Ind vs WI: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗಿಂದು ಹ್ಯಾಟ್ರಿಕ್‌ ವೈಟ್‌ವಾಷ್‌ ಗುರಿ..!

Kannadaprabha News   | Asianet News
Published : Feb 20, 2022, 10:33 AM IST
Ind vs WI: ರೋಹಿತ್ ಶರ್ಮಾ ನೇತೃತ್ವದ ಟೀಂ ಇಂಡಿಯಾಗಿಂದು ಹ್ಯಾಟ್ರಿಕ್‌ ವೈಟ್‌ವಾಷ್‌ ಗುರಿ..!

ಸಾರಾಂಶ

* ಭಾರತ ಹಾಗೂ ವೆಸ್ಟ್ ಇಂಡೀಸ್ ನಡುವಿನ ಮೂರನೇ ಟಿ20 ಪಂದ್ಯಕ್ಕೆ ಕ್ಷಣಗಣನೆ * ಈಗಾಗಲೇ ಮೊದಲೆರಡು ಟಿ20 ಪಂದ್ಯ ಗೆದ್ದು ಟಿ20 ಸರಣಿ ಕೈವಶ ಮಾಡಿಕೊಂಡಿರುವ ಟೀಂ ಇಂಡಿಯಾ * ಸತತ ಹ್ಯಾಟ್ರಿಕ್ ವೈಟ್‌ವಾಶ್ ಮಾಡುವ ಕನವರಿಕೆಯಲ್ಲಿದೆ ರೋಹಿತ್ ಶರ್ಮಾ ಪಡೆ  

ಕೋಲ್ಕತಾ(ಫೆ.20): ಅತ್ಯುತ್ತಮ ಲಯದಲ್ಲಿರುವ ಟೀಂ ಇಂಡಿಯಾ(Team India), ಭಾನುವಾರ ವೆಸ್ಟ್‌ಇಂಡೀಸ್‌ ವಿರುದ್ಧದ 3ನೇ ಹಾಗೂ ಅಂತಿಮ ಟಿ20 ಪಂದ್ಯವನ್ನು ಗೆದ್ದು, ತವರಿನಲ್ಲಿ ಸತತ 3ನೇ ಸರಣಿ ಕ್ಲೀನ್‌ ಸ್ವೀಪ್‌ ಸಾಧಿಸುವ ಹುಮ್ಮಸ್ಸಿನಲ್ಲಿದೆ. ಕಳೆದ ವರ್ಷಾಂತ್ಯದಲ್ಲಿ ನ್ಯೂಜಿಲೆಂಡ್‌ ವಿರುದ್ಧ ಟಿ20 ಸರಣಿಯನ್ನು 3-0ಯಲ್ಲಿ ಗೆದ್ದಿದ್ದ ಭಾರತ, ಕಳೆದ ವಾರ ವೆಸ್ಟ್‌ಇಂಡೀಸ್‌ ವಿರುದ್ಧ 3 ಪಂದ್ಯಗಳ ಏಕದಿನ ಸರಣಿಯನ್ನು 3-0ಯಲ್ಲಿ ವಶಪಡಿಸಿಕೊಂಡಿತ್ತು. ಮೊದಲೆರಡು ಟಿ20 ಪಂದ್ಯಗಳಲ್ಲಿ ಆಲ್ರೌಂಡ್‌ ಪ್ರದರ್ಶನದ ಮೂಲಕ ಗೆಲುವು ಸಾಧಿಸಿ 2-0 ಮುನ್ನಡೆ ಪಡೆದಿರುವ ರೋಹಿತ್‌ ಶರ್ಮಾ ಪಡೆ, 3ನೇ ಪಂದ್ಯದಲ್ಲೂ ತನ್ನ ಪ್ರದರ್ಶನ ಗುಣಮಟ್ಟವನ್ನು ಕಾಯ್ದುಕೊಳ್ಳುವ ವಿಶ್ವಾಸದಲ್ಲಿದೆ.

