ಗಂಭೀರ್ ಯುಗ: ಭಾರತ ಕ್ರಿಕೆಟ್‌ನ ಕರಾಳ ಅಧ್ಯಾಯ? ಟೀಂ ಇಂಡಿಯಾ ಇನ್ನೆಷ್ಟು ಸೋಲು ನೋಡಬೇಕೋ?

Published : Nov 17, 2025, 01:03 PM IST
Gautam Gambhir

ಸಾರಾಂಶ

ಗೌತಮ್ ಗಂಭೀರ್ ಟೀಂ ಇಂಡಿಯಾದ ಹೆಡ್‌ಕೋಚ್ ಆದ ನಂತರ, ಭಾರತ ಕ್ರಿಕೆಟ್ ತಂಡವು ಹಲವು ಐತಿಹಾಸಿಕ ಸೋಲುಗಳನ್ನು ಕಂಡಿದೆ. ತವರಿನಲ್ಲಿ ನ್ಯೂಜಿಲೆಂಡ್ ವಿರುದ್ಧ ವೈಟ್‌ವಾಶ್, 27 ವರ್ಷಗಳ ಬಳಿಕ ಲಂಕಾ ವಿರುದ್ಧ ಸರಣಿ ಸೋಲು ಪ್ರಮುಖ ಹಿನ್ನಡೆಗಳನ್ನು ಈ ಲೇಖನದಲ್ಲಿ ವಿವರಿಸಲಾಗಿದೆ.

ಕೋಲ್ಕತಾ: ಗೌತಮ್ ಗಂಭೀರ್ ಟೀಂ ಇಂಡಿಯಾ ಹೆಡ್‌ಕೋಚ್ ಆದ ಬಳಿಕ ಭಾರತ ಕ್ರಿಕೆಟ್ ಕ್ರಿಕೆಟ್ ತಂಡ ಗೆದ್ದಿದ್ದಕ್ಕಿಂತ ಸೋತಿದ್ದೇ ಹೆಚ್ಚು. ಐಸಿಸಿ ಚಾಂಪಿಯನ್ಸ್ ಟ್ರೋಫಿ ಗೆದ್ದ ಸಾಧನೆ ಹೊರತುಪಡಿಸಿ, ಟೀಂ ಇಂಡಿಯಾ ಹಲವು ಸೋಲಿನ ಕಹಿಯುಂಡಿದೆ. ಭಾರತ ಸೋತ ಮೇಜರ್ ಸರಣಿಗಳ ಮಾಹಿತಿ ಇಲ್ಲಿದೆ ನೋಡಿ

* 27 ವರ್ಷಗಳ ಬಳಿಕ ಲಂಕಾ ವಿರುದ್ಧ ದ್ವಿಪಕ್ಷೀಯ ಏಕದಿನ ಸರಣಿ ಸೋಲು

ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ, ಬರೋಬ್ಬರಿ ಎರಡೂವರೆ ದಶಕದ ಬಳಿಕ ಲಂಕಾ ಎದುರು 3 ಪಂದ್ಯಗಳ ಏಕದಿನ ಸರಣಿಯಲ್ಲಿ 0-2 ಸೋಲು ಅನುಭವಿಸಿತ್ತು. ಒಂದು ಪಂದ್ಯ ಟೈನಲ್ಲಿ ಕೊನೆಗೊಂಡಿತ್ತು.

* 36 ವರ್ಷಗಳ ಬಳಿಕ ತವರಿನಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟೆಸ್ಟ್‌ ಸೋಲು

ಭಾರತ ತಂಡವು ತವರಿನಲ್ಲಿ ಬರೋಬ್ಬರಿ 36 ವರ್ಷಗಳ ಬಳಿಕ 0-3 ಅಂತರದಲ್ಲಿ ವೈಟ್‌ವಾಷ್ ಅನುಭವಿಸುವ ಮೂಲಕ ಮುಖಭಂಗ ಅನುಭವಿಸಿತ್ತು. ಕಿವೀಸ್ ತಂಡವು ಮೊದಲ ಸಲ ಭಾರತ ನೆಲದಲ್ಲಿ ಟೆಸ್ಟ್ ಸರಣಿ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು.

