IPL 2022 ಹರ್ಪ್ರೀತ್ ದಾಳಿಗೆ ತತ್ತರಿಸಿದ ಹೈದರಾಬಾದ್, ಪಂಜಾಬ್‌ಗೆ ಸ್ಪರ್ಧಾತ್ಮಕ ಟಾರ್ಗೆಟ್!

Published : May 22, 2022, 09:17 PM ISTUpdated : May 22, 2022, 09:48 PM IST
IPL 2022 ಹರ್ಪ್ರೀತ್ ದಾಳಿಗೆ ತತ್ತರಿಸಿದ ಹೈದರಾಬಾದ್, ಪಂಜಾಬ್‌ಗೆ ಸ್ಪರ್ಧಾತ್ಮಕ ಟಾರ್ಗೆಟ್!

ಸಾರಾಂಶ

ಪಂಜಾಬ್ ದಾಳಿಗೆ ತತ್ತರಿಸಿದ ಸನ್‌ರೈರ್ಸ್ ಹೈದರಾಬಾದ್ 157 ರನ್ ಸಿಡಿಸಿದ ಸನ್‌ರೈಸರ್ಸ್ ಹೈದರಾಬಾದ್  ಐಪಿಎಲ್ 2022 ಲೀಗ್ ಹಂತದ ಅಂತಿಮ ಪಂದ್ಯ

ಮುಂಬೈ(ಮೇ.22): ಅಭಿಶೇಕ್ ಶರ್ಮಾ ದಿಟ್ಟ ಹೋರಾಟ ನೀಡಿದರೂ ಇತರ ಬ್ಯಾಟ್ಸ್‌ಮನ್‌ಗಳ ವೈಫಲ್ಯಗಳಿಂದ ಸನ್‌ರೈಸರ್ಸ್ ಹೈದರಾಬಾದ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ ಅಬ್ಬರಿಸಲು ವಿಫಲವಾಗಿದೆ. ಪರಿಣಾಮ ಸನ್‌ರೈಸರ್ಸ್ ಹೈದರಾಬಾದ್ ವಿಕೆಟ್ ನಷ್ಟಕ್ಕೆ ರನ್ ಸಿಡಿಸಿದೆ.

ಪ್ರಿಯಂ ಗರ್ಗ್ ಕೇವಲ 4 ರನ್ ಸಿಡಿಸಿ ಔಟಾದರು. ಇತ್ತ ಅಭಿಶೇಕ್ ಶರ್ಮಾ ಹೋರಾಟ ಮುಂದುವರಿಸಿದರು. ಆದರೆ ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ. ರಾಹುಲ್ ತ್ರಿಪಾಠಿ 20 ರನ್ ಸಿಡಿಸಿ ಔಟಾದರು. ಆ್ಯಡಿನ್ ಮರ್ಕ್ರಮ್ 21 ರನ್ ಸಿಡಿಸಿ ಔಟಾದರು.

ನಿಕೋಲಸ್ ಪೂರನ್ ಕೇವಲ 5 ರನ್ ಸಿಡಿಸಿ ಔಟಾದರು. ಅಂತಿಮ ಹಂತದಲ್ಲಿ ವಾಶಿಂಗ್ಟನ್ ಸುಂದರ್, ರೊಮಾರಿಯೋ ಶೆಪರ್ಡ್ ಅಬ್ಬರಿಸಿದರು. ಪರಿಣಾಮ ಸನ್‌ರೈಸರ್ಸ್ ಹೈದರಾಬಾದ್ ಸ್ಪರ್ಧಾತ್ಮಕ ಮೊತ್ತ ದಾಖಲಿಸಲು ನೆರವಾದರು.

ವಾಶಿಂಗ್ಟನ್ ಸುಂದರ್ 25 ರನ್ ಸಿಡಿಸಿ ಔಟಾದರು .  ಶೆಫರ್ಡ್ ಅಜೇಯ 26 ರನ್ ಸಿಡಿಸಿದರು.  ಈ ಮೂಲಕ ಸನ್‌ರೈಸರ್ಸ್ ಹೈದರಾಬಾದ್ ತಂಡ 8 ವಿಕೆಟ್ ನಷ್ಟಕ್ಕೆ 157 ರನ್ ಸಿಡಿಸಿತು.

