ಸೆಮೀಸ್‌ನಲ್ಲಿ ಶಮಿಗೆ 7 ವಿಕೆಟ್..! ವಿಶ್ವಕಪ್ ಪಂದ್ಯಕ್ಕೂ ಒಂದು ದಿನ ಮೊದಲೇ ಕನಸು ಕಂಡ ನೆಟ್ಟಿಗ..!

By Naveen Kodase  |  First Published Nov 16, 2023, 11:25 AM IST

ಭಾರತ ತಂಡವು ಸೆಮೀಸ್ ಗೆದ್ದು ಫೈನಲ್‌ಗೇರಲು ಮೊಹಮ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದರಿಂದ ನೆಟ್ಟಿಗರು 'ಶಮಿ ಫೈನಲ್‌' ಎಂದೆಲ್ಲಾ ಅನುಭವಿ ವೇಗಿಯನ್ನು ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ಶಮಿ, ಈ ವಿಶ್ವಕಪ್ ಟೂರ್ನಿಯಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು.


ಮುಂಬೈ(ನ.16): ಟೀಂ ಇಂಡಿಯಾ ಅನುಭವಿ ವೇಗಿ ಮೊಹಮ್ಮದ್ ಶಮಿ, ಐಸಿಸಿ ಏಕದಿನ ವಿಶ್ವಕಪ್ ಟೂರ್ನಿಯ ಸೆಮಿಫೈನಲ್‌ ಪಂದ್ಯದಲ್ಲಿ ನ್ಯೂಜಿಲೆಂಡ್ ತಂಡದ ಪಾಲಿಗೆ ಮತ್ತೊಮ್ಮೆ ದುಸ್ವಪ್ನವಾಗಿ ಕಾಡಿದ್ದಾರೆ. ಲೀಗ್ ಹಂತದಲ್ಲಿ ಶಮಿ ತಾನಾಡಿದ ಮೊದಲ ಪಂದ್ಯದಲ್ಲೇ ಕಿವೀಸ್ ವಿರುದ್ದ 5 ವಿಕೆಟ್ ಕಬಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರವಹಿಸಿದ್ದರು. ಇದೀಗ ಮತ್ತೊಮ್ಮೆ ಸೆಮಿಫೈನಲ್‌ನಲ್ಲಿ ನ್ಯೂಜಿಲೆಂಡ್ ಎದುರು ಪ್ರಮುಖ 7 ವಿಕೆಟ್ ಕಬಳಿಸಿ ತಂಡ ಫೈನಲ್‌ಗೇರುವಲ್ಲಿ ಮಹತ್ವದ ಪಾತ್ರ ವಹಿಸಿದ್ದಾರೆ. ಆದರೆ ಮೊಹಮ್ಮದ್ ಶಮಿ ಸೆಮಿಫೈನಲ್‌ನಲ್ಲಿ 7 ವಿಕೆಟ್ ಕಬಳಿಸಲಿದ್ದಾರೆ ಎಂದು ನೆಟ್ಟಿಗನೊಬ್ಬ ಒಂದು ದಿನ ಮುಂಚಿತವಾಗಿಯೇ ಕನಸು ಕಂಡಿದ್ದು, ಈ ಕುರಿತಂತೆ ಟ್ವೀಟ್ ಮಾಡಿದ್ದರು. ನೆಟ್ಟಿಗನ ಕನಸು ನನಸಾದ ಹಿನ್ನೆಲೆಯಲ್ಲಿ ಆ ಟ್ವೀಟ್ ಈಗ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.

ಹೌದು, ಡಾನ್‌ಮಟಿಯೋ ಎನ್ನುನ ಯೂಸರ್‌ ನೇಮ್ ಹೊಂದಿರುವ ನೆಟ್ಟಿಗರೊಬ್ಬರು ನವೆಂಬರ್ 14ರ ಮಧ್ಯಾಹ್ನ 1.14ಕ್ಕೆ ಅಂದರೆ ವಿಶ್ವಕಪ್ ಸೆಮಿಫೈನಲ್ ಪಂದ್ಯಕ್ಕೂ ಸರಿಯಾಗಿ ಒಂದು ದಿನ ಮುಂಚಿತವಾಗಿ ಟ್ವೀಟ್ ಮಾಡಿದ್ದರು. ಆ ಟ್ವೀಟ್‌ನಲ್ಲಿ "ನಾನು ಕಂಡ ಕನಸಿನಲ್ಲಿ ಸೆಮಿಫೈನಲ್‌ನಲ್ಲಿ ಶಮಿ 7 ವಿಕೆಟ್ ಪಡೆದರು" ಎಂದು ಟ್ವೀಟ್ ಮಾಡಿದ್ದರು. ಅದರಂತೆ ಶಮಿ ಇದೀಗ ಸೆಮೀಸ್‌ನಲ್ಲಿ 7 ವಿಕೆಟ್ ಕಬಳಿಸಿ ಮಿಂಚುವ ಮೂಲಕ ನೆಟ್ಟಿಗ ಕಂಡ ಕನಸನ್ನು ನನಸು ಮಾಡಿದ್ದಾರೆ.

