ಭಾರತ vs ಕಿವೀಸ್‌ ಪಂದ್ಯಕ್ಕೆ ಅಡ್ಡಿಯಾಗುತ್ತಾ ಮಳೆ?: ಇಲ್ಲಿದೆ ಹವಾಮಾನ ಇಲಾಖೆ ವರದಿ

By Kannadaprabha NewsFirst Published Oct 16, 2024, 8:43 AM IST
Highlights

ಭಾರತ ಹಾಗೂ ನ್ಯೂಜಿಲೆಂಡ್ ನಡುವಿನ ಮೊದಲ ಟೆಸ್ಟ್ ಪಂದ್ಯಕ್ಕೆ ಮಳೆ ಭೀತಿ ಎದುರಾಗಿದೆ. ಈ ಕುರಿತಾದ ರಿಪೋರ್ಟ್‌ ಇಲ್ಲಿದೆ ನೋಡಿ

ಬೆಂಗಳೂರು: ನಗರದಲ್ಲಿ ಕಳೆದೆರಡು ದಿನಗಳಿಂದ ನಿರಂತರವಾಗಿ ಮಳೆಯಾಗುತ್ತಿದೆ. ಇದು ಭಾರತ ಹಾಗೂ ನ್ಯೂಜಿಲೆಂಡ್‌ ನಡುವಿನ ಮೊದಲ ಪಂದ್ಯಕ್ಕೆ ಅಡ್ಡಿಪಡಿಸುವ ಸಾಧ್ಯತೆಯಿದೆ.

ಮಂಗಳವಾರ ಸತತವಾಗಿ 8 ಗಂಟೆಗಳ ಕಾಲ ಮಳೆ ಸುರಿದಿದೆ. ಇದರಿಂದಾಗಿ ಭಾರತ ಅಭ್ಯಾಸ ಶಿಬಿರವೇ ರದ್ದಾಗಿದ್ದರೆ, ನ್ಯೂಜಿಲೆಂಡ್‌ ಆಟಗಾರರು ಒಳಾಂಗಣ ಕ್ರೀಡಾಂಗಣದಲ್ಲಿ ಅಭ್ಯಾಸ ನಡೆಸಿದ್ದಾರೆ. ಹವಾಮಾನ ಇಲಾಖೆ ಮುನ್ಸೂಚನೆ ಪ್ರಕಾರ ನಗರದಲ್ಲಿ ಇನ್ನೂ 2 ದಿನ ಮಳೆ ಸಾಧ್ಯತೆಯಿದೆ. ಬುಧವಾರ ಶೇ.70 ಹಾಗೂ ಗುರುವಾರ ಶೇ.90ರಷ್ಟು ಮಳೆ ಬೀಳುವ ನಿರೀಕ್ಷೆಯಿದೆ. ಇದು ಪಂದ್ಯದ ಮೇಲೆ ಪರಿಣಾಮ ಬೀರುವ ಸಾಧ್ಯತೆ ಹೆಚ್ಚು. ಎರಡೂ ದಿನಗಳ ಆಟ ರದ್ದಾದರೂ ಅಚ್ಚರಿಯಿಲ್ಲ.

Latest Videos

ಪಾಕಿಸ್ತಾನಿ ಗಾಯಕ ಉಮೈರ್‌ ಜಸ್ವಾಲ್‌ ಜೊತೆ ಸಾನಿಯಾ ಮಿರ್ಜಾ 2ನೇ ಮದುವೆ?

ತವರಿನಲ್ಲಿ ಸತತ 19ನೇ ಸರಣಿ ಗೆಲ್ಲುತ್ತಾ ಭಾರತ?

