ಪೃಥ್ವಿ ಶಾ ಹಾಫ್ ಸೆಂಚುರಿ; ಹೈದರಾಬಾದ್‌ಗೆ ಸ್ಪರ್ಧಾತ್ಮಕ ಟಾರ್ಗೆಟ್

Published : Apr 25, 2021, 09:20 PM IST
ಪೃಥ್ವಿ ಶಾ ಹಾಫ್ ಸೆಂಚುರಿ; ಹೈದರಾಬಾದ್‌ಗೆ ಸ್ಪರ್ಧಾತ್ಮಕ ಟಾರ್ಗೆಟ್

ಸಾರಾಂಶ

ಡೆಲ್ಲಿ ಆರಂಭಿಕರ ಡೀಸೆಂಟ್ ಬ್ಯಾಟಿಂಗ್, ನಾಯಕನ ಸ್ಫೋಟಕ ಪ್ರದರ್ಶನದಿಂದ ಡೆಲ್ಲಿ ಕ್ಯಾಪಿಟಲ್ಸ್ ಸ್ಪರ್ಧಾತ್ಮಕ ಮೊತ್ತ ಪೇರಿಸಿದೆ.  

ಚೆನ್ನೈಏ.25): ಪೃಥ್ವಿ ಶಾ ಹಾಫ್ ಸೆಂಚುರಿ, ರಿಷಬ್ ಪಂತ್ ಹೋರಾಟದಿಂದ ಡೆಲ್ಲಿ ಕ್ಯಾಪಿಟಲ್ಸ್ 4 ವಿಕೆಟ್ ನಷ್ಟಕ್ಕೆ 159 ರನ್ ಸಿಡಿಸಿದೆ. ಈ ಮೂಲಕ  ಬಲಿಷ್ಠ ಬ್ಯಾಟಿಂಗ್ ಪಡೆ ಹೊಂದಿರುವ ಸನ್‌ರೈಸರ್ಸ್ ಹೈದರಾಬಾದ್ ತಂಡಕ್ಕೆ ಸುಲಭ ಗುರಿ ನೀಡಿದೆ.

ಪೃಥ್ವಿ ಶಾ ಹಾಗೂ ಶಿಖರ್ ಧವನ್ ಉತ್ತಮ ಆರಂಭ ನೀಡಿದರು. ಆದರೆ ಸ್ಟ್ರೈಕ್ ರೇಟ್ ಐಪಿಎಲ್ ರೀತಿ ಇರಲಿಲ್ಲ. ಧವನ್ 28 ರನ್ ಸಿಡಿಸಿ ಔಟಾದರು. ಮೊದಲ ವಿಕೆಚ್‌ಗೆ ಈ ಜೋಡಿ 81 ರನ್ ಸಿಡಿಸಿತು. 

ಪೃಥ್ವಿ ಶಾ ಅರ್ಧಶತಕ ಸಿಡಿಸಿ ಮಿಂಚಿದರು. 53 ರನ್ ಸಿಡಿಸಿದ ಶಾ ರನೌಟ್‌ಗೆ ಬಲಿಯಾದರು. ಆರಂಭಿಕರ ಪತನದ ಬಳಿಕ ನಾಯಕ ರಿಷಬ್ ಪಂತ್ ಹಾಗೂ ಸ್ಟೀವ್ ಸ್ಮಿತ್ ಜೊತೆಯಾಟ ಆರಂಭಗೊಂಡಿತು. ಪಂತ್ 37 ರನ್ ಸಿಡಿಸಿ ಔಟಾದರು. ಇತ್ತ ಸ್ಟೀವ್ ಸ್ಮಿತ್ ಅಜೇಯ 34 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ 4 ವಿಕೆಟ್ ನಷ್ಟಕ್ಕೆ 159 ರ್ ಸಿಡಿಸಿತು.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

ಭಾರತ-ದಕ್ಷಿಣ ಆಫ್ರಿಕಾ ಮೊದಲ ಟಿ20 ಪಂದ್ಯ ಎಷ್ಟು ಗಂಟೆಯಿಂದ ಆರಂಭ? ಎಲ್ಲಿ ವೀಕ್ಷಿಸಬಹುದು? ಸಂಭಾವ್ಯ ತಂಡ ಇಲ್ಲಿದೆ ನೋಡಿ
ಆ್ಯಶಸ್ ಸರಣಿ: ಸತತ ಎರಡು ಪಂದ್ಯ ಗೆದ್ದು ಬೀಗಿದ್ದ ಆಸೀಸ್‌ಗೆ ಆಘಾತ, ಸ್ಟಾರ್ ಬೌಲರ್ ಹೊರಕ್ಕೆ!