IPL 2022: ಇಂದು ಡೆಲ್ಲಿ vs ಪಂಜಾಬ್‌ ವರ್ಚುವಲ್‌ ನಾಕೌಟ್‌ ಪಂದ್ಯ

By Naveen KodaseFirst Published May 16, 2022, 9:38 AM IST
Highlights

* ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕಿಂದು ಪಂಜಾಬ್ ಕಿಂಗ್ಸ್ ಸವಾಲು

* ವರ್ಚುವಲ್ ನಾಕೌಟ್ ರೀತಿಯ ಪಂದ್ಯಕ್ಕೆ ಕ್ಷಣಗಣನೆ

* ಎರಡೂ ತಂಡಗಳು ತಲಾ 12 ಪಂದ್ಯಗಳನ್ನಾಡಿದ್ದು, ತಲಾ 6ರಲ್ಲಿ ಗೆದ್ದಿವೆ

ನವಿ ಮುಂಬೈ(ಮೇ.16): 15ನೇ ಆವೃತ್ತಿ ಐಪಿಎಲ್‌ನಲ್ಲಿ ಪ್ಲೇ-ಆಫ್‌ (IPL 2022 Playoffs) ಆಸೆಯನ್ನು ಜೀವಂತವಾಗಿರಿಸಿಕೊಳ್ಳುವ ತವದಕದಲ್ಲಿರುವ ಡೆಲ್ಲಿ ಕ್ಯಾಪಿಟಲ್ಸ್‌ (Delhi Capitals) ಹಾಗೂ ಪಂಜಾಬ್‌ ಕಿಂಗ್ಸ್ (Punjab Kings) ತಂಡಗಳು ಸೋಮವಾರ ಮುಖಾಮುಖಿಯಾಗಲಿದ್ದು, ವರ್ಚುವಲ್‌ ನಾಕೌಟ್‌ ಎನಿಸಿಕೊಂಡಿರುವ ಪಂದ್ಯದಲ್ಲಿ ಗೆಲುವಿಗಾಗಿ ಹೋರಾಡಲಿದೆ. ಎರಡು ತಂಡಗಳ ಪಾಲಿಗೆ ಸಾಕಷ್ಟು ಮಹತ್ವದ ಪಂದ್ಯ ಇದಾಗಿರುವುದರಿಂದ ಉಭಯ ತಂಡಗಳ ನಡುವೆ ಜಿದ್ದಾಜಿದ್ದಿನ ಪೈಪೋಟಿ ನಿರೀಕ್ಷಿಸಲಾಗಿದೆ. ಈ ಪಂದ್ಯಕ್ಕೆ ಇಲ್ಲಿನ ಡಿವೈ ಪಾಟೀಲ್ ಮೈದಾನ ಆತಿಥ್ಯವನ್ನು ವಹಿಸಿದೆ.

ಎರಡೂ ತಂಡಗಳು ತಲಾ 12 ಪಂದ್ಯಗಳನ್ನಾಡಿದ್ದು, ತಲಾ 6ರಲ್ಲಿ ಗೆದ್ದಿವೆ. ಆದರೆ ಡೆಲ್ಲಿ ತಂಡ (+0.210) ಉತ್ತಮ ನೆಟ್‌ ರನ್‌ರೇಟ್‌ ಹೊಂದಿದ್ದು, ಅಂಕಪಟ್ಟಿಯಲ್ಲಿ 5ನೇ ಸ್ಥಾನದಲ್ಲಿದ್ದರೆ, ಪಂಜಾಬ್‌(+0.023) 7ನೇ ಸ್ಥಾನದಲ್ಲಿದೆ. ಈ ಪಂದ್ಯದಲ್ಲಿ ಗೆಲ್ಲುವ ತಂಡ ಅಂಕಪಟ್ಟಿಯಲ್ಲಿ ಅಗ್ರ 4ರಲ್ಲಿ ಸ್ಥಾನ ಪಡೆಯಲಿದ್ದು, ಸೋತರೆ ಪ್ಲೇ-ಆಫ್‌ನಿಂದ ಬಹುತೇಕ ಹೊರಬೀಳಲಿದೆ. ಪ್ಲೇ-ಆಫ್‌ಗೆ ಮತ್ತಷ್ಟು ತಂಡಗಳ ನಡುವೆ ಪೈಪೋಟಿ ಇರುವುದರಿಂದ ಉತ್ತಮ ರನ್‌ ರೇಟ್‌ನಲ್ಲಿ ಗೆಲ್ಲುವುದು ಉಭಯ ತಂಡಗಳ ಮುಂದಿರುವ ಗುರಿ.

