4ನೇ ಟಿ20 ಪಂದ್ಯ ಟೈ, ಮತ್ತೊಂದು ಸೂಪರ್ ಓವರ್, ಸೂಪರ್ ಸೇ ಊಪರ್

By Suvarna News  |  First Published Jan 31, 2020, 4:19 PM IST

ಭಾರತ-ನ್ಯೂಜಿಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯವೂ ಸೂಪರ್ ಓವರ್‌ನಲ್ಲಿ ಅಂತ್ಯವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ..


ವೆಲ್ಲಿಂಗ್ಟನ್(ಜ.31): ಭಾರತ-ನ್ಯೂಜಿಲೆಂಡ್ ನಡುವಿನ ನಾಲ್ಕನೇ ಟಿ20 ಪಂದ್ಯವೂ ಟೈನಲ್ಲಿ ಅಂತ್ಯವಾಗಿದೆ. ಇದೀಗ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.

ಟೀಂ ಇಂಡಿಯಾ ನೀಡಿದ್ದ 166 ರನ್‌ಗಳ ಗುರಿ ಬೆನ್ನತ್ತಿದ ನ್ಯೂಜಿಲೆಂಡ್ ಸಹಾ 165 ರನ್ ಬಾರಿಸಿತು. ಹೀಗಾಗಿ ಫಲಿತಾಂಶಕ್ಕಾಗಿ ಸೂಪರ್ ಓವರ್ ಮೊರೆ ಹೋಗಲಾಯಿತು.

Latest Videos

ಕೊನೆಯ ಓವರ್‌ನಲ್ಲಿ ನ್ಯೂಜಿಲೆಂಡ್ ಗೆಲ್ಲಲು ಕೇವಲ 8 ರನ್‌ಗಳ ಅವಶ್ಯಕತೆಯಿತ್ತು. ಈ ವೇಳೆ ಶಾರ್ದೂಲ್ ಠಾಕೂರ್ ಎಸೆದ ಮೊದಲ ಎಸೆತದಲ್ಲೇ ರಾಸ್ ಟೇಲರ್(24) ಶ್ರೇಯಸ್‌ ಅಯ್ಯರ್‌ಗೆ ಕ್ಯಾಚಿತ್ತು ಪೆವಿಲಿಯನ್ ಸೇರಿದರು. ಎರಡನೇ ಎಸೆತವನ್ನು ಮಿಚೆಲ್ ಚೆಂಡನ್ನು ಬೌಂಡರಿಗಟ್ಟಿದರು. ಇನ್ನು ಮೂರನೇ ಎಸೆತದಲ್ಲಿ ಸೈಫರ್ಟ್ ರನೌಟ್‌ ಆದರು. ಕೊನೆಯ ಮೂರು ಎಸೆತಗಳಲ್ಲಿ 3 ರನ್‌ಗಳ ಅವಶ್ಯಕತೆಯಿತ್ತು. ನಾಲ್ಕನೇ ಎಸೆತದಲ್ಲಿ ಸ್ಯಾಂಟ್ನರ್ ಒಂದು ರನ್ ಗಳಿಸಿದರು.  ಕೊನೆಯ ಎಸೆತದಲ್ಲಿ 2 ರನ್‌ಗಳ ಅವಶ್ಯಕತೆಯಿತ್ತು. ಆದರೆ ಸ್ಯಾಂಟ್ನರ್ ಕೇವಲ ಒಂದು ರನ್‌ಗಳಿಸಿ ರನೌಟ್ ಆಗುವ ಮೂಲಕ ಸೂಪರ್ ಓವರ್‌ನಲ್ಲಿ ಅಂತ್ಯವಾಯಿತು.

ಮೂರನೇ ಟಿ20 ಪಂದ್ಯವೂ ಸೂಪರ್ ಓವರ್‌ನಲ್ಲಿ ಅಂತ್ಯವಾಗಿತ್ತು. ಮೊದಲು ಬ್ಯಾಟ್ ಮಾಡಿದ್ದ ನ್ಯೂಜಿಲೆಂಡ್ 17 ರನ್ ಬಾರಿಸುವ ಮೂಲಕ ಭಾರತಕ್ಕೆ ಗೆಲ್ಲಲು 18 ರನ್‌ಗಳ ಗುರಿ ನೀಡಿತ್ತು. ರೋಹಿತ್ ಶರ್ಮಾ ಕೊನೆಯ 2 ಎಸೆತಗಳಲ್ಲಿ ಸತತ 2 ಸಿಕ್ಸರ್ ಬಾರಿಸುವ ಮೂಲಕ ತಂಡವನ್ನು ರೋಚಕವಾಗಿ ಗೆಲುವಿನ ದಡ ಸೇರಿಸಿದ್ದರು. 

 

click me!