ತವರಿನಲ್ಲಿ 12 ವರ್ಷಗಳ ಬಳಿಕ ಸರಣಿ ಸೋತ ಭಾರತ

ಗೌತಮ್ ಗಂಭೀರ್ ಮಾರ್ಗದರ್ಶನದಲ್ಲಿ ಟೀಂ ಇಂಡಿಯಾ ಬರೋಬ್ಬರಿ 12 ವರ್ಷಗಳ ಬಳಿಕ ತವರಿನಲ್ಲಿ ಟೆಸ್ಟ್ ಸರಣಿ ಸೋತು ಮುಖಭಂಗ ಅನುಭವಿಸಿತು. 2012ರಲ್ಲಿ ಇಂಗ್ಲೆಂಡ್ ಎದುರು ಸರಣಿ ಸೋತ ಬಳಿಕ ತವರಿನಲ್ಲಿ ಭಾರತ ಒಂದೇ ಒಂದು ಸರಣಿ ಸೋತಿರಲಿಲ್ಲ. ಆದರೆ ಗಂಭೀರ್ ಕೋಚ್ ಆದ ಬಳಿಕ 12 ವರ್ಷಗಳ ನಂತರ ತವರಿನಲ್ಲಿ ನ್ಯೂಜಿಲೆಂಡ್ ಎದುರು ಟೆಸ್ಟ್ ಸರಣಿ ಸೋತಿದೆ.

* 19 ವರ್ಷಗಳ ಬಳಿಕ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಟೆಸ್ಟ್‌ ಸೋಲು

ಭಾರತ ತಂಡವು ನ್ಯೂಜಿಲೆಂಡ್ ಎದುರು ಬೆಂಗಳೂರಿನ ಎಂ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನಡೆದ ಟೆಸ್ಟ್‌ನಲ್ಲಿ 8 ವಿಕೆಟ್ ಸೋಲು ಅನುಭವಿಸಿತು. ಕಳೆದ 19 ವರ್ಷಗಳಿಂದ ಭಾರತದ ಟೆಸ್ಟ್ ಭದ್ರಕೋಟೆ ಎನಿಸಿಕೊಂಡ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ಟೆಸ್ಟ್ ಸೋಲಿನ ಮುಖಭಂಗ ಅನುಭವಿಸಿತ್ತು.

* ಮೊದಲ ಬಾರಿಗೆ ತವರಿನ ಟೆಸ್ಟ್‌ ಇನ್ನಿಂಗ್ಸಲ್ಲಿ 50ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್‌

ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ನ್ಯೂಜಿಲೆಂಡ್ ಎದುರು ನಡೆದ ಮೊದಲ ಟೆಸ್ಟ್‌ನಲ್ಲಿ ಭಾರತ ತಂಡವು 46 ರನ್‌ಗಳಿಗೆ ಸರ್ವಪತನ ಕಂಡಿತು. ಈ ಮೂಲಕ ತವರಿನ ಟೆಸ್ಟ್ ಇನ್ನಿಂಗ್ಸ್‌ವೊಂದರಲ್ಲಿ ಮೊದಲ ಬಾರಿಗೆ 50ಕ್ಕಿಂತ ಕಡಿಮೆ ಮೊತ್ತಕ್ಕೆ ಆಲೌಟ್ ಆಗಿ ಮುಜುಗರ ಅನುಭವಿಸಿತ್ತು.

* ತವರಿನ ಟೆಸ್ಟ್‌ ಸರಣಿಯಲ್ಲಿ ಮೊದಲ ಬಾರಿಗೆ 0-3 ವೈಟ್‌ವಾಶ್‌ ಮುಖಭಂಗ

ಭಾರತ ತಂಡವು ಗೌತಮ್ ಗಂಭೀರ್ ಕೋಚ್ ಆಗುವ ಮುನ್ನ ಒಮ್ಮೆಯೂ ತವರಿನಲ್ಲಿ ವೈಟ್‌ವಾಷ್ ಮುಖಭಂಗ ಅನುಭವಿಸಿರಲಿಲ್ಲ. ಆದರೆ ಗಂಭೀರ್ ಮಾರ್ಗದರ್ಶನದಲ್ಲಿ ಕಿವೀಸ್ ಎದುರು 0-3 ವೈಟ್‌ವಾಶ್‌ ಅನುಭವಿಸಿ ಕೆಟ್ಟ ದಾಖಲೆ ಬರೆಯಿತು.

