ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದ ಇತಿಹಾಸವೇ ಒಂದು ರೋಚಕ: ಡಿಸೆಂಬರ್ 26ರಂದೇ ಆರಂಭವಾಗಲು ಕಾರಣವೇನು..?

By Suvarna NewsFirst Published Dec 26, 2023, 12:45 PM IST
Highlights

ಇಂದು ಮಧ್ಯಾಹ್ನ 1.30ರಿಂದ ಸೌತ್ ಆಫ್ರಿಕಾದ ಸೆಂಚುರಿಯನ್ ಕ್ರಿಕೆಟ್ ಮೈದಾನದಲ್ಲಿ ಭಾರತ-ಆಫ್ರಿಕಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಪಂದ್ಯವನ್ನ ಗೆದ್ದೇ ತೀರಲು  ಉಭಯ ತಂಡಗಳು ಪಣತೊಟ್ಟಿದ್ದು  ಭಿನ್ನ-ಭಿನ್ನ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಲಿವೆ.

ಬೆಂಗಳೂರು(ಡಿ.26): ಬಹುನಿರೀಕ್ಷಿತ ಭಾರತ-ಆಫ್ರಿಕಾ ನಡುವಿನ ಬಾಕ್ಸಿಂಗ್ ಡೇ ಟೆಸ್ಟ್ ಇಂದು ಮಧ್ಯಾಹ್ನ ಶುರುವಾಗಲಿದೆ. ಸೋಲು-ಗೆಲುವಿನಾಚೆಗೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆಯೋಜನೆಯೇ ಒಂದು ರೋಚಕ. ಅಷ್ಟಕ್ಕೂ ಬಾಕ್ಸಿಂಗ್ ಡೇ ಟೆಸ್ಟ್ ಅಂದ್ರೇ ಏನು..? ಇದರ  ಹಿಂದಿನ ಇತಿಹಾಸವೇನು..? ಉಳಿದ ಟೆಸ್ಟ್ಗಳಿಗಿಂತ ಈ ಬಾಕ್ಸಿಂಗ್ ಡೇ ಟೆಸ್ಟ್ ಮಹತ್ವ ಪಡೆದುಕೊಂಡಿರೋದೇಕೆ..? ಎಲ್ಲದಕ್ಕೂ ಇಲ್ಲಿದೆ ಆನ್ಸರ್.

ಪ್ರತಿ ವರ್ಷ ಡಿಸೆಂಬರ್ 26ರಂದೇ ಆರಂಭವಾಗಲು ಕಾರಣವೇನು..? 

ಇಂದು ಮಧ್ಯಾಹ್ನ 1.30ರಿಂದ ಸೌತ್ ಆಫ್ರಿಕಾದ ಸೆಂಚುರಿಯನ್ ಕ್ರಿಕೆಟ್ ಮೈದಾನದಲ್ಲಿ ಭಾರತ-ಆಫ್ರಿಕಾ ನಡುವೆ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯ ಆರಂಭಗೊಳ್ಳಲಿದೆ. ಪಂದ್ಯವನ್ನ ಗೆದ್ದೇ ತೀರಲು  ಉಭಯ ತಂಡಗಳು ಪಣತೊಟ್ಟಿದ್ದು  ಭಿನ್ನ-ಭಿನ್ನ ಸ್ಟ್ರಾಟಜಿಯೊಂದಿಗೆ ಕಣಕ್ಕಿಳಿಯಲಿವೆ. ಆದ್ರೆ, ಈ ಪಂದ್ಯದ ಸೋಲು-ಗೆಲುವಿನ ಲೆಕ್ಕಚಾರ ಏನೇ ಇರಲಿ. ಈ ಬಾಕ್ಸಿಂಗ್ ಡೇ ಟೆಸ್ಟ್ ಇತಿಹಾಸವೇ ಒಂದು ರೋಚಕ. ಪ್ರತಿಯೊಬ್ಬ ಕ್ರಿಕೆಟ್ ಪ್ರೇಮಿಯು ಬಾಕ್ಸಿಂಗ್ ಡೇ ಟೆಸ್ಟ್‌ನ ವಿಶೇಷತೆ ಹಾಗೂ ಹಿನ್ನಲೆಯನ್ನ ತಿಳಿದುಕೊಳ್ಳಲೇಬೇಕು.

IPL 2024 ಪಾಂಡ್ಯಗಾಗಿ ಗುಜರಾತ್ ಟೈಟಾನ್ಸ್‌ಗೆ ಮುಂಬೈ ಇಂಡಿಯನ್ಸ್‌ ನೀಡಿದ್ದು ₹100 ಕೋಟಿ?