Tap to resize

Latest Videos

ನಮ್ಮ ದೇಶದ ನೀರೇ ಕುಡಿಯಲ್ವಾ ವಿರಾಟ್ ಕೊಹ್ಲಿ? ಒಂದು ಲೀಟರ್ ಆ ನೀರಿನ ಬೆಲೆ ಎಷ್ಟು ಗೊತ್ತಾ?

Saw a dream where Shami took 7 wickets in the semi final ☠️

— Don Mateo (@DonMateo_X14)

ಭಾರತ ತಂಡವು ಸೆಮೀಸ್ ಗೆದ್ದು ಫೈನಲ್‌ಗೇರಲು ಮೊಹಮ್ಮದ್ ಶಮಿ ಪ್ರಮುಖ ಪಾತ್ರವಹಿಸಿದ್ದರಿಂದ ನೆಟ್ಟಿಗರು 'ಶಮಿ ಫೈನಲ್‌' ಎಂದೆಲ್ಲಾ ಅನುಭವಿ ವೇಗಿಯನ್ನು ಕೊಂಡಾಡುತ್ತಿದ್ದಾರೆ. ಒಟ್ಟಿನಲ್ಲಿ ಶಮಿ, ಈ ವಿಶ್ವಕಪ್ ಟೂರ್ನಿಯಲ್ಲಿ ಮುಟ್ಟಿದ್ದೆಲ್ಲಾ ಚಿನ್ನವಾಗುತ್ತಿದೆ ಎಂದರೆ ಅತಿಶಯೋಕ್ತಿಯಾಗಲಾರದು.

23 ವಿಕೆಟ್‌: ಜಹೀರ್‌ ದಾಖಲೆ ಮುರಿದ ಶಮಿ

ಶಮಿ ಈ ಬಾರಿ 23 ವಿಕೆಟ್‌ ಪಡೆದಿದ್ದು, ವಿಶ್ವಕಪ್‌ ಆವೃತ್ತಿಯೊಂದರಲ್ಲಿ ಗರಿಷ್ಠ ವಿಕೆಟ್‌ ಪಡೆದ ಭಾರತೀಯರ ಪೈಕಿ ಅಗ್ರಸ್ಥಾನಕ್ಕೇರಿದರು. 2011ರ ವಿಶ್ವಕಪ್‌ನಲ್ಲಿ ಜಹೀರ್‌ ಖಾನ್‌ 21 ವಿಕೆಟ್‌ ಕಬಳಿಸಿದ್ದರು.

ವಿಶ್ವಕಪ್‌ನಲ್ಲಿ ಶಮಿ ವೇಗದ 50 ವಿಕೆಟ್‌

ಭಾರತದ ವೇಗಿ ಮೊಹಮದ್‌ ಶಮಿ ಏಕದಿನ ವಿಶ್ವಕಪ್‌ನಲ್ಲಿ ವೇಗವಾಗಿ 50 ವಿಕೆಟ್‌ ಕಬಳಿಸಿದ ದಾಖಲೆ ಬರೆದರು. ಅವರು 17 ಇನ್ನಿಂಗ್ಸ್‌ಗಳಲ್ಲಿ ಈ ಮೈಲಿಗಲ್ಲು ತಲುಪಿದರು. ಇದರೊಂದಿಗೆ ಆಸ್ಟ್ರೇಲಿಯಾದ ಮಿಚೆಲ್‌ ಸ್ಟಾರ್ಕ್‌(19 ಇನ್ನಿಂಗ್ಸ್‌) ದಾಖಲೆ ಮುರಿದರು. ಶ್ರೀಲಂಕಾದ ಲಸಿತ್‌ ಮಾಲಿಂಗಾ 25, ನ್ಯೂಜಿಲೆಂಡ್‌ನ ಟ್ರೆಂಟ್‌ ಬೌಲ್ಟ್‌ 28, ಆಸ್ಟ್ರೇಲಿಯಾದ ಗ್ಲೆನ್‌ ಮೆಗ್ರಾಥ್‌ 30 ಇನ್ನಿಂಗ್ಸ್‌ಗಳಲ್ಲಿ ಈ ಸಾಧನೆ ಮಾಡಿದ್ದಾರೆ.

