Ind vs Eng 2nd ODI: ಇಂಗ್ಲೆಂಡ್ ಎದುರು ಏಕದಿನ ಸರಣಿ ಗೆಲ್ಲಲು ತುದಿಗಾಲಲ್ಲಿ ನಿಂತ ಟೀಂ ಇಂಡಿಯಾ!

Naveen Kodase   | Kannada Prabha
Published : Jul 16, 2026, 10:41 AM IST
England vs India

ಸಾರಾಂಶ

ಟಿ20 ಸರಣಿ ಸೋಲಿನ ಬಳಿಕ ಮೊದಲ ಏಕದಿನ ಪಂದ್ಯ ಗೆದ್ದಿರುವ ಭಾರತ, ಇದೀಗ ಸರಣಿ ಗೆಲುವಿನ ಮೇಲೆ ಕಣ್ಣಿಟ್ಟಿದೆ. ಎರಡನೇ ಪಂದ್ಯದಲ್ಲಿ ಹಿರಿಯ ಆಟಗಾರರ ಪ್ರದರ್ಶನ ನಿರ್ಣಾಯಕವಾಗಲಿದ್ದು, ನಾಯಕ ಶುಭ್‌ಮನ್‌ ಗಿಲ್‌ ಅವರ ಫಿಟ್ನೆಸ್‌ ಬಗ್ಗೆ ಇನ್ನೂ ಖಚಿತತೆ ಇಲ್ಲ.

ಕಾರ್ಡಿಫ್‌: ಐರ್ಲೆಂಡ್‌ ಹಾಗೂ ಇಂಗ್ಲೆಂಡ್‌ನಲ್ಲಿ ಟಿ20 ಸರಣಿಯ ಹೀನಾಯ ಸೋಲಿನ ಬಳಿಕ ಸೋಮವಾರ ಇಂಗ್ಲೆಂಡ್‌ ಏಕದಿನ ಪಂದ್ಯ ಗೆದ್ದಿದ್ದ ಭಾರತ ತಂಡ, ಈಗ ಸರಣಿ ಗೆಲುವಿನ ವಿಶ್ವಾಸದಲ್ಲಿದೆ. ತಂಡ ಬುಧವಾರ 2ನೇ ಏಕದಿನ ಪಂದ್ಯದಲ್ಲಿ ಕಣಕ್ಕಿಳಿಯಲಿದ್ದು, 3 ಪಂದ್ಯಗಳ ಸರಣಿಯನ್ನು ಇನ್ನೊಂದು ಪಂದ್ಯ ಬಾಕಿ ಇರುವಂತೆಯೇ ತನ್ನದಾಗಿಸಿಕೊಳ್ಳಲು ಪಣ ತೊಟ್ಟಿದೆ.

ಟಿ20 ಮಾದರಿಯಲ್ಲಿ ಭಾರತ ಅತ್ಯಂತ ಕಳಪೆ ಪ್ರದರ್ಶನ ನೀಡಿತ್ತು. ಆದರೆ ಏಕದಿನದಲ್ಲಿ ತಂಡ ಪುಟಿದೆದ್ದಿದೆ. ಹಿರಿಯ ಆಟಗಾರರು ಕೈಕೊಟ್ಟ ಹೊರತಾಗಿಯೂ ಅಕ್ಷರ್‌ ಪಟೇಲ್‌, ಶುಭ್‌ಮನ್‌ ಗಿಲ್‌ ನೆರವಿನಿಂದ ತಂಡ ಗೆಲುವು ತನ್ನದಾಗಿಸಿಕೊಂಡಿತ್ತು. ಈಗ ಸರಣಿ ಗೆಲುವಿಗೆ ಕಾಯುತ್ತಿರುವ ತಂಡಕ್ಕೆ ಹಿರಿಯ ಆಟಗಾರರ ಕೊಡುಗೆ ಅಗತ್ಯವಿದೆ. ವಿರಾಟ್‌ ಕೊಹ್ಲಿ, ರೋಹಿತ್‌ ಶರ್ಮಾ, ಕೆ.ಎಲ್‌.ರಾಹುಲ್‌ ಮಿಂಚಬೇಕಿದೆ.

ಕಳೆದ ಪಂದ್ಯದಲ್ಲಿ 80 ರನ್‌ ಗಳಿಸಿದ ಬಳಿಕ ಗಾಯದಿಂದಾಗಿ ಮೈದಾನ ತೊರೆದಿದ್ದ ನಾಯಕ ಶುಭ್‌ಮನ್‌ ಗಿಲ್‌ ಫಿಟ್ನೆಸ್‌ ಬಗ್ಗೆ ಇನ್ನೂ ಖಚಿತ ಮಾಹಿತಿ ಲಭ್ಯವಾಗಿಲ್ಲ. ಉಳಿದಂತೆ ತಂಡ ಬೌಲಿಂಗ್‌ ವಿಭಾಗದಲ್ಲಿ ಕೆಲ ಬದಲಾವಣೆ ಮಾಡಿದರೂ ಅಚ್ಚರಿಯಿಲ್ಲ.

