IPL 2021 ಟಾಪ್-2ಗೇರಲು ವಿರಾಟ್ ಕೊಹ್ಲಿ ನೇತೃತ್ವದ RCB ಹೋರಾಟ..!

By Suvarna News  |  First Published Oct 6, 2021, 8:56 AM IST

* ಅಬುಧಾಬಿಯಲ್ಲಿಂದು ಆರ್‌ಸಿಬಿ ವರ್ಸಸ್‌ ಸನ್‌ರೈಸರ್ಸ್‌ ಹೋರಾಟ

* ಅಂಕಪಟ್ಟಿಯಲ್ಲಿ ಟಾಪ್ 2 ಪಟ್ಟಿಯಲ್ಲಿ ಸ್ಥಾನ ಪಡೆಯಲು ವಿರಾಟ್ ಪಡೆ ಪೈಪೋಟಿ

* ಹೈದರಾಬಾದ್ ಎದುರು ಸುಲಭ ಗೆಲುವು ಸಾಧಿಸಲು ಸನ್‌ರೈಸರ್ಸ್‌ ಕಾತರ


ಅಬುಧಾಬಿ(ಅ.06): ಈಗಾಗಲೇ ಪ್ಲೇ-ಆಫ್‌ನಲ್ಲಿ ಸ್ಥಾನ ಖಚಿತಪಡಿಸಿಕೊಂಡಿರುವ ರಾಯಲ್‌ ಚಾಲೆಂಜ​ರ್ಸ್‌ ಬೆಂಗಳೂರು (Royal Challengers Bangalore) (ಆರ್‌ಸಿಬಿ) ತಂಡ, ಕೊನೆಯ 2 ಲೀಗ್‌ ಪಂದ್ಯದಲ್ಲಿ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ ಅಗ್ರ-2ರಲ್ಲಿ ಸ್ಥಾನ ಪಡೆಯಲು ಹೋರಾಟ ನಡೆಸಲಿದೆ. ಬುಧವಾರ ಸನ್‌ರೈಸ​ರ್ಸ್‌ ಹೈದರಾಬಾದ್‌ (Sunrisers Hyderabad) ವಿರುದ್ಧ ಸೆಣಸಲಿರುವ ಆರ್‌ಸಿಬಿ, ಅಂತಿಮ ಪಂದ್ಯವನ್ನು ಡೆಲ್ಲಿ ಕ್ಯಾಪಿಟಲ್ಸ್‌ ವಿರುದ್ಧ ಆಡಲಿದೆ.

ಆರ್‌ಸಿಬಿ ಸದ್ಯ 12 ಪಂದ್ಯಗಳಲ್ಲಿ 8ರಲ್ಲಿ ಗೆದ್ದು 16 ಅಂಕ ಕಲೆಹಾಕಿದೆ. ತಂಡ ಅಂಕಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದೆ. 20 ಅಂಕಗಳೊಂದಿಗೆ ಡೆಲ್ಲಿ ಕ್ಯಾಪಿಟಲ್ಸ್‌ ಮೊದಲ ಸ್ಥಾನದಲ್ಲಿದ್ದರೆ, 18 ಅಂಕಗಳೊಂದಿಗೆ ಚೆನ್ನೈ ಸೂಪರ್‌ ಕಿಂಗ್ಸ್‌ 2ನೇ ಸ್ಥಾನದಲ್ಲಿದೆ. ಚೆನ್ನೈ ಅಂತಿಮ ಪಂದ್ಯದಲ್ಲಿ ಪಂಜಾಬ್‌ ಕಿಂಗ್ಸ್‌ (Punjab Kings) ವಿರುದ್ಧ ಸೋತು, ಆರ್‌ಸಿಬಿ ಎರಡೂ ಪಂದ್ಯಗಳಲ್ಲಿ ಗೆದ್ದರೆ ಅಗ್ರ-2ರಲ್ಲಿ ಸ್ಥಾನ ದೊರೆಯಲಿದೆ. ಅಗ್ರ-2ರಲ್ಲಿ ಸ್ಥಾನ ಪಡೆದರೆ ಪ್ಲೇ-ಆಫ್‌ನಲ್ಲಿ ಮೊದಲ ಕ್ವಾಲಿಫೈಯರ್‌ ಪಂದ್ಯವಾಡುವ ಅವಕಾಶ ಸಿಗಲಿದ್ದು, ಆ ಪಂದ್ಯದಲ್ಲಿ ಸೋತರೂ ಫೈನಲ್‌ ಪ್ರವೇಶಿಸಲು ಇನ್ನೊಂದು ಅವಕಾಶ ಸಿಗಲಿದೆ.

