IPL 2021: ಚೆನ್ನೈ ಮುಂದೆ ನಡೆಯುತ್ತಾ KKR ಆಕ್ರಮಣಕಾರಿ ಆಟ..?

By Suvarna NewsFirst Published Sep 26, 2021, 9:10 AM IST
Highlights

* ಅಬುಧಾಬಿಯಲ್ಲಿಂದು ಕೆಕೆಆರ್ ವರ್ಸಸ್‌ ಸಿಎಸ್‌ಕೆ ಫೈಟ್

* ಸತತ 2 ಪಂದ್ಯ ಗೆದ್ದು ಆತ್ಮವಿಶ್ವಾಸದಿಂದ ಬೀಗುತ್ತಿರುವ ಉಭಯ ತಂಡಗಳು

* ಫ್ಲೇ ಆಫ್‌ಗೇರುವ ಕನವರಿಕೆಯಲ್ಲಿದೆ ಚೆನ್ನೈ ಸೂಪರ್ ಕಿಂಗ್ಸ್‌

ಅಬುಧಾಬಿ(ಸೆ.26): ಗೆಲುವಿನ ಮೇಲೆ ಗೆಲುವು ಸಾಧಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿರುವ ಚೆನ್ನೈ ಸೂಪರ್‌ಕಿಂಗ್ಸ್‌(Chennai Super Kings) ಹಾಗೂ ಕೋಲ್ಕತ ನೈಟ್‌ ರೈಡ​ರ್ಸ್‌(Kolkata Knight Riders), ಭಾನುವಾರ ಮುಖಾಮುಖಿಯಾಗಲಿದ್ದು ಯಾರ ಗೆಲುವಿನ ಓಟ ನಿಲ್ಲಲಿದೆ ಎನ್ನುವ ಕುತೂಹಲ ಅಭಿಮಾನಿಗಳಲ್ಲಿದೆ.

ಎರಡೂ ತಂಡಗಳು ಸತತ 2 ಪಂದ್ಯಗಳಲ್ಲಿ ಗೆದ್ದಿದ್ದು, ಎರಡೂ ಗೆಲುವುಗಳು ಅಧಿಕಾರಯುತ ಗೆಲುವುಗಳಾಗಿರುವುದು ವಿಶೇಷ. ವರುಣ್‌ ಚಕ್ರವರ್ತಿ(Varun Chakaravarthy) ತಮ್ಮ ಸ್ಪಿನ್‌ ಖೆಡ್ಡಕ್ಕೆ ಚೆನ್ನೈ ಬ್ಯಾಟ್ಸ್‌ಮನ್‌ಗಳನ್ನು ಕೆಡವಲು ಕಾಯುತ್ತಿದ್ದರೆ ವೆಂಕಟೇಶ್‌ ಅಯ್ಯರ್‌, ತಮ್ಮ ಸಿಡಿಲಬ್ಬರದ ಆಟ ಮುಂದುವರಿಸುವ ಉತ್ಸಾಹದಲ್ಲಿದ್ದಾರೆ. ಮತ್ತೊಂದೆಡೆ ಚೆನ್ನೈ ತನ್ನ ಯುವ ಆರಂಭಿಕ ಋುತುರಾಜ್‌ ಗಾಯಕ್ವಾಡ್‌, ಪವರ್‌-ಪ್ಲೇನ ತಜ್ಞ ಬೌಲರ್‌ ದೀಪಕ್‌ ಚಹರ್‌ ಮೇಲೆ ಹೆಚ್ಚು ವಿಶ್ವಾಸವಿರಿಸಿದೆ. ಕೆರಿಬಿಯನ್‌ನ ತಾರಾ ಆಟಗಾರರಾದ ಡ್ವೇನ್‌ ಬ್ರಾವೋ ಹಾಗೂ ಆ್ಯಂಡ್ರೆ ರಸೆಲ್‌ ನಡುವೆಯೂ ಪೈಪೋಟಿ ನಡೆಯಲಿದೆ.

IPL 2021: ಸುಲಭ ಟಾರ್ಗೆಟ್ ಪಡೆದ ಹೈದರಾಬಾದ್‌ಗೆ ಶಾಕ್, ಪಂಜಾಬ್‌ ಕಿಂಗ್ಸ್‌ಗೆ 5 ರನ್ ಗೆಲುವು!

ಐಪಿಎಲ್‌ ಇತಿಹಾಸದಲ್ಲಿ ಚೆನ್ನೈ ಸೂಪರ್‌ ಕಿಂಗ್ಸ್‌ ಹಾಗೂ ಕೋಲ್ಕತ ನೈಟ್‌ ರೈಡ​ರ್ಸ್ ತಂಡಗಳು ಒಟ್ಟು 23 ಬಾರಿ ಮುಖಾಮುಖಿಯಾಗಿದ್ದು, ಈ ಪೈಕಿ ಚೆನ್ನೈ ಸೂಪರ್ ಕಿಂಗ್ಸ್‌ ತಂಡವು ಸ್ಪಷ್ಟ ಮೇಲುಗೈ ಸಾಧಿಸಿದೆ. ಚೆನ್ನೈ ಸೂಪರ್‌ ಕಿಂಗ್ಸ್‌ ತಂಡವು 15 ಬಾರಿ ಗೆಲುವು ದಾಖಲಿಸಿದ್ದರೆ, ಕೋಲ್ಕತ ತಂಡವು 8 ಬಾರಿ ಮಾತ್ರ ಗೆಲುವಿನ ರುಚಿ ಕಂಡಿದೆ.