* 10 ವರ್ಷ ಬಳಿಕ ಬಾರ್ಡರ್‌-ಗವಾಸ್ಕರ್‌ ಟೆಸ್ಟ್‌ ಸರಣಿ ಸೋತ ಭಾರತ

ಭಾರತ ತಂಡವು ಆಸ್ಟ್ರೇಲಿಯಾ ಪ್ರವಾಸದಲ್ಲಿ 1-3 ಅಂತರದಲ್ಲಿ ಬಾರ್ಡರ್-ಗವಾಸ್ಕರ್ ಟೆಸ್ಟ್ ಸರಣಿ ಸೋಲುವ ಮೂಲಕ ಒಂದು ವರ್ಷದ ಬಳಿಕ ಪ್ರತಿಷ್ಠಿತ ಬಾರ್ಡರ್-ಗವಾಸ್ಕರ್ ಸರಣಿ ಸೋಲು ಅನುಭವಿಸಿತು. ಜತೆಗೆ ಮೊದಲ ಸಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ವಿಫಲವಾಗಿತ್ತು.

* ಟೆಸ್ಟ್‌ ವಿಶ್ವಕಪ್‌ ಫೈನಲ್‌ ಪ್ರವೇಶಿಸಲು ಮೊದಲ ಸಲ ವಿಫಲ

ಭಾರತ ತಂಡವು ಮೊದಲೆರಡು ಆವೃತ್ತಿಯ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್ ಫೈನಲ್‌ಗೇರಲು ಯಶಸ್ವಿಯಾಗಿತ್ತು. ಆದರೆ ಗಂಭೀರ್ ಟೀಂ ಇಂಡಿಯಾ ಹೆಡ್‌ಕೋಚ್ ಆದ ಬಳಿಕ ಮೊದಲ ಸಲ ವಿಶ್ವ ಟೆಸ್ಟ್ ಚಾಂಪಿಯನ್‌ಶಿಪ್‌ ಫೈನಲ್‌ಗೇರಲು ಮೊದಲ ಸಲ ವಿಫಲವಾಗಿತ್ತು.

15 ವರ್ಷಗಳ ಬಳಿಕ ಮೊದಲ ಸಲ ತವರಿನಲ್ಲಿ ಹರಿಣಗಳಿಗೆ ಶರಣಾದ ಭಾರತ

ಭಾರತ ತಂಡವು ತವರಿನಲ್ಲಿ ಮೊದಲ ಸಲ ಬರೋಬ್ಬರಿ 15 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಎದುರು ಸೋಲು ಅನುಭವಿಸಿದೆ. ಕೊನೆಯದಾಗಿ 2010ರಲ್ಲಿ ಭಾರತದಲ್ಲಿ ದಕ್ಷಿಣ ಆಫ್ರಿಕಾ ತಂಡವು ಟೆಸ್ಟ್ ಗೆಲುವು ಸಾಧಿಸಿತ್ತು.

 

 

 

 

 

ಭಾರತ ತಂಡವು ತವರಿನಲ್ಲಿ ಮೊದಲ ಸಲ ಬರೋಬ್ಬರಿ 15 ವರ್ಷಗಳ ಬಳಿಕ ದಕ್ಷಿಣ ಆಫ್ರಿಕಾ ಎದುರು ಸೋಲು ಅನುಭವಿಸಿದೆ. ಕೊನೆಯದಾಗಿ 2010ರಲ್ಲಿ ಭಾರತದಲ್ಲಿ ದಕ್ಷಿಣ ಆಫ್ರಿಕಾ ತಂಡವು ಟೆಸ್ಟ್ ಗೆಲುವು ಸಾಧಿಸಿತ್ತು.

 

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಮೇಲ್ಮನವಿ ಅರ್ಜಿ ವಜಾಗೊಳಿಸಿದ ಹೈಕೋರ್ಟ್, ಡಿ.7ಕ್ಕೆ ಕರ್ನಾಟಕ ಕ್ರಿಕೆಚ್ ಸಂಸ್ಥೆ ಚುನಾವಣೆ
ಕಾಂಗರೂ ನಾಡಲ್ಲಿ ಶತಕದ ಬರ ನೀಗಿಸಿಕೊಂಡ ಜೋ ರೂಟ್! ಕೊನೆಗೂ ತಪ್ಪಿದ ಹೇಡನ್ 'ಬೆತ್ತಲೆ ಸೇವೆ'!