IND vs SA ಟೀಂ ಇಂಡಿಯಾ ದಾಳಿಗೆ ನಲುಗಿದ ಸೌತ್ ಆಫ್ರಿಕಾ, ಕೇವಲ 99 ರನ್‌ಗೆ ಆಲೌಟ್

By Suvarna NewsFirst Published Oct 11, 2022, 4:34 PM IST
Highlights

ಸರಣಿ ಗೆಲ್ಲಲು 3ನೇ ಹಾಗೂ ಅಂತಿಮ ಏಕದಿನ ಪಂದ್ಯ ಎರಡೂ ತಂಡಗಳಿಗೆ ಮುಖ್ಯ. ಈ ಮಹತ್ವದ ಪಂದ್ಯದಲ್ಲಿ ಭಾರತ ಪ್ರಾಬಲ್ಯ ಸಾಧಿಸಿದೆ. ಸೌತ್ ಆಫ್ರಿಕಾ ತಂಡವನ್ನು ಕೇವಲ 99 ರನ್‌ಗಳಿಗೆ ಆಲೌಟ್ ಮಾಡಿದೆ

ದೆಹಲಿ(ಅ.11): ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಏಕದಿನ ಸರಣಿ ಅಂತಿಮ ಘಟ್ಟ ತಲುಪಿದೆ. ಮೂರನೇ ಹಾಗೂ ಅಂತಿಮ ಏಕದಿನ ಪಂದ್ಯದ ಫಲಿತಾಂಶ ಸರಣಿ ಯಾರಿಗೆ ಅನ್ನೋದು ನಿರ್ಧರಿಸಲಿದೆ. ಈ ಮಹತ್ವದ ಪಂದ್ಯದಲ್ಲಿ ಟೀಂ ಇಂಡಿಯಾ ಅದ್ಭುತ ಬೌಲಿಂಗ್ ದಾಳಿ ಸಂಘಟಿಸಿದೆ. ಇದರ ಪರಿಣಾಮ ಸೌತ್ ಆಫ್ರಿಕಾ ಕೇವಲ  99 ರನ್‌ಗೆ ಆಲೌಟ್ ಆಗಿದೆ.  ಅಂತಿಮ ಪಂದ್ಯದಲ್ಲಿ ಬೃಹತ್ ಮೊತ್ತ ಪೇರಿಸಿ ಟೀಂ ಇಂಡಿಯಾವನ್ನು ಕಟ್ಟಿಹಾಕುವ ಲೆಕ್ಕಾಚಾರದಲ್ಲಿದ್ದ ಸೌತ್ ಆಫ್ರಿಕಾಗೆ ಟೀಂ ಇಂಡಿಯಾ ಬೌಲರ್‌ಗಳು ಶಾಕ್ ನೀಡಿದ್ದಾರೆ. ಆರಂಭದಲ್ಲಿ ವಾಶಿಂಗ್ಟನ ಸುಂದರ್ ಹಾಗೂ ಮೊಹಮ್ಮದ್ ಸಿರಾಜ್ ದಾಳಿ ಆರಂಭಿಸಿದರೆ, ಬಳಿಕ ಕುಲ್ದೀಪ್ ಯಾದವ್ ಹಾಗೂ ಶಹಬಾಜ್ ಅಹಮ್ಮದ್ ದಾಳಿಗೆ ಸೌತ್ ಆಫ್ರಿಕಾ ಪರದಾಡಿತು. ಸೌತ್ ಆಫ್ರಿಕಾ ಏಕದಿನದಲ್ಲಿ ಸಿಡಿಸಿದ ನಾಲ್ಕನೇ ಅತೀ ಕಡಿಮೆ ಮೊತ್ತ ಅನ್ನೋ ಅಪಖ್ಯಾತಿಗೆ ಸೌತ್ ಆಫ್ರಿಕಾ ಗುರಿಯಾಗಿದೆ. 

ಏಕದಿನದಲ್ಲಿ ಸೌತ್ ಆಫ್ರಿಕಾದ ಕಡಿಮೆ ಮೊತ್ತ
69 ರನ್ vs ಆಸ್ಟ್ರೇಲಿಯಾ,1993
83 ರನ್ vs ಇಂಗ್ಲೆಡ್, 2008
83 ರನ್ vs ಇಂಗ್ಲೆಂಡ್, 2022
99 ರನ್ vs ಭಾರತ, 2022
117 ರನ್ vs ಭಾರತ, 1999 

Latest Videos

ಕೊನೆಯುಸಿರೆಳೆದ ಪುಟ್ಟ ಅಭಿಮಾನಿಯ ಬಗ್ಗೆ ಭಾವನಾತ್ಮಕ ನುಡಿನಮನ ಸಲ್ಲಿಸಿದ ಡೇವಿಡ್ ಮಿಲ್ಲರ್..!