ಉಭಯ ತಂಡಗಳ ಸಂಭಾವ್ಯ ಆಟಗಾರರ ಪಟ್ಟಿ:

ಭಾರತ: ಶುಭ್‌ಮನ್ ಗಿಲ್(ನಾಯಕ), ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಶ್ರೇಯಸ್ ಅಯ್ಯರ್, ವಾಷಿಂಗ್ಟನ್ ಸುಂದರ್, ಕೆ ಎಲ್ ರಾಹುಲ್(ವಿಕೆಟ್ ಕೀಪರ್), ಅಕ್ಷರ್ ಪಟೇಲ್, ಶಿವಂ ದುಬೆ, ಪ್ರಸಿದ್ದ್ ಕೃಷ್ಣ, ಗುರ್ನೂರ್ ಬ್ರಾರ್, ಜಸ್ಪ್ರೀತ್ ಬುಮ್ರಾ.

ಇಂಗ್ಲೆಂಡ್: ಜೇಕಬ್ ಬೆಥೆಲ್, ಬೆನ್ ಡಕೆಟ್, ಜೋ ರೂಟ್, ಹ್ಯಾರಿ ಬ್ರೂಕ್(ನಾಯಕ), ಜೋಸ್ ಬಟ್ಲರ್(ವಿಕೆಟ್ ಕೀಪರ್), ಸ್ಯಾಮ್ ಕರ್ರನ್, ವಿಲ್ ಜ್ಯಾಕ್ಸ್‌, ಜೋಫ್ರಾ ಆರ್ಚರ್, ಲಿಯಾಮ್ ಡಾಸನ್, ಜೋಶ್ ಟಂಗ್, ಆದಿಲ್ ರಶೀದ್.

ಪಂದ್ಯ ಆರಂಭ: ಸಂಜೆ 5.30ಕ್ಕೆ

ಪ್ರಸಾರ: ಜಿಯೋಹಾಟ್‌ಸ್ಟಾರ್‌, ಸೋನಿಸ್ಪೋರ್ಟ್ಸ್‌ ಟೆನ್‌ 4ಎಸ್‌ಡಿ, ಎಚ್‌ಡಿ ಕನ್ನಡ

ಐಸಿಸಿ ಏಕದಿನ ರ್‍ಯಾಂಕಿಂಗ್‌: 9ನೇ ಸ್ಥಾನಕ್ಕೇರಿದ ಅಕ್ಷರ್‌

ದುಬೈ: ಟೀಂ ಇಂಡಿಯಾದ ತಾರಾ ಆಟಗಾರ ಅಕ್ಷರ್‌ ಪಟೇಲ್‌ ಅವರು ಐಸಿಸಿ ಏಕದಿನ ಅಲ್ರೌಂಡರ್‌ಗಳ ಪಟ್ಟಿಯಲ್ಲಿ ಅಗ್ರ 10ರಲ್ಲಿ ಸ್ಥಾನ ಪಡೆದಿದ್ದಾರೆ. ಇಂಗ್ಲೆಂಡ್ ವಿರುದ್ಧ ಮಂಗಳವಾರ ನಡೆದ ಪಂದ್ಯದಲ್ಲಿ ಆಲ್ರೌಂಡರ್‌ ಪ್ರದರ್ಶನ ಬೆನ್ನಲ್ಲೇ ರ್‍ಯಾಂಕ್‌ನಲ್ಲಿ ಏರಿಕೆಯಾಗಿದೆ. ಬುಧವಾರ ಪ್ರಕಟವಾದ ರ್‍ಯಾಂಕಿಂಗ್‌ನಲ್ಲಿ ಅಕ್ಷರ್‌ 3 ಸ್ಥಾನ ಭಡ್ತಿ ಪಡೆದು 9ನೇ ಸ್ಥಾನಕ್ಕೇರಿದ್ದಾರೆ.

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

ಸತತ 3 ವರ್ಷ ಪ್ಲೇ ಆಫ್‌ಗೂ ಬಾರದ ಸಿಎಸ್‌ಕೆ ಕನ್ನಡಿಗನೇ ಮುಖ್ಯ ಕೋಚ್? ಆರ್‌ಸಿಬಿ ಮಾಜಿ ಆಟಗಾರನಿಗೆ ಮಣೆ!
ಐಪಿಎಲ್ ರೀತಿ ಎಲಿಮಿನೇಟರ್, ಸೂಪರ್ 7, ಹೊಸ ಮಾದರಿಯಲ್ಲಿ ಮುಂದಿನ ಐಸಿಸಿ ವಿಶ್ವಕಪ್ ಟೂರ್ನಿ