
ದೆಹಲಿ: ಭಾರತೀಯ ಕ್ರಿಕೆಟ್ ಇತಿಹಾಸದಲ್ಲೇ ಹಿಂದೆಂದೂ ಕಾಣದ ಒಂದು ಅಪರೂಪದ ಘಟನೆಗೆ ದೆಹಲಿಯ ಅರುಣ್ ಜೇಟ್ಲಿ ಸ್ಟೇಡಿಯಂ ಸಾಕ್ಷಿಯಾಗಲಿದೆ. ಅಫ್ಘಾನಿಸ್ತಾನ ವಿರುದ್ಧದ ಮೂರು ಪಂದ್ಯಗಳ ಟಿ20 ಸರಣಿಯಲ್ಲಿ, ಭಾರತ ತಂಡವು ಇದೇ ಮೊದಲ ಬಾರಿಗೆ ತವರಿನಲ್ಲೇ 'ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್' ಬಳಸಲಿದೆ.
ಈ ಸರಣಿಯ ಎಲ್ಲಾ ಪಂದ್ಯಗಳು ಭಾರತದಲ್ಲೇ ನಡೆದರೂ, ಇದರ ಅಧಿಕೃತ ಆತಿಥ್ಯ ವಹಿಸಿರುವುದು ಅಫ್ಘಾನಿಸ್ತಾನ ಕ್ರಿಕೆಟ್ ಬೋರ್ಡ್. ಕ್ರಿಕೆಟ್ ನಿಯಮಗಳ ಪ್ರಕಾರ, ಆತಿಥೇಯ ತಂಡಕ್ಕೆ 'ಹೋಮ್ ಡ್ರೆಸ್ಸಿಂಗ್ ರೂಮ್' ನೀಡಬೇಕು. ಇದೇ ಕಾರಣಕ್ಕೆ, ಸರಣಿಯ ಅಧಿಕೃತ ಆಯೋಜಕರಾದ ಅಫ್ಘಾನಿಸ್ತಾನಕ್ಕೆ ಹೋಮ್ ಡ್ರೆಸ್ಸಿಂಗ್ ರೂಮ್ ಸಿಕ್ಕಿದೆ. ಭಾರತ ತಂಡವು ಅತಿಥಿಗಳ ಡ್ರೆಸ್ಸಿಂಗ್ ರೂಮ್ ಬಳಸಬೇಕಾಗಿದೆ.
ಅರುಣ್ ಜೇಟ್ಲಿ ಸ್ಟೇಡಿಯಂನಲ್ಲಿರುವ ಮಾಜಿ ಭಾರತೀಯ ಆಟಗಾರ ರಮಣ್ ಲಾಂಬಾ ಅವರ ಹೆಸರಿನ ಹೋಮ್ ಡ್ರೆಸ್ಸಿಂಗ್ ರೂಮ್ ಅನ್ನು ಅಫ್ಘಾನ್ ಆಟಗಾರರು ಬಳಸಲಿದ್ದಾರೆ. ಹಾಗೆಯೇ, ಪ್ರಕಾಶ್ ಭಂಡಾರಿ ಅವರ ಹೆಸರಿನಲ್ಲಿರುವ ವಿಸಿಟರ್ಸ್ ಡ್ರೆಸ್ಸಿಂಗ್ ರೂಮ್ ಅನ್ನು ಭಾರತೀಯ ಆಟಗಾರರು ಬಳಸಲಿದ್ದಾರೆ. ಕೇವಲ ಡ್ರೆಸ್ಸಿಂಗ್ ರೂಮ್ ಮಾತ್ರವಲ್ಲ, ಟಾಸ್ ಸೇರಿದಂತೆ ಇತರ ಅಧಿಕೃತ ಪ್ರಕ್ರಿಯೆಗಳಲ್ಲೂ ಭಾರತವನ್ನು 'ಅತಿಥಿ ತಂಡ' ಎಂದೇ ಪರಿಗಣಿಸಲಾಗುತ್ತದೆ.
