ಗವಾಸ್ಕರ್ ನೆರವನ್ನು ಸ್ಮರಿಸಿಕೊಂಡ ಇಂಜಮಾಮ್ ಉಲ್ ಹಕ್..!

By Suvarna News  |  First Published Jul 13, 2020, 6:17 PM IST

ಗವಾಸ್ಕರ್ ನೀಡಿದ ಒಂದೇ ಒಂದು ಸಿಂಪಲ್ ಟಿಪ್ಸ್ ಹೇಗೆ ತನ್ನ ಕ್ರಿಕೆಟ್ ಕರಿಯರ್ ಬದಲಿಸಿತು ಎನ್ನುವ ರಹಸ್ಯವನ್ನು ಪಾಕಿಸ್ತಾನದ ಮಾಜಿ ನಾಯಕ ಇಂಜಮಾಮ್ ಉಲ್ ಹಕ್ ಹೊರಗೆಡವಿದ್ದಾರೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಕರಾಚಿ(ಜು.13): ಪಾಕಿಸ್ತಾನ ಕ್ರಿಕೆಟ್‌ ಮಾಜಿ ನಾಯಕ ಇಂಜಮಾಮ್ ಉಲ್‌ ಹಕ್, ಟೀಂ ಇಂಡಿಯಾ ಕ್ರಿಕೆಟ್‌ ದಿಗ್ಗಜ ಸುನಿಲ್ ಗವಾಸ್ಕರ್ ನೀಡಿದ ನಲಹೆ ತನ್ನ ಕ್ರಿಕೆಟ್ ಬದುಕನ್ನು ಹೇಗೆ ಬದಲಿಸಿತು ಎನ್ನುವ ಸೀಕ್ರೇಟ್ ಬಿಚ್ಚಿಟ್ಟಿದ್ದಾರೆ. ಶಾರ್ಟ್ ಪಿಚ್ ಬಾಲ್ ಎದುರಿಸುವಾಗ ಇಂಜಿ ಸಾಕಷ್ಟು ಕಷ್ಟ ಪಡುತ್ತಿದ್ದರಂತೆ. ಆದರೆ ಗವಾಸ್ಕರ್ ನೀಡಿದ ಒಂದೇ ಒಂದು ಸಿಂಪಲ್ ಟಿಪ್ಸ್ ಹೇಗೆ ತನ್ನ ಕ್ರಿಕೆಟ್ ಕರಿಯರ್ ಬದಲಿಸಿತು ಎಂದು ವಿವರಿಸಿದ್ದಾರೆ.

1992ರಲ್ಲಿ ಆಸ್ಟ್ರೇಲಿಯಾದಲ್ಲಿ ನಡೆದ ವಿಶ್ವಕಪ್ ಗೆದ್ದ ಬಳಿಕ ಪಾಕಿಸ್ತಾನ ತಂಡವು ಇಂಗ್ಲೆಂಡ್ ಪ್ರವಾಸ ಕೈಗೊಂಡಿತ್ತು. ಇಂಜಮಾಮ್ ಪಾಲಿಗೆ ಅದು ಮೊದಲ ಇಂಗ್ಲೆಂಡ್ ಪ್ರವಾಸವಾಗಿತ್ತು. ಇಂಗ್ಲೆಂಡ್ ಪಿಚ್ ಹೇಗೆ ವರ್ತಿಸುತ್ತದೆ ಎನ್ನುವುದರ ಅರಿವು ಇಂಜಿಗಿರಲಿಲ್ಲ. ಅದರಲ್ಲೂ ಶಾರ್ಟ್ ಪಿಚ್ ಬಾಲ್ ಎದುರಿಸಲು ಸಾಕಷ್ಟು ಪ್ರಯಾಸ ಪಡುತ್ತಿದ್ದರಂತೆ. ಈ ವೇಳೆ ಗವಾಸ್ಕರ್ ಜತೆಗೆ ಇಂಗ್ಲೆಂಡ್‌ನಲ್ಲಿ ಚಾರಿಟಿ ಪಂದ್ಯವನ್ನಾಡುವ ಅವಕಾಶ ಒದಗಿ ಬಂದಿದ್ದನ್ನು, ಆ ಬಳಿಕ ಆಗಿದ್ದೇನು ಎನ್ನುವುದನ್ನು ಪಾಕ್ ಮಾಜಿ ನಾಯಕ ಎಳೆ ಎಳೆಯಾಗಿ ಬಿಚ್ಚಿಟ್ಟಿದ್ದಾರೆ.

