ನಾಯಕ ಮಯಾಂಕ್ ಏಕಾಂಗಿ ಹೋರಾಟ; ಡೆಲ್ಲಿಗೆ 167 ರನ್ ಟಾರ್ಗೆಟ್!

By Suvarna NewsFirst Published May 2, 2021, 9:14 PM IST
Highlights

ನಾಯಕ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ಹೊರತು ಪಡಿಸಿದರೆ ಪಂಜಾಬ್ ಕಿಂಗ್ಸ್ ಇತರ ಬ್ಯಾಟ್ಸ್‌ಮನ್‌ಗಳು ಅಬ್ಬರಿಸಿದೆ ಮಂಕಾದರು. ಆದರೆ ಮಯಾಂಕ್ ಅಬ್ಬರದಿಂದ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಸ್ಪರ್ಧಾತ್ಮಕ ಗುರಿ ನೀಡಲಾಗಿದೆ.

ಅಹಮ್ಮದಾಬಾದ್(ಮೇ.02): ಕೆಎಲ್ ರಾಹುಲ್ ಅನುಪಸ್ಥಿತಿಯಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ಕಣಕ್ಕಿಳಿದ ಪಂಜಾಬ್ ಕಿಂಗ್ಸ್ ಅಬ್ಬರಿಸಲು ವಿಫಲವಾಗಿದೆ. ನಾಯಕ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟದಿಂದ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 166 ರನ್ ಸಿಡಿಸಿದೆ.

ರಾಹುಲ್ ಇಲ್ಲದೆ ಪಂಜಾಬ್‌ಗೆ ಉತ್ತಮ ಆರಂಭ ಸಿಗಲಿಲ್ಲ. ಪ್ರಭಾಸಿಮ್ರನ್ ಸಿಂಗ್ ಕೇವಲ 12 ರನ್ ಸಿಡಿಸಿ ಔಟಾದರು. ಆದರೆ ನಾಯಕನ ಜವಾಬ್ದಾರಿ ಹೆಗಲಮೇಲೆ ಹೊತ್ತ ಮಯಾಂಕ್ ಅಗರ್ವಾಲ್ ಏಕಾಂಗಿ ಹೋರಾಟ ನೀಡಿದರು. ಇತ್ತ ಕ್ರಿಸ್ ಗೇಲ್13 ರನ್ ಸಿಡಿಸಿ ನಿರ್ಗಮಿಸಿದರು.

ತಂಡ ಸೇರಿಕೊಂಡ ಡೇವಿಡ್ ಮಲನ್ ಉತ್ತಮ ಸಾಥ್ ನೀಡಿದರು. ಆದರೆ ಮಲನ್ ಹೋರಾಟ 26 ರನ್‌ಗೆ ಅಂತ್ಯವಾಯಿತು. ಇತ್ತ ದೀಪಕ್ ಹೂಡ ಕೇವಲ 1 ರನ್ ಸಿಡಿಸಿ ರನೌಟ್ ಆದರು. ಆದರೆ ಮಯಾಂಕ್ ಹೋರಾಟ ಮುಂದುವರಿಸಿದರು.

ಅದ್ಬುತ ಬ್ಯಾಟಿಂಗ್ ಪ್ರದರ್ಶನ ನೀಡಿದ ಮಯಾಂಕ್ ಎಸೆತದಲ್ಲಿ 58 ಅಜೇಯ 99 ರನ್ ಸಿಡಿಸಿದರು.  ಈ ಮೂಲಕ ಪಂಜಾಬ್ ಕಿಂಗ್ಸ್ 6 ವಿಕೆಟ್ ನಷ್ಟಕ್ಕೆ 166 ರನ್ ಸಿಡಿಸಿದೆ. 

click me!