Latest Videos

ಕಳೆದ ಪಂದ್ಯದಲ್ಲಿ ಎರಡೂ ತಂಡಗಳು ಗೆಲುವಿನ ಹಳಿಗೆ ಮರಳಿದ್ದು, ಅದೇ ಲಯವನ್ನು ಮುಂದುವರೆಸಿಕೊಂಡು ಹೋಗಲು ಎದುರು ನೋಡುತ್ತಿದೆ. ಮಯಾಂಕ್ ಅಗರ್‌ವಾಲ್ ನೇತೃತ್ವದ ಪಂಜಾಬ್ ಕಿಂಗ್ಸ್‌ ತಂಡವು ಕಳೆದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ತಂಡದ ಎದುರು ಭರ್ಜರಿ ಗೆಲುವು ಸಾಧಿಸುವ ಮೂಲಕ ಪ್ಲೇ ಆಫ್‌ ಕನಸನ್ನು ಜೀವಂತವಾಗಿರಿಸಿಕೊಂಡಿದೆ. ಇನ್ನೊಂದಡೆ ಡೆಲ್ಲಿ ಕ್ಯಾಪಿಟಲ್ಸ್ ತಂಡವು ಅಸ್ಥಿರ ಪ್ರದರ್ಶನದ ಹೊರತಾಗಿಯೂ ಕಳೆದ ಪಂದ್ಯದಲ್ಲಿ ಬಲಿಷ್ಠ ರಾಜಸ್ಥಾನ ರಾಯಲ್ಸ್ ಎದುರು ಗೆಲುವು ಸಾಧಿಸುವ ಮೂಲಕ ಆತ್ಮವಿಶ್ವಾಸದಿಂದ ಬೀಗುತ್ತಿದೆ.

IPL 2022 ಲಖನೌ ಮಣಿಸಿದ ರಾಜಸ್ಥಾನ, ಪ್ಲೇ ಆಫ್ ರೇಸ್ ಮತ್ತಷ್ಟು ಕಠಿಣ!

ಎರಡೂ ತಂಡಗಳಲ್ಲೂ ಬಲಿಷ್ಠ ಬ್ಯಾಟರ್‌ಗಳ ದಂಡೇ ಇರುವುದರಿಂದ ಡಿವೈ ಪಾಟೀಲ್ ಮೈದಾನದಲ್ಲಿ ರನ್‌ ಮಳೆ ಹರಿಯುವ ಸಾಧ್ಯತೆಯಿದೆ. ಡೆಲ್ಲಿ ಕ್ಯಾಪಿಟಲ್ಸ್ ತಂಡದ ಪರ ಡೇವಿಡ್ ವಾರ್ನರ್‌ ಗರಿಷ್ಠ ರನ್ ಬಾರಿಸಿದ್ದರೆ, ಪಂಜಾಬ್ ಕಿಂಗ್ಸ್‌ ತಂಡದ ಪರ ಶಿಖರ್‌  ಧವನ್‌ ಗರಿಷ್ಠ ಸ್ಕೋರರ್ ಎನಿಸಿದ್ದಾರೆ. ಇನ್ನು ಪಂಜಾಬ್ ಕಿಂಗ್ಸ್‌ ತಂಡವು ಹೆಚ್ಚಾಗಿ ಜಾನಿ ಬೇರ್‌ಸ್ಟೋವ್, ಲಿಯಾಮ್‌ ಲಿವಿಂಗ್‌ಸ್ಟೋನ್ ಅವರನ್ನು ನೆಚ್ಚಿಕೊಂಡಿದೆ. 

ಸಂಭಾವ್ಯ ತಂಡಗಳು ಹೀಗಿವೆ ನೋಡಿ

ಪಂಜಾಬ್ ಕಿಂಗ್ಸ್‌: ಜಾನಿ ಬೇರ್‌ಸ್ಟೋವ್, ಶಿಖರ್ ಧವನ್, ಭನುಕಾ ರಾಜಪಕ್ಸಾ, ಲಿಯಾಮ್ ಲಿವಿಂಗ್‌ಸ್ಟೋನ್, ಮಯಾಂಕ್‌ ಅಗರ್‌ವಾಲ್ (ನಾಯಕ), ಜಿತೇಶ್ ಶರ್ಮಾ(ವಿಕೆಟ್ ಕೀಪರ್), ಹಪ್ರೀತ್ ಬ್ರಾರ್, ರಿಷಿ ಧವನ್‌, ಕಗಿಸೋ ರಬಾಡ, ರಾಹುಲ್ ಚಹಾರ್, ಆಶರ್ದೀಪ್ ಸಿಂಗ್.

ಡೆಲ್ಲಿ ಕ್ಯಾಪಿಟಲ್ಸ್‌: ಶ್ರೀಕಾರ್ ಭರತ್, ಡೇವಿಡ್ ವಾರ್ನರ್, ಮಿಚೆಲ್ ಮಾರ್ಷ್, ರಿಷಭ್ ಪಂತ್(ನಾಯಕ&ವಿಕೆಟ್ ಕೀಪರ್), ಲಲಿತ್ ಯಾದವ್, ರೋಮನ್ ಪೋವೆಲ್, ಅಕ್ಷರ್ ಪಟೇಲ್, ಶಾರ್ದೂಲ್ ಠಾಕೂರ್, ಕುಲ್ದೀಪ್ ಸಿಂಗ್, ಖಲೀಲ್ ಅಹಮ್ಮದ್, ಏನ್ರಿಚ್‌ ನೋಕಿಯ 

ಸ್ಥಳ: ನವಿ ಮುಂಬೈ, ಡಿ.ವೈ.ಪಾಟೀಲ್‌ ಕ್ರೀಡಾಂಗಣ
ಪಂದ್ಯ: ಸಂಜೆ 7.30ಕ್ಕೆ
ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್


 

click me!