ದೆಹಲಿಯಲ್ಲಿ ನಿಗದಿಯಾಗಿರುವ ಭಾರತ ಶ್ರೀಲಂಕಾ ಏಕದಿನ ಶಿಫ್ಟ್ ಕುರಿತು ಬಿಸಿಸಿಐ ಹೇಳಿದ್ದೇನು?

Published : Oct 12, 2026, 06:51 PM IST
India vs Sri Lanka

ಸಾರಾಂಶ

ದೆಹಲಿಯಲ್ಲಿ ಕಳೆದ ಹಲವು ದಿನಗಳಿಂದ ಕೋಲಾಹಲ ನಡೆಯುತ್ತಿದೆ. ಇದರ ನಡುವೆ ಭಾರತ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ದೆಹಲಿ ಆತಿಥ್ಯವಹಿಸಿದೆ. ದೆಹಲಿ ಪಂದ್ಯ ಶಿಫ್ಟ್ ಮಾಡಲಾಗುತ್ತಿದೆಯಾ? ಬಿಸಿಸಿಐ ಉತ್ತರವೇನು?

ನವದೆಹಲಿ (ಅ.12) ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ಕೆಲವು ದಿನಗಳಿಂದ ಪ್ರತಿಭಟನೆ, ಹೋರಾಟ, ಜಾಥಾಗಳಿಂದ ಸಕ್ರಿಯವಾಗಿದೆ. ಕಾನೂನು ಸುವ್ಯವಸ್ಥೆಗಾಗಿ ಕೆಲ ಸೇವೆಗಳನ್ನು ತಾತ್ಕಾಲಿಕವಾಗಿ ಬಂದ್ ಮಾಡಲಾಗಿದೆ. ಒಂದೆಡೆ ದೆಹಲಿಯಲ್ಲಿ ಹೋರಾಟ ತೀವ್ರಗೊಳ್ಳುತ್ತಿದ್ದರೆ, ಮತ್ತೊಂದೆಡೆ ದೆಹಲಿ ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಸರಣಿಯ ಮೊದಲ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ. ದೆಹಲಿಯಲ್ಲಿ ಆಯೋಜಿಸಿರುವ ಮೊದಲ ಏಕದಿನ ಪಂದ್ಯವನ್ನು ಅಹಮ್ಮದಾಬಾದ್‌ಗೆ ಸ್ಥಳಾಂತರ ಮಾಡಲಾಗುತ್ತಿದೆ ಅನ್ನೋ ಮಾತುಗಳು ಕೇಳಿಬಂದಿದೆ. ಈ ಕುರಿತು ಹಲವು ವರದಿಗಳು ಹರಿದಾಡಿತ್ತು. ಸದ್ಯ ಬಿಸಿಸಿಐ ಪಂದ್ಯ ಸ್ಥಳಾಂತರ ಕುರಿತು ಪ್ರತಿಕ್ರಿಯೆ ನೀಡಿದೆ.

ಬಿಸಿಸಿಐ ಸ್ಪಷ್ಟನೆ ಏನು

ಭಾರತ ಹಾಗೂ ಶ್ರೀಲಂಕಾ ನಡುವಿನ 3 ಪಂದ್ಯಯದ ಏಕದಿನ ಸರಣಿ ಡಿಸೆಂಬರ್ 13ರಿಂದ ಆರಂಭಗೊಳ್ಳುತ್ತಿದೆ. ಮೊದಲ ಪಂದ್ಯ ಅರುಣ್ ಜೇಟ್ಲಿ ಕ್ರೀಡಾಂಗಣ ದೆಹಲಿಯಲ್ಲಿ ನಡೆಯುತ್ತಿದೆ. ಪಂದ್ಯ ಸ್ಥಳಾಂತರ ಕುರಿತು ಪ್ರತಿಕ್ರಿಯೆ ನೀಡಿರುವ ಬಿಸಿಸಿಐ ಕಾರ್ಯದರ್ಶಿ ದೇವಜಿತ್ ಸೈಕಿಯಾ, ಭಾರತ ಹಾಗೂ ಶ್ರೀಲಂಕಾ ನಡುವಿನ ಏಕದಿನ ಪಂದ್ಯಗಳ ಕ್ರೀಡಾಂಗಣ, ದಿನಾಂಗಳಲ್ಲಿ ಯಾವುದೇ ಬದಲಾವಣೆ ಇಲ್ಲ. ದೆಹಲಿಯಿಂದ ಪಂದ್ಯವನ್ನು ಅಹಮ್ಮದಾಬಾದ್‌ಗೆ ಸ್ಥಳಾಂತರಿಸುತ್ತಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

