
ಬೆಂಗಳೂರು(ಮಾ.29): 15ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್‌ನಲ್ಲಿ (Indian Premier League) ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ (Gujarat Titans) ತಂಡವು ಗೆಲುವಿನೊಂದಿಗೆ ಟೂರ್ನಿಯಲ್ಲಿ ಶುಭಾರಂಭ ಮಾಡಿದೆ. ಮುಂಬೈನ ವಾಂಖೆಡೆ ಮೈದಾನದಲ್ಲಿ ನಡೆದ ಮತ್ತೊಂದು ಹೈವೋಲ್ಟೇಜ್ ಪಂದ್ಯದಲ್ಲಿ ಕೆ.ಎಲ್. ರಾಹುಲ್ (KL Rahul) ನೇತೃತ್ವದ ಲಖನೌ ಸೂಪರ್ ಜೈಂಟ್ಸ್ (Lucknow Super Giants) ವಿರುದ್ದ 5 ವಿಕೆಟ್‌ಗಳ ಜಯ ಸಾಧಿಸಿದೆ. ಈ ಪಂದ್ಯದಲ್ಲಿ ಹಾರ್ದಿಕ್ ಪಾಂಡ್ಯ 4 ಓವರ್ ಬೌಲಿಂಗ್ ಮಾಡುವ ಮೂಲಕ ತಾವು ಫಿಟ್ ಆಗಿರುವುದನ್ನು ಸಾಬೀತುಪಡಿಸಿದ್ದಾರೆ. ಇದೇ ವೇಳೆ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಲಿಳಿದ ಬಗ್ಗೆ ಮಾಜಿ ಕ್ರಿಕೆಟಿಗ ವಾಸೀಂ ಜಾಫರ್ ಟ್ರೋಲ್ ಮಾಡಿದ್ದಾರೆ.
ಲಖನೌ ನಾಯಕ ಕೆ.ಎಲ್.ರಾಹುಲ್(KL Rahul) ಮೊದಲ ಪಂದ್ಯದಲ್ಲಿ ಬ್ಯಾಟಿಂಗ್ ವೈಫಲ್ಯ ಅನುಭವಿಸುವುದರ ಜೊತೆಗೆ ನಾಯಕತ್ವದಲ್ಲೂ ತೀರಾ ಸಾಧಾರಣ ಎನಿಸಿದರೆ. ಹಾರ್ದಿಕ್ ಪಾಂಡ್ಯ (Hardik Pandya) ಬೌಲಿಂಗ್, ಬ್ಯಾಟಿಂಗ್ ಹಾಗೂ ನಾಯಕತ್ವದಲ್ಲಿ ತಕ್ಕಮಟ್ಟಿಗಿನ ಯಶಸ್ಸು ಕಂಡರು. ಮೊದಲು ಬ್ಯಾಟ್ ಮಾಡಿದ ಲಖನೌ 29 ರನ್‌ಗೆ 4 ವಿಕೆಟ್ ಕಳೆದುಕೊಂಡರೂ ದೀಪಕ್ ಹೂಡಾ ಹಾಗೂ ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಆಯುಷ್ ಬದೋನಿ ಅವರ ಹೋರಾಟದ ಅರ್ಧಶತಕಗಳ ನೆರವಿನಿಂದ 20 ಓವರಲ್ಲಿ 6 ವಿಕೆಟ್‌ಗೆ 158 ರನ್‌ಗಳ ಉತ್ತಮ ಮೊತ್ತ ಗಳಿಸಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಟೈಟಾನ್ಸ್ ಸಹ ಆರಂಭಿಕ ಆಘಾತ ಅನುಭವಿಸಿತು. ತಂಡದ ಬ್ಯಾಟಿಂಗ್ ತಾರೆ ಶುಭ್‌ಮನ್ ಗಿಲ್(Shubman Gill) ಸೊನ್ನೆಗೆ ನಿರ್ಗಮಿಸಿದರೆ, ವಿಜಯ್ ಶಂಕರ್ ಕೇವಲ 4 ರನ್‌ಗೆ ಔಟಾದರು. ಬಳಿಕ ಮ್ಯಾಥ್ಯೂ ವೇಡ್(30) ಹಾಗೂ ಹಾರ್ದಿಕ್ ಪಾಂಡ್ಯ(33) ನಿಧಾನಗತಿಯಲ್ಲಿ ರನ್ ಕಲೆಹಾಕಿದರೂ ಲಖನೌ ಮೇಲುಗೈ ಸಾಧಿಸಲು ಬಿಡಲಿಲ್ಲ.
