IPL 2022 ಬಟ್ಲರ್ ಸೆಂಚುರಿಯಿಂದ ಆರ್‌ಸಿಬಿ ಹೋರಾಟ ಅಂತ್ಯ, ಫೈನಲ್ ಪ್ರವೇಶಿಸಿದ ರಾಜಸ್ಥಾನ!

By Suvarna NewsFirst Published May 27, 2022, 11:04 PM IST
Highlights
  • ಐಪಿಎಲ್ ಪ್ರಶಸ್ತಿ ಗೆಲ್ಲವು ಆರ್‌ಸಿಬಿ ಕನಸು ಈ ಬಾರಿಯೂ ಛಿದ್ರ
  • ಐಪಿಎಲ್ 2022 ಟೂರ್ನಿಯಲ್ಲಿ ಹೋರಾಟ ಅಂತ್ಯಗೊಳಿಸಿದ ಆರ್‌ಸಿಬಿ
  • ರಾಜಸ್ಥಾನ ವಿರುದ್ದ ಮುಗ್ಗರಿಸಿದ ಬೆಂಗಳೂರು ಪಡೆ

ಅಹಮ್ಮದಾಬಾದ್(ಮೇ.27): ಈ ಬಾರಿ ಪ್ರಶಸ್ತಿ ಗೆಲ್ಲುತ್ತೆ, ಹೊಸ ಇತಿಹಾಸ ಬರೆಯುತ್ತೆ, ದಾಖಲೆ ನಿರ್ಮಾಣವಾಗುತ್ತೆ ಅನ್ನೋ ಆರ್‌ಸಿಬಿ ಅಭಿಮಾನಿಗಳ ಕನಸು ಮತ್ತೆ ಛಿದ್ರಗೊಂಡಿದೆ. ಐಪಿಎಲ್ 2022 ಟೂರ್ನಿಯಲ್ಲಿ ರಾಯಲ್ ಚಾಲೆಂದರ್ಸ್ ಬೆಂಗಳೂರು ತಂಡದ ಹೋರಾಟ ಅಂತ್ಯಗೊಂಡಿದೆ. ಆರ್‌ಸಿಬಿ ವಿರುದ್ಧ ಅಬ್ಬರಿಸಿದ ಜೋಸ್ ಬಟ್ಲರ್ ಸೆಂಚುರಿ ಸಿಡಿಸಿದರು. ಈ ಮೂಲಕ ರಾಜಸ್ಥಾನ ರಾಯಲ್ಸ್ 7 ವಿಕೆಟ್ ಗೆಲುವು ದಾಖಲಿಸಿ ಫೈನಲ್ ಪ್ರವೇಶಿಸಿದೆ.

ಒಂದೇ ಆವೃತ್ತಿಯಲ್ಲಿ ನಾಲ್ಕು ಸೆಂಚುರಿ ಸಿಡಿಸಿ ದಾಖಲೆ ಬರೆದಿದ್ದಾರೆ. ಈ ಮೂಲಕ ಐಪಿಎಲ್ ಟೂರ್ನಿಯಲ್ಲಿ ಒಟ್ಟ 5 ಸೆಂಚುರಿ ಸಿಡಿಸಿದ ಸಾಧನೆ ಮಾಡಿದ್ದಾರೆ. ರಾಯಲ್ ಚಾಲೆಂಜರ್ಸ್ ಬೆಂಗಳೂರು ವಿರುದ್ದದ 2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ಅಬ್ಬರಿಸಿದ ಜೋಸ್ ಬಟ್ಲರ್ ಆಕರ್ಷಕ ಶತಕ ದಾಖಲಿಸಿದ್ದಾರೆ.

ಸ್ಫೋಟಕ ಬ್ಯಾಟಿಂಗ್ ಮೂಲಕ ಅಬ್ಬರಿಸಿದ ಬಟ್ಲರ್ 59 ಎಸೆತದಲ್ಲಿ ಸೆಂಚುರಿ ಪೂರೈಸಿದರು. ಈ ಮೂಲಕ ಆರ್‌ಸಿಬಿ ಕನಸು ಛಿದ್ರಗೊಳಿಸಿದರು. ಐಪಿಎಲ್ 2022 ಟೂರ್ನಿಯಲ್ಲಿ ಫೈನಲ್ ಪ್ರವಶಿಸಿ ಪ್ರಶಸ್ತಿ ಗೆಲ್ಲುವ ಕನಸು ಕಂಡಿದ್ದ ಆರ್‌ಸಿಬಿ ಬಟ್ಲರ್ ಅಬ್ಬರಕ್ಕೆ ಬೆಚ್ಚಿ ಬಿದ್ದಿತು. ಐಪಿಎಲ್ 2022 ಹೋರಾಟವನ್ನೂ ಅಂತ್ಯಗೊಳಿಸಿತು. 

