IPL 2022: ಎಬಿ ಡಿವಿಲಿಯರ್ಸ್‌ ಕಳಿಸಿದ ವಾಯ್ಸ್‌ ಮೆಸೇಜ್‌ ಬಗ್ಗೆ ತುಟಿಬಿಚ್ಚಿದ ವಿರಾಟ್ ಕೊಹ್ಲಿ..!

Published : Mar 29, 2022, 06:55 PM IST
IPL 2022: ಎಬಿ ಡಿವಿಲಿಯರ್ಸ್‌ ಕಳಿಸಿದ ವಾಯ್ಸ್‌ ಮೆಸೇಜ್‌ ಬಗ್ಗೆ ತುಟಿಬಿಚ್ಚಿದ ವಿರಾಟ್ ಕೊಹ್ಲಿ..!

ಸಾರಾಂಶ

* ಇದೇ ಮೊದಲ ಬಾರಿಗೆ ಎಬಿ ಡಿವಿಲಿಯರ್ಸ್‌ ಇಲ್ಲದೇ ಸಾಗುತ್ತಿದೆ ಐಪಿಎಲ್‌ * ಎಬಿ ಡಿವಿಲಿಯರ್ಸ್ ಕಳಿಸಿದ್ದ ವಾಯ್ಸ್‌ ಮೆಸೇಜ್‌ ಬಗ್ಗೆ ತುಟಿ ಬಿಚ್ಚಿದ ವಿರಾಟ್ ಕೊಹ್ಲಿ * 2021ರ ಕೊನೆಯಲ್ಲಿ ಎಲ್ಲಾ ಮಾದರಿಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದ ಎಬಿಡಿ

ಬೆಂಗಳೂರು(ಮಾ.29): ಇದೇ ಮೊದಲ ಬಾರಿಗೆ ಇಂಡಿಯನ್ ಪ್ರೀಮಿಯರ್ ಲೀಗ್ (Indian Premier League) ಟೂರ್ನಿಯು ಸೂಪರ್ ಸ್ಟಾರ್ ಕ್ರಿಕೆಟಿಗ ಎಬಿ ಡಿವಿಲಿಯರ್ಸ್ (AB de Villiers) ಇಲ್ಲದೇ ನಡೆಯುತ್ತಿದೆ. 2008ರಿಂದ 2021ರವರೆಗೆ ಐಪಿಎಲ್ ಟೂರ್ನಿಯಲ್ಲಿ ಪಾಲ್ಗೊಂಡ ಏಕೈಕ ವಿದೇಶಿ ಆಟಗಾರ ಎನಿಸಿದ್ದ ಎಬಿಡಿ, 15ನೇ ಆವೃತ್ತಿಯ ಐಪಿಎಲ್ ಟೂರ್ನಿಯ ಮೆಗಾ ಹರಾಜಿಗೂ ಮುನ್ನ ಎಲ್ಲಾ ಮಾದರಿಯ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 14 ಐಪಿಎಲ್ ಆವೃತ್ತಿಗಳ ಪೈಕಿ ಎಬಿ ಡಿವಿಲಿಯರ್ಸ್‌ 11 ವರ್ಷಗಳ ಕಾಲ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡದ ಅವಿಭಾಜ್ಯ ಅಂಗವಾಗಿ ಗುರುತಿಸಿಕೊಂಡಿದ್ದರು.