ತನ್ನ ದೇಶದಲ್ಲಿ ಭದ್ರತೆ ಮತ್ತು ಮೂಲಸೌಕರ್ಯದ ಸವಾಲುಗಳಿರುವುದರಿಂದ, ಅಫ್ಘಾನಿಸ್ತಾನವು ತನ್ನ ತವರಿನ ಪಂದ್ಯಗಳನ್ನು ಬೇರೆ ದೇಶಗಳಲ್ಲಿ ಆಡುತ್ತದೆ. ಆದರೆ, ಭಾರತದ ನೆಲದಲ್ಲಿ ನಡೆಯುವ ಸರಣಿಯಲ್ಲಿ ಅಫ್ಘಾನಿಸ್ತಾನ ಅಧಿಕೃತ ಆತಿಥೇಯರಾಗುತ್ತಿರುವುದು ಮತ್ತು ಭಾರತ ತಂಡ ವಿಸಿಟಿಂಗ್ ಡ್ರೆಸ್ಸಿಂಗ್ ರೂಮ್‌ಗೆ ಸ್ಥಳಾಂತರಗೊಳ್ಳುತ್ತಿರುವುದು ಇದೇ ಮೊದಲು. ಸರಣಿಯ ಮೊದಲ ಟಿ20 ಪಂದ್ಯ ಸೆಪ್ಟೆಂಬರ್ 13 ರಂದು ನಡೆಯಲಿದೆ. ಸೆಪ್ಟೆಂಬರ್ 15 ಮತ್ತು 17 ರಂದು ಸರಣಿಯ ಕೊನೆಯ ಎರಡು ಪಂದ್ಯಗಳು ನಡೆಯಲಿವೆ. ಈ ಮೂರೂ ಪಂದ್ಯಗಳಿಗೆ ಅರುಣ್ ಜೇಟ್ಲಿ ಸ್ಟೇಡಿಯಂ ನಡೆಯಲಿದೆ.
ಶ್ರೇಯಸ್ ಅಯ್ಯರ್(ನಾಯಕ), ಅಭಿಷೇಕ್ ಶರ್ಮಾ, ವೈಭವ್ ಸೂರ್ಯವಂಶಿ, ಸಂಜು ಸ್ಯಾಮ್ಸನ್(ವಿಕೆಟ್ ಕೀಪರ್), ಇಶಾನ್ ಕಿಶನ್(ವಿಕೆಟ್ ಕೀಪರ್), ತಿಲಕ್ ವರ್ಮಾ(ಉಪನಾಯಕ), ಶಿವಂ ದುಬೆ, ನಿತೀಶ್ ಕುಮಾರ್ ರೆಡ್ಡಿ, ಅಕ್ಷರ್ ಪಟೇಲ್, ವಾಷಿಂಗ್ಟನ್ ಸುಂದರ್, ವರುಣ್ ಚಕ್ರವರ್ತಿ, ರವಿ ಬಿಷ್ಣೋಯಿ, ಜಸ್ಪ್ರೀತ್ ಬುಮ್ರಾ, ಅರ್ಶದೀಪ್ ಸಿಂಗ್, ಯಶ್ ಠಾಕೂರ್.
ಇಬ್ರಾಹಿಂ ಜದ್ರಾನ್(ನಾಯಕ), ರೆಹಮನುಲ್ಲಾ ಗುರ್ಬಾಜ್(ವಿಕೆಟ್ ಕೀಪರ್), ನೂರ್ ರೆಹಮಾನ್(ವಿಕೆಟ್ ಕೀಪರ್), ಸೆದಿಕ್ಕುಲ್ಲಾ ಅಟಲ್, ಡೌರಿಶ್ ರಸೋಲಿ, ಅಜ್ಮತುಲ್ಲಾ ಓಮರ್‌ಝೈ, ಗುಲ್ಬದ್ದೀನ್ ನೈಬ್, ಮೊಹಮ್ಮದ್ ನಬಿ, ರಶೀದ್ ಖಾನ್, ನಂಗ್ಯಾಲ್ ಖರೋಟಿ, ನೂರ್ ಅಹಮ್ಮದ್, ಮುಜೀಬ್ ಉರ್ ರೆಹಮಾನ್, ಫಝಲ್‌ಹಕ್ ಫಾರೂಕಿ, ಅಬ್ದುಲ್ಲಾ ಅಹಮದ್‌ಝೈ, ನವೀನ್ ಉಲ್ ಹಕ್
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.