ಲಂಡನ್(ಆ.14): ಇಂಗ್ಲೆಂಡ್ ಅಭಿಮಾನಿಗಳು ಮತ್ತೆ ಎಲ್ಲೆ ಮೀರಿದ್ದಾರೆ. ಈಗಾಗಲೇ ಕ್ರಿಕೆಟ್ ಮೈದಾನದಲ್ಲಿ ಅಸಭ್ಯ ವರ್ತನೆ, ನಿಯಮ ಉಲ್ಲಂಘನೆ, ಜನಾಂಗೀಯ ನಿಂದನೆ ಮೂಲಕ ಭಾರಿ ವಿರೋಧಕ್ಕೆ ಗುರಿಯಾಗಿರುವ ಇಂಗ್ಲೆಂಡ್ ಅಭಿಮಾನಿಗಳು ಭಾರತ ವಿರುದ್ಧದ ಟೆಸ್ಟ್ ಪಂದ್ಯದಲ್ಲೂ ಇದೇ ವರ್ತನೆ ಮುಂದುವರಿಸಿದ್ದಾರೆ. ಫೀಲ್ಡಿಂಗ್ ಮಾಡುತ್ತಿದ್ದ ಕೆಎಲ್ ರಾಹುಲ್ ಮೇಲೆ ಬಿಯರ್ ಬಾಟಲಿ ಕಾರ್ಕ್ ಎಸೆದು ಆಕ್ರೋಶ ಹೊರಹಾಕಿದ್ದಾರೆ.
ಲಾರ್ಡ್ಸ್ ಮೈದಾನದಲ್ಲಿ ಕೆಎಲ್ ರಾಹುಲ್ ಆಕರ್ಷಕ ಶತಕ, ಬೃಹತ್ ಮೊತ್ತದತ್ತ ಟೀಂ ಇಂಡಿಯಾ!
undefined
ಲಾರ್ಡ್ಸ್ ಟೆಸ್ಟ್ ಪಂದ್ಯ 3ನೇ ದಿನ ಇಂಗ್ಲೆಂಡ್ ಮೇಲುಗೈ ಸಾಧಿಸಿದೆ. ನಾಯಕ ಜೋ ರೂಟ್ ಶತಕದಿಂದ ಇಂಗ್ಲೆಂಡ್ ದಿಟ್ಟ ತಿರುಗೇಟು ನೀಡಿದೆ. ಆದರೆ ಇಂಗ್ಲೆಂಡ್ ಅಭಿಮಾನಿಗಳ ಆಕ್ರೋಶ ತಣ್ಣಗಾಗಿಲ್ಲ. ಕಾರಣ ಟೀಂ ಇಂಡಿಯಾ ಪರ ದಿಟ್ಟ ಹೋರಾಟ ನೀಡಿದ ರಾಹುಲ್ ಸೆಂಚುರಿ ಸಿಡಿಸಿ ಆಸರೆಯಾಗಿದ್ದರು. ರಾಹುಲ್ ಕಠಿಣ ಹೋರಾಟವನ್ನು ಶ್ಲಾಘಿಸುವ ಬದಲು, ಬೌಂಡರಿ ಲೈನ್ ಬಳಿ ಫೀಲ್ಡಿಂಗ್ ವೇಳೆ ಬಿಯರ್ ಬಾಟಲಿ ಮುಚ್ಚಳ ಎಸೆದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಲ ಬಿಯರ್ ಬಾಟಲಿ ಕಾರ್ಕ್‌ಗಳು ರಾಹುಲ್‌ಗೆ ತಾಗಿದೆ. ಇದನ್ನು ಗಮನಿಸಿದ ನಾಯಕ ವಿರಾಟ್ ಕೊಹ್ಲಿ ಮೈದಾನದಲ್ಲಿರುವ ಕಾರ್ಕ್ ಹೊರಗೆಸೆಯುವಂತೆ ರಾಹುಲ್‌ಗೆ ಸೂಚಿಸಿದ್ದಾರೆ. ಇದೇ ವೇಳೆ ಅಂಪೈರ್ ಮಧ್ಯ ಪ್ರವೇಶಿಸಿ, ಭದ್ರತಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ.
ಗೆಳತಿಯಿಂದ ಹಾರ್ಟ್, ಮಾವನಿಂದ ಭಾವಿ ಅಳಿಯನಿಗೆ 'ಬಾಬಾ' ಗಿಫ್ಟ್!
ಇಂಗ್ಲೆಂಡ್ 68 ಓವರ್ ವೇಳೆ ಅಭಿಮಾನಿಗಳು ಅನುಚಿತ ವರ್ತನೆ ತೋರಿದ್ದಾರೆ. ಇಂಗ್ಲೆಂಡ್ ಅಭಿಮಾನಿಗಳ ವರ್ತನೆಗೆ ಆಕ್ರೋಶ ವ್ಯಕ್ತವಾಗಿದೆ. ಕ್ರಿಕೆಟ್ ಜನಕ ರಾಷ್ಟ್ರದ ಅಭಿಮಾನಿಗಳು ಈ ರೀತಿ ವರ್ತಿಸುವುದು ಬೇಸರ ತಂದಿದೆ. ನಿಯಮ ಉಲ್ಲಂಘಿಸಿದವರನ್ನು ಶಿಕ್ಷಿಸಿ ಎಂದು ಆಗ್ರಹಿಸಿದ್ದಾರೆ.
This is Unacceptable. England crowd was throwing something towards KL Rahul. pic.twitter.com/6EeCdF0mHF
— SillyTweets (@SillyTweets13)England crowds throw beer corks in the ground near KL Rahul at 3rd man , Virat Kohli said Rahul to throw it away from the ground.
— Diwakar Kumar¹⁸ (@diwakarkumar47)English Crowds have thrown Beer Corks at Indian Players 😬😳 pic.twitter.com/GnIRLX88Sl
— Ishaan (@Ishaan13891693)