ಕಿಂಗ್‌ ಕೊಹ್ಲಿಯನ್ನ ಎದುರು ಹಾಕಿಕೊಂಡ ಗಂಭೀರ್​ಗೆ ಸಂಕಷ್ಟ..!

Published : Jul 10, 2023, 05:32 PM IST
ಕಿಂಗ್‌ ಕೊಹ್ಲಿಯನ್ನ ಎದುರು ಹಾಕಿಕೊಂಡ ಗಂಭೀರ್​ಗೆ ಸಂಕಷ್ಟ..!

ಸಾರಾಂಶ

ಇನ್ನೂ ನಿಂತಿಲ್ಲ ವಿರಾಟ್ ಕೊಹ್ಲಿ ಹಾಗೂ ಗೌತಮ್ ಗಂಭೀರ್ ನಡುವಿನ ಕಿರಿಕ್ 16ನೇ ಆವೃತ್ತಿಯ ಐಪಿಎಲ್ ಟೂರ್ನಿಯಲ್ಲೂ ಕೊಹ್ಲಿ ಕೆಣಕ್ಕಿದ್ದ ಗಂಭೀರ್ ಇದೀಗ ಗಂಭೀರ್‌ಗೆ ಲಖನೌ ಫ್ರಾಂಚೈಸಿ ಗೇಟ್‌ ಪಾಸ್ ನೀಡುವ ಸಾಧ್ಯತೆ

ಬೆಂಗಳೂರು(ಜು.10): ವಿರಾಟ್ ಕೊಹ್ಲಿ.! ಇದು  ಬರೀ ಹೆಸರಲ್ಲ ಕ್ರಿಕೆಟ್ ದುನಿಯಾದ ಬಿಗ್ಗೆಸ್ಟ್ ಬ್ರ್ಯಾಂಡ್​. ಭಾರತ ಗೆಲ್ಲಬೇಕು ಅಂದ್ರು, ಕೊಹ್ಲಿ ಅಬ್ಬರಿಸಬೇಕು. BCCIಗೆ ಕೋಟಿ, ಕೋಟಿ ಆದಾಯ ಹರಿದು ಬರಬೇಕಂದ್ರು, ವಿರಾಟ್ ಫೀಲ್ಡ್​ಗಿಳಿಯಲೇಬೇಕು ಆಡಲೇಬೇಕು. ಇದೇ ಕಾರಣಕ್ಕೆ ಕೊಹ್ಲಿಯನ್ನ ಯಾರೂ ಎದುರು ಹಾಕಿಕೊಳ್ಳಲ್ಲ. ಆದ್ರೆ, ಟೀಂ ಇಂಡಿಯಾದ  ಮಾಜಿ ಆಟಗಾರ ಗೌತಮ್​ ಗಂಭೀರ್,  ಕೊಹ್ಲಿ ವಿರುದ್ಧ ತೊಡೆತಟ್ಟಿ ತಮ್ಮ ಸ್ಥಾನಕ್ಕೆ ಕುತ್ತು ತಂದುಕೊಂಡಿದ್ದಾರೆ. 

ಹೌದು, IPL​ನಲ್ಲಿ ಗೌತಮ್ ಗಂಭೀರ್, ಲಖನೌ ಸೂಪರ್​ ಜೈಂಟ್ಸ್​​ ತಂಡದ ಮೆಂಟರ್​ ಆಗಿದ್ದಾರೆ. ಆದ್ರೀಗ, ​ಗಂಭೀರ್ ಸ್ಥಾನಕ್ಕೆ ಕುತ್ತು ಬಂದಿದೆ. ಮೆಂಟರ್​ ಸ್ಥಾನದಿಂದ ಗಂಭೀರ್​ಗೆ ಗೇಟ್​ಪಾಸ್ ನೀಡಲು ಲಖನೌ ಫ್ರಾಂಚೈಸಿ ಚಿಂತಿಸ್ತಿದೆ. ವಿರಾಟ್ ಕೊಹ್ಲಿ ಜೊತೆಗಿನ ಗಂಭೀರ್ ಜಗಳವೇ ಇದಕ್ಕೆ ಪ್ರಮುಖ ಕಾರಣ ಎನ್ನಲಾಗಿದೆ. 

ಈ ಬಾರಿಯ IPLನಲ್ಲಿ ಗೌತಮ್ ಗಂಭೀರ್ ಅನಗತ್ಯವಾಗಿ RCB ಅಭಿಮಾನಿಗಳನ್ನ ಕೆಣಕಿದ್ರು. ಲಖನೌದಲ್ಲಿ ನಡೆದ ಪಂದ್ಯದಲ್ಲಿ ವಿರಾಟ್ ಕೊಹ್ಲಿ ಗಂಭೀರ್​ಗೆ ಮುಟ್ಟಿ ನೋಡಿಕೊಳ್ಳುವಂತೆ ಉತ್ತರ ನೀಡಿದ್ರು. ಇದರಿಂದ ಗಂಭೀರ್​ ಕೊಹ್ಲಿ ವಿರುದ್ಧ ಕಾಲು ಕೆರೆದುಕೊಂಡು ಜಗಳಕ್ಕಿಳಿದಿದ್ರು. ಇದು ಕೊಹ್ಲಿ ಅಭಿಮಾನಿಗಳು ಮತ್ತಷ್ಟು ಕೆರಳುವಂತೆ ಮಾಡ್ತು. ಲಖನೌ ತಂಡದ ಇಮೇಜ್​ಗು​ ದೊಡ್ಡ ಪೆಟ್ಟು ಬಿತ್ತು. 

