ಆರ್‌ಸಿಬಿಯಿಂದ ದುಬೆ, ಯಾದವ್‌, ಅಲಿ ಔಟ್‌?

By Suvarna NewsFirst Published Jan 17, 2021, 12:34 PM IST
Highlights

2021ರ ಐಪಿಎಲ್‌ಗೆ ಮುಂದಿನ ತಿಂಗಳು ಆಟಗಾರರ ಹರಾಜು| ತಂಡಗಳು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಜ.20ರ ಗಡುವು|  ಕೆಲ ದುಬಾರಿ ಆಟಗಾರರನ್ನು ಕೈಬಿಡುವ ನಿರೀಕ್ಷೆ 

ಬೆಂಗಳೂರು(ಜ.17): 2021ರ ಐಪಿಎಲ್‌ಗೆ ಮುಂದಿನ ತಿಂಗಳು ಆಟಗಾರರ ಹರಾಜು ನಡೆಯಲಿದ್ದು, ತಂಡಗಳು ಉಳಿಸಿಕೊಳ್ಳಲು ಇಚ್ಛಿಸುವ ಆಟಗಾರರ ಅಂತಿಮ ಪಟ್ಟಿಯನ್ನು ಸಲ್ಲಿಸಲು ಜ.20ರ ಗಡುವನ್ನು ಬಿಸಿಸಿಐ ನೀಡಿದೆ. ಹರಾಜಿನಲ್ಲಿ ತಮಗೆ ಬೇಕಿರುವ ಆಟಗಾರರನ್ನು ಖರೀದಿಸಲು ತಂಡಗಳು ಹಣ ಹೊಂದಿಸಿಕೊಳ್ಳಬೇಕಿದ್ದು, ಇದಕ್ಕಾಗಿ ಕೆಲ ದುಬಾರಿ ಆಟಗಾರರನ್ನು ಕೈಬಿಡುವ ನಿರೀಕ್ಷೆ ಇದೆ.

ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು ತಂಡ ಮೂವರು ಪ್ರಮುಖ ಆಟಗಾರರನ್ನು ಕೈಬಿಡುವ ನಿರೀಕ್ಷೆ ಇದೆ. 4 ಕೋಟಿಗೆ ಬಿಡ್‌ ಆಗಿದ್ದ ವೇಗದ ಬೌಲರ್‌ ಉಮೇಶ್‌ ಯಾದವ್‌, 5 ಕೋಟಿಗೆ ಬಿಕರಿಯಾಗಿದ್ದ ಮುಂಬೈನ ಆಲ್ರೌಂಡರ್‌ ಶಿವಂ ದುಬೆ, 1.7 ಕೋಟಿಗೆ ಸೇಲ್‌ ಆಗಿದ್ದ ಇಂಗ್ಲೆಂಡ್‌ನ ಆಲ್ರೌಂಡರ್‌ ಮೋಯಿನ್‌ ಅಲಿಯನ್ನು ಕೈಬಿಡುವ ಸಾಧ್ಯತೆ ಇದೆ. ಈ ಮೂವರೊಂದಿಗೆ ಇನ್ನೂ ಕೆಲ ಆಟಗಾರರನ್ನು ಆರ್‌ಸಿಬಿ ಕೈಬಿಡಲಿದೆ ಎಂದು ಮೂಲಗಳು ತಿಳಿಸಿವೆ.

ಆರ್‌ಸಿಬಿ ಬಳಿ ಸದ್ಯ 6.4 ಕೋಟಿ ರು. ಬಾಕಿ ಇದ್ದು, ಈಗಾಗಲೇ ಡೇಲ್‌ ಸ್ಟೇನ್‌, ಪಾರ್ಥಿವ್‌ ಪಟೇಲ್‌ 2021ರ ಐಪಿಎಲ್‌ನಲ್ಲಿ ಆಡುವುದಿಲ್ಲ ಎಂದು ಖಚಿತಪಿಸಿದ್ದಾರೆ. ಹೀಗಾಗಿ, ಹರಾಜಿನಲ್ಲಿ ಹೊಸ ಆಟಗಾರರನ್ನು ಖರೀದಿಸಲು ದೊಡ್ಡ ಮೊತ್ತ ಸಿಗಲಿದೆ. ಉಳಿಸಿಕೊಳ್ಳುವ ಆಟಗಾರರ ಸಂಭಾವನೆಯನ್ನೂ ಸೇರಿ ಆಟಗಾರರ ಖದೀದಿಗೆ ಪ್ರತಿ ತಂಡ ಗರಿಷ್ಠ 85 ಕೋಟಿ ರು. ಖರ್ಚು ಮಾಡಬಹುದಾಗಿದೆ.

click me!