ಟಿ20 ವಿಶ್ವಕಪ್‌ಗೆ (T20 World Cup) 8 ತಿಂಗಳಷ್ಟೇ ಬಾಕಿ ಇದ್ದು, ತಂಡ ಕೆಲ ಸಮಸ್ಯೆಗಳಿಗೆ ಪರಿಹಾರ ಹುಡುಕಲು ನಿರಂತರ ಪ್ರಯತ್ನ ನಡೆಸುತ್ತಿದೆ. ಕೆ.ಎಲ್‌.ರಾಹುಲ್‌(KL Rahul) ಅನುಪಸ್ಥಿತಿಯಲ್ಲಿ ಆರಂಭಿಕನಾಗಿ ಆಡುವ ಅವಕಾಶ ಪಡೆದಿರುವ ಇಶಾನ್‌ ಕಿಶನ್‌ (Ishan Kishan) ನಿರೀಕ್ಷೆ ಉಳಿಸಿಕೊಂಡಿಲ್ಲ. ರಿಷಭ್‌ ಪಂತ್‌ (Rishabh Pant) 3ನೇ ಟಿ20ಗೆ ಅಲಭ್ಯರಾಗಲಿರುವ ಕಾರಣ, ಕಿಶನ್‌ ವಿಕೆಟ್‌ ಕೀಪಿಂಗ್‌ ಮಾಡಲಿದ್ದು ಮತ್ತೊಂದು ಅವಕಾಶ ಪಡೆಯಲಿದ್ದಾರೆ. ವಿರಾಟ್‌ ಕೊಹ್ಲಿ (Virat Kohli) ಸಹ ಅಲಭ್ಯರಾಗಲಿರುವ ಕಾರಣ ಕಿಶನ್‌ರನ್ನು 3ನೇ ಕ್ರಮಾಂಕದಲ್ಲಿ ಇಳಿಸಿ, ಋುತುರಾಜ್‌ ಗಾಯಕ್ವಾಡ್‌ಗೆ ಆರಂಭಿಕನ ಸ್ಥಾನ ನೀಡುವ ಸಾಧ್ಯತೆ ಇದೆ. ಶ್ರೇಯಸ್‌ ಅಯ್ಯರ್‌ ಸಹ ಅವಕಾಶಕ್ಕಾಗಿ ಕಾಯುತ್ತಿದ್ದು, ಅವರಿಗೂ ಸ್ಥಾನ ಸಿಗುವ ಸಾಧ್ಯತೆ ಇದೆ. ಇನ್ನು ಮೊಹಮದ್‌ ಸಿರಾಜ್‌, ಆವೇಶ್‌ ಖಾನ್‌, ದೀಪಕ್‌ ಹೂಡಾ ಸಹ ಅವಕಾಶದ ನಿರೀಕ್ಷೆಯಲ್ಲಿದ್ದಾರೆ. ಈ ಪೈಕಿ ಯಾರಿಗೆ ಸ್ಥಾನ ಸಿಗಲಿದೆ ಎನ್ನುವುದು ಕುತೂಹಲಕ್ಕೆ ಕಾರಣವಾಗಿದೆ.

ಪೂರನ್‌ ಭರ್ಜರಿ ಲಯ: ಸತತ 2 ಅರ್ಧಶತಕ ಸಿಡಿಸಿರುವ ನಿಕೋಲಸ್‌ ಪೂರನ್‌(Nicholas Pooran), ತಮ್ಮ ಲಯ ಮುಂದುವರಿಸುವ ವಿಶ್ವಾಸದಲ್ಲಿದ್ದು ವಿಂಡೀಸ್‌ಗೆ ಈ ಪ್ರವಾಸದಲ್ಲಿ ಮೊದಲ ಗೆಲುವು ಒಲಿಯುವಂತೆ ಮಾಡಲು ಕಾತರಿಸುತ್ತಿದ್ದಾರೆ. ರೋವ್ಮನ್‌ ಪೋವೆಲ್‌ ಭರವಸೆ ಮೂಡಿಸಿದ್ದಾರೆ. ಬೌಲರ್‌ಗಳು ನಿರೀಕ್ಷಿತ ಪ್ರದರ್ಶನ ತೋರಿದರೆ, ಭಾರತದ ಕ್ಲೀನ್‌ ಸ್ವೀಪ್‌ ಕನಸಿಗೆ ಅಡ್ಡಿಯಾಗಬಹುದು.

Ind vs WI: ಕೊಹ್ಲಿ ಸೇರಿ ಬಯೋ ಬಬಲ್‌ನಿಂದ ಇಬ್ಬರು ಸ್ಟಾರ್‌ ಕ್ರಿಕೆಟಿಗರಿಗೆ ವಿಶ್ರಾಂತಿ ನೀಡಿದ ಬಿಸಿಸಿಐ!