2ನೇ ಕ್ವಾಲಿಫೈಯರ್ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್‌ನಲ್ಲಿ ನಿರೀಕ್ಷಿತ ಪ್ರದರ್ಶನ ನೀಡಲಿಲ್ಲ. ಪರಿಣಾಮ 157 ರನ್ ಸಿಡಿಸಿತು. ಸುಲಭ ಟಾರ್ಗೆಟ್ ಪಡೆದ ರಾಜಸ್ಥಾನ ರಾಯಲ್ಸ್ ನಿರಾಯಾಸವಾಗಿ ಚೇಸಿಂಗ್ ಮಾಡಿತು. ಪ್ರಮುಖವಾಗಿ ಜೋಸ್ ಬಟ್ಲರ್ ಬ್ಯಾಟಿಂಗ್ ಆರ್‌ಸಿಬಿ ಐಪಿಎಲ್ ಹೋರಾಟಕ್ಕೆ ಬ್ರೇಕ್ ಹಾಕಿತು.

ಯಶಸ್ವಿ ಜೈಸ್ವಾಲ್ ಹಾಗೂ ಜೋಸ್ ಬಟ್ಲರ್ ಉತ್ತಮ ಆರಂಭ ನೀಡಿದರು. ಆದರೆ ಜೈಸ್ವಾಲ್ 21 ರನ್ ಸಿಡಿಸಿ ಔಟಾದರು. ಆದರೆ ಹೋರಾಟ ಮುಂದುವರಿಸಿದ ಬಟ್ಲರ್ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ನಾಯಕ ಸಂಜು ಸ್ಯಾಮ್ಸನ್ 23 ರನ್ ಸಿಡಿಸಿ ಔಟಾದರು.

ಬಟ್ಲರ್ ಅಬ್ಬರ ಮತ್ತಷ್ಟು ಹೆಚ್ಚಾಯಿತು. ಸ್ಫೋಟಕ ಬ್ಯಾಟಿಂಗ್ ಮೂಲಕ ಬಟ್ಲರ್ ಶತಕದ ಸನಿಹ ತಲುಪಿದರು. ಇತ್ತ ದೇವದತ್ ಪಡಿಕ್ಕಲ್  9 ರನ್ ಸಿಡಿಸಿ ಔಚಾದರು. ಜೋಸ್ ಬಟ್ಲರ್ ಸೆಂಚುರಿ ಸಿಡಿಸಿ ದಾಖಲೆ ಬೆರೆದರು. ರಾಜಸ್ಥಾನ 18.1 ಓವರ್‌ಗಳಲ್ಲಿ 3 ವಿಕೆಟ್ ಕಳೆದುಕೊಂಡು ಗೆಲುವು ದಾಖಲಿಸಿತು. 

ಆರ್‌ಸಿಬಿ ಇನ್ನಿಂಗ್ಸ್
ಮಹತ್ವದ ಪಂದ್ಯದಲ್ಲಿ ಆರ್‌ಸಿಬಿ ಬ್ಯಾಟಿಂಗ್‌ನಲ್ಲಿ ಎಡವಿತು. ವಿರಾಟ್ ಕೊಹ್ಲಿ 7 ರನ್ ಸಿಡಿಸಿ ಔಟಾದರು. ಫಾಫ್ ಡುಪ್ಲೆಸಿಸ್ 25 ರನ್ ಸಿಡಿಸಿ ಔಟಾದರು. ಎಲಿಮಿನೇಟರ್ ಪಂದ್ಯದಲ್ಲಿ ಅಬ್ಬರಿಸಿದ ರಜತ್ ಪಾಟಿದಾರ್ , 2ನೇ ಕ್ವಾಲಿಫೈಯರ್ ಪಂದ್ಯದಲ್ಲೂ ಅಬ್ಬರಿಸಿದರು. ರಜತ್ ಪಾಟಿದಾರ್ 58 ರನ್ ಕಾಣಿಕೆ ನೀಡಿದರು. ಮ್ಯಾಕ್ಸ್‌ವೆಲ್ 28 ರನ್ ಸಿಡಿಸಿ ಔಟಾದರು. ಇನ್ನುಳಿದವರಿಂದ ನಿರೀಕ್ಷಿತ ರನ್ ಹರಿದುಬರ್ಲಿಲ್ಲ. ಇದರಿಂದ 157 ರನ್ ಸಿಡಿಸಿತು.

ಐಪಿಎಲ್ ಫೈನಲ್
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವನ್ನು ಮಣಿಸಿದ ರಾಜಸ್ಥಾನ ರಾಯಲ್ಸ್ ಫೈನಲ್ ಪ್ರವೇಶಿಸಿದೆ. ಮೇ.29 ರಂದು ನಡೆಯಲಿರುವ ಫೈನಲ್ ಪಂದ್ಯದಲ್ಲಿ ಗುಜರಾತ್ ಟೈಟಾನ್ಸ್ ಹಾಗೂ ರಾಜಸ್ಥಾನ ರಾಯಲ್ಸ್ ಮುಖಾಮುಖಿಯಾಗಲಿದೆ. ಮೊದಲ ಕ್ವಾಲಿಫೈಯರ್ ಪಂದ್ಯದಲ್ಲಿ ಗುಜರಾತ್ ವಿರುದ್ದ ಮುಗ್ಗರಿಸಿದ್ದ ರಾಜಸ್ಥಾನ ಇದೀಗ ಸೇಡು ತೀರಿಸಿಕೊಳ್ಳಲು ರೆಡಿಯಾಗಿದೆ. ಇಷ್ಟೇ ಅಲ್ಲ ಎರಡನೇ ಐಪಿಎಲ್ ಟ್ರೋಫಿ ಕೈವಶ ಮಾಡಲು ಸಜ್ಜಾಗಿದೆ.

click me!