ಟಾಸ್ ಸೋತು ಬ್ಯಾಟಿಂಗ್ ಇಳಿದ ಸೌತ್ ಆಫ್ರಿಕಾ 7ರನ್‌ಗೆ ಮೊದಲ ವಿಕೆಟ್ ಕಳೆದುಕೊಂಡಿತು. ಆರಂಭಿಕ ಕ್ವಿಂಟನ್ ಡಿಕಾಕ್ 6 ರನ್ ಸಿಡಿಸಿ ಔಟಾದರು. ಜ್ಯಾನ್‌ಮನ್ ಮಲನ್ 15 ರನ್ ಸಿಡಿಸಿ ನಿರ್ಗಮಿಸಿದರು. ರೀಜಾ ಹೆಂಡ್ರಿಕ್ಸ್ 3 ರನ್ ಸಿಡಿಸಿ ಔಟಾದರೆ, ಆ್ಯಡಿನ್ ಮರ್ಕ್ರಮ್ 9 ರನ್ ಗಳಿಸಿ ನಿರ್ಗಮಿಸಿದರು. ಆದರೆ ಹೆನ್ರಿಚ್ ಕಾಲ್ಸೆನ್ ಹೋರಾಟ ನೀಡಿದರು. 

ಹೆನ್ರಿಚ್‌ಗೆ ಯಾರಿಂದಲೂ ಉತ್ತಮ ಸಾಥ್ ಸಿಗಲಿಲ್ಲ. ನಾಯಕ ಡೇವಿಡ್ ಮಿಲ್ಲರ್ ಕೇವಲ  7ರನ್ ಸಿಡಿಸಿ ಔಟಾದರು. ಆ್ಯಂಡಿಲ್ ಫೆಲುಕ್‌ವಾಯೋ  5 ರನ್ ಸಿಡಿಸಿ ಔಟಾದರು. ಏಕಾಂಗಿ ಹೋರಾಟ ನೀಡಿದ ಹೆನ್ರಿಚ್ 34 ರನ್ ಕಾಣಿಕೆ ನೀಡಿದರು. ಮಾರ್ಕೋ ಜಾನ್ಸೆನ್ 14 ರನ್ ಸಿಡಿಸಿದರು. ಅಂತಿಮವಾಗಿ ಸೌತ್ ಆಫ್ರಿಕಾ 27.1 ಓವರ್‌ಗಳಲ್ಲಿ 99ರನ್ ಸಿಡಿಸಿ ಆಲೌಟ್ ಆಯಿತು. 

ಟೀಂ ಇಂಡಿಯಾ ಪರ ಕುಲ್ದೀಪ್ ಯಾದವ್ 4 ವಿಕೆಟ್ ಕಬಳಿಸಿದರು. ಇನ್ನು ವಾಶಿಂಗ್ಟನ್ ಸುಂದರ್, ಮೊಹಮ್ಮದ್ ಸಿರಾಜ್ ಹಾಗೂ ಶಹಬಾಜ್ ಅಹಮ್ಮದ್ ತಲಾ 2 ವಿಕೆಟ್ ಕಬಳಿಸಿದರು.

ಮೊದಲ ಏಕದಿನ ಪಂದ್ಯದಲ್ಲಿ ಸೌತ್ ಆಫ್ರಿಕಾ ಗೆಲುವು ದಾಖಲಿಸಿತ್ತು. ಈ ಮೂಲಕ ಟೀಂ ಇಂಡಿಯಾ ಸೋಲಿನೊಂದಿಗೆ ಸರಣಿ ಆರಂಭಿಸಿತ್ತು. ಮೊದಲ ಪಂದ್ಯದ ಸೋಲಿನಿಂಗ ಕಂಗೆಟ್ಟ ಟೀಂ ಇಂಡಿಯಾ ದ್ವಿತೀಯ ಪಂದ್ಯದಲ್ಲಿ ಭರ್ಜರಿ ಗೆಲುವು ದಾಖಲಿಸಿತ್ತು. ಈ ಮೂಲಕ ಸರಣಿ 1-1 ಅಂತರದಲ್ಲಿ ಸಮಬಗೊಳಿಸಿತು. ಹೀಗಾಗಿ 3ನೇ ಏಕದಿನ ಪಂದ್ಯ ಫೈನಲ್ ಸ್ವರೂಪ ಪಡೆದುಕೊಂಡಿದೆ.

click me!