ಬಿಸಿಸಿಐ ನಿರ್ಧಾರ ಕುರಿತು ಕಾರ್ಯದರ್ಶಿ ಸ್ಪಷ್ಟನೆ

ದೆಹಲಿಯಲ್ಲಿ ನಡೆಯುತ್ತಿರುವ ಬೆಳವಣಿಗೆಗೂ ಪಂದ್ಯಕ್ಕೂ ಯಾವುದೇ ಸಂಬಂಧವಿಲ್ಲ. ದೆಹಲಿಯ ಅರುಣ್ ಜೇಟ್ಲಿ ಕ್ರೀಡಾಂಗಣದಲ್ಲಿ ಕೆಲ ಕಾಮಗಾರಿಗಳು ನಡೆಯುತ್ತಿತ್ತು. ಹೀಗಾಗಿ ಡಿಸೆಂಬರ್ 13ರ ವೇಳೆಗೆ ಕಾಮಗಾರಿ ಮುಗಿಯುವ ಸಾಧ್ಯತೆಗಳಿಲ್ಲ ಅನ್ನೋ ಮಾತುಗಳು ಕೇಳಿಬಂದಿತ್ತು. ಹೀಗಾಗಿ ಪಂದ್ಯ ಸ್ಥಳಾಂತರ ಮಾತುಗಳು ಬಂದಿತ್ತು. ಆದರೆ ಸದ್ಯ ಬಿಸಿಸಿಐ ಪಂದ್ಯ ಸ್ಥಳಾಂತರಿಸುವ ಯಾವುದೇ ನಿರ್ಧಾರ ತೆಗೆದುಕೊಂಡಿಲ್ಲ. ಮೊದಲ ಪಂದ್ಯಕ್ಕೆ ದೆಹಲಿ ಆತಿಥ್ಯವಹಿಸಲಿದೆ ಎಂದು ದೇವಜಿತ್ ಹೇಳಿದ್ದಾರೆ.

ಬೆಂಗಳೂರಿನಲ್ಲಿ 2ನೇ ಏಕದಿನ

ಭಾರತ ಹಾಗೂ ಶ್ರೀಲಂಕಾ ನಡುವೆ 3 ಪಂದ್ಯಗಳ ಏಕದಿನ ಹಾಗೂ 3 ಪಂದ್ಯಗಳ ಟಿ20 ಸರಣಿ ಆಯೋಜಿಸಲಾಗಿದೆ. ವಿಶೇಷ ಅಂದರೆ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣಲ್ಲಿ 2ನೇ ಏಕದಿನ ಪಂದ್ಯ ಆಯೋಜಿಸಲಾಗಿದೆ. ಚಿನ್ನಸ್ವಾಮಿ ಕಾಲ್ತುಳಿತದ ಬಳಿಕ ಅಂತಾರಾಷ್ಟ್ರೀಯ ಪಂದ್ಯ ಆಡುವುದು ಸೂಕ್ತವಲ್ಲ ಅನ್ನೋ ಅಭಿಪ್ರಾಯಗಳು ವ್ಯಕ್ತವಾಗಿತ್ತು. ಆದರೆ ಕೆಎಸ್‌ಸಿಎ ಅಧ್ಯತ್ರ ವೆಂಕಟೇಶ್ ಪ್ರಸಾದ್ ಸತತ ಪ್ರಯತ್ನದಿಂದ ಬೆಂಗಳೂರು ಅಂತಾರಾಷ್ಟ್ರೀಯ ಪಂದ್ಯಕ್ಕೆ ಆತಿಥ್ಯವಹಿಸುತ್ತಿದೆ.

ಭಾರತ ಶ್ರೀಲಂಕಾ ಏಕದಿನ ಸರಣಿ

  • ಮೊದಲ ಏಕದಿನ, ಡಿಸೆಂಬರ್ 13, ದೆಹಲಿ
  • ಏರಡನೇ ಏಕದಿನ, ಡಿಸೆಂಬರ್ 16, ಬೆಂಗಳೂರು
  • ಮೂರನೇ ಏಕದಿನ, ಡಿಸೆಂಬರ್ 19, ಅಹಮ್ಮಾದಬಾದ್

ಭಾರತ ಶ್ರೀಲಂಕಾ ಟಿ20 ಸರಣಿ

  • ಮೊದಲ ಟಿ20, ಡಿಸೆಂಬರ್ 22, ರಾಜ್‌ಕೋಟ್
  • ಎರಡನೇ ಟಿ20, ಡಿಸೆಂಬರ್ 24, ಕಟಕ್
  • ಮೂರನೇ ಟಿ20, ಡಿಸೆಂಬರ್ 27, ಪುಣೆ

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಅಭಿಷೇಕ್ ಔಟ್, ವೈಭವ್ ಇನ್...! ವೆಸ್ಟ್ ಇಂಡೀಸ್ ಎದುರಿನ 4 ಪಂದ್ಯಕ್ಕೆ ಬಲಿಷ್ಠ ಭಾರತ ಸಂಭಾವ್ಯ ತಂಡ ಪ್ರಕಟ..! ಎರಡು ಮಹತ್ವದ ಬದಲಾವಣೆ
'ಈ ಸಲ ನಾವು...': 2027ರ ಏಕದಿನ ವಿಶ್ವಕಪ್ ಟೂರ್ನಿಯ ಬಗ್ಗೆ ಅಚ್ಚರಿ ಭವಿಷ್ಯ ನುಡಿದ ವಿರೇಂದ್ರ ಸೆಹ್ವಾಗ್..!