ಗಾಯದ ಮೇಲೆ ಬರೆ: ಬಾಕ್ಸಿಂಗ್ ಡೇ ಟೆಸ್ಟ್‌ ಸೋಲಿನ ಬೆನ್ನಲ್ಲೇ ಟೀಂ ಇಂಡಿಯಾಗೆ ಶಾಕ್ ನೀಡಿದ ಐಸಿಸಿ..!

By Naveen KodaseFirst Published Dec 29, 2023, 1:40 PM IST
Highlights

ನಿಗದಿತ ಸಮಯಕ್ಕಿಂತ ಎರಡು ಓವರ್ ತಡವಾಗಿ ಬೌಲಿಂಗ್ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದ ಸಂಭಾವನೆಯ 10% ದಂಡ ವಿಧಿಸಲಾಗಿದೆ. ಮೊದಲೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿದ್ದ ಭಾರತ ತಂಡಕ್ಕೆ ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

ಸೆಂಚೂರಿಯನ್(ಡಿ.29): ದಶಕದ ಬಳಿಕ ಟೆಸ್ಟ್ ಕ್ರಿಕೆಟ್‌ನಲ್ಲಿ ಇನಿಂಗ್ಸ್ ಸೋಲು ಅನುಭವಿಸಿದ ಭಾರತಕ್ಕೆ ಐಸಿಸಿ ಇದೀಗ ಮತ್ತೊಂದು ಶಾಕ್ ನೀಡಿದೆ. ದಕ್ಷಿಣ ಆಫ್ರಿಕಾ ಎದುರಿನ ಬಾಕ್ಸಿಂಗ್ ಡೇ ಟೆಸ್ಟ್‌ ಪಂದ್ಯದಲ್ಲಿ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ ತಪ್ಪಿಗೆ ಟೀಂ ಇಂಡಿಯಾ ಆಟಗಾರರಿಗೆ ಅಂತಾರಾಷ್ಟ್ರೀಯ ಕ್ರಿಕೆಟ್ ಸಮಿತಿಯು ಪಂದ್ಯದ ಸಂಭಾವನೆಯ 10% ದಂಡ ವಿಧಿಸಿದೆ. 

ನಿಗದಿತ ಸಮಯಕ್ಕಿಂತ ಎರಡು ಓವರ್ ತಡವಾಗಿ ಬೌಲಿಂಗ್ ಮಾಡಿರುವುದು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಐಸಿಸಿ ಮ್ಯಾಚ್ ರೆಫ್ರಿ ಕ್ರಿಸ್ ಬ್ರಾಡ್ ಟೀಂ ಇಂಡಿಯಾ ಆಟಗಾರರಿಗೆ ಪಂದ್ಯದ ಸಂಭಾವನೆಯ 10% ದಂಡ ವಿಧಿಸಲಾಗಿದೆ. ಮೊದಲೇ ಟೆಸ್ಟ್ ಪಂದ್ಯದಲ್ಲಿ ಹೀನಾಯ ಪ್ರದರ್ಶನ ತೋರುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿದ್ದ ಭಾರತ ತಂಡಕ್ಕೆ ಇದು ಗಾಯದ ಮೇಲೆ ಬರೆ ಎಳೆದಂತೆ ಆಗಿದೆ.

Aus vs Pak: ರೋಚಕ ಘಟ್ಟದತ್ತ ಆಸೀಸ್-ಪಾಕ್ ಎರಡನೇ ಟೆಸ್ಟ್

ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದು ಐಸಿಸಿ ನೀತಿಸಂಹಿತೆಯ ಆರ್ಟಿಕಲ್ 2.22ರ ಸ್ಪಷ್ಟ ಉಲ್ಲಂಘನೆಯಾಗಿದ್ದು, ಒಂದು ಓವರ್‌ಗೆ ಪಂದ್ಯದ ಸಂಭಾವನೆಯ 5% ಅಂತೆ ಎರಡು ಓವರ್ ನಿಧಾನಗತಿಯಲ್ಲಿ ಬೌಲಿಂಗ್ ಮಾಡಿದ್ದಕ್ಕಾಗಿ 10% ಆಟಗಾರರಿಗೆ ಹಾಗೂ ಸಹಾಯಕ ಸಿಬ್ಬಂದಿಗೆ ದಂಡವನ್ನು ವಿಧಿಸಲಾಗಿದೆ. 

ಇನ್ನು ಇದಷ್ಟೇ ಅಲ್ಲದೇ ನಿಧಾನಗತಿಯ ಬೌಲಿಂಗ್ ಮಾಡಿದ ತಪ್ಪಿಗಾಗಿ ರೋಹಿತ್ ಶರ್ಮಾ ಪಡೆ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ನ ಅಂಕಪಟ್ಟಿಯಲ್ಲಿ ಶಿಕ್ಷೆಯ ರೂಪದಲ್ಲಿ ಒಂದು ಅಂಕವನ್ನು ಕಳೆದುಕೊಂಡಿದೆ. 

