IND vs ZIM: ಭಾರತ-ಜಿಂಬಾಬ್ವೆ ನಡುವಿನ ಟಿ20 ಮ್ಯಾಚ್ ವೇಳಾಪಟ್ಟಿಯಲ್ಲಿ ಮಹತ್ವದ ಬದಲಾವಣೆ! ಈ ಹೊಸ ಚಾನೆಲ್‌ನಲ್ಲಿ ನೇರ ಪ್ರಸಾರ

Published : Jul 21, 2026, 06:42 PM IST
IND vs ZIM match

ಸಾರಾಂಶ

ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ತಂಡ ಜಿಂಬಾಬ್ವೆ ಪ್ರವಾಸ ಕೈಗೊಂಡಿದ್ದು, ಮೂರು ಪಂದ್ಯಗಳ ಟಿ20 ಸರಣಿ ಆಡಲಿದೆ. ಈ ಸರಣಿಯು ಭಾರತೀಯ ಕಾಲಮಾನ ಸಂಜೆ 4.30ಕ್ಕೆ ಆರಂಭವಾಗಲಿದ್ದು, ಲೇಖನದಲ್ಲಿ ಸರಣಿಯ ವೇಳಾಪಟ್ಟಿ, ನೇರಪ್ರಸಾರದ ಮಾಹಿತಿ ಮತ್ತು ತಂಡಗಳ ವಿವರಗಳನ್ನು ನೀಡಲಾಗಿದೆ.

ಬೆಂಗಳೂರು: ಇಂಗ್ಲೆಂಡ್ ಎದುರಿನ ಮೂರು ಪಂದ್ಯಗಳ ಏಕದಿನ ಸರಣಿ ಮುಕ್ತಾಯದ ಬೆನ್ನಲ್ಲೇ ಇದೀಗ ಭಾರತ ತಂಡವು ಇದೀಗ ಜಿಂಬಾಬ್ವೆ ಪ್ರವಾಸ ಕೈಗೊಂಡಿದೆ. ಇದೀಗ ಜಿಂಬಾಬ್ವೆ ವಿರುದ್ದ ಶ್ರೇಯಸ್ ಅಯ್ಯರ್ ನೇತೃತ್ವದ ಭಾರತ ಕ್ರಿಕೆಟ್ ತಂಡವು ಮೂರು ಪಂದ್ಯಗಳ ಟಿ20 ಸರಣಿಯನ್ನು ಆಡಲಿದೆ. ಅಂದಹಾಗೆ ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣಿಯು ಭಾರತೀಯ ಕಾಲಮಾನ ಸಂಜೆ 7 ಗಂಟೆಗೆ ಆರಂಭವಾಗುತ್ತಿಲ್ಲ. ಬದಲಾದ ಸಮಯದಲ್ಲಿ ಈ ಚುಟುಕು ಕ್ರಿಕೆಟ್ ಸರಣಿಯು ನಡೆಯಲಿದೆ. ಬನ್ನಿ ನಾವಿಂದು ಭಾರತ ಹಾಗೂ ಜಿಂಬಾಬ್ವೆ ನಡುವಿನ ಟಿ20 ಸರಣಿಯು ಎಷ್ಟು ಗಂಟೆಗೆ ಆರಂಭವಾಗಲಿದೆ. ಎರಡು ತಂಡಗಳು ಹೇಗಿವೆ ಎನ್ನುವುದರ ಕಂಪ್ಲೀಟ್ ಮಾಹಿತಿ ತಿಳಿಯೋಣ.

ಭಾರತ-ಜಿಂಬಾಬ್ವೆ ನಡುವಿನ ಟಿ20 ಸರಣಿ ಎಲ್ಲಿ? ಯಾವಾಗಿನಿಂದ ಆರಂಭ?

ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಮೊದಲ ಪಂದ್ಯವು ಜುಲೈ 23ರಿಂದ ಆರಂಭವಾಗಲಿದೆ. ಇದಾದ ಬಳಿಕ ಎರಡನೇ ಟಿ20 ಪಂದ್ಯವು ಜುಲೈ 25ರಂದು ಹಾಗೂ ಮೂರನೇ ಟಿ20 ಪಂದ್ಯವು ಜುಲೈ 26ರಂದು ನಡೆಯಲಿದೆ. ಈ ಮೂರೂ ಟಿ20 ಪಂದ್ಯಗಳು ಹರಾರೆ ಸ್ಪೋರ್ಟ್ಸ್‌ ಕ್ಲಬ್ ಮೈದಾನದಲ್ಲಿ ನಡೆಯಲಿದೆ. ಈ 3 ಪಂದ್ಯಗಳು ಭಾರತೀಯ ಕಾಲಮಾನ ಸಂಜೆ 4.30ರಿಂದ ಆರಂಭವಾಗಲಿದೆ. ಇನ್ನು ಟಾಸ್ ಪ್ರಕ್ರಿಯೆ ಸಂಜೆ 4 ಗಂಟೆಗೆ ನಡೆಯಲಿದೆ.

ಭಾರತ-ಜಿಂಬಾಬ್ವೆ ನಡುವಿನ ಟಿ20 ಸರಣಿಯನ್ನು ಎಲ್ಲಿ ವೀಕ್ಷಿಸಬಹುದು?

ಸಾಮಾನ್ಯವಾಗಿ ಭಾರತ ವಿದೇಶದಲ್ಲಿ ಆಡಲಿರುವ ಪಂದ್ಯಗಳ ನೇರಪ್ರಸಾರವನ್ನು ಸ್ಟಾರ್‌ ಸ್ಪೋರ್ಟ್ಸ್‌ ಇಲ್ಲವೇ ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್‌ನಲ್ಲಿ ವೀಕ್ಷಿಸುತ್ತಾ ಬಂದಿದ್ದೇವೆ. ಆದರೆ ಇದೀಗ ಭಾರತ ಹಾಗೂ ಜಿಂಬಾಬ್ವೆ ನಡುವಿನ ಮೂರು ಪಂದ್ಯಗಳ ಟಿ20 ಸರಣಿಯ ಪ್ರಸಾರದ ಹಕ್ಕನ್ನು ಯುನೈಟ್8(Unite8) ಚಾನೆಲ್‌ನಲ್ಲಿ ನೇರ ಪ್ರಸಾರಗೊಳ್ಳಲಿದೆ. ಇದರ ಜತೆಗೆ ಡಿಡಿ ಸ್ಪೋರ್ಟ್ಸ್ ಚಾನೆಲ್‌ ಮೂಲಕ ಟಿವಿಯಲ್ಲಿ ವೀಕ್ಷಿಸಬಹುದಾಗಿದೆ. ಇನ್ನು ಓಟಿಟಿ ಫ್ಲಾಟ್‌ಫಾರಂ ಆದ ಜಿಯೋ ಹಾಟ್‌ಸ್ಟಾರ್ ಹಾಗೂ ಸೋನಿ ಲಿವ್‌ನಲ್ಲೂ ಭಾರತ-ಜಿಂಬಾಬ್ವೆ ನಡುವಿನ ಟಿ20 ಸರಣಿ ಪ್ರಸಾರವಾಗುವುದಿಲ್ಲ. ಇದಕ್ಕೆ ಬದಲಾಗಿ ಫ್ಯಾನ್‌ಕೋಡ್‌ ಓಟಿಟಿ ಫ್ಲಾಟ್‌ಫಾರಂ ಮೂಲಕ ಈ ಟಿ20 ಸರಣಿಯನ್ನು ವೀಕ್ಷಿಸಬಹುದಾಗಿದೆ.

ಹರಾರೆಯಲ್ಲಿ ಟೀಂ ಇಂಡಿಯಾ ಟ್ರ್ಯಾಕ್ ರೆಕಾರ್ಡ್‌ ಹೇಗಿದೆ?

