ದಿಢೀರ್ ಆರೋಗ್ಯ ಸಮಸ್ಯೆ, ಆಸ್ಪತ್ರೆ ದಾಖಲಾದ ಪಂಜಾಬ್ ನಾಯಕ ಕೆಎಲ್ ರಾಹುಲ್!

Published : May 02, 2021, 06:03 PM ISTUpdated : May 02, 2021, 06:20 PM IST
ದಿಢೀರ್ ಆರೋಗ್ಯ ಸಮಸ್ಯೆ, ಆಸ್ಪತ್ರೆ ದಾಖಲಾದ ಪಂಜಾಬ್ ನಾಯಕ ಕೆಎಲ್ ರಾಹುಲ್!

ಸಾರಾಂಶ

ಐಪಿಎಲ್ ಅಭಿಮಾನಿಗಳಿಗೆ ಶಾಕಿಂಗ್ ಸುದ್ದಿ ಎದುರಾಗಿದೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧದ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಪಂಜಾಬ್ ಕಿಂಗ್ಸ್ ನಾಯಕ ಕೆಎಲ್ ರಾಹುಲ್‌ಗೆ ಆರೋಗ್ಯ ಸಮಸ್ಯೆ ಎದುರಾಗಿದೆ. ಹೀಗಾಗಿ ರಾಹುಲ್ ಆಸ್ಪತ್ರೆ ದಾಖಲಾಗಿದ್ದಾರೆ.

ಅಹಮ್ಮದಾಬಾದ್(ಮೇ.02): ಐಪಿಎಲ್ ಟೂರ್ನಿಯ 29ನೇ ಲೀಗ್ ಪಂದ್ಯಕ್ಕೆ ಕಿಂಗ್ಸ್ ಇಲೆವೆನ್ ಪಂಜಾಬ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಸಜ್ಜಾಗಿದೆ. ಆದರೆ ಆರೋಗ್ಯ ಸಮಸ್ಯೆ ಎದುರಾದ ಕಾರಣ ಪಂಜಾಬ್ ನಾಯಕ ಕೆಎಲ್ ರಾಹುಲ್ ದಿಢೀರ್ ಆಸ್ಪತ್ರೆ ದಾಖಲಾಗಿದ್ದಾರೆ. ಪರಿಣಾಮ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ.

ರಾಹುಲ್ ಬ್ಯಾಟಿಂಗ್, ಹರ್ಪ್ರೀತ್ ಬೌಲಿಂಗ್; RCBಗೆ ಶಾಕಿಂಗ್ ಸೋಲು!

ಮಹತ್ವದ ಪಂದ್ಯಕ್ಕೆ ಸಜ್ಜಾಗುತ್ತಿದ್ದ ಕೆಎಲ್ ರಾಹುಲ್‌ಗೆ ತೀವ್ರ ಹೊಟ್ಟೆ ನೋವು ಕಾಣಿಸಿಕೊಂಡಿದೆ. ಹೀಗಾಗಿ ಕಳೆದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಹೊಟ್ಟೆ ನೋವು ಹೆಚ್ಚಾದ ಕಾರಣ ಎಮೆರ್ಜೆನ್ಸಿ ಘಟಕಕ್ಕೆ ದಾಖಲಿಸಲಾಗಿತ್ತು. ಕೆಲ ಪರೀಕ್ಷೆಗಳ ಬಳಿಕ ರಾಹುಲ್‌  ಅಪೆಂಡಿಕ್ಸ್ ಸಮಸ್ಯೆಗೆ ತುತ್ತಾಗಿರುವುದು ದೃಢಪಟ್ಟಿದೆ. 

ರಾಹುಲ್ ಅನಾರೋಗ್ಯ ಕುರಿತು ಪಂಜಾಬ್ ಕಿಂಗ್ಸ್ ಸಾಮಾಜಿಕ ಜಾಲತಾಣಧಲ್ಲಿ ಖಚಿತ ಪಡಿಸಿದೆ. ಇಷ್ಟೇ ಅಲ್ಲ, ಶಸ್ತ್ರ ಚಿಕಿತ್ಸೆ ಮೂಲಕ ರಾಹುಲ್ ಸಂಪೂರ್ಣ ಗುಣಮುಖರಾಗಲಿದ್ದಾರೆ ಎಂದಿದೆ. ರಾಹುಲ್ ಆಸ್ಪತ್ರೆ ದಾಖಲಿಸುವ ವೇಳೆ ಎಲ್ಲಾ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಲಾಗಿದೆ ಎಂದಿದೆ.

 

ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ಕಾರಣ ಕೆಎಲ್ ರಾಹುಲ್ ಇಂದಿನ ಪಂದ್ಯಕ್ಕೆ ಅಲಭ್ಯರಾಗಿದ್ದಾರೆ. ರಾಹುಲ್ ಲಭ್ಯತೆ ಕುರಿತು ಪಂಜಾಬ್ ಯಾವುದೇ ಖಚಿತ ಮಾಹಿತಿ ಬಹಿರಂಗ ಪಡಿಸಿಲ್ಲ. ಇಷ್ಟೇ ದೆಹಲಿ ವಿರುದ್ಧ ತಂಡ ರಾಹುಲ್ ಅಲಭ್ಯತೆಯಲ್ಲಿ ಮತ್ತೊರ್ವ ಕನ್ನಡಿಗ ಮಯಾಂಕ್ ಅಗರ್ವಾಲ್ ತಂಡವನ್ನು ಮುನ್ನಡೆಸಲಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಜಡ್ಡು ಬಿಟ್ಟುಕೊಟ್ಟು ಮರಿ ಜಡೇಜಾಗೆ 14.2 ಕೋಟಿ ಖರ್ಚು ಮಾಡಿದ ಸಿಎಸ್‌ಕೆ! ಯಾರು ಈ ಪ್ರಶಾಂತ್ ವೀರ್?
ದೇಶೀ ಕ್ರಿಕೆಟ್‌ನ Uncapped ಜೋಡೆತ್ತು ಖರೀದಿಸಲು ದಾಖಲೆ ಮೊತ್ತ ಖರ್ಚು ಮಾಡಿದ ಚೆನ್ನೈ ಸೂಪರ್‌ ಕಿಂಗ್ಸ್‌!