Captain Kohli vs Captain Kane. 🔥🧊

We’re in for one entertaining Wednesday evening. 🤩 pic.twitter.com/93pJ5Izdsw

— Royal Challengers Bangalore (@RCBTweets)

Latest Videos

undefined

IPL 2021: ಟೂರ್ನಿಯಿಂದ ಹೊರಬಿತ್ತು ರಾಜಸ್ಥಾನ, ಮುಂಬೈಗೆ ಪ್ಲೇ ಆಫ್ ಆಸೆ ಜೀವಂತ

ಭರ್ಜರಿ ಲಯ: ಯುಎಇ ಚರಣದಲ್ಲಿ ಮೊದಲೆರಡು ಪಂದ್ಯಗಳಲ್ಲಿ ಸೋತ ಆರ್‌ಸಿಬಿ, ಬಳಿಕ ಪುಟಿದೆದ್ದು ಸತತ 3 ಪಂದ್ಯಗಳಲ್ಲಿ ಗೆಲುವು ಸಾಧಿಸಿ ಪ್ಲೇ-ಆಫ್‌ಗೆ ಅರ್ಹತೆ ಗಳಿಸಿತು. ಆರಂಭಿಕ ಬ್ಯಾಟ್ಸ್‌ಮನ್‌ ದೇವದತ್‌ ಪಡಿಕ್ಕಲ್‌, ನಾಯಕ ವಿರಾಟ್‌ ಕೊಹ್ಲಿ (Virat Kohli) ಹಾಗೂ ಗ್ಲೆನ್‌ ಮ್ಯಾಕ್ಸ್‌ವೆಲ್‌ ಉತ್ತಮ ಲಯದಲ್ಲಿದ್ದಾರೆ. ಎಬಿ ಡಿ ವಿಲಿಯರ್ಸ್‌ರಿಂದ  ತಂಡ ದೊಡ್ಡ ಇನ್ನಿಂಗ್ಸ್‌ ನಿರೀಕ್ಷೆ ಮಾಡುತ್ತಿದೆ. ಆರ್‌ಸಿಬಿ ಹ್ಯಾಟ್ರಿಕ್‌ ಗೆಲುವು ಸಾಧಿಸುವಲ್ಲಿ ಬೌಲರ್‌ಗಳ ಪಾತ್ರ ನಿರ್ಣಾಯಕ ಎನಿಸಿದೆ. ಅದರಲ್ಲೂ ಲೆಗ್‌ ಸ್ಪಿನ್ನರ್‌ ಯುಜುವೇಂದ್ರ ಚಹಲ್‌ ಅಮೋಘ ಪ್ರದರ್ಶನ ನೀಡುತ್ತಿದ್ದಾರೆ. ಲಯದ ಸಮಸ್ಯೆಯಿಂದ ಪರದಾಡುತ್ತಿರುವ ಸನ್‌ರೈಸ​ರ್ಸ್‌ ವಿರುದ್ಧವೂ ಆರ್‌ಸಿಬಿ ಅಬ್ಬರಿಸುವ ವಿಶ್ವಾಸದಲ್ಲಿದೆ.

