* ಪಂಜಾಬ್ ಕಿಂಗ್ಸ್ ತಂಡದಿಂದ ಹೊರನಡೆದ ಬ್ಯಾಟ್ಸ್‌ಮನ್ ಕ್ರಿಸ್ ಗೇಲ್
* ಗೇಲ್ ಅವರನ್ನು ಸರಿಯಾಗಿ ನಡೆಸಿಕೊಂಡಿರಲಿಲ್ಲ ಎಂದ ಕೆವಿನ್ ಪೀಟರ್‌ಸನ್
* 14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿ 193 ರನ್ ಬಾರಿಸಿದ್ದರು.
ದುಬೈ(ಅ.03): 14ನೇ ಆವೃತ್ತಿಯ ಐಪಿಎಲ್‌ನಿಂದ (IPL 2021) ಹೊರ ನಡೆದಿರುವ ಸ್ಫೋಟಕ ಆಟಗಾರ ಕ್ರಿಸ್ ಗೇಲ್ (Chris Gayle) ಬಗ್ಗೆ ಪ್ರತಿಕ್ರಿಯಿಸಿರುವ ಇಂಗ್ಲೆಂಡ್ ಮಾಜಿ ಆಟಗಾರ ಕೆವಿನ್ ಪೀಟರ್ಸನ್ (Kevin Pietersen), ‘ಅವರನ್ನು ಪಂಜಾಬ್ ತಂಡ ಸರಿಯಾಗಿ ನಡೆಸಿಕೊಳ್ಳಲಿಲ್ಲ’ ಎಂದಿದ್ದಾರೆ. ಪಂಜಾಬ್ ಕಿಂಗ್ಸ್ (Punjab Kings) ತಂಡ ತಮ್ಮನ್ನು ನಡೆಸಿಕೊಂಡ ಬಗ್ಗೆ ಕ್ರಿಸ್ ಗೇಲ್ ಬೇಸರಗೊಂಡಿದ್ದಾರೆ. ಅವರನ್ನು ಬೇಕಾದಾಗ ಬಳಸಿ, ಬಳಿಕ ತಂಡದಿಂದ ಹೊರಗಿಡುತ್ತಾರೆ ಎಂದು ಗೇಲ್ ಭಾವಿಸಿದ್ದಾರೆ. ಅವರ ಹುಟ್ಟುಹಬ್ಬದ ದಿನವೇ ಅವರಿಗೆ ಪಂದ್ಯದಲ್ಲಿ ಆಡಲು ಗೇಲ್‌ಗೆ ಅವಕಾಶ ನೀಡಲಿಲ್ಲ ಇದು ಅವರ ಬೇಸಕ್ಕೆ ಕಾರಣವಾಗಿದೆ ಎಂದು ಪೀಟರ್ಸನ್ ತಿಳಿಸಿದ್ದಾರೆ.
IPL 2021: ಪಂಜಾಬ್ ಎದುರಿನ ಪಂದ್ಯಕ್ಕೆ RCB ತಂಡದಲ್ಲಿ ಒಂದು ಬದಲಾವಣೆ?