ಐಪಿಎಲ್‌ ಕಂಡ ಅತ್ಯಂತ ಯಶಸ್ವಿ ಜೋಡಿ ಎನಿಸಿದ್ದ ಎಬಿ ಡಿವಿಲಿಯರ್ಸ್ ಹಾಗೂ ವಿರಾಟ್ ಕೊಹ್ಲಿ (Virat Kohli) ಜೋಡಿ ಆರ್‌ಸಿಬಿ ತಂಡಕ್ಕೆ ಹಲವಾರು ಸ್ಮರಣೀಯ ಗೆಲುವುಗಳನ್ನು ತಂದುಕೊಟ್ಟಿದ್ದರು. ಆದರೆ ದಿಢೀರ್ ಎನ್ನುವಂತೆ 2022ರ ಐಪಿಎಲ್‌ಗೂ ಮುನ್ನ ಎಬಿಡಿ ನಿವೃತ್ತಿಯ ನಿರ್ಧಾರವನ್ನು ಪ್ರಕಟಿಸಿದ್ದಾರೆ. ಇದೀಗ ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ, ತಾವು ಎಬಿಡಿಯ ನಿವೃತ್ತಿಯ ನಿರ್ಧಾರವನ್ನು ಮೊದಲ ಬಾರಿಗೆ ಕೇಳಿದ ಕ್ಷಣವನ್ನು ಮೆಲುಕು ಹಾಕಿದ್ದಾರೆ.

ಆರ್‌ಸಿಬಿ ತಂಡದ ಅಧಿಕೃತ ಟ್ವಿಟರ್ ಖಾತೆಯಲ್ಲಿ ಈ ವಿಡಿಯೋ ಪೋಸ್ಟ್ ಮಾಡಲಾಗಿದ್ದು, ಈ ವಿಡಿಯೋದಲ್ಲಿ ಎಬಿಡಿಯ ನಿವೃತ್ತಿಯ ಬಗ್ಗೆ ಮೊದಲ ಬಾರಿಗೆ ವಿರಾಟ್ ಕೊಹ್ಲಿ ತುಟಿಬಿಚ್ಚಿದ್ದಾರೆ. ಇದು ವಿಚಿತ್ರವಾದ ಕ್ಷಣ, ಯಾಕೆಂದರೆ ಎಬಿ ಡಿವಿಲಿಯರ್ಸ್‌ ನಿವೃತ್ತಿಯ ನಿರ್ಧಾರವನ್ನು ತಿಳಿಸಿದ ದಿನ ನನಗೆ ಸ್ಪಷ್ಟವಾಗಿ ನೆನಪಿದೆ. ಅವರು ನನಗೆ ಒಂದು ವಾಯ್ಸ್‌ ಮೆಸೇಜ್ ಕಳಿಸಿದ್ದರು. ನಾವು ಆಗಷ್ಟೇ ಐಸಿಸಿ ಟಿ20 ವಿಶ್ವಕಪ್ ಟೂರ್ನಿಯನ್ನು ಮುಗಿಸಿ ವಾಪಾಸ್ಸಾಗುತ್ತಿದ್ದೆವು. ಎಬಿಡಿ ಕಳಿಸಿದ ವಾಯ್ಸ್‌ ಮೆಸೇಜ್‌ ಓಪನ್ ಮಾಡಿ ಕೇಳಿದೆ. ಆಗ ಅನುಷ್ಕಾ ಶರ್ಮಾ (Anushka Sharma) ನನ್ನ ಜತೆಯಲ್ಲಿಯೇ ಇದ್ದರು. ನಾನಾಗ ಅವರ ಮುಖವನ್ನು ನೋಡಿದೆ. ನನಗೆ ಅದನ್ನು ಹೇಳಬೇಡಿ ಎಂದು ಅನುಷ್ಕಾ ಹೇಳಿದರು, ಯಾಕೆಂದರೆ ಅವರಿಗೂ ಈ ವಿಚಾರ ತಿಳಿದಿತ್ತು ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.