ಯುಎಇ ಚರಣದ ಮೊದಲ ಪಂದ್ಯದಲ್ಲಿ ಮುಂಬೈ ಇಂಡಿಯನ್ಸ್‌ ವಿರುದ್ದ ಗೆದ್ದು ಬೀಗಿದ್ದ ಸಿಎಸ್‌ಕೆ(CSK) ತಂಡವು ತನ್ನ ಎರಡನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್‌ ಬೆಂಗಳೂರು(RCB) ಎದುರು ಸುಲಭ ಗೆಲುವು ದಾಖಲಿಸಿದೆ. ಇಂದಿನ ಪಂದ್ಯದಲ್ಲಿ ಸಿಎಸ್‌ಕೆ ಗೆಲುವಿನ ನಗೆ ಬೀರಿದರೆ ಬಹುತೇಕ ಪ್ಲೇ ಆಫ್‌ ಹಾದಿ ಸುಗಮವಾಗಲಿದೆ. ಇನ್ನೊಂದೆಡೆ ಭಾರತೀಯ ಚರಣದ ಐಪಿಎಲ್‌ನಲ್ಲಿ ನೀರಸ ಪ್ರದರ್ಶನ ತೋರಿದ್ದ ಕೋಲ್ಕತ ನೈಟ್‌ ರೈಡರ್ಸ್ ತಂಡವು ಹೊಸ ಹುರುಪಿನಲ್ಲಿ ಅರಬ್ಬರ ನಾಡಿನಲ್ಲಿ ಅಬ್ಬರಿಸುತ್ತಿದೆ. ಮೊದಲ ಪಂದ್ಯದಲ್ಲಿ ಆರ್‌ಸಿಬಿ ತಂಡವನ್ನು ಅಲ್ಪಮೊತ್ತಕ್ಕೆ ಆಲೌಟ್ ಮಾಡಿ ಗೆಲುವಿನ ನಗೆ ಬೀರಿದ್ದ ಕೆಕೆಆರ್, ತನ್ನ ಎರಡನೇ ಪಂದ್ಯದಲ್ಲಿ ಹಾಲಿ ಚಾಂಪಿಯನ್‌ ಮುಂಬೈ ಇಂಡಿಯನ್ಸ್‌(Mumbai Indians) ತಂಡಕ್ಕೆ ಸೋಲುಣಿಸಿ ಆತ್ಮವಿಶ್ವಾಸದ ಅಲೆಯಲ್ಲಿ ತೇಲುತ್ತಿದ್ದು, ಧೋನಿ ಪಡೆಗೆ ತಿರುಗೇಟು ನೀಡುವ ಕನವರಿಕೆಯಲ್ಲಿದೆ

ಸಂಭವನೀಯ ಆಟಗಾರರ ಪಟ್ಟಿ

ಚೆನ್ನೈ: ಋುತುರಾಜ್ ಗಾಯಕ್ವಾಡ್‌‌, ಫಾಫ್ ಡು ಪ್ಲೆಸಿಸ್, ಸುರೇಶ್ ರೈನಾ, ಅಂಬಟಿ ರಾಯುಡು, ಮೋಯಿನ್ ಅಲಿ‌, ಎಂ ಎಸ್ ಧೋನಿ(ನಾಯಕ), ರವೀಂದ್ರ ಜಡೇಜಾ, ಡ್ವೇನ್‌ ಬ್ರಾವೋ, ಶಾರ್ದೂಲ್ ಠಾಕೂರ್‌, ದೀಪಕ್ ಚಹರ್‌, ಜೋಸ್‌ ಹೇಜಲ್‌ವುಡ್‌.

ಕೆಕೆಆರ್‌: ಶುಭ್‌ಮನ್‌ ಗಿಲ್‌, ವೆಂಕಟೇಶ್‌ ಅಯ್ಯರ್‌, ರಾಹುಲ್ ತ್ರಿಪಾಠಿ, ನಿತೀಶ್ ರಾಣಾ, ಇಯಾನ್ ಮಾರ್ಗನ್‌(ನಾಯಕ), ಆಂಡ್ರೆ ರಸೆಲ್‌, ದಿನೇಶ್ ಕಾರ್ತಿಕ್‌, ಸುನಿಲ್ ನರೇನ್‌, ವರುಣ್ ಚಕ್ರವರ್ತಿ, ಪ್ರಸಿದ್ಧ್ ಕೃಷ್ಣ, ಲಾಕಿ ಫಗ್ರ್ಯೂಸನ್‌.

ಸ್ಥಳ: ಅಬುಧಾಬಿ
ಪಂದ್ಯ ಆರಂಭ: ಮಧ್ಯಾಹ್ನ 3.30ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

click me!