ಏನಿದು ಬಾಕ್ಸಿಂಗ್ ಟೆಸ್ಟ್..? ಈ ಹೆಸರು ಬಂದಿದ್ದೇಕೆ..? 

ಈ ಪ್ರಶ್ನೆ ನಿಮ್ಮನ್ನ  ಕಾಡೋದು ಸಹಜ. ಪ್ರತಿ ವರ್ಷ ಸೌತ್ ಆಫ್ರಿಕಾ ಸೇರಿ, ನ್ಯೂಜಿಲೆಂಡ್ ಹಾಗೂ ಆಸ್ಟ್ರೇಲಿಯಾ ತಂಡಗಳು ಡಿಸೆಂಬರ್ 26ರಂದೇ ಬಾಕ್ಸಿಂಗ್ ಡೇ ಟೆಸ್ಟ್ ಆಡುತ್ತವೆ. ಅಷ್ಟಕ್ಕೂ ಬಾಕ್ಸಿಂಗ್ ಅಂದ್ರೆ ಮುಷ್ಠಿ ಕಾಳಗವಲ್ಲ. ಬದಲಿಗೆ ಕ್ರಿಸ್ಮಸ್ ಮರುದಿನ ಈ ಪಂದ್ಯ ನಡೆಯುತ್ತಿರೋದ್ರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎನ್ನಲಾಗ್ತಿದೆ. ಕ್ರಿಸ್ಮಸ್ ದಿನ ಸ್ನೇಹಿತರು, ಕುಟುಂಬದವರು ಪರಸ್ಪರ ಗಿಫ್ಟ್ ಬಾಕ್ಸ್ ನೀಡುತ್ತಾರೆ. ಮರುದಿನ ಅಂದರೆ ಡಿಸೆಂಬರ್ 26ರಂದು ಆ ಬಾಕ್ಸ್ ಓಪನ್ ಮಾಡಲಾಗುತ್ತದೆ. ಇದೇ ಕಾರಣದಿಂದ ಬಾಕ್ಸ್ ಓಪನ್ ಮಾಡುವ ದಿನವನ್ನು ಬಾಕ್ಸಿಂಗ್ ಡೇ ಎನ್ನಲಾಗುತ್ತದೆ. ಇದೇ ದಿನ ಪಂದ್ಯವನ್ನು ಆಯೋಜಿಸುತ್ತಿರುವುದರಿಂದ ಬಾಕ್ಸಿಂಗ್ ಡೇ ಟೆಸ್ಟ್ ಎಂಬ ಹೆಸರು ಬಂದಿದೆ. 

ಬಾಕ್ಸಿಂಗ್ ಡೇ ಟೆಸ್ಟ್‌ಗಿದೆ ಶತಮಾನದ ಇತಿಹಾಸ 

ಹೌದು, ಈ ಬಾಕ್ಸಿಂಗ್ ಡೇ ಟೆಸ್ಟ್ಗೆ 128 ವರ್ಷಗಳ ಇತಿಹಾಸವಿದೆ. 1892ರಲ್ಲಿ ಮೆಲ್ಬರ್ನೋ ಅಂಗಳದಲ್ಲಿ ಕ್ರಿಸ್ಮಸ್ ಸಮಯದಲ್ಲಿ ವಿಕ್ಟೋರಿಯಾ ಮತ್ತು ನ್ಯೂಸೌತ್ ವೇಲ್ಸ್ ನಡುವೆ  ಕ್ರಿಕೆಟ್ ಪಂದ್ಯ ಆಯೋಜನೆ ಸಂಪ್ರದಾಯವಾಯಿತು. ಬಳಿಕ  1950ರಲ್ಲಿ ಮೆಲ್ಬೋರ್ನ್ನಲ್ಲಿ ಕ್ರಿಸ್ಮಸ್ಗೆ ಅನುಗುಣವಾಗಿ ಮೊದಲ ಅಂತರರಾಷ್ಟ್ರೀಯ ಪಂದ್ಯ ಇಂಗ್ಲೆಂಡ್ ಹಾಗೂ ಆಸ್ಟ್ರೇಲಿಯಾ ನಡುವೆ ನಡೆಯಿತು. ಡಿಸೆಂಬರ್ 22ರಂದು ಆರಂಭವಾದ ಈ ಪಂದ್ಯವು ನಿಧಾನಕ್ಕೆ ಬಾಕ್ಸಿಂಗ್ ಡೇಗೆ ಬಂದು ನಿಂತಿತು. ಅಲ್ಲಿಂದ ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಬಾಕ್ಸಿಂಗ್ ಡೇ ಟೆಸ್ಟ್ಗೆ ನಾಂದಿಯಾಡಲಾಯಿತು.  

