ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾಗೆ ಆಘಾತ; ಪ್ರಮುಖ ವೇಗಿ ಔಟ್!

By Suvarna News  |  First Published Dec 14, 2019, 2:49 PM IST

 ವೆಸ್ಟ್ ಇಂಡೀಸ್ ವಿರುದ್ಧದ ಸರಣಿ ಆರಂಭಕ್ಕೂ ಮುನ್ನವೆ ಟೀಂ ಇಂಡಿಯಾ ಆಘಾತ ಎದುರಾಗಿದೆ. ಚೆನ್ನೈನಲ್ಲಿನ ಮೊದಲ ಪಂದ್ಯಕ್ಕೂ ಮೊದಲೇ ಇಂಜುರಿ ಸಮಸ್ಯೆ ಕೊಹ್ಲಿ ಸೈನ್ಯಕ್ಕೆ ತೊಡಕಾಗಿದೆ.


ಚೆನ್ನೈ(ಡಿ.14): ವೆಸ್ಟ್ ಇಂಡೀಸ್ ವಿರುದ್ದದ ಏಕದಿನ ಸರಣಿಗೆ ಟೀಂ ಇಂಡಿಯಾ ಚೆನ್ನೈನಲ್ಲಿ ಅಭ್ಯಾಸ ನಡೆಸುತ್ತಿದೆ. ಈಗಾಗಲೇ ವಿಂಡೀಸ್ ವಿರುದ್ದದ ಟಿ20 ಸರಣಿ ಗೆದ್ದಿರುವ ಭಾರತ, ಇದೀಗ ಏಕದಿನ ಸರಣಿಯಲ್ಲೂ ಗೆಲುವನ್ನ ಎದುರನೋಡುತ್ತಿದೆ. ಆದರೆ ಸರಣಿ ಆರಂಭಕ್ಕೂ ಮುನ್ನವೇ ಟೀಂ ಇಂಡಿಯಾ ವೇಗಿ ಭುವನೇಶ್ವರ್ ಕುಮಾರ್ ತಂಡದಿಂದ ಹೊರಬಿದಿದ್ದಾರೆ.

ಇದನ್ನೂ ಓದಿ: INDvWI ಏಕದಿನ; ಆರಂಭಿಕನಾಗಿ ಡೆಬ್ಯು ಮಾಡ್ತಾರಾ ಕನ್ನಡಿಗ ಮಯಾಂಕ್?

Tap to resize

Latest Videos

ಗಾಯಗೊಂಡಿರುವ ಭವನೇಶ್ವರ್ ಕುಮಾರ್ ತಂಡದಿಂದ ಹೊರಬಿದ್ದಿದ್ದು, ಭುವಿ ಬದಲಿಗೆ ಮುಂಬೈ ವೇಗಿ ಶಾರ್ದೂಲ್ ಠಾಕೂರ್‌ಗೆ ಅವಕಾಶ ನೀಡಲಾಗಿದೆ. ಇತ್ತೀಚೆಗಷ್ಟೇ ಇಂಜುರಿಯಿಂದ ಚೇತರಿಸಿಕೊಂಡು ವೆಸ್ಟ್ ಇಂಡೀಸ್ ವಿರುದ್ಧದ ಸರಣಿಗೆ ಆಯ್ಕೆಯಾಗಿದ್ದ ಭುವನೇಶ್ವರ್ ಮತ್ತೆ ಗಾಯಗೊಂಡಿದ್ದಾರೆ.

ಇದನ್ನೂ ಓದಿ: ತಂಡಕ್ಕೆ ಮರಳುತ್ತಿದ್ದಾರೆ ಯಶಸ್ವಿ ವೇಗಿ ಜಸ್ಪ್ರೀತ್ ಬುಮ್ರಾ!

2019ರಲ್ಲಿ ಭುವನೇಶ್ವರ್ ಟೀಂ ಇಂಡಿಯಾದಿಂದ ಹೊರುಗಳಿದಿದ್ದೇ ಹೆಚ್ಚು. ಸತತ ಇಂಜುರಿ ಸಮಸ್ಯೆಗೆ ಭುವಿ ಕರಿಯರ್‌ಗೆ ತೊಡಕಾಗಿದೆ. ಭುವಿ ಬದಲಿಗೆ ಶಾರ್ದೂಲ್ ಠಾಕೂರ್ ಚಾನ್ಸ್ ಗಿಟ್ಟಿಸಿಕೊಂಡಿದ್ದಾರೆ. ಈ ಮೂಲಕ ಸದ್ಯ ಟೀಂ ಇಂಡಿಯಾದಲ್ಲಿ ಮುಂಬೈ ಆಟಗಾರರ ಸಂಖ್ಯೆ ಐದಕ್ಕೇರಿದೆ.

ಸ್ಫೋಟಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮಾ, ಶ್ರೇಯಸ್ ಅಯ್ಯರ್, ಕೇದಾರ್ ಜಾಧವ್, ಶಿವಂ ದುಬೆ ಹಾಗೂ ಇದೀಗ   ಶಾರ್ದೂಲ್ ಠಾಕೂರ್, ಒಟ್ಟುಐವರು ಆಟಗಾರರು ಟೀಂ ಇಂಡಿಯಾದಲ್ಲಿ ಸ್ಥಾನ ಗಿಟ್ಟಿಸಿಕೊಂಡಿದ್ದಾರೆ. 
 

click me!