IPL 2021: ಅಬ್ಬರಿಸಲು ಮರೆತ ಮುಂಬೈ; ಹೈದರಾಬಾದ್‌ಗೆ ಸಾಧಾರಣ ಗುರಿ!

By Suvarna NewsFirst Published Apr 17, 2021, 9:09 PM IST
Highlights

ಸ್ಫೋಟಕ ಬ್ಯಾಟ್ಸ್‌ಮನ್‌ಗಳಿಂದ ತುಂಬಿರುವ ಮುಂಬೈ ಇಂಡಿಯನ್ಸ್ , ಸನ್‌ರೈರ್ಸ್ ಹೈದರಾಬಾದ್ ವಿರುದ್ಧ ಅಬ್ಬರಿಸಲು ವಿಫಲವಾಗಿದೆ.

ಚೆನ್ನೈ(ಏ.17):  ಸ್ಫೋಟಕ ಬ್ಯಾಟಿಂಗ್ ಪ್ರದರ್ಶನ ನಿರೀಕ್ಷಿಸಿದ್ದ ಮುಂಬೈ ಇಂಡಿಯನ್ಸ್ ತಂಡದ ಅಭಿಮಾನಿಗಳಿಗೆ ಕೊಂಚ ನಿರಾಸೆಯಾಗಿದೆ. ಕಾರಣ ಘಟಾನುಘಟಿ ಬ್ಯಾಟ್ಸ್‌ಮನ್ ಹೊಂದಿರುವ ಮುಂಬೈ, ಸನ್‌ರೈಸರ್ಸ್ ವಿರುದ್ಧ ಸಾಧಾರಣ ಮೊತ್ತ ಕಲೆಹಾಕಿದೆ. ಈ ಮೂಲಕ ಹೈದರಾಬಾದ್ ತಂಡಕ್ಕೆ 151 ರನ್ ಟಾರ್ಗೆಟ್ ನೀಡಿದೆ.

ಟಾಸ್ ಗೆದ್ದು ಬ್ಯಾಟಿಂಗ್ ಇಳಿದ ಮುಂಬೈ ಇಂಡಿಯನ್ಸ್ ಡೀಸೆಂಟ್ ಆರಂಭ ಪಡೆಯಿತು. ಆದರೆ ಮುಂಬೈ ತಂಡಕ್ಕೆ ಇರಬೇಕಾದ ಅಬ್ಬರದ ಪ್ರದರ್ಶನ ಇರಲಿಲ್ಲ. ನಾಯಕ ರೋಹಿತ್ ಶರ್ಮಾ ಹಾಗೂ ಕ್ವಿಂಟನ್ ಡಿಕಾಕ್ ಮೊದಲ ವಿಕೆಟ್‌ಗೆ 55 ರನ್ ಜೊತೆಯಾಟ ನೀಡಿದರು.  ರೋಹಿತ್ 32 ರನ್ ಸಿಡಿಸಿ ಔಟಾದರೆ, ಡಿಕಾಕ್ 40 ರನ್ ಸಿಡಿಸಿ ನಿರ್ಗಮಿಸಿದರು.

ಸೂರ್ಯಕುಮಾರ್ ಯಾದವ್ ಕೇವಲ 10 ರನ್ ಸಿಡಿಸಿ ಔಟಾದರು. ಇಶಾನ್ ಕಿಶನ್ ಹಾಗೂ ಕೀರನ್ ಪೊಲಾರ್ಡ್ ಜೊತೆಯಾಟ ಮುಂಬೈ ತಂಡದ ರನ್ ವೇಗ ಹೆಚ್ಚಿಸೋ ಸೂಚನೆ ನೀಡಿತು.  ಕಿಶನ್ ಆಟ 12 ರನ್‌ಗೆ ಅಂತ್ಯವಾಯಿತು. ಹಾರ್ದಿಕ್ 7 ರನ್ ಸಿಡಿಸಿ ಔಟಾದರು. 

ಕೀರನ್ ಪೋಲಾರ್ಡ್ ಅಜೇಯ 35 ರನ್ ಸಿಡಿಸಿದರು. ಈ ಮೂಲಕ ಮುಂಬೈ ಇಂಡಿಯನ್ಸ್ 5 ವಿಕೆಟ್ ನಷ್ಟಕ್ಕೆ 150 ರನ್ ಸಿಡಿಸಿತು. ಹೈದರಾಬಾದ್ ಪರ ಮುಜೀಬ್ ಯೂಆರ್ ರೆಹಮಾನ್ ಹಾಗೂ ವಿಜಯ್ ಶಂಕರ್ ತಲಾ 2 ವಿಕೆಟ್ ಕಬಳಿ ಮಿಂಚಿದರು. 

click me!