IPL 2021 ಗುರು ಶಿಷ್ಯರ ಕಾದಾಟ: ಚೆನ್ನೈ ವಿರುದ್ಧ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್!

By Suvarna NewsFirst Published Apr 10, 2021, 7:02 PM IST
Highlights

ಐಪಿಎಲ್ 14ನೇ ಆವೃತಿಯ 2ನೇ ಪಂದ್ಯದಲ್ಲಿ ಧೋನಿ ನೇತೃತ್ವದ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಿಷಬ್ ಪಂತ್ ನಾಯಕತ್ವದ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟಕ್ಕೆ ಸಜ್ಜಾಗಿದೆ. ಮಹತ್ವದ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್  ಟಾಸ್ ಗೆದ್ದಿದೆ. ಹೆಚ್ಚಿನ ವಿವರ ಈ ಕೆಳಗಿದೆ.

ಚೆನ್ನೈ(ಏ.10): ಐಪಿಎಲ್ 2021 ಟೂರ್ನಿ ಮೊದಲ ದಿನವೇ ರೋಚಕ ಪಂದ್ಯಕ್ಕೆ ಸಾಕ್ಷಿಯಾಗಿತ್ತು. ಇದೀಗ ಮತ್ತೊಂದು ಕುತೂಹಕಲ ಹೋರಾಟಕ್ಕೆ 2ನೇ ಪಂದ್ಯವೂ ಸಾಕ್ಷಿಯಾಗಲಿದೆ. ಕಾರಣ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ಡೆಲ್ಲಿ ಕ್ಯಾಪಿಟಲ್ಸ್ ಹೋರಾಟ. ಈ ಪಂದ್ಯದಲ್ಲಿ ಟಾಸ್ ಗೆದ್ದ ಡೆಲ್ಲಿ ಕ್ಯಾಪಿಟಲ್ಸ್ ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿದೆ.

 

. Skipper wins the toss and elects to bowl first against .

Live - https://t.co/jtX8TWxySo pic.twitter.com/sKGjc5y12U

— IndianPremierLeague (@IPL)

ಡೆಲ್ಲಿ ಪರ ಟಾಮ್ ಕುರನ್ ಪದಾರ್ಪಣೆ ಮಾಡಿದ್ದಾರೆ. ಇನ್ನು ಚೆನ್ನೈ ತಂಡದಲ್ಲಿ ಫಾಫ್ ಡುಪ್ಲೆಸಿಸ್, ಮೊಯಿನ್ ಆಲಿ, ಸ್ಯಾಮ್ ಕುರನ್, ಡ್ವೇನ್ ಬ್ರಾವೋ ನಾಲ್ವರು ವಿದೇಶಿ ಆಟಗಾರರಾಗಿ ಕಣಕ್ಕಿಳಿಯುತ್ತಿದ್ದಾರೆ.

 

Match 2. Delhi Capitals XI: P Shaw, S Dhawan, A Rahane, R Pant, S Hetmyer, M Stoinis, C Woakes, T Curran, R Ashwin, A Mishra, A Khan https://t.co/JzEqukJJPb

— IndianPremierLeague (@IPL)

Match 2. Chennai Super Kings XI: F du Plessis, R Gaikwad, M Ali, S Raina, A Rayudu, MS Dhoni, R Jadeja, S Curran, DJ Bravo, S Thakur, D Chahar https://t.co/JzEqukJJPb

— IndianPremierLeague (@IPL)

ಕಳೆದ ಬಾರಿ ಡೆಲ್ಲಿ ಕ್ಯಾಪಿಟಲ್ಸ್ ಶ್ರೇಯಸ್ ಅಯ್ಯರ್ ನಾಯತ್ವದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಅದ್ಭುತ  ಪ್ರದರ್ಶನ ನೀಡಿತ್ತು. ಆದರೆ ಈ ಬಾರಿ ಶ್ರೇಯಸ್ ಅಯ್ಯರ್ ಇಂಜುರಿಯಾಗಿರುವ ಕಾರಣ, ರಿಷಬ್ ಪಂತ್‌ಗೆ ನಾಯಕತ್ವ ನೀಡಲಾಗಿದೆ. ಇತ್ತ ಕಳೆದ ಆವೃತ್ತಿಯಲ್ಲಿ ಲೀಗ್ ಹಂತದಿಂದ ನಿರ್ಗಮಿಸಿದ ಚೆನ್ನೈ ಸೂಪರ್ ಕಿಂಗ್ಸ್ ಈ ಬಾರಿ ಮತ್ತೆ ಚಾಂಪಿಯನ್ ಕಿರೀಟ ಮುಡಿಗೇರಿಸಲು ಹೋರಾಟ ನಡೆಸಲಿದೆ.

click me!