4 ಸ್ಟಾರ್‌ ಆರ್‌ಸಿಬಿ vs ಹ್ಯಾಟ್ರಿಕ್‌ ಹೀರೋ ಚೆನ್ನೈ: ಬಹುನಿರೀಕ್ಷಿತ ಹೈವೋಲ್ಟೇಜ್‌ ಪಂದ್ಯ!

By Kannadaprabha NewsFirst Published Apr 25, 2021, 2:15 PM IST
Highlights

4 ಸ್ಟಾರ್‌ ಆರ್‌ಸಿಬಿ vs ಹ್ಯಾಟ್ರಿಕ್‌ ಹೀರೋ ಚೆನ್ನೈ!| ಇಂದು ಐಪಿಎಲ್‌ನ ಬಹುನಿರೀಕ್ಷಿತ ಹೈವೋಲ್ಟೇಜ್‌ ಪಂದ್ಯ| ಸತತ 4 ಪಂದ್ಯ ಗೆದ್ದು ಅಜೇಯವಾಗಿ ಉಳಿದಿರುವ ಆರ್‌ಸಿಬಿ| ಹ್ಯಾಟ್ರಿಕ್‌ ಗೆಲುವಿನೊಂದಿಗೆ ಮುನ್ನುಗುತ್ತಿರುವ ಚೆನ್ನೈ| ವಾಂಖೇಡೆ ಕ್ರೀಡಾಂಗಣದಲ್ಲಿ ರನ್‌ ಹೊಳೆ ಹರಿಯುವ ನಿರೀಕ್ಷೆ

ಮುಂಬೈ(ಏ.25): ಐಪಿಎಲ್‌ನಲ್ಲಿ ಪ್ರತಿ ಬಾರಿ ರಾಯಲ್‌ ಚಾಲೆಂಜ​ರ್‍ಸ್ ಬೆಂಗಳೂರು ಹಾಗೂ ಚೆನ್ನೈ ಸೂಪರ್‌ ಕಿಂಗ್ಸ್‌ ತಂಡಗಳು ಮುಖಾಮುಖಿಯಾದಾಗ ರೋಚಕತೆಗೆ ಬರವಿರುವುದಿಲ್ಲ. ಭಾನುವಾರ ಈ ಎರಡು ತಂಡಗಳು 14ನೇ ಆವೃತ್ತಿಯ ಐಪಿಎಲ್‌ನಲ್ಲಿ ಮೊದಲ ಬಾರಿಗೆ ಪರಸ್ಪರ ಎದುರಾಗಲಿದ್ದು, ಈ ಹೈ ವೋಲ್ಟೇಜ್‌ ಪಂದ್ಯಕ್ಕೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ.

ಆರ್‌ಸಿಬಿ ಈ ಆವೃತ್ತಿಯಲ್ಲಿ ಅಮೋಘ ಆರಂಭ ಪಡೆದುಕೊಂಡಿದೆ. ಆಡಿರುವ ನಾಲ್ಕೂ ಪಂದ್ಯಗಳಲ್ಲಿ ಗೆದ್ದು ಅಂಕಪಟ್ಟಿಯಲ್ಲಿ ಅಗ್ರಸ್ಥಾನ ಪಡೆದಿದೆ. ಮತ್ತೊಂದೆಡೆ ಚೆನ್ನೈ, ಮೊದಲ ಪಂದ್ಯದಲ್ಲಿ ಸೋತರೂ ಆ ಬಳಿಕ ಸತತ 3 ಪಂದ್ಯಗಳಲ್ಲಿ ಗೆದ್ದು 2ನೇ ಸ್ಥಾನದಲ್ಲಿದೆ.

ಎರಡೂ ತಂಡಗಳು ಬಲಿಷ್ಠ ಬ್ಯಾಟಿಂಗ್‌ ಪಡೆಗಳನ್ನು ಹೊಂದಿವೆ. ಪಡಿಕ್ಕಲ್‌ ಹಾಗೂ ಕೊಹ್ಲಿ ಲಯ ಕಂಡುಕೊಂಡಿದ್ದಾರೆ. ಮ್ಯಾಕ್ಸ್‌ವೆಲ್‌ ಹಾಗೂ ವಿಲಿಯ​ರ್‍ಸ್ ಸ್ಫೋಟಕ ಆಟದ ಮೂಲಕ ತಂಡದ ಯಶಸ್ಸಿನಲ್ಲಿ ದೊಡ್ಡ ಪಾತ್ರ ವಹಿಸಿದ್ದಾರೆ. ಚೆನ್ನೈಗೆ ಋುತುರಾಜ್‌, ಡು ಪ್ಲೆಸಿ, ಅಲಿ, ರೈನಾ, ರಾಯುಡು, ಧೋನಿಯಂತಹ ಬಲಿಷ್ಠ ಬ್ಯಾಟ್ಸ್‌ಮನ್‌ಗಳ ಬಲವಿದೆ. ಎರಡೂ ತಂಡಗಳ ಬೌಲರ್‌ಗಳು ಸಹ ಉತ್ತಮ ಲಯದಲ್ಲಿದ್ದಾರೆ.

ಪವರ್‌-ಪ್ಲೇನಲ್ಲಿ ಮೊಹಮದ್‌ ಸಿರಾಜ್‌, ಡೆತ್‌ ಓವರ್‌ಗಳಲ್ಲಿ ಹರ್ಷಲ್‌ ಪಟೇಲ್‌ ದಾಳಿ ಎದುರಿಸುವುದು ಚೆನ್ನೈ ಬ್ಯಾಟ್ಸ್‌ಮನ್‌ಗಳಿಗೆ ಸವಾಲೆನಿಸಿದರೆ, ಆರ್‌ಸಿಬಿ ಬ್ಯಾಟ್ಸ್‌ಮನ್‌ಗಳಿಗೆ ಪವರ್‌-ಪ್ಲೇನಲ್ಲಿ ದೀಪಕ್‌ ಚಹರ್‌, ಡೆತ್‌ ಓವರಲ್ಲಿ ಲುಂಗಿ ಎನ್‌ಗಿಡಿ ಸವಾಲು ಹಾಕಲಿದ್ದಾರೆ. ಎರಡೂ ತಂಡಗಳಿಗೆ ಉತ್ತಮ ಆಲ್ರೌಂಡರ್‌ಗಳ ಬಲವಿದೆ.