ಅವರ ವಾಯ್ಸ್‌ ಮೆಸೇಜ್‌ ಕೇಳಿದ ತಕ್ಷಣ ನನಗೆ ಒಂದು ರೀತಿ ವಿಚಿತ್ರ ಅನುಭವವಾಯಿತು. ನಾನಂತೂ ಸಾಕಷ್ಟು ಭಾವುಕನಾಗಿಬಿಟ್ಟೆ. ಅವರು ಕಳಿಸಿದ ವಾಯ್ಸ್‌ ಮೆಸೇಜ್ ಕೂಡಾ ಸಾಕಷ್ಟು ಭಾವನಾತ್ಮಕವಾಗಿತ್ತು. ಇನ್ನು ಮುಂದೆ ನಾನು ನಿಮ್ಮ ಜತೆ ಆಡುತ್ತಿಲ್ಲ ಎನ್ನುವ ಮಾತು ಸಾಕಷ್ಟು ಭಾವನಾತ್ಮಕವಾಗಿತ್ತು ಎಂದು ಕೊಹ್ಲಿ ಹೇಳಿದ್ದಾರೆ. 2016ರ ಐಪಿಎಲ್‌ನಲ್ಲಿ ಗುಜರಾತ್ ಲಯನ್ಸ್ ವಿರುದ್ದ ಎಬಿ ಡಿವಿಲಿಯರ್ಸ್‌ ಹಾಗೂ ವಿರಾಟ್ ಕೊಹ್ಲಿ ಜೋಡಿ ಬರೋಬ್ಬರಿ 229 ರನ್‌ಗಳ ಜತೆಯಾಟ ನಿಭಾಯಿಸಿದ್ದರು. ಇದು ಇಂದಿಗೂ ಐಪಿಎಲ್‌ ಇತಿಹಾಸದಲ್ಲಿ ದಾಖಲಾದ ಗರಿಷ್ಠ ಜತೆಯಾಟ ಎನಿಸಿದೆ. ಇಂತಹ ಹತ್ತು ಹಲವು ಇನಿಂಗ್ಸ್‌ಗಳನ್ನು ಈ ಜೋಡಿ ಆಡುವ ಮೂಲಕ ಆರ್‌ಸಿಬಿ ಅಭಿಮಾನಿಗಳ ಮನ ಗೆದ್ದಿದೆ.

ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ ಎಬಿ ಡಿವಿಲಿಯರ್ಸ್‌ ಒಟ್ಟು 184 ಪಂದ್ಯಗಳನ್ನಾಡಿ 39.71ರ ಬ್ಯಾಟಿಂಗ್ ಸರಾಸರಿಯಲ್ಲಿ 5,162 ರನ್ ಬಾರಿಸಿದ್ದಾರೆ. ಒಂದು ವೇಳೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ ಟ್ರೋಫಿಯನ್ನು ಜಯಿಸಿದರೆ, ಖಂಡಿತವಾಗಿಯೂ ಎಬಿ ಡಿವಿಲಿಯರ್ಸ್ ಅವರನ್ನು ನಾವು ನೆನಪಿಸಿಕೊಳ್ಳುತ್ತೇವೆ ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ. ಎಬಿ ಡಿವಿಲಿಯರ್ಸ್‌ ತಾವು ಎಂದೆಂದಿಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಆಟಗಾರನಾಗಿಯೇ ಇರುತ್ತೇನೆ. ಬೇರೆ ತಂಡದಲ್ಲಿ ತಾವು ಐಪಿಎಲ್ ಆಡಲು ಬಯಸುವುದಿಲ್ಲ ಎಂದು ಹಲವು ಬಾರಿ ಪುನರುಚ್ಚರಿಸಿದ್ದರು. ಅದರಂತೆಯೇ ಎಬಿಡಿ ಆರ್‌ಸಿಬಿ ಆಟಗಾರನಾಗಿಯೇ ಕ್ರಿಕೆಟ್‌ ಬದುಕಿಗೆ ವಿದಾಯ ಘೋಷಿಸಿದ್ದಾರೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕಿವೀಸ್ ಎದುರಿನ ಸರಣಿಗೆ ಭಾರತ ತಂಡ ಪ್ರಕಟ: ಶಮಿ ಸೇರಿ ಐವರಿಗೆ ಶಾಕ್ ಕೊಟ್ಟ ಬಿಸಿಸಿಐ ಆಯ್ಕೆ ಸಮಿತಿ!
'ಮೊಹಮ್ಮದ್ ಶಮಿ ಅನ್ಯಾಯ ಮಾಡುತ್ತಿದ್ದಾರೆ': ಟೀಂ ಇಂಡಿಯಾ ಸೆಲೆಕ್ಷನ್ ಬಗ್ಗೆ ಕಿಡಿ ಕಾರಿದ ಹೆಡ್‌ ಕೋಚ್!