ರಣಜಿ ಟ್ರೋಫಿ ಟೂರ್ನಿಯಲ್ಲಿ ಜಲಜ್ ಸಕ್ಸೆನಾ ಅಪರೂಪದಲ್ಲೇ ಅಪರೂಪದ ದಾಖಲೆ ನಿರ್ಮಿಸಿದ್ದಾರೆ. ಈ ಕುರಿತಾದ ರಿಪೋರ್ಟ್ ಇಲ್ಲಿದೆ ನೋಡಿ
ತಿರುವನಂತಪುರಂ: ಕೇರಳದ ಆಲ್ರೌಂಡರ್ ಜಲಜ್ ಸಕ್ಸೇನಾ ರಣಜಿ ಕ್ರಿಕೆಟ್‌ನಲ್ಲಿ ಹೊಸ ದಾಖಲೆ ಬರೆದಿದ್ದಾರೆ. ಟೂರ್ನಿಯ ಇತಿಹಾಸದಲ್ಲೇ 6000 ರನ್ ಹಾಗೂ 400 ವಿಕೆಟ್ ಕಿತ್ತ ಮೊದಲ ಆಟಗಾರ ಎಂಬ ಖ್ಯಾತಿಗೆ ಪಾತ್ರರಾಗಿದ್ದಾರೆ.
ಬುಧವಾರ ಉತ್ತರ ಪ್ರದೇಶದ ನಿತೀಶ್ ರಾಣಾ ವಿಕೆಟ್ ಕಿತ್ತ 37 ವರ್ಷದ ಸಕ್ಸೇನಾ, ರಣಜಿ ವಿಕೆಟ್ ಗಳಿಕೆಯನ್ನು 400ಕ್ಕೆ ಹೆಚ್ಚಿಸಿದರು. ಈ ಸಾಧನೆ ಮಾಡಿದ 14ನೇ ಆಟಗಾರ ಎನಿಸಿಕೊಂಡರು. ಇನ್ನಿಂಗ್ಸ್‌ನಲ್ಲಿ ಅವರು ಒಟ್ಟು 5 ವಿಕೆಟ್ ಪಡೆದರು. ಕಳೆದ ಪಂದ್ಯದಲ್ಲಿ ಸಕ್ಸೇನಾ ರಣಜಿಯಲ್ಲಿ 6000 ರನ್ ಮೈಲುಗಲ್ಲು ತಲುಪಿದ್ದರು. 2005ರಲ್ಲಿ ಪ್ರಥಮ ದರ್ಜೆ ಪಾದಾರ್ಪಣೆ ಮಾಡಿದ್ದ ಸಕ್ಸೇನಾ, 11 ವರ್ಷ ಮಧ್ಯಪ್ರದೇಶ ಪರ ಆಡಿದ್ದಾರೆ. ಬಳಿಕ ಕೇರಳ ತಂಡ ಪ್ರತಿನಿಧಿಸುತ್ತಿದ್ದಾರೆ.
Milestone unlocked 🔓
A rare double ✌️
Jalaj Saxena becomes the first player to achieve a double of 6000 runs and 400 wickets in 👏👏 | pic.twitter.com/frrQIvkxWS
undefined
ರಣಜಿ ಆಡಿದ ಕರ್ನಾಟಕದ 313ನೇ ಆಟಗಾರ ಅಭಿಲಾಶ್
ಬಂಗಾಳ ವಿರುದ್ಧ ಪಂದ್ಯದಲ್ಲಿ ಅಭಿಲಾಶ್ ಶೆಟ್ಟಿ ಕರ್ನಾಟಕ ರಣಜಿ ತಂಡಕ್ಕೆ ಪಾದಾರ್ಪಣೆ ಮಾಡಿದರು. ರಾಜ್ಯ ತಂಡದ ಪರ ರಣಜಿ ಆಡಿದ 313ನೇ ಆಟಗಾರ ಎನಿಸಿಕೊಂಡಿರುವ ಉಡುಪಿಯ ಕುಂದಾಪುರದ ಅಭಿಲಾಶ್, ಚೊಚ್ಚಲ ಪಂದ್ಯದಲ್ಲೇ ಒಂದು ವಿಕೆಟ್ ಪಡೆದು ಗಮನ ಸೆಳೆದರು.
ರಣಜಿಯಲ್ಲಿ ಕರ್ನಾಟಕ vs ಬಂಗಾಳ ಸಮಬಲದ ಹೋರಾಟ
ಶ್ರೇಯಸ್ ಸತತ 2ನೇ ಶತಕ: ಔಟಾಗದೆ 152
ಭಾರತ ತಂಡಕ್ಕೆ ಕಮ್‌ಬ್ಯಾಕ್ ಮಾಡುವ ನಿರೀಕ್ಷೆಯಲ್ಲಿರುವ ತಾರಾ ಆಟಗಾರ ಶ್ರೇಯಸ್ ಅಯ್ಯರ್, ರಣಜಿ ಕ್ರಿಕೆಟ್‌ನಲ್ಲಿ ಸತತ 2ನೇ ಶತಕ ಬಾರಿಸಿದರು. ಕಳೆದ ಪಂದ್ಯದಲ್ಲಿ ಮಹಾರಾಷ್ಟ್ರ ವಿರುದ್ಧ 142 ರನ್ ಸಿಡಿಸಿದ್ದ ಮುಂಬೈ ತಂಡದ ಶ್ರೇಯಸ್, ಬುಧವಾರ ಒಡಿಶಾ ವಿರುದ್ಧ ಔಟಾಗದೆ 152 ರನ್ ಬಾರಿಸಿದರು. 164 ಎಸೆತಗಳನ್ನು ಎದುರಿಸಿದ ಅವರು 18 ಬೌಂಡರಿ, 4 ಸಿಕ್ಸರ್‌ಗಳನ್ನೂ ಸಿಡಿಸಿದ್ದಾರೆ. ಇದು ಪ್ರಥಮ ದರ್ಜೆ ಕ್ರಿಕೆಟ್‌ನಲ್ಲಿ ಶ್ರೇಯಸ್‌ರ 15ನೇ ಶತಕ. ಮುಂಬೈ ಮೊದಲ ದಿನದಂತ್ಯಕ್ಕೆ 3 ವಿಕೆಟ್‌ಗೆ 385 ರನ್ ಕಲೆಹಾಕಿದೆ.