ಒಟ್ಟು ಮುಖಾಮುಖಿ: 26

ಆರ್‌ಸಿಬಿ: 09

ಚೆನ್ನೈ: 16

ಫಲಿತಾಂಶವಿಲ್ಲ: 01

ಸಂಭವನೀಯ ಆಟಗಾರರ ಪಟ್ಟಿ

ಆರ್‌ಸಿಬಿ: ಕೊಹ್ಲಿ(ನಾಯಕ), ಪಡಿಕ್ಕಲ್‌, ಶಾಬಾಜ್‌, ಮ್ಯಾಕ್ಸ್‌ವೆಲ್‌, ಡಿ ವಿಲಿಯ​ರ್‍ಸ್, ವಾಷಿಂಗ್ಟನ್‌, ಜೇಮಿಸನ್‌, ಹರ್ಷಲ್‌, ಸಿರಾಜ್‌, ರಿಚರ್ಡ್‌ಸನ್‌/ಸ್ಯಾಮ್ಸ್‌, ಚಹಲ್‌.

ಚೆನ್ನೈ: ಋುತುರಾಜ್‌, ಡು ಪ್ಲೆಸಿ, ಅಲಿ, ರೈನಾ, ರಾಯುಡು, ಧೋನಿ(ನಾಯಕ), ಜಡೇಜಾ, ಸ್ಯಾಮ್‌ ಕರ್ರನ್‌, ಶಾರ್ದೂಲ್‌, ದೀಪಕ್‌ ಚಹರ್‌, ಲುಂಗಿ ಎನ್‌ಗಿಡಿ

ಸ್ಥಳ: ಮುಂಬೈ, ಪಂದ್ಯ: ಮಧ್ಯಾಹ್ನ 3.30ಕ್ಕೆ, ನೇರ ಪ್ರಸಾರ: ಸ್ಟಾರ್‌ ಸ್ಪೋಟ್ಸ್‌ರ್‍

ಪ್ರಾಬಲ್ಯ

ಲಯ ಕಂಡುಕೊಂಡಿರುವ ಕೊಹ್ಲಿ, ಪಡಿಕ್ಕಲ್‌

ತಂಡಕ್ಕಿದೆ ಎಬಿಡಿ, ಮ್ಯಾಕ್ಸ್‌ವೆಲ್‌ ಬಲ

ಸಿರಾಜ್‌, ಹರ್ಷಲ್‌ ಉತ್ತಮ ಬೌಲಿಂಗ್‌

ಲಯಕ್ಕೆ ಕಂಡುಕೊಂಡಿರುವ ಋುತುರಾಜ್‌

ಫಾಫ್‌ ಡು ಪ್ಲೆಸಿ ಉತ್ತಮ ಆಟ

ದೀಪಕ್‌, ಎನ್‌ಗಿಡಿ ಉತ್ತಮ ಬೌಲಿಂಗ್‌

ದೌರ್ಬಲ್ಯ

ವಿಕೆಟ್‌ ಕೀಳುವಲ್ಲಿ ಹಿಂದೆ ಬಿದ್ದಿರುವ ಚಹಲ್‌

4ನೇ ವಿದೇಶಿ ಆಟಗಾರನ ಆಯ್ಕೆ ಗೊಂದಲ

ಸ್ಥಿರ ಪ್ರದರ್ಶನ ತೋರದ ವಾಷಿಂಗ್ಟನ್‌

ಸ್ಥಿರ ಪ್ರದರ್ಶನ ತೋರದ ಮಧ್ಯಮ ಕ್ರಮಾಂಕ

ದುಬಾರಿಯಾಗುತ್ತಿರುವ ಸ್ಯಾಮ್‌ ಕರ್ರನ್‌

ನಿರೀಕ್ಷೆ ಉಳಿಸಿಕೊಳ್ಳದ ಶಾರ್ದೂಲ್‌

ಪಿಚ್‌ ರಿಪೋರ್ಟ್‌

ವಾಂಖೇಡೆಯಲ್ಲಿ ಸಂಜೆ ವೇಳೆ ಇಬ್ಬನಿ ಬೀಳುವ ಕಾರಣ 2ನೇ ಇನ್ನಿಂಗ್ಸ್‌ನಲ್ಲಿ ಫೀಲ್ಡಿಂಗ್‌ ಕಷ್ಟ. ಆದರೆ ಮಧ್ಯಾಹ್ನದ ಪಂದ್ಯವಾಗಿರುವ ಕಾರಣ, ಇಬ್ಬನಿಯ ಸಮಸ್ಯೆ ಇರುವುದಿಲ್ಲ. ಎರಡೂ ತಂಡಗಳಿಗೆ ಉತ್ತಮ ಬ್ಯಾಟಿಂಗ್‌ ನಡೆಸಲು ನೆರವು ಸಿಗಲಿದೆ. ಮೊದಲು ಬ್ಯಾಟ್‌ ಮಾಡುವ ತಂಡ ಕನಿಷ್ಠ 190-200 ರನ್‌ ಗಳಿಸಿದರೆ ಗೆಲ್ಲುವ ಸಾಧ್ಯತೆ ಹೆಚ್ಚು.

click me!