ಹರಾರೆ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ಟೀಂ ಇಂಡಿಯಾ ಇದುವರೆಗೂ 12 ಟಿ20 ಪಂದ್ಯಗಳನ್ನಾಡಿದ್ದು ಈ ಪೈಕಿ 9 ಪಂದ್ಯಗಳಲ್ಲಿ ಗೆಲುವಿನ ನಗೆ ಬೀರಿದೆ. ಇನ್ನು ಮೂರು ಪಂದ್ಯಗಳಲ್ಲಿ ಸೋಲು ಕಂಡಿದೆ. 234 ರನ್ ಟೀಂ ಇಂಡಿಯಾ ಈ ಮೈದಾನದಲ್ಲಿ ಕಲೆಹಾಕಿದ ಗರಿಷ್ಠ ತಂಡದ ಸ್ಕೋರ್ ಎನಿಸಿಕೊಂಡಿದೆ.

ಟಿ20 ಸರಣಿಗೆ ಉಭಯ ತಂಡಗಳು ಹೀಗಿವೆ:

ಭಾರತ: ಶ್ರೇಯಸ್ ಅಯ್ಯರ್(ನಾಯಕ), ವೈಭವ್ ಸೂರ್ಯವಂಶಿ, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ(ಉಪನಾಯಕ), ಇಶಾನ್ ಕಿಶನ್(ವಿಕೆಟ್ ಕೀಪರ್), ಪ್ರಭ್‌ಸಿಮ್ರನ್ ಸಿಂಗ್(ವಿಕೆಟ್ ಕೀಪರ್), ಶಿವಂ ದುಬೆ, ಸೂರ್ಯಾನ್ಶ್‌ ಶೆಡ್ಗೆ, ರಿಂಕು ಸಿಂಗ್, ಹರ್ಷ್ ದುಬೆ, ಪ್ರಿನ್ಸ್ ಯಾದವ್, ಯಶ್ ಠಾಕೂರ್, ಅಶೋಕ್ ಶರ್ಮಾ, ಮಯಾಂಕ್ ಯಾದವ್, ರವಿ ಬಿಷ್ಣೋಯ್.

ಜಿಂಬಾಬ್ವೆ: ಸಿಕಂದರ್ ರಾಜಾ(ನಾಯಕ), ಬ್ರಿಯಾನ್ ಬೆನೆಟ್, ರಯಾನ್ ಬರ್ಲ್, ಬೆನ್ ಕರನ್, ಬ್ರಾಡ್ ಡೌಸ್, ಕ್ಲೈವ್ ಮಡಾಂಡೆ, ಟಿನೊಟೆಡ್ ಮಾಫೋಸ, ತಾದೀವನಶೋ ಮರುಮಾನಿ, ವೆಲ್ಲಿಂಗ್ಟನ್ ಮಸಕಜಾ, ತಾಶೀಂಗ್ ಮುಸೋಕಿವಾ, ಬ್ಲೆಸ್ಸಿಂಗ್ ಮುಜರಾಬಾನಿ, ಡಿಯೋನ್ ಮೇಯರ್ಸ್‌, ರಿಚರ್ಡ್‌ ನಾಗವಾರ, ನ್ಯೂಮನ್ ನ್ಯೂಮೊಹುರಿ, ಮಿಲ್ಟನ್ ಶುಂಭಾ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಟೀಂ ಇಂಡಿಯಾದಿಂದ ಹೊರಗುಳಿದಿರುವ ಚಹಲ್‌ರಿಂದ ಮಹತ್ವದ ನಿರ್ಧಾರ! ಈಗ ಈ ತಂಡ ಕೂಡಿಕೊಂಡು ವಿದೇಶದಲ್ಲಿ ಮಿಂಚಲು ರೆಡಿಯಾದ ಸ್ಟಾರ್ ಸ್ಪಿನ್ನರ್
ರೋಹಿತ್ ಶರ್ಮಾ ಮೇಲೆ ನಂಬಿಕೆ ಇರಲಿಲ್ಲ, ಕರಿಯರ್‌ನ ಅತ್ಯಂತ ನೋವಿನ ದಿನ ಬಿಚ್ಚಿಟ್ಟಿ ಸಂಜು ಸ್ಯಾಮ್ಸನ್