
ಗುವ್ಹಾಟಿ(ಜ.10): ಶ್ರೀಲಂಕಾ ವಿರುದ್ದದ ಟಿ20 ಸರಣಿ ಗೆಲುವಿನ ಬಳಿಕ ಇದೀಗ ಏಕದಿನ ಸರಣಿಯಲ್ಲಿ ಭಾರತ ಭರ್ಜರಿ ಶುಭಾರಂಭ ಪಡೆದಿದೆ. ಕೊಹ್ಲಿ ಸೆಂಚುರಿ, ಇತರರ ಸ್ಫೋಟಕ ಬ್ಯಾಟಿಂಗ್‌ನಿಂದ ಟೀಂ ಇಂಡಿಯಾ 373 ರನ್ ಸಿಡಿಸಿತ್ತು. ಇದಕ್ಕುತ್ತರವಾಗಿ ಶ್ರೀಲಂಕಾ 8 ವಿಕೆಟ್ ನಷ್ಟಕ್ಕೆ 306 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಭಾರತ 67 ರನ್ ಗೆಲುವು ಸಾಧಿಸಿತು. ಲಂಕಾ ನಾಯಕ ದಸೂನ್ ಶನಕ ಗೆಲುವಿಗಾಗಿ ಕೊನೆಯ ಎಸೆತದವರೆಗೂ ಹೋರಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು. ಇದರೊಂದಿಗೆ 3 ಏಕದಿನ ಪಂದ್ಯದ ಸರಣಿಯಲ್ಲಿ ಭಾರತ 1-0 ಮುನ್ನಡೆ ಸಾಧಿಸಿದೆ.
ವಿರಾಟ್ ಕೊಹ್ಲಿ ದಾಖಲೆಯ ಸೆಂಚುರಿ, ನಾಯಕ ರೋಹಿತ್ ಶರ್ಮಾ ಸಿಡಿಸಿದ 83 ರನ್, ಶುಬಮನ್ ಗಿಲ್ 70 ರನ್, ಕೆಎಲ್ ರಾಹುಲ್ 39, ಶ್ರೇಯಸ್ ಅಯ್ಯರ್ 28 ರನ್ ಕಾಣಿಕೆಯಿಂದ ಟೀಂ ಇಂಡಿಯಾ 373 ರನ್ ಸಿಡಿಸಿತ್ತು. 374 ರನ್ ಬೃಹತ್ ಟಾರ್ಗೆಟ್ ಶ್ರೀಲಂಕಾ ತಂಡಕ್ಕೆ ಕಠಿಣ ಸವಾಲು ಒಡ್ಡಿತು. ಪ್ರತಿ ಎಸೆತದಲ್ಲಿ ಅಬ್ಬರಿಸಬೇಕಾದ ಅನಿವಾರ್ಯತೆಗೆ ಸಿಲುಕಿಕೊಂಡಿದೆ. ಹೀಗಾಗಿ ಆಕ್ರಮಣಕಾರಿ ಆಟಕ್ಕೆ ಲಂಕಾ ಮುಂದಾಯಿತು. ಆದೆರೆ ಅವಿಶ್ಕೋ ಫರ್ನಾಂಡೋ 5 ರನ್ ಸಿಡಿಸಿ ಔಟಾದರು. ಇದರ ಬೆನ್ನಲ್ಲೇ ಕುಸಾಲ್ ಮೆಂಡೀಸ್ ಡಕೌಟ್ ಆದರು.
ಆದರೆ ಆರಂಭಿಕ ಪಥುಮ್ ನಿಸಂಕಾ ಹೋರಾಟ ಶ್ರೀಲಂಕಾ ತಂಡಕ್ಕೇ ಚೇತರಿಕೆ ನೀಡಿತು. ಚಾರಿತ್ ಅಸಲಂಕ ಜೊತೆ ನಿಸಂಕ ಹೋರಾಟ ಮುಂದುವರಿಸಿದರು. ಆದರೆ ಚಾರಿತ್ ಅಸಲಂಕ 23 ರನ್ ಸಿಡಿಸಿ ಔಟಾದರು. ಇತ್ತ ನಿಸಂಕ ಹಾಫ್ ಸೆಂಚುರಿ ಸಿಡಿಸಿ ಮಿಂಚಿದರು. ಧನಂಜಯ್ ಡಿಸಿಲ್ವ ಹಾಗೂ ಪಥುಮ್ ನಿಸಂಕಾ ಜೊತೆಯಾಟದಿಂದ ಶ್ರೀಲಂಕಾ ಮತ್ತೆ ಚೇಸಿಂಗ್ ಟ್ರ್ಯಾಕ್‌ಗೆ ಮರಳಿತು. ಆದರೆ ಧನಂಜಯ 40 ಎಸೆತದಲ್ಲಿ 47 ರನ್ ಸಿಡಿಸಿ ಔಟಾದರು.