7 ವಿಕೆಟ್, ಹಲವು ದಾಖಲೆ; ಇದು ಪಂದ್ಯಶ್ರೇಷ್ಠ 'ಶಮಿ'ಫೈನಲ್ ಆಟ!

ಶಮಿ ಈ ವಿಶ್ವಕಪ್‌ನ ಗರಿಷ್ಠ ವಿಕೆಟ್‌ ಸರದಾರ

ನ್ಯೂಜಿಲೆಂಡ್‌ 7 ವಿರುದ್ಧ 7 ವಿಕೆಟ್‌ ಕಿತ್ತ ಮೊಹಮದ್‌ ಶಮಿ ಈ ವಿಶ್ವಕಪ್‌ನ ಗರಿಷ್ಠ ವಿಕೆಟ್ ಕಿತ್ತವರ ಪಟ್ಟಿಯಲ್ಲಿ ಅಗ್ರಸ್ಥಾಕ್ಕೇರಿದರು. ಅವರು ಕೇವಲ 6 ಪಂದ್ಯಗಳಲ್ಲಿ 23 ಕಿತ್ತಿದ್ದು, 9 ಪಂದ್ಯಗಳಲ್ಲಿ 22 ವಿಕೆಟ್‌ ಕಿತ್ತಿರುವ ಆಸ್ಟ್ರೇಲಿಯಾದ ಆ್ಯಡಂ ಜಂಪಾರನ್ನು ಹಿಂದಿಕ್ಕಿ ಮೊದಲ ಸ್ಥಾನಕ್ಕೇರಿದರು.

ಏಕದಿನದಲ್ಲಿ 7 ವಿಕೆಟ್‌: ಶಮಿ ಏಕೈಕ ಭಾರತೀಯ

ಏಕದಿನ ಕ್ರಿಕೆಟ್‌ನ ಇನ್ನಿಂಗ್ಸ್‌ನಲ್ಲಿ 7 ವಿಕೆಟ್‌ ಪಡೆದ ಮೊದಲ ಭಾರತೀಯ ಬೌಲರ್‌ ಎಂಬ ಖ್ಯಾತಿಗೆ ಶಮಿ ಪಾತ್ರರಾಗಿದ್ದಾರೆ. ಅನಿಲ್‌ ಕುಂಬ್ಳೆ, ಸಿರಾಜ್‌, ಬೂಮ್ರಾ ಸೇರಿದಂತೆ 12 ಮಂದಿ ಇನ್ನಿಂಗ್ಸ್‌ವೊಂದರಲ್ಲಿ 6 ವಿಕೆಟ್‌ ಕಿತ್ತ ಸಾಧನೆ ಮಾಡಿದ್ದಾರೆ.

01ನೇ ಬೌಲರ್: ಏಕದಿನ ವಿಶ್ವಕಪ್‌ ಆವೃತ್ತಿಯೊಂದರಲ್ಲಿ 3 ಬಾರಿ 5 ವಿಕೆಟ್‌ ಗೊಂಚಲು ಪಡೆದ ಮೊದಲ ಬೌಲರ್‌ ಮೊಹಮದ್‌ ಶಮಿ.

01ನೇ ಬೌಲರ್‌: ಶಮಿ ಭಾರತದ ಪರ ವಿಶ್ವಕಪ್‌ನಲ್ಲಿ 50 ವಿಕೆಟ್‌ ಪೂರ್ತಿಗೊಳಿಸಿದ ಮೊದಲ ಬೌಲರ್‌. ಜಹೀರ್‌ ಖಾನ್‌, ಜಾವಗಲ್‌ ಶ್ರೀನಾಥ್‌ ತಲಾ 44 ವಿಕೆಟ್‌ ಪಡೆದಿದ್ದಾರೆ.
 

click me!