ಡೆಲ್ಲಿ ಬ್ಯಾಟಿಂಗ್ ವೈಫಲ್ಯ; ರಾಜಸ್ಥಾನ ರಾಯಲ್ಸ್‌ಗೆ ಸುಲಭ ಗುರಿ!

By Suvarna NewsFirst Published Apr 15, 2021, 9:21 PM IST
Highlights

ನಾಯಕ ರಿಷಬ್ ಪಂತ್ ಹೊರತು ಪಡಿಸಿದರೆ ಉಳಿದ ಬ್ಯಾಟ್ಸ್‌ಮನ್‌ಗಳ ವೈಫಲ್ಯ ಡೆಲ್ಲಿ ತಂಡಕ್ಕೆ ತೀವ್ರ ಹೊಡೆತ ನೀಡಿದೆ. ಬ್ಯಾಟಿಂಗ್‌ನಲ್ಲಿ ಅಬ್ಬರಿಸುತ್ತಿದ್ದ ಡೆಲ್ಲಿ ಈ ಬಾರಿ ಕಳಪೆ ಪ್ರದರ್ಶನ ನೀಡಿದೆ.  ಈ ಮೂಲಕ ರಾಜಸ್ಥಾನ ರಾಯಲ್ಸ್‌ಗೆ ಸುಲಭ ಟಾರ್ಗೆಟ್ ನೀಡಿದೆ

ಮುಂಬೈ(ಏ.15): ನಾಯಕ ರಿಷಬ್ ಪಂತ್ ಸಿಡಿಸಿದ ಹಾಫ್ ಸೆಂಚುರಿ ಡೆಲ್ಲಿ ಕ್ಯಾಪಿಟಲ್ಸ್ ತಂಡವನ್ನು ಕಾಪಾಡಿತು. ಹೀಗಾಗಿ ಅಂತಿಮ ಹಂತದಲ್ಲಿನ ಬಿರುಸಿನ ಬ್ಯಾಟಿಂಗ್‌ನಿಂದ ಡೆಲ್ಲಿ ಕ್ಯಾಪಿಟಲ್ಸ್, ರಾಜಸ್ಥಾನ ರಾಯಲ್ಸ್ ವಿರುದ್ಧ 8 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿದೆ. ರಾಜಸ್ಥಾನ ರಾಯಲ್ಸ್ ಬ್ಯಾಟಿಂಗ್ ಶಕ್ತಿಗೆ ಇದು ಸುಲಭ ಟಾರ್ಗೆಟ್ ಆಗಿದೆ.

ಕಳೆದ ಪಂದ್ಯದಲ್ಲಿ ಅಬ್ಬರಿಸಿದ ಪೃಥ್ವಿ ಶಾ ಹಾಗೂ ಶಿಖರ್ ಧವನ್ ದಿಢೀರ್ ವಿಕೆಟ್ ಕೈಚೆಲ್ಲಿದರು. ಪೃಥ್ವಿ 2 ರನ್ ಹಾಗೂ ಧವನ್ 9 ರನ್ ಸಿಡಿಸಿ ಔಟಾದರು. ಅಜಿಂಕ್ಯ ರಹಾನೆ 8 ರನ್ ಸಿಡಿಸಿ ಔಟಾದರು. ಆದರೆ ನಾಯಕ ರಿಷಬ್ ಪಂತ್ ದಿಟ್ಟ ಹೋರಾಟ ನೀಡಿದರು. ಇತರ ಬ್ಯಾಟ್ಸ್‌ಮನ್‌ಗಳಿಂದ ಉತ್ತಮ ಸಾಥ್ ಸಿಗಲಿಲ್ಲ.

ಮಾರ್ಕಸ್ ಸ್ಟೊಯ್ನಿಸ್ ಡಕೌಟ್ ಆದರೆ, ಲಲಿತ್ ಯಾದವ್ 20 ರನ ಸಿಡಿಸಿ ಔಟಾದರು. ಇತ್ತ ಪಂತ್ ಹಾಫ್ ಸೆಂಚುರಿ ಸಿಡಿಸಿದರು ಆದರೆ 51 ರನ್ ಸಿಡಿಸಿದ ಪಂತ್ ರನೌಟ್‌ಗೆ ಬಲಿಯಾದರು. ಟಾಮ್ ಕುರನ್ 21 ರನ್ ಕಾಣಿಕೆ ನೀಡಿದರು ಆರ್ ಅಶ್ವಿನ್ 7, ಕ್ರಿಸ್ ವೋಕ್ಸ್ ಅಜೇಯ 15 ರನ್ ಕಾಗಿಸೋ ರಬಾಡ ಅಜೇಯ 9 ರನ್ ಸಿಡಿಸಿದರು. ಈ ಮೂಲಕ ಡೆಲ್ಲಿ ಕ್ಯಾಪಿಟಲ್ಸ್ 8 ವಿಕೆಟ್ ನಷ್ಟಕ್ಕೆ 147 ರನ್ ಸಿಡಿಸಿತು.  

click me!