ಕೊನೆಯ 5 ಓವರ್‌ಗಳಲ್ಲಿ ಗುಜರಾತ್‌ಗೆ ಗೆಲ್ಲಲು 68 ರನ್‌ಗಳು ಬೇಕಿದ್ದವು. 16 ಹಾಗೂ 17ನೇ ಓವರನ್ನು ಸ್ಪಿನ್ನರ್‌ಗಳಿಗೆ ನೀಡಿ ಲಖನೌ ನಾಯಕ ರಾಹುಲ್ ಎಡವಟ್ಟು ಮಾಡಿದರು. ದೀಪಕ್ ಹೂಡ 22 ರನ್ ಚಚ್ಚಿಸಿಕೊಂಡರೆ, ರವಿ ಬಿಷ್ಣೋಯ್ 17 ರನ್ ಬಿಟ್ಟುಕೊಟ್ಟರು. ಕೊನೆ 3 ಓವರಲ್ಲಿ ಗೆಲುವಿಗೆ 29 ರನ್ ಬೇಕಿದ್ದಾಗ ಡೇವಿಡ್ ಮಿಲ್ಲರ್ (21 ಎಸೆತದಲ್ಲಿ 30) ಔಟಾದರೂ, ರಾಹುಲ್ ತೆವಾಟಿಯಾ (24 ಎಸೆತಗಳಲ್ಲಿ 40*) ಹಾಗೂ ಕರ್ನಾಟಕದ ಅಭಿನವ್ ಮನೋಹರ್ (07 ಎಸೆತಗಳಲ್ಲಿ 15*) ತಂಡವನ್ನು ಇನ್ನೂ 2 ಎಸೆತ ಬಾಕಿ ಇರುವಂತೆ ಗೆಲುವಿನ ಸೇರಿಸಿದರು.
IPL 2022: ಬೌಲಿಂಗ್ ಪರೀಕ್ಷೆಯಲ್ಲಿ ಹಾರ್ದಿಕ್ ಪಾಂಡ್ಯ ಪಾಸ್..!
ಭಾರತೀಯ ಕ್ರಿಕೆಟ್ ಅಭಿಮಾನಿಗಳು ಹಾಗೂ ತಂಡದ ಆಯ್ಕೆಗಾರರು ಬಹಳ ಕುತೂಹಲದಿಂದ ಎದುರು ನೋಡುತ್ತಿದ್ದ ಬೆಳವಣಿಗೆ ಸೋಮವಾರ ಐಪಿಎಲ್‌ನಲ್ಲಿ ನಡೆಯಿತು. ಬಹಳ ದಿನಗಳ ಬಳಿಕ ಹಾರ್ದಿಕ್ ಪಾಂಡ್ಯ ಬೌಲಿಂಗ್ ಮಾಡಿ ತಾವು ಸಂಪೂರ್ಣ ಫಿಟ್ ಆಗಿರುವುದಾಗಿ ಸಾಬೀತುಪಡಿಸಿದರು. ಐಪಿಎಲ್‌ಗೆ ಪಾದಾರ್ಪಣೆ ಮಾಡಿದ ಗುಜರಾತ್ ತಂಡವನ್ನು ಮುನ್ನಡೆಸಿದ ಹಾರ್ದಿಕ್, ಲಖನೌ ಸೂಪರ್‌ಜೈಂಟ್ಸ್ ವಿರುದ್ಧದ ಪಂದ್ಯದಲ್ಲಿ 4 ಓವರ್ ಬೌಲ್ ಮಾಡಿದರು. ಲಖನೌ ಎದುರು 4 ಓವರ್ ಬೌಲಿಂಗ್ ಮಾಡಿದ ಹಾರ್ದಿಕ್ ಪಾಂಡ್ಯ 37 ರನ್ ನೀಡಿ ಕೊಂಚ ದುಬಾರಿ ಎನಿಸಿದರು. ಆದರೆ ತಾವು ಟಿ20 ಪಂದ್ಯಗಳಿಗೆ 4 ಓವರ್ ಬೌಲಿಂಗ್ ಮಾಡಲು ಫಿಟ್ ಇರುವುದನ್ನು ಸಾಬೀತುಪಡಿಸಿದರು
ಈ ಕುರಿತಂತೆ ಖ್ಯಾತ ಬಾಲಿವುಡ್ ನಟ ಅಜಯ್ ದೇವಗನ್, ಟಬು ಅಭಿನಯದ ವಿಜಯಪತ್ ಸಿನೆಮಾದ ಆಯಿಯೇ ಆಪ್ಕಾ ಇಂತೆಜಾರ್ ಥಾ (ಬನ್ನಿ ನಿಮ್ಮದೇ ನಿರೀಕ್ಷೆಯಲ್ಲಿದ್ದೆವು) ಎನ್ನು ಹಾಡಿನ ತುಣುಕೊಂದನ್ನು ಪೋಸ್ಟ್ ಮಾಡಿದ್ದು, ಭಾರತೀಯ ಅಭಿಮಾನಿಗಳು ಈ ರೀತಿ ಹಾರ್ದಿಕ್ ಪಾಂಡ್ಯ ಬೌಲಿಂಗ್ ಸ್ವಾಗತಿಸಿದ್ದಾರೆ ಎಂದು ಟ್ವೀಟ್ ಮೂಲಕ ಟ್ರೋಲ್ ಮಾಡಿದ್ದಾರೆ.
ಇದಷ್ಟೇ ಅಲ್ಲದೇ ಗುಜರಾತ್ ಟೈಟಾನ್ಸ್ ತಂಡದ ಅನುಭವಿ ವೇಗಿ ಮೊಹಮ್ಮದ್ ಶಮಿಯ ಬೌಲಿಂಗ್ ಹಾಗೂ ಹಾರ್ದಿಕ್ ಪಾಂಡ್ಯ ನಾಯಕತ್ವದ ಬಗ್ಗೆ ನೆಟ್ಟಿಗರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.