ಕೊಹ್ಲಿ, ಪಂತ್‌ಗೆ ವಿಶ್ರಾಂತಿ

ಮೂರೂ ಮಾದರಿಯಲ್ಲಿ ನಿರಂತರ ಕ್ರಿಕೆಟ್‌ನಿಂದ ದಣಿದಿರುವ ವಿರಾಟ್‌ ಕೊಹ್ಲಿ ಹಾಗೂ ರಿಷಭ್‌ ಪಂತ್‌ಗೆ ಬಿಸಿಸಿಐ (BCCI) ವಿಶ್ರಾಂತಿ ನೀಡಿದೆ. ಇವರಿಬ್ಬರು ಶನಿವಾರ ಬಯೋಬಬಲ್‌ನಿಂದ ಹೊರನಡೆದರು. 3ನೇ ಪಂದ್ಯಕ್ಕೆ ಇಬ್ಬರೂ ಅಲಭ್ಯರಾಗಿದ್ದು, ಶ್ರೀಲಂಕಾ ವಿರುದ್ಧದ ಟಿ20 ಸರಣಿಯನ್ನೂ ಆಡುವುದಿಲ್ಲ.

ಇಂದು ಕ್ರೀಡಾಂಗಣಕ್ಕೆ 20,000 ಪ್ರೇಕ್ಷಕರು

ಈಡನ್‌ ಗಾರ್ಡನ್ಸ್‌ ಕ್ರೀಡಾಂಗಣಕ್ಕೆ ಭಾನುವಾರ 20,000 ಪ್ರೇಕ್ಷಕರಿಗೆ ಪ್ರವೇಶ ಸಿಗಲಿದೆ. ಪಂದ್ಯದ ಟಿಕೆಟ್‌ಗಳನ್ನು ಸಾರ್ವಜನಿಕರಿಗೆ ಮಾರಾಟ ಮಾಡದ ಬಂಗಾಳ ಕ್ರಿಕೆಟ್‌ ಸಂಸ್ಥೆ, ತನ್ನ ಸದಸ್ಯರು, ನೋಂದಾಯಿತ ಕ್ಲಬ್‌ಗಳಿಗೆ ಉಚಿತ ಪಾಸ್‌ ಹಂಚಿದೆ ಎನ್ನಲಾಗಿದೆ. ಮೊದಲೆರಡು ಪಂದ್ಯಗಳಿಗೆ ಕೇವಲ 2000 ಮಂದಿಗೆ ಪ್ರವೇಶ ನೀಡಲಾಗಿತ್ತು.

ಸಂಭವನೀಯ ಆಟಗಾರರ ಪಟ್ಟಿ

ಭಾರತ: ರೋಹಿತ್‌ ಶರ್ಮಾ(ನಾಯಕ), ಋುತುರಾಜ್ ಗಾಯಕ್ವಾಡ್‌, ಇಶಾನ್ ಕಿಶನ್‌, ಶ್ರೇಯಸ್ ಅಯ್ಯರ್‌, ಸೂರ್ಯಕುಮಾರ್ ಕುಮಾರ್‌, ವೆಂಕಟೇಶ್ ಅಯ್ಯರ್‌, ದೀಪಕ್ ಚಹರ್, ಹರ್ಷಲ್‌ ಪಟೇಲ್, ಭುವನೇಶ್ವರ್ ಕುಮಾರ್‌, ಯುಜುವೇಂದ್ರ ಚಹಲ್‌, ರವಿ ಬಿಷ್ಣೋಯ್‌.

ವಿಂಡೀಸ್‌: ಕೈಲ್ ಮೇಯ​ರ್ಸ್‌, ಬ್ರೆಂಡನ್ ಕಿಂಗ್‌, ನಿಕೋಲಸ್ ಪೂರನ್‌, ರೋಮನ್ ಪೋವೆಲ್‌, ರೋಸ್ಟನ್‌ ಚೇಸ್‌, ಕೀರನ್‌ ಪೊಲ್ಲಾರ್ಡ್‌(ನಾಯಕ), ಜೇಸನ್ ಹೋಲ್ಡರ್‌, ಶೆಫರ್ಡ್‌, ಒಡೇಯೆನ್‌ ಸ್ಮಿತ್‌, ಅಕೆಲ್ ಹೊಸೈನ್‌,  ಶೆಲ್ಡನ್ ಕಾಟ್ರೆಲ್‌.

ಪಂದ್ಯ ಆರಂಭ: ಸಂಜೆ 7ಕ್ಕೆ
ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

PREV

ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್‌ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.

Read more Articles on
click me!

Recommended Stories

3 ಗಂಟೆ ಕಾದರೂ ಕರಗದ ಮಂಜು, ಭಾರತ ಸೌತ್ ಆಫ್ರಿಕಾ 4ನೇ ಟಿ20 ಪಂದ್ಯ ರದ್ದು
Ind vs SA: ನಾಲ್ಕನೇ ಟಿ20 ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾಗೆ ಬಿಗ್ ಶಾಕ್! ಗಿಲ್ ಔಟ್, ಯಾರಿಗೆ ಸಿಗತ್ತೆ ಚಾನ್ಸ್?