ಭಾರತ 2012ರಿಂದ ತವರಿನಲ್ಲಿ ಒಂದೂ ಟೆಸ್ಟ್‌ ಸರಣಿ ಸೋತಿಲ್ಲ. ಕಳೆದ 18 ಸರಣಿಗಳಲ್ಲೂ ಭಾರತ ಗೆಲುವು ಸಾಧಿಸಿದೆ. ನ್ಯೂಜಿಲೆಂಡ್‌ ವಿರುದ್ಧ ಗೆಲ್ಲುವ ಮೂಲಕ ತವರಿನ ಸರಣಿ ಗೆಲುವಿನ ಓಟವನ್ನು 19ಕ್ಕೆ ಹೆಚ್ಚಿಸಲು ಭಾರತ ಕಾಯುತ್ತಿದೆ.

ಚಿನ್ನಸ್ವಾಮಿಯಲ್ಲಿ 25ನೇ ಟೆಸ್ಟ್‌ ಪಂದ್ಯ

ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣ 25ನೇ ಟೆಸ್ಟ್‌ ಪಂದ್ಯ ಆತಿಥ್ಯಕ್ಕೆ ಸಜ್ಜಾಗಿದೆ. 1974ರಿಂದ ಈ ವರೆಗೂ ಇಲ್ಲಿ 24 ಪಂದ್ಯಗಳು ನಡೆದಿವೆ. ಪ್ರತಿ ಟೆಸ್ಟ್‌ನಲ್ಲೂ ಭಾರತ ಆಡಿದೆ. ಈ ಪೈಕಿ ಭಾರತ 9ರಲ್ಲಿ ಗೆದ್ದಿದ್ದರೆ, 6 ಪಂದ್ಯಗಳಲ್ಲಿ ವಿದೇಶಿ ತಂಡಗಳು ಜಯಗಳಿಸಿವೆ. 9 ಪಂದ್ಯ ಡ್ರಾಗೊಂಡಿವೆ. ಈ ಕ್ರೀಡಾಂಗಣದಲ್ಲಿ 2 ವರ್ಷಗಳ ಬಳಿಕ ಟೆಸ್ಟ್‌ ನಡೆಯುತ್ತಿದೆ. ಕೊನೆ ಬಾರಿ 2022ರ ಮಾರ್ಚ್‌ನಲ್ಲಿ ಭಾರತ-ಶ್ರೀಲಂಕಾ ತಂಡಗಳು ಹಗಲು-ರಾತ್ರಿ ಟೆಸ್ಟ್‌ ಆಡದ್ದವು.

ಧೋನಿಯ ಈ 7 ಜೀವನ ಪಾಠಗಳು ಅಳವಡಿಸಿಕೊಂಡರೇ ನಿಮ್ಮ ಬದುಕು ಬದಲಾಗೋದು ಗ್ಯಾರಂಟಿ!

ತವರಲ್ಲಿ ಕಿವೀಸ್‌ ವಿರುದ್ಧ ಸರಣಿ ಸೋತಿಲ್ಲ ಭಾರತ

ಭಾರತ ತಂಡ ನ್ಯೂಜಿಲೆಂಡ್‌ ವಿರುದ್ಧ ಈ ವರೆಗೂ 23 ಟೆಸ್ಟ್‌ ಸರಣಿ ಆಡಿವೆ. ಈ ಪೈಕಿ 12ರಲ್ಲಿ ಗೆದ್ದಿದ್ದರೆ, 7ರಲ್ಲಿ ಕಿವೀಸ್‌ ಗೆದ್ದಿದೆ. 4 ಸರಣಿ ಡ್ರಾಗೊಂಡಿವೆ. ಇನ್ನು, ಉಭಯ ತಂಡಗಳ ನಡುವೆ ಭಾರತದಲ್ಲಿ 12 ಸರಣಿಗಳು ನಡೆದಿವೆ. ಭಾರತ ಒಮ್ಮೆಯೂ ಸರಣಿ ಸೋತಿಲ್ಲ. 10 ಸರಣಿಗಳಲ್ಲಿ ಭಾರತ ಗೆದ್ದಿದ್ದರೆ, 2 ಡ್ರಾಗೊಂಡಿವೆ.
 

click me!