ಪಂಜಾಬ್ ಪರ ಹರ್ಪ್ರೀತ್ ಬ್ರಾರ್ 3 ವಿಕೆಟ್ ಕಬಳಿಸಿ ಮಿಂಚಿದರು. ನತನ್ ಎಲ್ಲಿಸ್ 2 ವಿಕೆಟ್ ಕಬಳಿಸಿದರೆ, ಕಾಗಿಸೋ ರಬಾಡ 1 ವಿಕೆಟ್ ಕಬಳಿಸಿದರು. 

ಸನ್‌ರೈಸರ್ಸ್ ಹೈದರಾಬಾದ್ ಹಾಗೂ ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯ ಐಪಿಎಲ್ 2022 ಲೀಗ್ ಟೂರ್ನಿಯ 70ನೇ ಹಾಗೂ ಕೊನೆಯ ಲೀಗ್ ಪಂದ್ಯ. ಈ ಪಂದ್ಯದ ಫಲಿತಾಂಶ ಯಾವ ತಂಡದ ಮೇಲೂ ಯಾವುದೇ ಪರಿಣಾಮ ಬೀರುವುದಿಲ್ಲ. ಕಾರಣ ಈ ಪಂದ್ಯ ಆಟಕ್ಕುಂಟು ಲೆಕ್ಕಕ್ಲಿಲ್ಲ. ಹೈದರಾಬಾದ್ ಹಾಗೂ ಪಂಜಾಬ್ ಎರಡೂ ತಂಡ ಈಗಾಗಲೇ ಟೂರ್ನಿಯಿಂದ ಹೊರಬಿದ್ದಿದೆ. ಇನ್ನು ಪ್ಲೇ ಆಫ್ ಸುತ್ತಿಗ ಈಗಾಗಲೇ ನಾಲ್ಕು ತಂಡಗಳು ಪ್ರವೇಶ ಪಡೆದುಕೊಂಡಿದೆ.

ಗುಜರಾತ್ ಟೈಟಾನ್ಸ್, ರಾಜಸ್ಥಾನ ರಾಯಲ್ಸ್, ಲಖನೌ ಸೂಪರ್ ಜೈಂಟ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಪ್ಲೇ ಆಫ್ ಪ್ರವೇಶ ಪಡೆದುಕೊಂಡಿದೆ. ಈ ಬಾರಿಯ ಪ್ಲೇ ಆಫ್ ಪ್ರವೇಶ ಪಡೆದ ಯಾವ ತಂಡ ಪ್ರಶಸ್ತಿ ಗೆದ್ದರೂ ದಾಖಲೆ. ಕಾರಣ ಹೊಸ ತಂಡವೊಂದು ಟೂರ್ನಿ ಮುಡಿಗೇರಿಸಿಕೊಳ್ಳಲಿದೆ. ಇಷ್ಟೇ ಅಲ್ಲ ಇರಲ್ಲಿ ಗುಜರಾತ್  ಹಾಗೂ ಲಖನೌ ತಂಡ ಪ್ರಶಸ್ತಿ ಗೆದ್ದರೆ ಐಪಿಎಲ್ ಪ್ರವೇಶಿಸಿದ ಮೊದಲ ಪ್ರಯತ್ನದಲ್ಲೇ ಪ್ರಶಸ್ತಿ ಗೆದ್ದ ಸಾಧನೆ ಮಾಡಲಿದೆ. 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೆಹೆಂದಿಯಾಗಿತ್ತು, ಆದರೆ ಮದುವೆಯಾಗಲ್ಲ: ಕೊನೆಗೂ Palash Muchhal ಜೊತೆಗಿನ ಸಂಬಂಧಕ್ಕೆ ತೆರೆ ಎಳೆದ Smriti Mandhana
ಚಿನ್ನಸ್ವಾಮಿಗೆ ಅಂತಾರಾಷ್ಟ್ರೀಯ ಮತ್ತು IPL ಪಂದ್ಯಗಳು ವಾಪಸ್; ಡಿಸಿಎಂ ಡಿ.ಕೆ. ಶಿವಕುಮಾರ್ ಭರವಸೆ