ಇಂಗ್ಲೆಂಡ್‌ಗೆ 368 ರನ್ ಟಾರ್ಗೆಟ್ ನೀಡಿದ ಭಾರತ, ಕುತೂಹಲ ಘಟ್ಟದತ್ತ ಓವಲ್ ಟೆಸ್ಟ್!

By Suvarna NewsFirst Published Sep 5, 2021, 9:52 PM IST
Highlights
  • ಓವಲ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ದಿಟ್ಟ ಹೋರಾಟ
  • 2ನೇ ಇನ್ನಿಂಗ್ಸ್‌ನಲ್ಲಿ 466 ರನ್‌ಗೆ ಕೊಹ್ಲಿ ಸೈನ್ಯ ಆಲೌಟ್
  • ಓವಲ್ ಟೆಸ್ಟ್ ಗೆಲ್ಲಲು ಇಂಗ್ಲೆಂಡ್‌‌ಗೆ 368 ರನ್ ಟಾರ್ಗೆಟ್
     

ಲಂಡನ್(ಸೆ.04): ಓವಲ್ ಟೆಸ್ಟ್ ಪಂದ್ಯದ ಮೊದಲ ಇನ್ನಿಂಗ್ಸ್‌ನಲ್ಲಿ ಕಳಪೆ ಪ್ರದರ್ಶನ ನೀಡಿದ ಟೀಂ ಇಂಡಿಯಾ 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ನೀಡೋ ಮೂಲಕ ಇಂಗ್ಲೆಂಡ್ 368 ರನ್ ಟಾರ್ಗೆಟ್ ನೀಡಿದೆ. ಟೀಂ ಇಂಡಿಯಾ ಸ್ಪರ್ಧಾತ್ಮಕ ಗುರಿ ನೀಡಿದ ಬೆನ್ನಲ್ಲೋ ಓವಲ್ ಟೆಸ್ಟ್ ಕುತೂಹಲ ಇಮ್ಮಡಿಗೊಂಡಿದೆ.

ಇನ್ನಿಂಗ್ಸ್ ಹಿನ್ನಡೆಯೊಂದಿಗೆ ದ್ವಿತೀಯ ಇನ್ನಿಂಗ್ಸ್‌ನಲ್ಲಿ ಟೀಂ ಇಂಡಿಯಾ 466 ರನ್‌ಗಳಿಗೆ ಆಲೌಟ್ ಆಯಿತು.   ರೋಹಿತ್ ಶರ್ಮಾ ಶತಕ, ಕೆಎಲ ರಾಹುಲ್ 46 ರನ್, ಚೇತೇಶ್ವರ್ ಪೂಜಾರ 61 ರನ್ ಕಾಣಿಕೆ ನೀಡಿದರು. ಇತ್ತ ನಾಯಕ ವಿರಾಟ್ ಕೊಹ್ಲಿ 44 ರನ್ ಸಿಡಿಸಿ ಔಟಾದರು. ಆದರೆ ರವೀಂದ್ರ ಜಡೇಜಾ 17 ರನ್ ಸಿಡಿಸಿ ನಿರಾಸೆ ಮೂಡಿಸಿದರು.

ಉಪನಾಯಕ ಅಜಿಂಕ್ಯ ರಹಾನೆ ಡಕೌಟ್ ಆಗೋ ಮೂಲಕ ಟೀಂ ಇಂಡಿಯಾ ಆತಂಕ ಹೆಚ್ಚಿಸಿದರು. ರಿಷಬ್ ಪಂತ್ ಹಾಗೂ ಶಾರ್ದೂಲ್ ಠಾಕೂರ್ ಜೊತೆಯಾಟ ಟೀಂ ಇಂಡಿಯಾಗೆ ನೆರವಾಯಿತು. ಪಂತ್ ಅರ್ಧಶತಕ ಸಿಡಿಸಿದರೆ, ಠಾಕೂರ್ 60 ರನ್ ಸಿಡಿಸಿ ಔಟಾದರು.

ಉಮೇಶ್ ಯಾದವ್ 25 ಹಾಗೂ ಜಸ್ಪ್ರೀತ್ ಬುಮ್ರಾ 24 ರನ್ ನೆರವಿನೊಂದಿಗೆ ಟೀಂ ಇಂಡಿಯಾ 466 ರನ್‌ಗೆ ಆಲೌಟ್ ಆಯಿತು. 368 ರನ್ ಟಾರ್ಗೆಟ್ ಪಡೆದ ಇಂಗ್ಲೆಂಡ್ 2ನೇ ಇನ್ನಿಂಗ್ಸ್ ಆರಂಭಿಸಿದೆ. ರೋರಿ ಬರ್ನ್ಸ್ ಹಾಗೂ ಹಸೀಬ್ ಹಮೀದ್ ಎಚ್ಚರಿಕೆಯ ಆರಂಭ ನೀಡಿದ್ದಾರೆ.

click me!