ನಾಲ್ವರು ಆಟಗಾರರು ಇಂಜುರಿ, ಟೀಂ ಇಂಡಿಯಾಗೆ ಶಾಕ್..! IPL ವೇಳೆಗೆ ಫಿಟ್ ಆಗ್ತಾರಾ..?

ಡಿಸೆಂಬರ್ 22ರಿಂದ 27ರವರೆಗಿದ್ದ ಈ ಟೆಸ್ಟ್ ಪಂದ್ಯದ ದಿನಾಂಕವನ್ನ 1980ರಲ್ಲಿ ಬದಲಿಸಲಾಯ್ತು. ಬಳಿಕ  ಪ್ರತಿ ವರ್ಷ ಡಿಸೆಂಬರ್ 26ರಿಂದ ಕ್ರಿಕೆಟ್ ಆಸ್ಟ್ರೇಲಿಯಾ ಬಾಕ್ಸಿಂಗ್ ಡೇ ಟೆಸ್ಟ್ ಆಯೋಜಿಸ್ತಿದೆ. 1975ರಲ್ಲಿ ನಡೆದ  ಆಸ್ಟ್ರೇಲಿಯಾ ಹಾಗೂ ವಿಂಡೀಸ್ನ ಬಾಕ್ಸಿಂಗ್ ಡೇ ಟೆಸ್ಟ್  ಪಂದ್ಯ ವೀಕ್ಷಣೆಗೆ 85 ಸಾವಿರ  ಅಧಿಕಕ್ಕೂ ಪ್ರೇಕ್ಷಕರು ಆಗಮಿಸಿದ್ದು ವಿಶ್ವದ ಗಮನ ಸೆಳೆದಿತ್ತು. ಬಳಿಕ ಇಂಗ್ಲೆಂಡ್, ನ್ಯೂಜಿಲೆಂಡ್, ಸೌತ್ ಆಫ್ರಿಕಾ ಬಾಕ್ಸಿಂಗ್ ಡೇ ಟೆಸ್ಟ್ ಆಡಲು ಶುರು ಮಾಡಿದ್ವು.

ಇಂದು ಒಂದೇ ದಿನ 2 ಬಾಕ್ಸಿಂಗ್ ಡೇ ಟೆಸ್ಟ್

ಹೌದು, ಒಂದು ಒಂದೇ ದಿನದಲ್ಲಿ ಎರಡು ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯಗಳು ಆರಂಭವಾಗ್ತಿವೆ. ಸೆಂಚುರಿಯನ್ನಲ್ಲಿ ಭಾರತ-ಸೌತ್ ಆಫ್ರಿಕಾ ಮುಖಾಮುಖಿಯಾದ್ರೆ, ಮೆಲ್ಬರ್ನ್ನಲ್ಲಿ ಬೆಳಗ್ಗೆ 5 ಗಂಟೆಯಿಂದಲೇ ಆಸ್ಟ್ರೇಲಿಯಾ-ಪಾಕಿಸ್ತಾನ ತಂಡಗಳ ಬಾಕ್ಸಿಂಗ್ ಡೇ ಟೆಸ್ಟ್ ನಡೆಯುತ್ತಿದೆ. ಈ ಸಲ ಯಾಕೋ ಇಂಗ್ಲೆಂಡ್, ನ್ಯೂಜಿಲೆಂಡ್ ಬಾಕ್ಸಿಂಗ್ ಡೇ ಟೆಸ್ಟ್ ಆಡುತ್ತಿಲ್ಲ. ಆದರೆ, ಆಸ್ಟ್ರೇಲಿಯಾ ಮಾತ್ರ ಪ್ರತಿ ವರ್ಷ ಬಾಕ್ಸಿಂಗ್ ಡೇ ಟೆಸ್ಟ್ ಆಡೋದನ್ನ ನಿಲ್ಲಿಸಲ್ಲ. ಪ್ರತಿ ವರ್ಷ ಡಿಸೆಂಬರ್ 26ರಿಂದ ಒಂದು ಟೆಸ್ಟ್ ಆಡೇ ಆಡುತ್ತದೆ.

ಸ್ಪೋರ್ಟ್ಸ್ ಬ್ಯೂರೋ, ಏಷ್ಯಾನೆಟ್ ಸುವರ್ಣನ್ಯೂಸ್

click me!