ಟಿ20 ಸರಣಿಯಲ್ಲಿ ಇಂಗ್ಲೆಂಡ್‌ಗೆ ಶಾಕ್‌ ಕೊಡಲು ಹರ್ಮನ್‌ಪ್ರೀತ್ ಕೌರ್ ಪಡೆ ರೆಡಿ

By Suvarna NewsFirst Published Jul 9, 2021, 9:47 AM IST
Highlights

* ಭಾರತ ಹಾಗೂ ಇಂಗ್ಲೆಂಡ್ ಮಹಿಳಾ ತಂಡಗಳ ಟಿ20 ಸರಣಿಗೆ ಕ್ಷಣಗಣನೆ

* ಏಕದಿನ ಸರಣಿ ಸೋಲಿಗೆ ಸೇಡು ತೀರಿಸಿಕೊಳ್ಳುತ್ತಾ ಹರ್ಮನ್‌ಪ್ರೀತ್ ಕೌರ್ ಪಡೆ

* ಶಫಾಲಿ ವರ್ಮಾ, ಮಂಧನಾ ಮೇಲೆ ಎಲ್ಲರ ಚಿತ್ತ

ನಾರ್ಥಾಂಪ್ಟನ್(ಜು.09)‌: ಏಕದಿನ ಸರಣಿ ಸೋಲಿನ ಸೇಡನ್ನು ತೀರಿಸಿಕೊಳ್ಳುವ ತವಕದಲ್ಲಿರುವ ಶುಕ್ರವಾರ ಇಂಗ್ಲೆಂಡ್‌ ವಿರುದ್ಧ ಮೊದಲ ಟಿ-20 ಪಂದ್ಯವನ್ನಾಡಲು ಸಜ್ಜಾಗಿದೆ. 

ಮಿಥಾಲಿ ರಾಜ್‌ ಏಕದಿನ ಸರಣಿಯಲ್ಲಿ ಸ್ಥಿರತೆ ಕಾಯ್ದುಕೊಂಡಿದ್ದು, ಉತ್ತಮ ಪ್ರದರ್ಶನ ನೀಡಿದ್ದರು. ಆದರೆ ಟಿ20 ತಂಡದಲ್ಲಿ ಮಿಥಾಲಿ ಸ್ಥಾನ ಪಡೆದಿಲ್ಲ. ಇನ್ನು ಏಕದಿನ ಸರಣಿಯಲ್ಲಿ ಭಾರತದ ತಂಡದ ಆಟಗಾರ್ತಿಯರ ಬ್ಯಾಟ್‌ನಿಂದ ನಿರೀಕ್ಷಿತ ಪ್ರಮಾಣದಲ್ಲಿ ರನ್‌ ಹರಿದುಬಂದಿಲ್ಲ. ಆರಂಭಿಕರಾದ ಶಫಾಲಿ ವರ್ಮಾ, ಸ್ಮೃತಿ ಮಂಧಾನ ಸುಧಾರಿತ ಪ್ರದರ್ಶನ ನೀಡಬೇಕಿದೆ. ಮಿಥಾಲಿ ರಾಜ್ ಅನುಪಸ್ಥಿತಿಯಲ್ಲಿ ಹರ್ಮನ್‌ಪ್ರೀತ್ ಕೌರ್ ಭಾರತೀಯ ಮಹಿಳಾ ಕ್ರಿಕೆಟ್ ತಂಡವನ್ನು ಮುನ್ನಡೆಸಲಿದ್ದಾರೆ.

captain is confident of getting back to form with the bat in the T20I series against England 💪 💪 pic.twitter.com/Ta6x38EdU1

— BCCI Women (@BCCIWomen)

ಏಕೈಕ ಟೆಸ್ಟ್ ಹಾಗೂ ಏಕದಿನ ಸರಣಿಯಲ್ಲಿ ಆಲ್ರೌಂಡ್ ಪ್ರದರ್ಶನ ತೋರಿ ಗಮನ ಸೆಳೆದಿದ್ದ ಸ್ನೇಹ್‌ ರಾಣಾ ಇದೀಗ ಟಿ20 ಪರಿಸ್ಥಿತಿಗೆ ಹೇಗೆ ಒಗ್ಗಿಕೊಳ್ಳುತ್ತಾರೆ ಎಂಬುದನ್ನು ಕಾದುನೋಡಬೇಕಿದೆ. ಯುಟ ಆಟಗಾರ್ತಿ ರಿಚಾ ಘೋಷ್‌ ಮೇಲೂ ಹೆಚ್ಚಿನ ನೀರಿಕ್ಷೆಯಿದೆ. ಬೌಲಿಂಗ್‌ ವಿಭಾಗದಲ್ಲೂ ಸಾಕಷ್ಟು ಸುಧಾರಣೆ ಅಗತ್ಯವಿದೆ. ತಂಡದ ನಾಯಕಿ ಹರ್ಮನ್‌ಪ್ರೀತ್ ಕೌರ್ ಇಂಗ್ಲೆಂಡ್ ಪ್ರವಾಸದಲ್ಲಿ ದಯಾನೀಯ ಬ್ಯಾಟಿಂಗ್ ವೈಫಲ್ಯ ಅನುಭವಿಸಿದ್ದಾರೆ. ಏಕೈಕ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 4 ಹಾಗೂ ಎರಡನೇ ಇನಿಂಗ್ಸ್‌ನಲ್ಲಿ 8 ರನ್‌ ಬಾರಿಸಿದ್ದ ಕೌರ್, ಏಕದಿನ ಸರಣಿಯಲ್ಲಿ 01, 19 ಹಾಗೂ 16 ರನ್‌ ಬಾರಿಸಿದ್ದರು. 

ಮಹಿಳಾ ಅಂತಾರಾಷ್ಟ್ರೀಯ ಕ್ರಿಕೆಟ್‌ನಲ್ಲಿ ದಾಖಲೆ ಬರೆದ ಮಿಥಾಲಿ ರಾಜ್..!

ಭಾರತ ಮಹಿಳಾ ಕ್ರಿಕೆಟ್ ತಂಡವು ಇದುವರೆಗೂ ಇಂಗ್ಲೆಂಡ್ ಎದುರು 19 ಟಿ20 ಪಂದ್ಯಗಳನ್ನಾಡಿದ್ದು, ಕೇವಲ 4 ಪಂದ್ಯಗಳಲ್ಲಿ ಮಾತ್ರ ಗೆಲುವಿನ ನಗೆ ಬೀರಿದೆ. ಇನ್ನು 15 ಪಂದ್ಯಗಳಲ್ಲಿ ಭಾರತೀಯ ಮಹಿಳಾ ಕ್ರಿಕೆಟ್ ತಂಡ ಸೋಲಿನ ಕಹಿಯುಂಡಿದೆ. ಇಂಗ್ಲೆಂಡ್ ನೆಲದಲ್ಲಿ ಆತಿಥೇಯರೆದುರು 5 ಟಿ20 ಪಂದ್ಯಗಳನ್ನಾಡಿದ್ದು, ಕೇವಲ ಒಂದು ಪಂದ್ಯದಲ್ಲಿ ಮಾತ್ರ ಭಾರತ ತಂಡ ಗೆಲುವಿನ ಕೇಕೆ ಹಾಕಿದೆ.

ಪಂದ್ಯ ಆರಂಭ: ರಾತ್ರಿ 11
ನೇರ ಪ್ರಸಾರ: ಸೋನಿ ಸ್ಪೋರ್ಟ್ಸ್‌

click me!