ಸನ್‌ರೈಸ​ರ್ಸ್‌ಗೆ ಇದು ಕೇವಲ ಪ್ರತಿಷ್ಠೆಯ ಪಂದ್ಯ: ಕೇನ್ ವಿಲಿಯಮ್ಸನ್ (Kane Williamson) ನೇತೃತ್ವದ ಸನ್‌ರೈಸರ್ಸ್‌ ಹೈದರಾಬಾದ್‌ ತಂಡವು ಪ್ರಸಕ್ತ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 12 ಪಂದ್ಯಗಳನ್ನಾಡಿ ಕೇವಲ 2 ಗೆಲುವು ಹಾಗೂ 10 ಸೋಲುಗಳೊಂದಿಗೆ 4 ಅಂಕಗಳ ಸಹಿತ 8ನೇ ಸ್ಥಾನದಲ್ಲಿದೆ. ಈಗಾಗಲೇ ಪ್ಲೇ ಆಫ್‌ ರೇಸ್‌ನಿಂದ ಹೊರಬಿದ್ದಿರುವ ಸನ್‌ರೈಸರ್ಸ್‌ ಹೈದರಾಬಾದ್ ತಂಡವು ಇನ್ನುಳಿದ ಕೊನೆಯ 2 ಪಂದ್ಯಗಳಲ್ಲಿ ಗೆದ್ದರೂ ಅಂಕಪಟ್ಟಿಯಲ್ಲಿ ಅಂತಿಮ ಸ್ಥಾನದಲ್ಲೇ ಉಳಿದುಕೊಳ್ಳಲಿದೆ.

ಐಪಿಎಲ್‌ ಇತಿಹಾಸದಲ್ಲಿ ಇದುವರೆಗೂ ಉಭಯ ತಂಡಗಳು 18 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಈ ಪೈಕಿ ಸನ್‌ರೈಸರ್ಸ್‌ ಹೈದರಾಬಾದ್ ಕೊಂಚ ಮೇಲುಗೈ ಸಾಧಿಸಿದೆ. 18 ಪಂದ್ಯಗಳ ಪೈಕಿ ಸನ್‌ರೈಸರ್ಸ್‌ ಹೈದರಾಬಾದ್ ತಂಡವು 10 ಪಂದ್ಯಗಳಲ್ಲಿ ಗೆಲುವು ಸಾಧಿಸಿದ್ದರೆ, ರಾಯಲ್ ಚಾಲೆಂಜರ್ಸ್‌ ಬೆಂಗಳೂರು ತಂಡವು 8 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ.

ಸಂಭವನೀಯ ಆಟಗಾರರ ಪಟ್ಟಿ

ರಾಯಲ್ ಚಾಲೆಂಜರ್ಸ್ ಬೆಂಗಳೂರು: ವಿರಾಟ್ ಕೊಹ್ಲಿ(ನಾಯಕ), ದೇವದತ್ ಪಡಿಕ್ಕಲ್‌, ಶ್ರೀಕರ್ ಭರತ್‌, ಗ್ಲೆನ್ ಮ್ಯಾಕ್ಸ್‌ವೆಲ್‌, ಎಬಿ ಡಿ ವಿಲಿಯ​ರ್ಸ್‌, ಡೇನಿಯಲ್ ಕ್ರಿಶ್ಚಿಯನ್‌, ಶಾಬಾಜ್ ಅಹಮ್ಮದ್‌, ಹರ್ಷಲ್ ಪಟೇಲ್‌, ಜಾರ್ಜ್ ಗಾರ್ಟನ್‌, ಮೊಹಮ್ಮದ್ ಸಿರಾಜ್‌, ಯುಜುವೇಂದ್ರ ಚಹಲ್‌.

ಸನ್‌ರೈಸ​ರ್ಸ್‌ ಹೈದರಾಬಾದ್‌: ಜೇಸನ್ ರಾಯ್‌, ವೃದ್ದಿಮಾನ್ ಸಾಹ, ಕೇನ್ ವಿಲಿಯಮ್ಸನ್‌(ನಾಯಕ), ಪ್ರಿಯಂ ಗರ್ಗ್‌, ಅಭಿಷೇಕ್ ಶರ್ಮಾ‌, ಅಬ್ದುಲ್ ಸಮದ್‌, ಜೇಸನ್ ಹೋಲ್ಡರ್‌, ರಶೀದ್ ಖಾನ್‌, ಭುವನೇಶ್ವರ್ ಕುಮಾರ್‌, ಸಿದ್ದಾರ್ಥ್‌ ಕೌಲ್‌, ಉಮ್ರನ್ ಮಲಿಕ್‌.

ಸ್ಥಳ: ಅಬುಧಾಬಿ

ಪಂದ್ಯ ಆರಂಭ: ಸಂಜೆ 7.30ಕ್ಕೆ

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!