300 ಅಂ.ರಾ. ಪಂದ್ಯಗಳಿಗೆ ಆತಿಥ್ಯ ವಹಿಸಿದ ವಿಶ್ವದ ಮೊದಲ ಸ್ಟೇಡಿಯಂ ಶಾರ್ಜಾ!
ಶಾರ್ಜಾ: 300 ಅಂತಾರಾಷ್ಟ್ರೀಯ ಪಂದ್ಯಗಳಿಗೆ ಆತಿಥ್ಯ ವಹಿಸಿದ ವಿಶ್ವದ ಮೊದಲ ಕ್ರಿಕೆಟ್ ಕ್ರೀಡಾಂಗಣ ಎನ್ನುವ ಖ್ಯಾತಿಗೆ ಶಾರ್ಜಾ ಸ್ಟೇಡಿಯಂ ಪಾತ್ರವಾಗಿದೆ. ಬುಧವಾರ ಬಾಂಗ್ಲಾದೇಶ-ಅಫ್ಘಾನಿಸ್ತಾನ ನಡುವಿನ ಮೊದಲ ಏಕದಿನ ಪಂದ್ಯಕ್ಕೆ ಆತಿಥ್ಯ ವಹಿಸಿ ಶಾರ್ಜಾ ಸ್ಟೇಡಿಯಂ ಈ ಮೈಲುಗಲ್ಲು ಸಾಧಿಸಿತು.
ಈ ಕ್ರೀಡಾಂಗಣದಲ್ಲಿ 252 ಏಕದಿನ, 38 ಟಿ20, 10 ಟೆಸ್ಟ್ ಪಂದ್ಯ ನಡೆದಿವೆ. 1984ರಲ್ಲಿ ಶ್ರೀಲಂಕಾ-ಪಾಕಿಸ್ತಾನ ನಡುವೆ ಈ ಕ್ರೀಡಾಂಗಣದಲ್ಲಿ ಮೊದಲ ಪಂದ್ಯ(ಏಕದಿನ) ನಡೆದಿತ್ತು. ಇನ್ನು, ಸಿಡ್ನಿ ಕ್ರೀಡಾಂಗಣ 291, ಮೆಲ್ಬರ್ನ್ 287, ಜಿಂಬಾಬ್ವೆಯ ಹರಾರೆ 267, ಲಾರ್ಡ್ಸ್ 227 ಪಂದ್ಯಗಳಿಗೆ ಆತಿಥ್ಯ ವಹಿಸಿವೆ.
ಐಪಿಎಲ್ ಮೆಗಾ ಹರಾಜಿನಲ್ಲಿ ಈ 5 ಆಟಗಾರರ ಮೇಲೆ ಹದ್ದಿನಗಣ್ಣಿಟ್ಟಿರುವ ಆರ್‌ಸಿಬಿ!
ಭಾರತದ ಯಾವುದೇ ಕ್ರೀಡಾಂಗಣ 100ಕ್ಕಿಂತ ಹೆಚ್ಚು ಅಂ.ರಾ. ಪಂದ್ಯಕ್ಕೆ ಆತಿಥ್ಯ ವಹಿಸಿಲ್ಲ. ಕೋಲ್ಕತಾದ ಈಡನ್ ಗಾರ್ಡನ್ಸ್‌ನಲ್ಲಿ 89 ಪಂದ್ಯ ನಡೆದಿದ್ದು, ಗರಿಷ್ಠ ಪಂದ್ಯಕ್ಕೆ ಆತಿಥ್ಯ ವಹಿಸಿದ ಭಾರತೀಯ ಕ್ರೀಡಾಂಗಣ ಎನಿಸಿಕೊಂಡಿದೆ.
ಏಕದಿನ: ಬಾಂಗ್ಲಾ ವಿರುದ್ಧ ಆಫ್ಘನ್‌ಗೆ 92 ರನ್ ಜಯ
ಶಾರ್ಜಾ: ಬಾಂಗ್ಲಾದೇಶ ವಿರುದ್ಧ ಮೊದಲ ಏಕದಿನ ಪಂದ್ಯದಲ್ಲಿ ಅಫ್ಘಾನಿಸ್ತಾನ 92 ರನ್ ಗೆಲುವು ಸಾಧಿಸಿದ್ದು, 3 ಪಂದ್ಯಗಳ ಸರಣಿಯಲ್ಲಿ 1-0 ಮುನ್ನಡೆ ಪಡೆಯಿತು. ಮೊದಲು ಬ್ಯಾಟ್ ಮಾಡಿದ ಆಫ್ಘನ್ 49.4 ಓವರಲ್ಲಿ 235 ರನ್‌ಗೆ ಆಲೌಟಾಯಿತು. ಸ್ಪರ್ಧಾತ್ಮಕ ಗುರಿ ಬೆನ್ನತ್ತಿದ ಬಾಂಗ್ಲಾ 34.3 ಓವರಲ್ಲಿ 143ಕ್ಕೆ ಆಲೌಟಾಯಿತು. ಅಲ್ಲಾಹ್ ಘಜಾನ್‌ಫರ್ 6 ವಿಕೆಟ್ ಕಿತ್ತರು.