ಚೆನ್ನೈ ಟೆಸ್ಟ್: ಕೈ ಜಾರಿದ ಬ್ಯಾಟ್‌, ಪೂಜಾರ ರನೌಟ್‌; ವಿಡಿಯೋ ವೈರಲ್‌

By Suvarna News  |  First Published Feb 15, 2021, 12:53 PM IST

ಇಂಗ್ಲೆಂಡ್‌ ವಿರುದ್ದದ ಎರಡನೇ ಟೆಸ್ಟ್ ಪಂದ್ಯದಲ್ಲಿ ಚೇತೇಶ್ವರ್ ಪೂಜಾರ ರನೌಟ್ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ  ವೈರಲ್ ಆಗಿದೆ. ಈ ಕುರಿತಾದ ಒಂದು ರಿಪೋರ್ಟ್ ಇಲ್ಲಿದೆ ನೋಡಿ.


ಚೆನ್ನೈ(ಫೆ.15): ಸತತ ಎರಡನೇ ಬಾರಿಗೆ ಇಂಗ್ಲೆಂಡ್ ವಿರುದ್ದ ದೊಡ್ಡ ಮೊತ್ತ ಕಲೆಹಾಕಲು ಟೀಂ ಇಂಡಿಯಾ ಟೆಸ್ಟ್‌ ಸ್ಪೆಷಲಿಸ್ಟ್ ಬ್ಯಾಟ್ಸ್‌ಮನ್‌ ಚೇತೇಶ್ವರ್ ಪೂಜಾರ ವಿಫಲರಾಗಿದ್ದಾರೆ. ಎರಡನೇ ಟೆಸ್ಟ್ ಪಂದ್ಯದ ಎರಡೂ ಇನಿಂಗ್ಸ್‌ನಲ್ಲೂ ಪೂಜಾರ ಅವರಿಂದ ನಿರೀಕ್ಷಿತ ಬ್ಯಾಟಿಂಗ್ ಪ್ರದರ್ಶನ ಮೂಡಿ ಬರಲಿಲ್ಲ.

ಇಲ್ಲಿನ ಚೆಪಾಕ್‌ ಮೈದಾನದಲ್ಲಿ ನಡೆಯುತ್ತಿರುವ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನಿಂಗ್ಸ್‌ನಲ್ಲಿ ಕೇವಲ 21 ರನ್‌ ಬಾರಿಸಿದ್ದ ಚೇತೇಶ್ವರ್ ಪೂಜಾರ, ಇದೀಗ ಎರಡನೇ ಇನಿಂಗ್ಸ್‌ನಲ್ಲಿ ವಿಚಿತ್ರವಾಗಿ ರನೌಟ್‌ ಆಗುವ ಮೂಲಕ ನಿರಾಸೆ ಅನುಭವಿಸಿದ್ದಾರೆ. ಪೂಜಾರ ರನೌಟ್ ಆಗಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ.

Tap to resize

Latest Videos

undefined

ಅಷ್ಟಕ್ಕೂ ಪೂಜಾರ ರನೌಟ್‌ ವೈರಲ್‌ ಆಗಿದ್ದೇಕೆ..?

ಪೂಜಾರ ಎರಡನೇ ಇನಿಂಗ್ಸ್‌ನ 19ನೇ ಓವರ್‌ನಲ್ಲಿ ಮೋಯಿನ್ ಅಲಿ ಬೌಲಿಂಗ್‌ನಲ್ಲಿ ಮುನ್ನುಗ್ಗಿ ಚೆಂಡನ್ನು ಲೆಗ್‌ಸೈಡ್‌ ಫ್ಲಿಕ್‌ ಮಾಡುವ ಯತ್ನದಲ್ಲಿ ರನೌಟ್ ಆಗಿದ್ದಾರೆ. ಶಾರ್ಟ್‌ಲೆಗ್‌ನಲ್ಲಿ ನಿಂತಿದ್ದ ಓಲಿ ಪೋಪ್‌ ಹಾಗೂ ವಿಕೆಟ್‌ ಕೀಪರ್‌ ಬೆನ್ ಫೋಕ್ಸ್‌ ಜೋಡಿ ಚುರುಕಿನ ಕೈಚಳಕದ ಮೂಲಕ ಪೂಜಾರ ಅವರನ್ನು ಪೆವಿಲಿಯನ್ನಿಗಟ್ಟಿದ್ದಾರೆ. ಮುನ್ನುಗ್ಗಿ ಬಾರಿಸಲು ಯತ್ನಿಸಿದ್ದ ಪೂಜಾರ ವಾಪಾಸ್‌ ಕ್ರೀಸ್‌ಗೆ ಮರಳಲು ಯತ್ನಿಸಿದರಾದರೂ ಬ್ಯಾಟ್‌ ಕೈ ಜಾರಿದ್ದರಿಂದ ಸೌರಾಷ್ಟ್ರ ಮೂಲದ ಬ್ಯಾಟ್ಸ್‌ಮನ್‌ ಪೆವಿಲಿಯನ್ ಸೇರಬೇಕಾಯಿತು.

ಚೆನ್ನೈ ಟೆಸ್ಟ್‌: ಭಾರತದ ಬಿಗಿ ಹಿಡಿತದಲ್ಲಿ ಇಂಗ್ಲೆಂಡ್‌

ಹೀಗಿತ್ತು ನೋಡಿ ಪೂಜಾರ ರನೌಟ್ ಆದ ರೀತಿ:

Pujara with the weirdest runout I’ve seen in a while. pic.twitter.com/VGR9R6lYuT

— Brendan Bradford (@1bbradfo)

ಸುಸ್ಥಿತಿಯಲ್ಲಿ ಟೀಂ ಇಂಡಿಯಾ:
ಎರಡನೇ ಟೆಸ್ಟ್‌ ಪಂದ್ಯದ ಮೂರನೇ ದಿನದಾಟದ ಊಟದ ವಿರಾಮದ ವೇಳೆಗೆ ಟೀಂ ಇಂಡಿಯಾ ಎರಡನೇ ಇನಿಂಗ್ಸ್‌ನಲ್ಲಿ ಕೇವಲ 6 ವಿಕೆಟ್‌ ಕಳೆದುಕೊಂಡು 156 ರನ್ ಬಾರಿಸಿದ್ದು, ಒಟ್ಟಾರೆ 351 ರನ್‌ಗಳ ಮುನ್ನಡೆ ಪಡೆಯುವ ಮೂಲಕ ಪ್ರವಾಸಿ ಇಂಗ್ಲೆಂಡ್‌ ಮೇಲೆ ಬಿಗಿ ಹಿಡಿತ ಸಾಧಿಸಿದೆ. ಇಂಗ್ಲೆಂಡ್‌ ತಂಡ ಮೊದಲ ಇನಿಂಗ್ಸ್‌ನಲ್ಲಿ ಕೇವಲ 134 ರನ್‌ಗಳಿಗೆ ಆಲೌಟ್ ಆಗಿತ್ತು.

click me!