ಉಮ್ರಾನ್ ಮಲಿಕ್ ಹಾಗೂ ಮೊಹಮ್ಮದ್ ಸಿರಾಜ್ ದಾಳಿಯಿಂದ ಶ್ರೀಲಂಕಾ ಪ್ರಮುಖ ಬ್ಯಾಟ್ಸ್‌ಮನ್ ಕಳೆದುಕೊಂಡಿತು. ಇತ್ತ ಪಥುಮ್ ನಿಸಂಕ 80 ಎಸೆತದಲ್ಲಿ 72 ರನ್ ಕಾಣಿಕೆ ನೀಡಿದರು. ಟಿ20 ಸರಣಿಯಲ್ಲಿ ಸ್ಫೋಟಕ ಬ್ಯಾಟಿಂಗ್ ಮೂಲಕ ಗಮನಸೆಳೆದ ನಾಯಕ ದಸೂನ್ ಶನಕ ಏಕದಿನದಲ್ಲೂ ಆಸರೆಯಾದರು. ನಾಯಕನ ಜವಾಬ್ದಾರಿ ಜೊತೆಗೆ ಕುಸಿದ ತಂಡವನ್ನು ಮೇಲಕ್ಕೆತ್ತಲು ಎಚ್ಚರಿಕೆ ಬ್ಯಾಟಿಂಗ್ ಪ್ರದರ್ಶನ ನೀಡಿದರು.
ನಾಯಕ ದಸೂನ್ ಶನಕಗೆ ಇತರರಿಂದ ಉತ್ತಮ ಸಾಥ್ ಸಿಗಲಿಲ್ಲ. ವಾನಿಂಡು ಹಸರಂಗ 7 ಎಸೆತದಲ್ಲಿ 16 ರನ್ ಸಿಡಿಸಿ ಔಟಾದರು. ದುನೀತ್ ವೆಲ್ಲಾಲೆಗೆ ಡಕೌಟ್ ಆದರು. ಚಮಿಕಾ ಕರುಣಾರತ್ನೆ 14 ರನ್ ಕಾಣಿಕೆ ನೀಡಿದರು. 206ರನ್‌ಗಳಿಗ ಲಂಕಾ 8 ವಿಕೆಟ್ ಕಳೆದುಕೊಂಡಿತು. ಆದರೆ ದಸೂನ್ ಶನಕ ಬ್ಯಾಟಿಂಗ್ ಲಂಕಾ ತಂಡದ ಹೋರಾಟವನ್ನು ಮತ್ತ ಚುರುಕುಗೊಳಿಸಿತು.
ದಸೂನ್ ಶನಕ ದಿಟ್ಟ ಹೋರಾಟ ಲಂಕಾವನ್ನು ಹೀನಾಯ ಸೋಲಿನಿಂದ ಪಾರು ಮಾಡಿತು. ದಸೂನ್ ಜೊತೆಗೆ ಒರ್ವ ಬ್ಯಾಟ್ಸ್‌ಮನ್ ಸಾಥ್ ಸಿಕ್ಕಿದರೂ ಪಂದ್ಯಗ ಗತಿ ಬದಲಾಗುತ್ತಿತ್ತು. ಅಂತಿಮ ಎಸೆದಲ್ಲಿ ಭರ್ಜರಿ ಸಿಕ್ಸರ್ ಮೂಲಕ ದಸೂನ್ ಶನಕ ಸೆಂಚುರಿ ಪೂರೈಸಿದರು. ದಸೂನ್ ಶನಕ 88 ಎಸತೆದಲ್ಲಿ ಅಜೇಯ 108 ರನ್ ಸಿಡಿಸಿದರು. ಇತ್ತ ಶ್ರೀಲಂಕಾ 50 ಓವರ್‌ಗಳಲ್ಲಿ 9 ವಿಕೆಟ್ ನಷ್ಟಕ್ಕೆ 306 ರನ್ ಸಿಡಿಸಿ ಸೋಲೊಪ್ಪಿಕೊಂಡಿತು. ಭಾರತ 67 ರನ್ ಗೆಲುವು ದಾಖಲಿಸಿತು.
ಕ್ರಿಕೆಟ್ ಮತ್ತು ಕ್ರೀಡಾ ಜಗತ್ತಿನ (Sports News in Kannada) ಕ್ಷಣಕ್ಷಣದ ಕನ್ನಡ ಸುದ್ದಿ ಅಪ್ಡೇಟ್‌ಗಳಿಗಾಗಿ ಏಷ್ಯಾನೆಟ್ ಸುವರ್ಣ ನ್ಯೂಸ್ ಫಾಲೋ ಮಾಡಿ. IPL Live ಸೇರಿದಂತೆ ಟೀಂ ಇಂಡಿಯಾದ ಬ್ರೇಕಿಂಗ್ ಸುದ್ದಿ (Cricket News in Kannada), ವಿಶೇಷ ವರದಿಗಳು ಮತ್ತು ನೇರ ಪ್ರಸಾರಗಳೊಂದಿಗೆ ಸಂಪೂರ್ಣ ಮಾಹಿತಿ ನಿಮ್ಮ ಒಂದೇ ಕ್ಲಿಕ್‌ನಲ್ಲಿ ಲಭ್ಯ. ಏಷ್ಯಾನೆಟ್ ಸುವರ್ಣ ನ್ಯೂಸ್ ಅಧಿಕೃತ ಆ್ಯಪ್ ಡೌನ್‌ಲೋಡ್ ಮಾಡಿ ಹಾಗೂ ಎಲ್ಲಾ ಅಪ್‌ಡೇಟ್ ಗಳನ್ನು ಪಡೆಯಿರಿ.