ ರಾಜಸ್ಥಾನ 12 ಪಂದ್ಯಗಳಲ್ಲಿ 7ರಲ್ಲಿ ಗೆದ್ದಿದ್ದು, ಈ ಪಂದ್ಯದಲ್ಲಿ ಜಯಿಸಿದರೆ ಪ್ಲೇ-ಆಫ್‌ಗೇರುವ ಸಾಧ್ಯತೆ ಹೆಚ್ಚಾಗಲಿದೆ. ಆದರೆ ಕಳೆದ 4 ಪಂದ್ಯಗಳಲ್ಲಿ ಮೂರರಲ್ಲಿ ಸೋತಿದ್ದು ಪ್ಲೇ-ಆಫ್‌ಗೇರುವ ಹುಮಸ್ಸಿನಲ್ಲಿರುವ ತಂಡದ ಆತ್ಮವಿಶ್ವಾಸವನ್ನು ಕುಗ್ಗಿಸಿದೆ.

IPL 2022 ಇಂದಿನಿಂದ ಮುಂಬೈ-ಚೆನ್ನೈಗೆ ಆರ್​ಸಿಬಿ ಫ್ಯಾನ್ಸ್ ಸಪೋರ್ಟ್​..!

ರಸೆಲ್‌ ಶೋ ಮುಂದೆ ಮಂಕಾದ ಸನ್‌
15ನೇ ಆವೃತ್ತಿ ಐಪಿಎಲ್‌ನಲ್ಲಿ ಸತತ 5 ಸೋಲನುಭವಿಸಿದ ಮಾಜಿ ಚಾಂಪಿಯನ್‌ ಸನ್‌ರೈಸ​ರ್‍ಸ್ ಹೈದರಾಬಾದ್‌ ಪ್ಲೇ-ಆಫ್‌ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಶನಿವಾರ ಕೋಲ್ಕತಾ ನೈಟ್‌ ರೈಡ​ರ್‍ಸ್ ವಿರುದ್ಧದ ಪಂದ್ಯದಲ್ಲಿ ತಂಡ 54 ರನ್‌ಗಳಿಂದ ಪರಾಭವಗೊಂಡಿದ್ದು, ಆವೃತ್ತಿಯಲ್ಲಿ 7ನೇ ಸೋಲು ಕಂಡಿತು. ಹೈದರಾಬಾದ್‌ನ ಸೋಲಿನಿಂದ ಪ್ಲೇ-ಆಫ್‌ ಸ್ಥಾನದ ಮೇಲೆ ಕಣ್ಣಿಟ್ಟಿರುವ ಆರ್‌ಸಿಬಿಗೆ ಅನುಕೂಲವಾಗಬಹುದು. ಆವೃತ್ತಿಯಲ್ಲಿ 6ನೇ ಗೆಲುವು ದಾಖಲಿಸಿದ ಕೋಲ್ಕತಾ ಪ್ಲೇ-ಆಫ್‌ ಆಸೆಯನ್ನು ಜೀವಂತವಾಗಿರಿಸಿಕೊಂಡಿದೆ. ಆದರೆ ತಂಡಕ್ಕಿನ್ನು 1 ಪಂದ್ಯ ಮಾತ್ರ ಬಾಕಿ ಇದ್ದು, ಆ ಪಂದ್ಯದಲ್ಲೂ ಗೆದ್ದು ಇತರೆ ತಂಡಗಳ ಫಲಿತಾಂಶಗಳು ತನ್ನ ಪರ ಬಂದರೆ ಪ್ಲೇ-ಆಫ್‌ ಪ್ರವೇಶಿಸಬಹುದು.

 

ಎಬಿಡಿ ಆರ್‌ಸಿಬಿಗೆ ಮರಳುವ ನಂಬಿಕೆಯಿದೆ: ವಿರಾಟ್‌ ಕೊಹ್ಲಿ

ಮುಂಬೈ: ಮುಂದಿನ ಆವೃತ್ತಿಯ ಐಪಿಎಲ್‌ನಲ್ಲಿ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು ತಂಡಕ್ಕೆ ಎಬಿ ಡಿ ವಿಲಿಯ​ರ್‍ಸ್ ಹೊಸ ಪಾತ್ರದೊಂದಿಗೆ ಮರಳುವ ನಂಬಿಕೆ ಇದೆ ಎಂದು ತಂಡದ ಮಾಜಿ ನಾಯಕ ವಿರಾಟ್‌ ಕೊಹ್ಲಿ ಹೇಳಿದ್ದಾರೆ. ತಂಡದ ಜೊತೆಗಿನ ಸಂದರ್ಶನದಲ್ಲಿ ಮಾತನಾಡಿದ ಅವರು, ನಾನು ಅವರನ್ನು ತುಂಬಾ ಮಿಸ್‌ ಮಾಡಿಕೊಳ್ಳುತ್ತಿದ್ದೇನೆ. ಅವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಇತ್ತೀಚೆಗೆ ಅವರು ಅಮೆರಿಕದಲ್ಲಿ ತಮ್ಮ ಕುಟುಂಬದೊಂದಿಗೆ ಗಾಲ್‌್ಫ ವೀಕ್ಷಿಸುತ್ತಿದ್ದರು. ಆರ್‌ಸಿಬಿ ಆಟವನ್ನು ಅವರು ಸದಾ ನೋಡುತ್ತಿದ್ದು, ಮುಂದಿನ ವರ್ಷ ಹೆಚ್ಚಿನ ಸಾಮರ್ಥ್ಯದೊಂದಿಗೆ ತಂಡಕ್ಕೆ ಮರಳುವ ಭರವಸೆ ಇದೆ’ ಎಂದಿದ್ದಾರೆ. ಆರ್‌ಸಿಬಿ ಪರ ಮಹತ್ತರ ಕೊಡುಗೆ ಸಲ್ಲಿಸಿರುವ ಎಬಿಡಿ, ಕಳೆದ ವರ್ಷ ಎಲ್ಲ ಮಾದರಿ ಕ್ರಿಕೆಟ್‌ನಿಂದ ನಿವೃತ್ತರಾಗಿದ್ದರು.

click me!