ಚೊಚ್ಚಲ ಟೆಸ್ಟ್‌ನ 2 ಇನಿಂಗ್ಸಲ್ಲಿ ಅರ್ಧಶತಕ: ಶಫಾಲಿ ವರ್ಮಾ ದಾಖಲೆ

By Suvarna NewsFirst Published Jun 19, 2021, 9:19 AM IST
Highlights

* ಇಂಗ್ಲೆಂಡ್ ಎದುರು ಅಬ್ಬರಿಸಿದ ಭಾರತದ ಯುವ ಬ್ಯಾಟರ್ ಶಫಾಲಿ ವರ್ಮಾ

* ಚೊಚ್ಚಲ ಟೆಸ್ಟ್‌ ಪಂದ್ಯದಲ್ಲೇ 2 ಅರ್ಧಶತಕ ಚಚ್ಚಿದ ಶಫಾಲಿ ವರ್ಮಾ

* 2 ಟೆಸ್ಟ್ ಅರ್ಧಶತಕ ಬಾರಿಸಿದ ಎರಡನೇ ಅತಿ ಕಿರಿಯ ಕ್ರಿಕೆಟರ್ ದಾಖಲೆ ಶಫಾಲಿ ಪಾಲು

ಬ್ರಿಸ್ಟಲ್(ಜೂ.19): ಯುವ ಮಹಿಳಾ ಕ್ರಿಕೆಟರ್ ಶಫಾಲಿ ವರ್ಮಾ, ಪಾದಾರ್ಪಣಾ ಟೆಸ್ಟ್‌ನ ಎರಡೂ ಇನಿಂಗ್ಸ್‌ಗಳಲ್ಲಿ ಅರ್ಧಶತಕ ಬಾರಿಸಿದ ಭಾರತದ ಮೊದಲ ಮಹಿಳಾ ಆಟಗಾರ್ತಿ ಎನ್ನುವ ದಾಖಲೆ ಬರೆದಿದ್ದಾರೆ. 

ಇಂಗ್ಲೆಂಡ್ ವಿರುದ್ದ ಇಲ್ಲಿ ನಡೆಯುತ್ತಿರುವ ಏಕೈಕ ಟೆಸ್ಟ್‌ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ 96 ರನ್‌ ಗಳಿಸಿದ್ದ ಶಫಾಲಿ , ಎರಡನೇ ಇನಿಂಗ್ಸ್‌ನಲ್ಲಿ 55 ರನ್‌ ಗಳಿಸಿ ಅಜೇಯರಾಗುಳಿದಿದ್ದು, ಕೊನೆಯ ದಿನದಾಟಕ್ಕೆ ಕ್ರೀಸ್ ಕಾಯ್ದುಕೊಂಡಿದ್ದಾರೆ. ಇದಷ್ಟೇ ಅಲ್ಲದೇ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ ಎರಡನೇ ಅತಿ ಕಿರಿಯ ಕ್ರಿಕೆಟರ್ ಎನ್ನುವ ದಾಖಲೆಯೂ ಶಫಾಲಿ ಪಾಲಾಗಿದೆ. ಸಚಿನ್ ತೆಂಡುಲ್ಕರ್ 17 ವರ್ಷ 107 ದಿನಕ್ಕೆ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಬಾರಿಸಿದ್ದರು. ಇದೀಗ ಶಫಾಲಿ 17 ವರ್ಷ 139 ದಿನಗಳಾಗಿದ್ದಾಗ ಎರಡೂ ಇನಿಂಗ್ಸ್‌ನಲ್ಲಿ ಅರ್ಧಶತಕ ಚಚ್ಚಿ ಎರಡನೇ ಸ್ಥಾನಕ್ಕೆ ಲಗ್ಗೆಯಿಟ್ಟಿದ್ದಾರೆ.

Shafali Verma's sensational Test debut keeps on getting better ✨

The opener scores her second half-century of the match!

Will she carry on and get her maiden hundred? | https://t.co/PuEC6vGGgc pic.twitter.com/5RS2gqxplz

— ICC (@ICC)

ಮಹಿಳಾ ಟೆಸ್ಟ್ ಕ್ರಿಕೆಟ್‌: ಭಾರತದ ಮೇಲೆ ಫಾಲೋ ಆನ್ ಹೇರಿದ ಇಂಗ್ಲೆಂಡ್

ಭಾರತ ಮೊದಲ ಇನಿಂಗ್ಸ್‌ನಲ್ಲಿ ವಿಕೆಟ್ ನಷ್ಟವಿಲ್ಲದೇ 167 ರನ್‌ ಕಲೆಹಾಕಿತ್ತು. ಇದಾದ ಬಳಿಕ ತನ್ನ ಖಾತೆಗೆ ಕೇವಲ 64 ರನ್‌ಗಳಿಸುವಷ್ಟರಲ್ಲಿ ತನ್ನೆಲ್ಲಾ 10 ವಿಕೆಟ್ ಕಳೆದುಕೊಂಡು 231 ರನ್ ಮಾತ್ರ ಗಳಿಸಿತು. ಇದರ ಬೆನ್ನಲ್ಲೇ ಇಂಗ್ಲೆಂಡ್ ಭಾರತದ ಮೇಲೆ ಫಾಲೋ ಆನ್ ಹೇರಿತು. ಸದ್ಯ ಎರಡನೇ ಇನಿಂಗ್ಸ್‌ನ ಮೂರನೇ ದಿನದಾಟದಂತ್ಯದ ವೇಳೆಗೆ ಮಿಥಾಲಿ ರಾಜ್ ಪಡೆ ಒಂದು ವಿಕೆಟ್ ಕಳೆದುಕೊಂಡು 83 ರನ್‌ ಬಾರಿಸಿದ್ದು, ಇನ್ನೂ 82 ರನ್‌ಗಳ ಹಿನ್ನೆಡೆಯಲ್ಲಿದೆ. ಇಂಗ್ಲೆಂಡ್ ಮೊದಲ ಇನಿಂಗ್ಸ್‌ನಲ್ಲಿ 396/9 ರನ್‌ ಬಾರಿಸಿ ಇನಿಂಗ್ಸ್‌ ಡಿಕ್ಲೇರ್ ಮಾಡಿಕೊಂಡಿದೆ. 

click me!