ಗಂಭೀರ್​- ಕೊಹ್ಲಿ ಜಗಳದ ನಂತರ ಪಾತಾಳಕ್ಕೆ ಕುಸಿದ LSG ಫ್ಯಾನ್​ಬೇಸ್..!

ಯೆಸ್, ಗಂಭೀರ್- ಕೊಹ್ಲಿ ಜಗಳದ ನಂತರ ಲಕ್ನೋ ತಂಡದ ಫ್ಯಾನ್​ ಬೇಸ್​ ಪಾತಾಳಕ್ಕೆ ಕುಸಿದಿದೆ. ತಂಡವನ್ನ ಅಭಿಮಾನಿಸುವವರಿಗಿಂತ, ದ್ವೇಷ ಮಾಡುವವರ ಸಂಖ್ಯೆಯೇ ಹೆಚ್ಚಾಗಿದೆ. ಇದರಿಂದ ಎಚ್ಚೆತ್ತುಕೊಂಡಿರೋ ಫ್ರಾಂಚೈಸಿ, ಸೋಷಿಯಲ್ ಮೀಡಿಯಾ ಇನ್​ಚಾರ್ಜ್​ಗೆ ಗೇಟ್​ಪಾಸ್ ನೀಡಿದೆ. ಈಗ ಗಂಭೀರ್​ಗೂ ಗೇಟ್​ಪಾಸ್ ನೀಡಲು ಯೋಚಿಸ್ತಿದೆ. ಈ ವರ್ಷ ನಡೆಯುವ ಐಪಿಎಲ್ ಮಿನಿ ಆಕ್ಷನ್​ಗು ಮುನ್ನ ಗಂಭಿರ್​ನ ಮನೆಗೆ ಕಳಿಸಲು ಮುಂದಾಗಿದೆ. ಫ್ಯಾನ್​ಬೇಸ್ ಜೊತೆಗೆ ಕೊಹ್ಲಿ ಜೊತೆಗಿನ ಸಂಬಂಧವನ್ನ ಉತ್ತಮ ಪಡಿಸಿಕೊಳ್ಳೋದು ಕೂಡ  ಲಖನೌ ಫ್ರಾಂಚೈಸಿ ಯೋಚನೆಯಾಗಿದೆ. 

ಚೆನ್ನೈಗೆ ಬಂದಿಳಿದ ಎಂ ಎಸ್ ಧೋನಿ; ಹೂ ಮಳೆ ಸುರಿಸಿ ಸ್ವಾಗತಿಸಿದ ಫ್ಯಾನ್ಸ್‌..! ವಿಡಿಯೋ ವೈರಲ್

ಅಲ್ಲದೇ, ಗಂಭೀರ್ ಕಾರ್ಯವೈಖರಿ ಬಗ್ಗೆಯೂ ಫ್ರಾಂಚೈಸಿ ತೃಪ್ತಿ ಹೊಂದಿಲ್ಲ. ಗೌತಮ್ ಗಂಭೀರ್ ಕೋಚ್ ಆ್ಯಂಡಿ ಫ್ಲವರ್ ಜೊತೆ ಚರ್ಚಿಸದೇ ಏಕಪಕ್ಷೀಯವಾಗಿ ನಿರ್ಧಾರಗಳನ್ನು ತೆಗೆದುಕೊಳ್ಳುತ್ತಿದ್ದಾರೆ ಅನ್ನೋದು, ಫ್ರಾಂಚೈಸಿಯ ಅಸಮಾಧಾನಕ್ಕೆ ಕಾರಣವಾಗಿದೆ.  ಒಟ್ಟಿನಲ್ಲಿ ಗಂಭೀರ್​ - ಕೊಹ್ಲಿ ಜಗಳದಿಂದಾಗಿ ಲಖನೌ ಫ್ರಾಂಚೈಸಿ ಭಾರಿ ನಷ್ಟವಾಗಿರೋದಂತೂ ನಿಜ. ವಿರಾಟ್ ಕೊಹ್ಲಿ ಅಭಿಮಾನಿಗಳು LSG ಹೆಸರು ಕೇಳಿದ್ರೆ ಉರಿದು ಬೀಳ್ತಿದ್ದಾರೆ. ಇದರಿಂದ ಫ್ರಾಂಚೈಸಿ ಗಂಭೀರ್​ನ ಮೆಂಟರ್ ಸ್ಥಾನದಿಂದ ತೆಗೆದು ಹಾಕಿ, ಕೊಹ್ಲಿ ಅಭಿಮಾನಿಗಳ ಸಮಾಧಾನ ಪಡಿಸೋ ಪ್ಲಾನ್ ಮಾಡಿದೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ದಕ್ಷಿಣ ಆಫ್ರಿಕಾ ಎದುರಿನ ಏಕದಿನ ಸರಣಿ ಗೆಲುವಿನ ಬೆನ್ನಲ್ಲೇ ಐಸಿಸಿ ರ್‍ಯಾಂಕಿಂಗ್‌ ಪ್ರಕಟ; ಕೊಹ್ಲಿಗೆ ಜಾಕ್‌ಪಾಟ್!
ತಲೆಗೆ 20 ಹೊಲಿಗೆ, ಭುಜಕ್ಕೆ ಬಲವಾದ ಪೆಟ್ಟು! ಕ್ರಿಕೆಟ್ ತಂಡಕ್ಕೆ ಆಯ್ಕೆ ಮಾಡದ್ದಕ್ಕೆ ಕೋಚ್‌ ಮೇಲೆ ಆಟಗಾರರ ಮಾರಣಾಂತಿಕ ಹಲ್ಲೆ!