ಮೊದಲ ಟೆಸ್ಟ್ ಹೇಗಿತ್ತು?:

ಭಾರತ ಹಾಗೂ ದಕ್ಷಿಣ ಆಫ್ರಿಕಾ ತಂಡಗಳ ನಡುವಿನ ಪಂದ್ಯದಲ್ಲಿ ಟಾಸ್ ಸೋತ ಭಾರತ, ಕಗಿಸೋ ರಬಾಡ ಮಾರಕ ದಾಳಿಗೆ ತತ್ತರಿಸಿ ಮೊದಲ ಇನಿಂಗ್ಸ್‌ನಲ್ಲಿ 245 ರನ್‌ಗಳಿಗೆ ಸರ್ವಪತನ ಕಂಡಿತು. ಇನ್ನು ಮೊದಲ ಇನಿಂಗ್ಸ್ ಆರಂಭಿಸಿದ ದಕ್ಷಿಣ ಆಫ್ರಿಕಾ, ಡೀನ್ ಎಲ್ಗರ್ ಆಕರ್ಷಕ ಶತಕದ ನೆರವಿನಿಂದ 408 ರನ್ ಕಲೆಹಾಕಿತು. ಇನ್ನು ಭಾರೀ ಹಿನ್ನಡೆಯೊಂದಿಗೆ ಎರಡನೇ ಇನಿಂಗ್ಸ್‌ ಆರಂಭಿಸಿದ ಟೀಂ ಇಂಡಿಯಾ ಮತ್ತೊಮ್ಮೆ ಬ್ಯಾಟಿಂಗ್ ವೈಪಲ್ಯ ಅನುಭವಿಸಿ 131 ರನ್‌ಗಳಿಗೆ ಸರ್ವಪತನ ಕಾಣುವ ಮೂಲಕ ಇನಿಂಗ್ಸ್ ಸೋಲು ಅನುಭವಿಸಿತು.

13 ವರ್ಷದ ಬಳಿಕ ಇನ್ನಿಂಗ್ಸ್‌ ಸೋಲು

ಭಾರತಕ್ಕೆ ದ.ಆಫ್ರಿಕಾ ವಿರುದ್ಧ 13 ವರ್ಷಗಳ ಬಳಿಕ ಮತ್ತೊಮ್ಮೆ ಇನ್ನಿಂಗ್ಸ್‌ ಸೋಲು ಎದುರಾಯಿತು. ಕೊನೆ ಬಾರಿ ಭಾರತ 2010ರಲ್ಲಿ ಈ ಮುಖಭಂಗಕ್ಕೊಳಗಾಗಿತ್ತು. ಸೆಂಚೂರಿಯನ್‌ನಲ್ಲೇ ನಡೆದಿದ್ದ ಪಂದ್ಯದಲ್ಲಿ ಭಾರತ ಇನ್ನಿಂಗ್ಸ್‌ ಹಾಗೂ 25 ರನ್‌ಗಳಿಂದ ಪರಾಭವಗೊಂಡಿತ್ತು.

ಟೀಕೆ ಮಾಡಿದವರೇ ಈಗ ಹೊಗಳುತ್ತಿದ್ದಾರೆ: ಕೆ ಎಲ್ ರಾಹುಲ್‌

9ನೇ ಬಾರಿಯೂ ಸರಣಿ ಗೆಲುವಿಲ್ಲ!

ಭಾರತ ಮೊದಲ ಪಂದ್ಯ ಸೋತಿದ್ದರಿಂದ ಸರಣಿ ಗೆಲ್ಲುವ ಅವಕಾಶ ಕಳೆದುಕೊಂಡಿದೆ. 2ನೇ ಪಂದ್ಯ ಗೆದ್ದರೂ ಸರಣಿ ಸಮಗೊಳಿಸಲು ಮಾತ್ರ ಸಾಧ್ಯವಿದೆ. ಇದರೊಂದಿಗೆ 9ನೇ ಬಾರಿಯೂ ದ.ಆಫ್ರಿಕಾ ಮಣ್ಣಲ್ಲಿ ಭಾರತಕ್ಕೆ ಸರಣಿ ಗೆಲುವು ಮರೀಚಿಕೆಯಾಯಿತು. 1992ರಿಂದ ಭಾರತ ಈ ಬಾರಿಯದ್ದು ಹೊರತುಪಡಿಸಿ 8 ಸರಣಿ ಆಡಿವೆ. ಇದರಲ್ಲಿ 7ರಲ್ಲಿ ಸೋತಿದ್ದು, 2010ರಲ್ಲಿ 1-1 ಡ್ರಾಗೊಂಡಿತ್ತು.

click me!