undefined
14ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ 10 ಪಂದ್ಯಗಳನ್ನಾಡಿ 193 ರನ್ ಬಾರಿಸಿದ್ದರು. 2018ರಲ್ಲಿ ಕ್ರಿಸ್ ಗೇಲ್ ಪಂಜಾಬ್ ಕಿಂಗ್ಸ್ ಫ್ರಾಂಚೈಸಿ ತಂಡ ಕೂಡಿಕೊಂಡಿದ್ದರು. ಪಂಜಾಬ್ ತಂಡದ ಪರ ಗೇಲ್ ಏಕಾಂಗಿಯಾಗಿ ಹಲವು ಪಂದ್ಯಗಳನ್ನು ಗೆಲ್ಲಿಸಿಕೊಟ್ಟಿದ್ದರು. 2019ನೇ ಸಾಲಿನ ಐಪಿಎಲ್ ಟೂರ್ನಿಯಲ್ಲಿ ಕ್ರಿಸ್ ಗೇಲ್ 13 ಪಂದ್ಯಗಳನ್ನಾಡಿ 490 ರನ್ ಚಚ್ಚಿದ್ದರು. ಕಳೆದ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲಿ ಮೊದಲ ಏಳು ಪಂದ್ಯಗಳಲ್ಲಿ ಗೇಲ್ ಅವರನ್ನು ತಂಡದಿಂದ ಹೊರಗಿಡಲಾಗಿತ್ತು. ಆ 7 ಪಂದ್ಯಗಳ ಪೈಕಿ 6 ಪಂದ್ಯಗಳಲ್ಲಿ ಪಂಜಾಬ್ ಸೋಲು ಕಂಡಿತ್ತು. ಹೀಗಿದ್ದೂ ಗೇಲ್ 7 ಪಂದ್ಯಗಳನ್ನಾಡಿ 41ರ ಬ್ಯಾಟಿಂಗ್ ಸರಾಸರಿಯಲ್ಲಿ 288 ರನ್ ಬಾರಿಸಿದ್ದರು.
IPL 2021: ಪಂಜಾಬ್‌ಗೆ ಗಾಯದ ಮೇಲೆ ಬರೆ, ಇದ್ದಕ್ಕಿದ್ದಂತೆಯೇ ತಂಡದಿಂದ ಹೊರನಡೆದ ಕ್ರಿಸ್ ಗೇಲ್..!
ಆದರೆ ಯುಎಇ ಚರಣದಲ್ಲಿ ತಮ್ಮ ಹುಟ್ಟುಹಬ್ಬದಂದೇ ಪಂಜಾಬ್ ಫ್ರಾಂಚೈಸಿ ಗೇಲ್ ಅವರಿಗೆ ಆಡುವ ಹನ್ನೊಂದರ ಬಳಗದಲ್ಲಿ ಸ್ಥಾನ ನೀಡಿರಲಿಲ್ಲ. ಕಠಿಣ ಬಯೋ ಬಬಲ್‌ನಿಂದ ಬೇಸತ್ತು 14ನೇ ಆವೃತ್ತಿಯ ಇಂಡಿಯನ್ ಪ್ರೀಮಿಯರ್ ಲೀಗ್ ಟೂರ್ನಿಗೆ ಕ್ರಿಸ್ ಗೇಲ್ ಗುಡ್ ಬೈ ಹೇಳಿದ್ದರು. ಈ ಆವೃತ್ತಿಯ ಮುಂದಿನ ಪಂದ್ಯಗಳಿಗೆ ಕ್ರಿಸ್ ಗೇಲ್ ಲಭ್ಯವಿರುವುದಿಲ್ಲ ಎಂದು ಪಂಜಾಬ್ ಕಿಂಗ್ಸ್ ತಂಡವು ಟ್ವೀಟ್ ಮೂಲಕ ಮಾಹಿತಿ ನೀಡಿತ್ತು. ಕಳೆದ ಕೆಲ ತಿಂಗಳಿಂದ ಐಪಿಎಲ್ ಸೇರಿದಂತೆ ವಿವಿಧ ಟೂರ್ನಿಗಳ ಕಠಿಣ ಬಯೋ ಬಬಲ್‌ನಲ್ಲಿದ್ದೇನೆ. ನಾನೀಗ ಮಾನಸಿಕವಾಗಿ ಸುಧಾರಿಸಿಕೊಳ್ಳುವ ಅಗತ್ಯವಿದೆ. ಮುಂಬರುವ ಟಿ20 ವಿಶ್ವಕಪ್ ಟೂರ್ನಿಯಲ್ಲಿ ವೆಸ್ಟ್ ಇಂಡೀಸ್ ತಂಡಕ್ಕೆ ನೆರವಾಗುವ ಉದ್ದೇಶದಿಂದ ವಿರಾಮ ಪಡೆಯುತ್ತಿದ್ದೇನೆ ಎಂದು ಗೇಲ್ ತಿಳಿಸಿದ್ದರು.