ಟೆಸ್ಟ್ ಸರಣಿ ಕ್ಲೀನ್ ಸ್ವೀಪ್ ಹೊಸ್ತಿಲಲ್ಲಿ ಟೀಂ ಇಂಡಿಯಾ!

Published : Oct 14, 2025, 10:12 AM IST
IND vs WI 2nd test day 4

ಸಾರಾಂಶ

ಫಾಲೋ ಆನ್‌ಗೆ ಒಳಗಾಗಿದ್ದ ವೆಸ್ಟ್‌ ಇಂಡೀಸ್, 2ನೇ ಇನ್ನಿಂಗ್ಸ್‌ನಲ್ಲಿ ಜಾನ್ ಕ್ಯಾಂಬೆಲ್ ಮತ್ತು ಶಾಯ್ ಹೋಪ್ ಅವರ ಶತಕಗಳ ನೆರವಿನಿಂದ ದಿಟ್ಟ ಹೋರಾಟ ಪ್ರದರ್ಶಿಸಿತು. 5ನೇ ದಿನಕ್ಕೆ ಕಾಲಿಟ್ಟಿದ್ದು, 121 ರನ್‌ಗಳ ಗುರಿ ಬೆನ್ನತ್ತಿರುವ ಭಾರತಕ್ಕೆ ಗೆಲ್ಲಲು ಇನ್ನೂ 58 ರನ್‌ಗಳ ಅವಶ್ಯಕತೆಯಿದೆ.

ನವದೆಹಲಿ: ಭಾರತ ಹಾಗೂ ವೆಸ್ಟ್‌ ಇಂಡೀಸ್ ನಡುವಿನ 2ನೇ ಟೆಸ್ 'ಅನಿರೀಕಿತ'ವಾಗಿ 5ನೇ ದಿನಕ್ಕೆ ಕಾಲಿಟ್ಟಿದೆ. ಮೊದಲ ಇನ್ನಿಂಗಲ್ಲಿ ಬೇಗ ಆಲೌಟ್ ಆಗಿ ಫಾಲೋ ಆನ್‌ಗೆ ಒಳಪಟ್ಟಿದ್ದ ವಿಂಡೀಸ್, 2ನೇ ಇನ್ನಿಂಗ್ಸ್‌ನಲ್ಲಿ ದಿಟ್ಟ ಹೋರಾಟ ಪ್ರದರ್ಶಿಸಿ ಭಾರತೀಯರ ಬೆವರಿಳಿಸಿತು.

ಮೊದಲ ಇನ್ನಿಂಗ್ನಲ್ಲಿ 81.5 ಓವರ್ ಬೌಲ್ ಮಾಡಿದ್ದ ಭಾರತ, 2ನೇ ಇನ್ನಿಂಗ್ಸ್‌ನಲ್ಲಿ 118.5 ಓವರ್ ದಾಳಿ ನಡೆಸಿತು. ದಿಲ್ಲಿಯ ಸುಡು ಬಿಸಿಲಿನಲ್ಲಿ ಸತತ 200 ಓವರ್ ಬೌಲ್ ಮಾಡಿದ ಭಾರತೀಯ ಬೌಲರ್‌ಗಳು ಹೈರಾಣಾದರು. ಜಾನ್ ಕ್ಯಾಂಬೆಲ್‌ ಚೊಚ್ಚಲ ಶತಕ ಹಾಗೂ 8 ವರ್ಷದಲ್ಲಿ ಮೊದಲ ಟೆಸ್ಟ್ ಶತಕ ಗಳಿಸಿದ ಶಾಯ್ ಹೋಪ್, ವಿಂಡೀಸ್‌ಗೆ ಆಸರೆಯಾದರು.

3ನೇ ದಿನದಂತ್ಯಕ್ಕೆ ಇನ್ನಿಂಗ್ಸ್ ಸೋಲಿನಿಂದ ಪಾರಾಗಲು ಇನ್ನೂ 97 ರನ್ ಹಿಂದಿದ್ದ ವಿಂಡೀಸ್, 4ನೇ ದಿನವಾದ ಸೋಮವಾರ ಉತ್ತಮ ಹೋರಾಟ ಪ್ರದರ್ಶಿಸಿತು. ದಿನದಾಟದಲ್ಲಿ ಜಡೇಜಾ ಭಾರತಕ್ಕೆ ಮೊದಲ ಯಶಸ್ಸು ತಂದುಕೊಟ್ಟರು. 115 ರನ್ ಗಳಿಸಿದ್ದ ಕ್ಯಾಂಬೆಲ್‌ರನ್ನು ಎಲ್‌ಬಿ ಬಲೆಗೆ ಕೆಡವಿದರು. ಹೋಪ್‌ ಇನ್ನಿಂಗ್ಸ್ 103 ರನ್‌ಗೆ ಕೊನೆಗೊಂಡಿತು. ಆನಂತರ ಚೇಸ್ 40, ಗ್ರೀವ್ಸ್ ಔಟಾಗದೆ 50, ಸೀಲ್ 32 ರನ್ ಗಳಿಸಿ ತಂಡ 390 ರನ್‌ಗಳ ದೊಡ್ಡ ಮೊತ್ತ ದಾಖಲಿಸಲು ನೆರವಾದರು. ಕೊನೆ ವಿಕೆಟ್‌ಗೆ ವಿಂಡೀಸ್ 89 ರನ್‌ ಸೇರಿಸಿತು.

