ಜಡೇಜಾ ಅದ್ಭುತ ಕ್ಯಾಚ್‌ಗೆ ನೀಲ್ ವ್ಯಾಗ್ನರ್ ತಬ್ಬಿಬ್ಬು..!

Published : Mar 01, 2020, 12:36 PM IST
ಜಡೇಜಾ ಅದ್ಭುತ ಕ್ಯಾಚ್‌ಗೆ ನೀಲ್ ವ್ಯಾಗ್ನರ್ ತಬ್ಬಿಬ್ಬು..!

ಸಾರಾಂಶ

ಎರಡನೇ ಟೆಸ್ಟ್ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಿಡಿದ ಕ್ಯಾಚ್ ಎಲ್ಲರ ಹುಬ್ಬೇರುವಂತೆ ಮಾಡಿದೆ. ಜತೆಗೆ ಕ್ರಿಕೆಟ್ ಅಭಿಮಾನಿಗಳ ಮೆಚ್ಚುಗೆಗೂ ಪಾತ್ರವಾಗಿದೆ. ಈ ಕುರಿತಾದ ವಿವರ ಇಲ್ಲಿದೆ ನೋಡಿ.

ಕ್ರೈಸ್ಟ್‌ಚರ್ಚ್(ಮಾ.01): ಟೀಂ ಇಂಡಿಯಾದ ಪ್ರಮುಖ ಆಲ್ರೌಂಡರ್ ರವೀಂದ್ರ ಜಡೇಜಾ ವಿಶ್ವಕ್ರಿಕೆಟ್‌ನ ಶ್ರೇಷ್ಠ ಆಲ್ರೌಂಡರ್‌ಗಳಲ್ಲಿ ಒಬ್ಬರು ಎನ್ನುವ ವಿಚಾರದಲ್ಲಿ ಎರಡು ಮಾತಿಲ್ಲ. ಜಡೇಜಾ ಮೈದಾನದಲ್ಲಿದ್ದರೆ ಚಿರತೆಯಂತೆ ಜಿಗಿದು ಕ್ಯಾಚ್ ಹಿಡಿಯುವುದನ್ನು ನೋಡುವುದೇ ಕಣ್ಣಿಗೆ ಒಂದು ಹಬ್ಬ. 

ನ್ಯೂಜಿಲೆಂಡ್ ವಿರುದ್ಧದ ಎರಡನೇ ಟೆಸ್ಟ್ ಪಂದ್ಯದ ಎರಡನೇ ದಿನವೂ ಜಡ್ಡು ಅಂತಹದ್ದೇ ಒಂದು ಸ್ಟನ್ನಿಂಗ್ ಕ್ಯಾಚ್ ಹಿಡಿದು ಎಲ್ಲರ ಹುಬ್ಬೇರುವಂತೆ ಮಾಡಿದ್ದಾರೆ. ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯುತ್ತಿರುವ ಪಂದ್ಯದಲ್ಲಿ ರವೀಂದ್ರ ಜಡೇಜಾ ಹಿಡಿದ ಕ್ಯಾಚ್ ಸ್ವತಃ ಬ್ಯಾಟ್ಸ್‌ಮನ್ ನೀಲ್ ವ್ಯಾಗ್ನರ್ ತಬ್ಬಿಬ್ಬಾಗುವಂತೆ ಮಾಡಿದರು. 

2ನೇ ಟೆಸ್ಟ್: ಮತ್ತೊಂದು ಸೋಲಿನ ಭೀತಿಯಲ್ಲಿ ಟೀಂ ಇಂಡಿಯಾ

ಒಂದು ಹಂತದಲ್ಲಿ ಕೈಲ್ ಜಾಮಿಸನ್ ಹಾಗೂ ನೀಲ್ ವ್ಯಾಗ್ನರ್ ಅರ್ಧಶತಕದ ಜತೆಯಾಟವಾಡುವ ಭಾರತದ ಪಾಲಿಗೆ ಕಂಠಕವಾಗಿ ಪರಿಣಮಿಸಿದ್ದರು. ಈ ವೇಳೆ ಮೊಹಮ್ಮದ್ ಶಮಿ ಬೌಲಿಂಗ್‌ನಲ್ಲಿ ಸ್ಕ್ವೇರ್‌ಲೆಗ್‌ನತ್ತ ಬಾರಿಸಿದ ಚೆಂಡನ್ನು ಜಡೇಜಾ ಅದ್ಭುತವಾಗಿ ಕ್ಯಾಚ್ ಹಿಡಿಯುವಲ್ಲಿ  ಯಶಸ್ವಿಯಾದರು.

ಹೀಗಿತ್ತು ನೋಡಿ ಆ ಕ್ಯಾಚ್:

ಜಡೇಜಾ ಕ್ಯಾಚ್ ನೋಡಿದ ನೆಟ್ಟಿಗರು, ಜಡ್ಡು ವಿಶ್ವದ ಶ್ರೇಷ್ಠ ಫೀಲ್ಡರ್ ಎಂದು ಕೊಂಡಾಡಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

click me!

Recommended Stories

109 ರನ್ ಗಳಿಸಿದ ಆರ್ಯವೀರ್ ಸೆಹ್ವಾಗ್; ಮಗನಿಗೆ ಎಚ್ಚರಿಕೆಯ ಕಿವಿ ಮಾತು ಹೇಳಿದ ವೀರೂ..!
ತಂಡದ 7 ಬೇರೆ ಬೇರೆ ಕ್ರಿಕೆಟಿಗರ ಸರ್‌ನೇಮ್ ಒಂದೇ, ಗಮನಸೆಳೆದ ಏಷ್ಯನ್ ಗೇಮ್ಸ್ ಸ್ಕೋರ್‌ಬೋರ್ಡ್