Tap to resize

Latest Videos

undefined

ಇಂಗ್ಲೆಂಡ್‌ನಲ್ಲಿ ಚಾರಿಟಿ ಪಂದ್ಯವನ್ನಾಡುವಾಗ ನಾನು ಗವಾಸ್ಕರ್ ಅವರನ್ನು ಭೇಟಿಯಾದೆ, ನಂತರ ಒಟ್ಟಿಗೆ ಬ್ಯಾಟಿಂಗ್ ಮಾಡುವ ಅವಕಾಶವೂ ಒದಗಿ ಬಂತು. ನಾನಾಗ ಸುನಿಲ್ ಬಾಯ್, ನನಗೆ ಶಾರ್ಟ್ ಎದುರಿಸಲು ಕಷ್ಟವಾಗುತ್ತಿದೆ. ನಾನೇನು ಮಾಡಲಿ ಎಂದು ಕೇಳಿದೆ.

35 ಮಕ್ಕಳ ಹಾರ್ಟ್ ಸರ್ಜರಿಗೆ ನೆರವಾದ ಸುನಿಲ್ ಗವಾಸ್ಕರ್!

ಆಗ ದಿಗ್ಗಜ ಕ್ರಿಕೆಟಿಗರಾದ ಗವಾಸ್ಕರ್, ಒಂದು ಸಿಂಪಲ್ ಕೆಲಸ ಮಾಡು, ನೀನು ಬ್ಯಾಟಿಂಗ್ ಮಾಡುವಾಗ ಶಾರ್ಟ್ ಪಿಚ್ ಇಲ್ಲವೇ ಬೌನ್ಸರ್ ಬಗ್ಗೆ ಯೋಚಿಸಲೇ ಬೇಡ. ನೀನು ಅದೇ ಯೋಚನೆಯಲ್ಲಿದ್ದರೆ ಬೇಗ ಸಿಕ್ಕಿಹಾಕಿಕೊಳ್ಳುತ್ತೀಯ. ಬೌಲರ್ ಚೆಂಡನ್ನು ಎಸೆದಾಗ ಯಾವ ರೀತಿಹಾಕುತ್ತಾನೆ ಎಂದು ನೋಡಿ ಸಹಜವಾಗಿಯೇ ಬ್ಯಾಟಿಂಗ್ ಮಾಡು. ಶಾರ್ಟ್‌ ಪಿಚ್ ಬಾಲ್‌ಗಳ ಬಗ್ಗೆ ಹೆಚ್ಚು ತಲೆಕೆಡಿಸಿಕೊಳ್ಳಬೇಡ ಎಂದಿದ್ದರಂತೆ.
ಗವಾಸ್ಕರ್ ಸಲಹೆಯನ್ನು ಚಾಚೂ ತಪ್ಪದೇ ಪಾಲಿಸಿದ ಇಂಜಿ ನೆಟ್ಸ್‌ನಲ್ಲಿ ಅಭ್ಯಾಸ ನಡೆಸುವಾಗಲೂ ಅದನ್ನು ಅಳವಡಿಸಿಕೊಂಡರಂತೆ. ಅಲ್ಲಿಂದ ನಿವೃತ್ತಿಯಾಗುವವರೆಗೂ ನಾನು ಶಾರ್ಟ್ ಪಿಚ್ ಬಾಲ್ ಎದುರಿಸಲು ಕಷ್ಟಪಡಲಿಲ್ಲ ಎಂದು ಹೇಳಿದ್ದಾರೆ.

ನಾನು ನೆಟ್ಸ್‌ನಲ್ಲಿ ಅಭ್ಯಾಸ ಆರಂಭಿಸಿದೆ. ಈ ವೇಳೆ ನನಗೆ ನಾನೇ ಶಾರ್ಟ್ ಪಿಚ್ ಬಾಲ್ ಬಗ್ಗೆ ಯೋಚಿಸಬೇಡ ಅಂದುಕೊಳ್ಳತೊಡಗಿದೆ. ಬಳಿಕ ನನಗಿದ್ದ ಈ ವೀಕ್ನೆಸ್ ಬಗೆಹರಿಯಿತು. 1992ರಿಂದ ನಾನು ನಿವೃತ್ತಿಯಾಗುವ ದಿನದವರೆಗೂ ಈ ಸಮಸ್ಯೆಯನ್ನು ಎದುರಿಸಲಿಲ್ಲ ಎಂದು ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ 20 ಸಾವಿರಕ್ಕೂ ಅಧಿಕ ರನ್ ಬಾರಿಸಿದ ಇಂಜಿ ಹೇಳಿದ್ದಾರೆ.
ಇದೇ ವೇಳೆ 71ನೇ ವಸಂತಕ್ಕೆ(ಜು.10)ಕ್ಕೆ ಕಾಲಿರಿಸಿದ ಸುನಿಲ್ ಗವಾಸ್ಕರ್‌ಗೆ ಇಂಜಿ ಶುಭ ಕೋರಿದ್ದಾರೆ.
 

click me!