ಭಾರತಕ್ಕೆ ಆರಂಭಿಕ ಆಘಾತ

121 ರನ್ ಗುರಿ ಪಡೆದ ಭಾರತ, 2ನೇ ಓವರಲ್ಲೇ ಜೈಸ್ವಾಲ್ (8) ವಿಕೆಟ್ ಕಳೆದು ಕೊಂಡಿತು. ಬಳಿಕ ರಾಹುಲ್ (25*) ಹಾಗೂ ಸಾಯಿ ಸುದರ್ಶನ್ (30*) ದಿನದಾಟದಲ್ಲಿ ಮತ್ತೊಂದು ವಿಕೆಟ್ ಬೀಳದಂತೆ ಎಚ್ಚರ ವಹಿಸಿದರು. ಮಂಗಳವಾರ ಮೊದಲ ಅವಧಿಯಲ್ಲೇ ಯಾವುದೇ ವಿಕೆಟ್ ಕಳೆದುಕೊಳ್ಳದೆ ಬಾಕಿ ಇರುವ 58 ರನ್ ಗಳಿಸಿ, 2 ಪಂದ್ಯಗಳ ಸರಣಿಯನ್ನು 2-0ಯಲ್ಲಿ ವಶಪಡಿಸಿಕೊಳ್ಳಲು ಭಾರತ ಎದುರು ನೋಡುತ್ತಿದೆ. ಈ ಸರಣಿ ಬಳಿಕ ಭಾರತ ತಂಡ ಆಸ್ಟ್ರೇಲಿಯಾಗೆ ಪ್ರಯಾಣಿಸಲಿದ್ದು, ಅ.19ರಿಂದ 3 ಪಂದ್ಯಗಳ ಏಕದಿನ ಸರಣಿ ಶುರುವಾಗಲಿದೆ. ಬಳಿಕ 5 ಪಂದ್ಯಗಳ ಟಿ20 ಸರಣಿ ನಡೆಯಲಿದೆ.

2025ರಲ್ಲಿ ಟೆಸ್ಟ್‌ನಲ್ಲಿ ಗರಿಷ್ಠ ವಿಕೆಟ್: ನಂ.1 ಸ್ಥಾನಕ್ಕೇರಿದ ಸಿರಾಜ್

ಈ ವರ್ಷ ಟೆಸ್ಟ್‌ನಲ್ಲಿ ಮೊಹಮದ್ ಸಿರಾಜ್ ಅತಿಹೆಚ್ಚು ವಿಕೆಟ್ ಪಡೆದ ಬೌಲರ್‌ಗಳ ಪಟ್ಟಿಯಲ್ಲಿ ಮೊದಲ ಸ್ಥಾನಕ್ಕೇರಿದ್ದಾರೆ. 8 ಪಂದ್ಯಗಳಲ್ಲಿ 37 ವಿಕೆಟ್ ಕಬಳಿಸಿರುವ ಸಿರಾಜ್, ಜಿಂಬಾಬ್ವೆಯ ಬ್ಲೆಸಿಂಗ್ ಮಜುರ್‌ಬಾನಿಯನ್ನು ಹಿಂದಿಕ್ಕಿದ್ದಾರೆ. ಬ್ಲೆಸಿಂಗ್ 9 ಪಂದ್ಯದಲ್ಲಿ 36 ವಿಕೆಟ್ ಪಡೆದು 2ನೇ ಸ್ಥಾನದಲ್ಲಿದ್ದರೆ, ಆಸ್ಟ್ರೇಲಿಯಾದ ಮಿಚೆಲ್ ಸ್ಟಾರ್ಕ್ 7 ಪಂದ್ಯದಲ್ಲಿ 29 ವಿಕೆಟ್ ಗಳೊಂದಿಗೆ 3ನೇ ಸ್ಥಾನದಲ್ಲಿದ್ದಾರೆ.

ಸ್ಕೋರ್: ಭಾರತ 518/5 ಡಿ. ಹಾಗೂ 63/1 (ಸುದರ್ಶನ್ 30*, ರಾಹುಲ್ 25*, ವಾರಿ ಕನ್ 1-15)

ವಿಂಡೀಸ್ 248 ಹಾಗೂ 390 (ಕ್ಯಾಂಬೆಲ್ 115, ಹೋಪ್ 103, ಗ್ರೀಮ್ಸ್ 50*, ಬೂಮ್ರಾ 3-44, ಕುಲ್ದೀಪ್ 3-104)

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಕೊನೆಗೂ ಮದುವೆಗೆ ರೆಡಿ ಆದ್ರಾ ಸ್ಮೃತಿ ಮಂಧನಾ-ಪಲಾಶ್‌ ಮುಚ್ಚಾಲ್‌?
ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